Crime
ಮಂಡ್ಯದಲ್ಲಿ ಯುವಕನ ಬರ್ಬರ ಹತ್ಯೆ

ಮಂಡ್ಯ :- ಯುವಕನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಫ್ಯಾಕ್ಟರಿ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗುರುವಾರ ರಾತ್ರಿ ದುಷ್ಕರ್ಮಿಗಳು ಕಡಿಲುವಾಗಿಲು ಗ್ರಾಮದ ಗುರು ವಿಲಾಸ್(35) ನನ್ನ ಹತ್ಯೆ ಮಾಡಿದ್ದಾರೆ.
ಬಾರ್ ನಲ್ಲಿ ಮಧ್ಯ ಕುಡಿದ ನಂತರ ಜೊತೆಯಲ್ಲಿ ಇದ್ದವರ ನಡುವೆ ಜಗಳ ನಡೆದಿದ್ದು,ಇದೇ ವೇಳೆ ಗುರುವಿಲಾಸ್ ಹತ್ಯೆ ನಡೆದಿದೆ.
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರುಮೂರ್ತಿ – ಜಯಮ್ಮ ದಂಪತಿಗಳ ಪುತ್ರ ಗುರು ವಿಲಾಸ್ ಟಾಟಾ ಎಸಿ ಚಾಲಕನಾಗಿದ್ದು, ಗೆಜ್ಜಲಗೆರೆಯ ಗಾರ್ಮೆಂಟ್ಸ್ ಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದನು, ಈ ವೇಳೆ ಮಂಡ್ಯ ಸ್ವರ್ಣ ಸಂದ್ರದ ಮಾನಸರನ್ನು ಪ್ರೀತಿಸಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದನು,ಇವರಿಗೆ ಹೆಣ್ಣು ಮಗು ಇತ್ತು.
ಮದುವೆ ನಂತರ ಬೆಂಗಳೂರಿನಲ್ಲಿ ಸ್ವಂತ ಕಾರು ಚಾಲನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು ಆದರೆ ಗಂಡ – ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ, ಪತ್ನಿ ನಡವಳಿಕೆ ಮೇಲೆ ಅನುಮಾನಪಟ್ಟಿದ್ದರಿಂದ ಆಗಾಗ್ಗೆ ಕಲಹ ನಡೆಯುತ್ತಿತ್ತು. ಪತ್ನಿ ಮಾನಸ ಗಂಡನನ್ನು ತೊರೆದು ತವರು ಮನೆ ಸೇರಿಕೊಂಡಿದ್ದಳು.ಗುರು ವಿಲಾಸ್ ಸಹ ಮಂಡ್ಯದ ಬಸವನಗುಡಿಯಲ್ಲಿದ್ದ ಅಕ್ಕನ ಮನೆಗೆ ಮರಳಿದ್ದನು.
ಗುರುವಾರ ಸಂಜೆ ಫ್ಯಾಕ್ಟರಿ ವೃತ್ತದಲ್ಲಿರುವ ಸಂತೃಪ್ತಿ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕದ ಪಕ್ಕದ ಸಿದ್ದಾರ್ಥ ಕೊಸ್ಟಲ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಹೋಗಿದ್ದು ಜೊತೆಯಲ್ಲಿ ಈತನ ಪರಿಚಿತರು ಇದ್ದರು, ರಾತ್ರಿ ತನಕ ಕುಡಿದಿದ್ದು ರಾತ್ರಿ 10 ರ ವೇಳೆ ಜೊತೆಯಲ್ಲಿ ಇದ್ದವರ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದಾಗ ತಪ್ಪಿಸಿಕೊಳ್ಳಲು ಬಾರ್ ನಿಂದ ಹೊರ ಓಡಿದ್ದು, ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಐಸಿಐಸಿಐ ಬ್ಯಾಂಕ್ ಬಳಿ ದೇಹದ ಬೆನ್ನಿನ ಭಾಗಕ್ಕೆ ಇರಿದಿದ್ದು ನಂತರ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಪತ್ನಿಯ ವಿಚಾರವಾಗಿ ಸ್ವಗ್ರಾಮ ಕಡಿಲು ಬಾಗಿಲು ಗ್ರಾಮದಲ್ಲಿ ಇತ್ತೀಚಿಗೆ ಯುವಕನೊಬ್ಬನ ಮೇಲೆ ಗುರು ವಿಲಾಸ್ ಹಲ್ಲೆ ಮಾಡಿದ್ದನು ಎನ್ನಲಾಗಿದೆ
ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Crime
ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು : ಶವಕ್ಕಾಗಿ ಮುಂದುವರೆದ ಶೋಧಾಕಾರ್ಯ

ಶ್ರೀರಂಗಪಟ್ಟಣ : ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಹದೇವಪುರದ ಬಳಿ ಸಂಭವಿಸಿದ್ದು, ಶವಕ್ಕಾಗಿ ಶೋಧಾಕಾರ್ಯ ಮುಂದುವರೆದಿದೆ.
ಮಹೇಶ ಕೊಂ ವೀರಜಪ್ಪ(35) ಮೃತ ವ್ಯಕ್ತಿಯಾಗಿದ್ದು, ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾಗೇನಹಳ್ಳಿ ಗ್ರಾಮದವರು ಎನ್ನಲಾಗಿದೆ.
ಆತ ಮೈಸೂರು ವಿಕ್ರಾಂತ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದು, ಮಹದೇವಪುರ ಬಳಿಯ ತರಿಪುರ ಗ್ರಾಮದ ಸ್ನೇಹಿತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಹದೇವಪುರ ಗ್ರಾಮದಲ್ಲಿರುವ ರಾಜ ಪರಮೇಶ್ವರಿ ನಾಲೆ ಅಣೆಕಟ್ಟೆ ಬಳಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೃತನ ಶವ ಪತ್ತೆಯಾಗದ ಕಾರಣ ಶೋಧಾಕಾರ್ಯ ಮುಂದುವರೆದಿದೆ.
ಅರಕೆರೆ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Crime
ಚೌಕಬರೆ(ಕಟ್ಟೆಮನೆ) ಆಡುತ್ತಿದ್ದ ವೇಳೆ ಗಲಾಟೆ: ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊ*ಲೆ

HSN… ಚೌಕಬರೆ(ಕಟ್ಟೆಮನೆ) ಆಡುತ್ತಿದ್ದ ವೇಳೆ ಗಲಾಟೆ
ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ
ಲಕ್ಕಪ್ಪ( 48) ,ಕೊಲೆಯಾದ ವ್ಯಕ್ತಿ
ಬಸವರಾಜ, ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ
ಅರಸೀಕೆರೆ ತಾಲ್ಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ಘಟನೆ
ಮೂವರ ಮೇಲೆ ಚಾಕುವಿನಿಂದ ಹಲ್ಲೆ
ವಸಂತ್, ಶಶಿ, ಲಕ್ಕಪ್ಪ ಎಂಬ ಮೂವರ ಮೇಲೆ ಚಾಕುವಿನಿಂದ ಹಲ್ಲೆ
ಎದೆ ಭಾಗಕ್ಕೆ ಲಕ್ಕಪ್ಪನಿಗೆ ಚಾಕುವಿನಿಂದ ಇರಿತ
ಲಕ್ಕಪ್ಪ ಸ್ಥಳದಲ್ಲೆ ಸಾವು
ಶಶಿ,ವಸಂತ ಎಂಬುವರಿಗೆ ಬೆನ್ನು, ಕೈಗೆ ಚಾಕುವಿನಿಂದ ಹಲ್ಲೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಶಶಿ, ವಸಂತ
ಶಶಿ,ವಸಂತ ಚೌಕಬರೆ ಆಡುತ್ತಿದ್ದಾಗ ಜಗಳ ತೆಗೆದ ಬಸವರಾಜ
ಶಶಿ, ವಸಂತ ಮೇಲೆ ಹಲ್ಲೆ ಮಾಡುತ್ತಿದ್ದ ಬಸವರಾಜ
ಜಗಳ ಬಿಡಿಸಲು ಎಂಟ್ರಿಯಾದ ಲಕ್ಕಪ್ಪಗೆ ಚಾಕುವಿನಿಂದ ಎದೆ ಭಾಗಕ್ಕೆ ಇರಿದ ಬಸವರಾಜ
ಬಸವರಾಜ ಜೊತೆಗಿದ್ದ ನಂಜುಂಡಿ ಹಲ್ಲೆಗೆ ಬೆಂಬಲ
ತಲೆಮರೆಸಿಕೊಂಡಿರೋ ಬಸವರಾಜ, ನಂಜುಂಡಿ ಬಂಧಿಸಲು ಶೋಧ ನೆಯ ನಡೆಸುತ್ತಿರೋ ಪೊಲೀಸರು
ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
Crime
ಕಟ್ಟಡದ ಸಜ್ಜಾ ಕುಸಿತ ಪ್ರಕರಣ: ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ (45) ಚಿಕಿತ್ಸೆ ಫಲಕಾರಿಯಾಗದೆ ಸಾ*ವು

ಬೇಲೂರು: ಹಳೇಯ ಕಟ್ಟಡದ ಸಜ್ಜಾ ಕುಸಿತ ಪ್ರಕರಣ
ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ (45) ಸಾವು
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ
ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ ಜ್ಯೋತಿ
ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಜ್ಯೋತಿ
ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ ಜ್ಯೋತಿ ಪತಿ ಗೋಪಿ
ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಜ್ಯೋತಿ
ಅನಾಥವಾದ ಇಬ್ಬರು ಹೆಣ್ಣುಮಕ್ಕಳು
ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ನಡೆದಿದ್ದ ದುರಂತ
ಕಳೆದ ಭಾನುವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ
-
Chamarajanagar22 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore19 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan23 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu24 hours ago
ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
-
Kodagu19 hours ago
ಹುಲಿ ದಾಳಿಗೆ ಕರು ಬಲಿ
-
Kodagu22 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Chikmagalur23 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.
-
Chikmagalur24 hours ago
ಜನಿವಾರ ತೆಗೆಸಿರುವುದು ಖಂಡನೀಯ