Connect with us

Mandya

ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ

Published

on

ಮಂಡ್ಯ :- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ಕರ್ನಾಟಕದ ಹಿತ ಕಾಪಾಡದ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಮುಂದುವರೆದಿದೆ.
ನಗರದ ಸರ್ ಎಂ ವಿ ಪ್ರತಿಮೆ ಎದುರು 24ನೇ ದಿನದ ಉಪವಾಸದಲ್ಲಿ ಗಾಣದಾಳು ಚಂದ್ರಲಿಂಗು, ಗುನ್ನಾಯಕನಹಳ್ಳಿ ಜಯರಾಮು, ಸೊಳ್ಳೆಪುರ ಸೊ.ಶಿ. ಪ್ರಕಾಶ್, ಕುದರಗುಂಡಿ ಸಿ. ನಾಗರಾಜ್, ಕೋಣಸಾಲೆ ಕೆ.ಲಿಂಗಯ್ಯ,ದೇಶಹಳ್ಳಿ ವೆಂಕಟೇಶ್ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.


ಕಾವೇರಿಗಾಗಿ ರಾಜ್ಯದ ಎಲ್ಲಡೆ ಜನತೆ ಪ್ರತಿಭಟನೆ ಮಾಡಿದರೂ ಸಹ ರಾಜ್ಯ ಸರ್ಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಿದೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಮುಂದಾದ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಯಿತು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಎಸ್.ನಾರಾಯಣ್, ಶಿವ ರತ್ನಮ್ಮ ನೇತೃತ್ವ ವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ದಿನ ನಿತ್ಯ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ : ಎಸ್ಪೀ ಎನ್.ಯತೀಶ್

Published

on

ಮಂಡ್ಯ: ಪ್ರತಿದಿನ ಯೋಗಾಭ್ಯಾಸವನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.

ಅವರು ಮಂಡ್ಯ ನಗರದ ಪೊಲೀಸ್ ಪೆರೆಡ್ ಮೈದಾನದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆಯ ಸಂಬಂಧ ಇಂದು ಪೊಲೀಸ್ ಇಲಾಖೆಯ ಪೆರೆಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗೋತ್ಸವದಲ್ಲಿ ಸುಮಾರು 300 ಜನ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಭ್ಯಾಸ ಮಾಡಿದ್ದು ಬಹಳ ಖುಷಿಯಾಯಿತು ಇದೇ ರೀತಿ ಪ್ರತಿದಿನ ಕೂಡ ಯೋಗಾಭ್ಯಾಸವನ್ನು ಮಾಡಿ ಎಂದು ಹೇಳಿದರು.

ಆರೋಗ್ಯದ ಕಡೆಗೆ ಹೆಚ್ಚಿನ ಒಲವು ಕೊಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಸಾರ್ವಜನಿಕರು ಯೋಗಾಭ್ಯಾಸವನ್ನು ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಹೇಳಿದರು.

ಮನುಷ್ಯನಿಗೆ ನೀರು ಅತಿ ಮುಖ್ಯವಾದ ಅಂಶ ಎಂದು ಡಾ.ಸೀತಾಲಕ್ಷ್ಮಿ ಹೇಳಿದರು.
ದಿನ ನಿತ್ಯ ಜೀವನದಲ್ಲಿ ಸುಮಾರು ಜನರು ನೀರನ್ನು ಬಹಳ ಕಮ್ಮಿ ಕುಡಿಯುತ್ತಾರೆ ಇದರಿಂದ ಆರೋಗ್ಯದ ಸಮಸ್ಯೆ ಗಳು ಹೆಚ್ಚಾಗಿ ಕಾಡುತ್ತವೆ. ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿಯಲ್ಲಿ ಸ್ಟೋನ್ ತೊಂದರೆ, ಸುಸ್ತು, ಆಯಾಸ ಮತ್ತು ಚರ್ಮದ ತೊಂದರೆಗಳು ಉಂಟಾಗುತ್ತದೆ.

ಆದ್ದರಿಂದ ಒಂದು ಹೊತ್ತು ಊಟ ಕಡಿಮೆ ಮಾಡಿದರು ಕೂಡ ನೀರು ಕುಡಿಯುವುದನ್ನು ಕಮ್ಮಿ ಮಾಡಬಾರದು ನೀರು ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಹೇಳಿದರು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ನಮ್ಮ ದಿನ ನಿತ್ಯ ಆಹಾರದ ಪದ್ದತಿಯಲ್ಲಿ ಹೆಚ್ಚಾಗಿ ನೀರು ಕುಡಿಯುವ ಅಭ್ಯಾಸ, ಹಸಿ ತರಕಾರಿ ಗಳು, ಹಣ್ಣು ಹಂಪಲು, ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ಎಂದರು.

ಮಾಂಸಹಾರ ಸೇವನೆ ಮಾಡುವುದು ತಪ್ಪಲ್ಲ ಆದರೆ ಪ್ರತಿದಿನ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎ.ಎಸ್‌.ಪಿ ತಿಮ್ಮಯ್ಯ, ಡಿ.ವೈ.ಎಸ್.ಪಿ.ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Mandya

ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಅತ್ಯಗತ್ಯ

Published

on

ಮಂಡ್ಯ: ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಅತ್ಯಗತ್ಯ ಎಂದು ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ನಿರ್ದೇಶಕ ಮಂಗಲ ಯೋಗೇಶ್ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಭಾಗಿತ್ವದಲ್ಲಿ ನೀರಾವರಿ ಆಡಳಿತವನ್ನು ಪ್ರಾರಂಭಿಸಿ ಆ ಮೂಲಕ ರೈತರಲ್ಲಿ ನೀರು ನಿರ್ವಹಣೆ, ನೀರಿನ ಮಿತ ಬಳಕೆ ಮತ್ತು ಸದ್ಬಳಕೆ ಮಾಡುವ ಮಹತ್ವಾಕಾಂಕ್ಷೆಯೊಡನೆ ಪ್ರಾರಂಭಿಸಿದ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಅವಶ್ಯಕವಾಗಿದೆ. ಹಾಗಾಗಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ ಮೂರು ದಶಕಗಳಿಂದಲೂ ನೀರು ಬಳಕೆದಾರರ ಸಹಕಾರ ಸಂಘಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಾಧಿಸಿಲ್ಲ .ಈ ಸಂಬಂಧ ನೀರು ಬಳಕೆದಾರರ ಸಹಕಾರ ಸಂಘ ,ವಿತರಣಾ ವ್ಯಾಪ್ತಿಯ ಒಕ್ಕೂಟ, ಅಣೆಕಟ್ಟೆ ವ್ಯಾಪ್ತಿಯಲ್ಲಿ ಯೋಜನಾ ಮಟ್ಟದ ಮಹಾಮಂಡಳ, ರಾಜ್ಯಮಟ್ಟದಲ್ಲಿ ಶೃಂಗ ಮಹಾ ಮಂಡಳಗಳ ರಚನೆಯನ್ನು ಜರೂರಾಗಿ ಮಾಡಬೇಕಿದೆ ಎಂದರು.

ವಿಕೇಂದ್ರಿತ ಸಂಘಗಳ ಕಾರ್ಯ ಚಟುವಟಿಕೆಗಳು ಪ್ರಸಕ್ತ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಯೋಜನೆಗಿಂತ ಮುನ್ನ 2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯಿದೆಗೆ ತಿದ್ದುಪಡಿ ತಂದಿರುವುದು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಸಹಕಾರಿಯಾಗಿದ್ದು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಷ್ಟ್ರೀಯ ಬ್ಯಾಂಕುಗಳು ರೈತರಿಗೆ ಸಾಲ ವಿತರಿಸುವಾಗ ನೀರು ಬಳಕೆದಾರರ ಸಹಕಾರ ಸಂಘಗಳಿಂದಲೇ ಬಾಕಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಬೇಕು. ಕೇಂದ್ರ ಸರ್ಕಾರದ ಧನಸಹಾಯದ ಕಾರ್ಯಕ್ರಮದಲ್ಲಿ ನೀರು ಬಳಕೆದಾರರ ಸಂಘಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ವಾರ್ಷಿಕ ಕಾರ್ಯ ಧನವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಬೇಕು. ವಿಸಿ ನಾಲಾ ಆಧುನಿಕರಣ ಕಾಮಗಾರಿಯನ್ನು ನಿಲ್ಲಿಸಿ ಮುಂಗಾರಿನಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಮಹಾಮಂಡಲಗಳಿಗೆ ಶೇರುಧನವಾಗಿ ಒಂದು ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊತ್ತತ್ತಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ ಎಸ್ ರವಿ, ಎಂ ಬಿ ಸುರೇಶ, ಚನ್ನಪ್ಪ, ಚಂದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು

Continue Reading

Mandya

ಆರೋಗ್ಯಯುತವಾದ ಜೀವನಕ್ಕಾಗಿ 1 ಗಂಟೆ ಸಮಯವನ್ನು ಮೀಸಲಿಡಿ: ಡಾ: ಸೀತಾಲಕ್ಷ್ಮಿ

Published

on

ಮಂಡ್ಯ: ಆರೋಗ್ಯಯುತ ಜೀವನಕ್ಕಾಗಿ ಪ್ರತಿದಿನ ಯೋಗ, ವ್ಯಾಯಮ, ವಾಕ್ ಯಾವುದಾದರೂ ದೈಹಿಕ ಚಟುವಟಿಕೆಗೆ ಒಂದು ಗಂಟೆ ಮೀಸಲಿಡಿ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾ ಲಕ್ಷ್ಮಿ ಅವರು ಹೇಳಿದರು.

ಅವರು ಮಿಮ್ಸ್ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಯೋಗೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿ, 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಯೋಗೋತ್ಸವ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಮಿಮ್ಸ್ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಎಲ್ಲಾ ವಿದ್ಯರ್ಥಿಗಳಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಎಸ್.ಪಿ.ವೈ.ಎಸ್ ಎಸ್.ನ ಜಿಲ್ಲಾ ಸಂಚಾರಕರಾದ ಶಂಕರ ನಾರಾಯಣ ಶಾಸ್ತ್ರೀ, ಯೋಗ ತರಬೇತುದಾರ ಶಿವರುದ್ರ ಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮುಖ್ಯಸ್ಥರಾದ ರವಿ, ಮಿಮ್ಸ್ ನಿರ್ದೇಶಕ ಹಾಗೂ ಡೀನ್ ಡಾ.ಪಿ ನರಸಿಂಹಮೂರ್ತಿ, ಮಿಮ್ಸ್ ವೈದ್ಯಕೀಯ ಅಧೀಕ್ಷಕರು ಡಾ.ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Continue Reading

Trending

error: Content is protected !!