National - International
ಭಾನುವಾರ ಒಂದೇ ದಿನ 2.7 ಮಿಲಿಯನ್ ಐಟಿ ರಿಟರ್ನ್ಸ್ ಸಲ್ಲಿಕೆ; ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ ಇದೆ.. ಆದರೆ..!

ನವದೆಹಲಿ: ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭಾನುವಾರ ಒಂದೇ ದಿನ 2.7 ಮಿಲಿಯನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಭಾನುವಾರ ಸಂಜೆ 6:30 ರ ವೇಳೆಗೆ 1.3 ಕೋಟಿಗೂ ಹೆಚ್ಚು ಲಾಗಿನ್‌ಗಳಿಗೆ ಸಾಕ್ಷಿಯಾಗಿದ್ದು, ಆದಾಯ ತೆರಿಗೆ ಇಲಾಖೆಯ ಪ್ರಕಾರ, ಭಾನುವಾರ ಸಂಜೆ 6.30 ರವರೆಗೆ ಸುಮಾರು 26.76 ಲಕ್ಷ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಜುಲೈ 30ರವರೆಗೆ 6 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ತೆರಿಗೆ ವೃತ್ತಿಪರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ಗಡುವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದರಿಂದ ಭಾನುವಾರ ರಿಟರ್ನ್ಸ್ ಸಲ್ಲಿಕೆಗೆ ನೂಕುನುಗ್ಗಲು ಕಂಡುಬಂದಿದೆ. AY 2023-24 ಗಾಗಿ ಐಟಿಆರ್ ಅನ್ನು ಸಲ್ಲಿಸದ ಎಲ್ಲರಿಗೂ, ಕೊನೆಯ ಕ್ಷಣದ ಗೊಂದಲ ತಪ್ಪಿಸಿಕೊಳ್ಳಲು ತಮ್ಮ ಐಟಿಆರ್ ಅನ್ನು ಆದಷ್ಟು ಬೇಗ ಸಲ್ಲಿಸುವಂತೆ ತೆರಿಗೆ ಇಲಾಖೆ ಭಾನುವಾರ ಸಂಜೆ ಟ್ವೀಟ್ ಮೂಲಕ ಒತ್ತಾಯಿಸಿದೆ.
ಆದಾಯ ತೆರಿಗೆ ವೆಬ್‌ಸೈಟ್ ಪ್ರಕಾರ, ಜುಲೈ 29 ರಂದು ಸುಮಾರು 5 ಕೋಟಿ ರಿಟರ್ನ್‌ಗಳನ್ನು ಪರಿಶೀಲಿಸಲಾಗಿದೆ, ಆದರೆ 3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಅಧ್ಯಕ್ಷ ನಿತಿನ್ ಗುಪ್ತಾ ಅವರು ಸಲ್ಲಿಸಿದವರ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದವರ ಪೈಕಿ ಸುಮಾರು 7% ಮೊದಲ ಬಾರಿಗೆ ಸಲ್ಲಿಸುವವರಾಗಿದ್ದಾರೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಇತ್ತೀಚಿನ ಹಣಕಾಸು ಸಚಿವಾಲಯದ ಸಲ್ಲಿಕೆ ಪ್ರಕಾರ, 2022-23ರಲ್ಲಿ 7.4 ಕೋಟಿ ತೆರಿಗೆ ಪಾವತಿದಾರರು ರಿಟರ್ನ್ಸ್ ಸಲ್ಲಿಸಿದ್ದರು. ಅದರ ಹಿಂದಿನ ವರ್ಷ ಅಂದರೆ 2021-22ರಲ್ಲಿ 6.94 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿತ್ತು. 2021-22ಕ್ಕೆ ಹೋಲಿಕೆ ಮಾಡಿದರೆ 2022-23ರಲ್ಲಿ ಐಟಿಆರ್ ಸಲ್ಲಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿ 6.18% ಹೆಚ್ಚಳವಾಗಿದೆ. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆದಿದೆ. ಈ ತಿಂಗಳ ಆರಂಭದಲ್ಲಿ ನಡೆದ ಆದಾಯ ತೆರಿಗೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಕಂಡುಬಂದ ಪ್ರಕರಣಗಳಲ್ಲಿ ಸುಮಾರು ಒಂದು ಲಕ್ಷ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು.
ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ.. ಆದರೆ..!!
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವು ಸೋಮವಾರ ಕೊನೆಗೊಳ್ಳಲಿದ್ದು, ಈ ವರ್ಷ, ಐಟಿಆರ್ ಸಲ್ಲಿಸಲು ಗಡುವನ್ನು ಕಳೆದುಕೊಂಡಿರುವ ತೆರಿಗೆದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶದ ಹಲವೆಡೆ ಭಾರೀ ಮಳೆ ಮತ್ತು ಪ್ರವಾಹವು ಹಾನಿಯನ್ನುಂಟುಮಾಡುವುದರಿಂದ, ಅನೇಕ ತೆರಿಗೆದಾರರು ಜುಲೈ 31 ರ ಮೊದಲು ITR ಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಿಸಲು ಮನವಿ
ಇನ್ನು ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.14% ಕ್ಕಿಂತ ಹೆಚ್ಚು ವೈಯಕ್ತಿಕ ಆದಾಯ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ರ ಗಡುವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ದೆಹಲಿ NCR ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳಲ್ಲಿ ವೈಯಕ್ತಿಕ ತೆರಿಗೆದಾರರು ಹವಾಮಾನ ವೈಪರೀತ್ಯದಿಂದಾಗಿ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಸಮುದಾಯ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಯು ನಡೆಸಿದ ಸಮೀಕ್ಷೆಯು ದೇಶಾದ್ಯಂತ 315 ಜಿಲ್ಲೆಗಳಲ್ಲಿ ನೆಲೆಗೊಂಡಿರುವ ನಾಗರಿಕರಿಂದ 12,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಆಧರಿಸಿದೆ.
ಗಡುವನ್ನು ವಿಸ್ತರಿಸಲು ಕರೆಗಳು ಬಂದಿವೆ ಆದರೆ ಈ ನಿಟ್ಟಿನಲ್ಲಿ ತೆರಿಗೆದಾರರಿಗೆ ಯಾವುದೇ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. 2022-23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕಾಗಿ 5.03 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಜುಲೈ 27 ರವರೆಗೆ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ, ಅದರಲ್ಲಿ ಶೇ.88% ವಿದ್ಯುನ್ಮಾನವಾಗಿ ಪರಿಶೀಲಿಸಲಾಗಿದೆ. ಜುಲೈ 31, 2022 ಕ್ಕೆ ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಹೆಚ್ಚಿನದಾಗಿದೆ ಏಕೆಂದರೆ ಒಂದು ವರ್ಷದ ಹಿಂದೆ 4.83 ಕೋಟಿ ರಿಟರ್ನ್ಸ್ ಸಲ್ಲಿಸಲಾಗಿದೆ.
ಗಡುವು ಮೀರಿದರೆ ಏನಾಗುತ್ತದೆ?
ಒಂದು ವೇಳೆ ಇಲಾಖೆ ನಿಗದಿಪಡಿಸಿದ ಗಡುವಿನೊಳಗೆ ನೀವು ಐಟಿ ರಿಟರ್ನ್ ಸಲ್ಲಿಸದಿದ್ದರೆ ಕೆಲ ಪ್ರಮುಖ ನಷ್ಟಗಳು ತಲೆದೋರಬಹುದು. ಉದಾಹರಣೆಗೆ ನೀವು ತಡವಾಗಿ ರಿಟರ್ನ್ ಫೈಲ್ ಮಾಡಿದಾಗ, ತೆರಿಗೆ ಬಾಕಿ ಹಣಕ್ಕೆ ಶೇ. 50ರಿಂದ ಶೇ. 200ರಷ್ಟು ಮೊತ್ತವನ್ನು ಸೇರಿಸಿ ದಂಡವಾಗಿ ಕಟ್ಟಬೇಕಾಗುತ್ತದೆ. ನೀವು 2,000 ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ 1,000 ರೂನಿಂದ 4,000 ರೂವರೆಗೆ ದಂಡ ಸೇರಿಸಿ ಕಟ್ಟಬೇಕು. ಅಂದರೆ 3,000 ರೂನಿಂದ 6,000 ರೂವರೆಗೂ ನೀವು ಕಟ್ಟಬೇಕಾಗಬಹುದು. ಹಾಗೆಯೇ, ನೀವು ಡೆಡ್ಲೈನ್ ತಪ್ಪಿಸಿದಾಗ ಕಾನೂನು ಕ್ರಮ ಜರುಗಿಸಲು ನೋಟೀಸ್ ಕೊಡಲಾಗುತ್ತದೆ.
ಏನು ಮಾಡಬೇಕು?
ಗಡುವಿನ ನಂತರವೂ ರಿಟರ್ನ್ಸ್ ಅನ್ನು ಸಲ್ಲಿಸಬಹುದು, ಆದರೆ ತೆರಿಗೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಒಟ್ಟು ಆದಾಯವು ರೂ 5 ಲಕ್ಷಕ್ಕಿಂತ ಹೆಚ್ಚಿಲ್ಲದಿದ್ದರೆ, ದಂಡವು R1,000 ಆಗಿರುತ್ತದೆ ಮತ್ತು R5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಗಡುವಿನ ನಂತರ ರಿಟರ್ನ್ ಸಲ್ಲಿಸಲು ದಂಡವು R5,000 ಆಗಿದೆ. ತಡವಾಗಿ ರಿಟರ್ನ್ಸ್ ಸಲ್ಲಿಸುವುದರಿಂದ ಯಾವುದೇ ವಿಶೇಷ ಕಡಿತಕ್ಕೆ ಅನರ್ಹರಾಗುತ್ತಾರೆ.
ನೀವು ಐಟಿಆರ್ ಅನ್ನೇ ಸಲ್ಲಿಸದಿದ್ದರೆ ಏನಾಗುತ್ತದೆ?
2022-23 ರ ಹಣಕಾಸು ವರ್ಷದಲ್ಲಿ ನೀವು ಕಟ್ಟಬೇಕಿರುವ ತೆರಿಗೆ ಹಣಕ್ಕೆ ಶೇ. 200ರಷ್ಟು ದಂಡ ವಿಧಿಸಲಾಗುತ್ತದೆ. ನಿಮಗೆ ಯಾವುದಾದರೂ ವ್ಯವಹಾರದಲ್ಲಿ ನಷ್ಟವಾಗಿದ್ದರೆ ಅದನ್ನು ಬಳಸಿ ತೆರಿಗೆ ರಿಯಾಯಿತಿ ಪಡೆಯಲು ಅವಕಾಶ ಇರುತ್ತದೆ. ಆದರೆ, ನೀವು ಐಟಿ ರಿಟರ್ನ್ ಫೈಲ್ ಮಾಡದೇ ಹೋದಾಗ ಈ ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಜೊತೆಗೆ, ಐಟಿ ಇಲಾಖೆಯಿಂದ ಕಾನೂನು ಕ್ರಮ ಜಾರಿಗೊಳಿಸಲು ನೋಟೀಸ್ ಸ್ವೀಕರಿಸಬೇಕಾಗುತ್ತದೆ.
ಐಟಿ ರಿಟರ್ನ್ ಯಾಕೆ ಸಲ್ಲಿಸಬೇಕು?
ಕಳೆದ ಹಣಕಾಸು ವರ್ಷದಂದು (2022-23) ನಿಮ್ಮ ಒಟ್ಟಾರೆ ಎಲ್ಲಾ ಆದಾಯಗಳು, ಹೂಡಿಕೆಗಳು, ಸಾಲಗಳು ಇತ್ಯಾದಿಯನ್ನು ನೀವು ಘೋಷಿಸಲು ಐಟಿಆರ್ ಸಲ್ಲಿಸಲಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅಥವಾ ಹೆಚ್ಚಾಗಿ ತೆರಿಗೆ ಕಟ್ಟಿದ್ದರೆ ಅದನ್ನು ಕ್ಲೈಮ್ ಮಾಡಿಕೊಳ್ಳುವ ಅವಕಾಶವೂ ಇರುತ್ತದೆ. ಐಟಿ ರಿಟರ್ನ್ ಸಲ್ಲಿಸುವುದು ಹಲವು ಕಾರಣಗಳಿಗೆ ಅಗತ್ಯ ಎನಿಸಿದೆ. ಬ್ಯಾಂಕ್ ಸಾಲದಿಂದ ಹಿಡಿದು ಹಲವು ಕಾರ್ಯಗಳಿಗೆ ಐಟಿಆರ್‌ಗಳನ್ನು ಕೇಳಲಾಗುತ್ತದೆ. ನಿಮ್ಮ ಆದಾಯವು ತೆರಿಗೆ ವಿಂಗಡಣೆಯಿಂದ ಹೊರತಾಗಿದ್ದರೂ ಕೂಡ ಐಟಿಆರ್ ಸಲ್ಲಿಸಲು ಅಡ್ಡಿ ಇಲ್ಲ.

National - International
ಆಕ್ಸಿಯಮ್-4 ಯಶಸ್ವಿ ಲ್ಯಾಂಡ್: ಬ್ಯಾಹಾಕಾಶದಿಂದ ಭೂಮಿಗೆ ಬಂದಿಳಿದ ಶುಭಾಂಶು ಶುಕ್ಲಾ ಟೀಂ

ಕ್ಯಾಲಿಫೋರ್ನಿಯಾ: ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಇನ್ನಿತರ ನಾಲ್ವರು ಗಗನಯಾತ್ರಿಗಳು ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಯಶಸ್ವಿಯಾಗಿ ಬಂದಿಳಿದ್ದಾರೆ.
ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ 18 ದಿನಗಳನ್ನುಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ. 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಬಳಿಕ ತಂಡವೂ ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ.
ಭಾರತೀಯ ಗ್ರೂಪ್ ಕ್ಯಾ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ, ಹಂಗೇರಿಯಾದ ಗಗನಯಾನಿ ಟಿಬೋರ್ ಕಾಪು ಅವರು ಭೂಮಿ ಮೇಲೆ ಲ್ಯಾಂಡ್ ಆಗಿದ್ದಾರೆ. ಆಕ್ಸಿಯಮ್ ಯೋಜನೆ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಗಗನಯಾನಿಗಳು ಭೂಮಿಗೆ ತಲುಪಿದ್ದಾರೆ.
ಇನ್ನು ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶಕ್ಕೆ ನೌಕೆ ಬಂದಿಳಿದಿದೆ. ಈ ಖುಷಿ ಕ್ಷಣವನ್ನು ಶುಭಾಂಶು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದು ಭಾವುಕರಾಗಿದ್ದಾರೆ.
National - International
ಸಾಂಸ್ಕೃತಿಕ ಸಂಪರ್ಕದ ವಿಷಯಕ್ಕೆ ಬಂದಾಗ ದೂರವು ಅಡ್ಡಿಯಲ್ಲ: ಪ್ರಧಾನಿ ಮೋದಿ

ಬ್ಯೂನಸ್ ಐರಿಸ್/ನವದೆಹಲಿ: ಅರ್ಜೆಂಟಿನಾಗೆ ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಭಾರತೀಯ ವಲಸಿಗರು ಸಾಂಪ್ರದಾಯಿಕ ನೃತ್ಯದ ಮೂಲಕ ವಿಶೇಷ ಸ್ವಾಗತ ಕೋರಿದ್ದಾರೆ. ಹೀಗಾಗಿ ಅವರ ಸ್ವಾಗತಕ್ಕೆ ಮೋದಿ ಅವರು ಸಂತಸಗೊಂಡು ಸಾಂಸ್ಕೃತಿಕ ಸಂಪರ್ಕದ ವಿಷಯಕ್ಕೆ ಬಂದಾಗ ದೂರವು ಅಡ್ಡಿಯಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ಬ್ಯೂನಸ್ ಐರಿಸ್‌ನಲ್ಲಿರುವ ಭಾರತೀಯ ಸಮುದಾಯದಿಂದ ದೊರೆತ ಆತ್ಮೀಯ ಸ್ವಾಗತದಿಂದ ಗೌರವಿಸಲ್ಪಟ್ಟಿದೆ. ಮನೆಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನಮ್ಮ ಭಾರತೀಯ ಸಮುದಾಯದ ಮೂಲಕ ಭಾರತದ ಚೈತನ್ಯವು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂಬುದನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದ್ದಾರೆ.
National - International
ಟಾಪ್ 100 ಬ್ರ್ಯಾಂಡ್‌ಗಳಲ್ಲಿ ಕನ್ನಡಿಗರ ನಂದಿನಿಗೆ 4ನೇ ಅಗ್ರ ಶ್ರೇಯಾಂಕ

ಬೆಂಗಳೂರು: ರಾಜ್ಯದ ಸಹಕಾರಿ ಹಾಲು ಮಾರಾಟ ಮಹಾಮಂಡಳದ ಬ್ರ್ಯಾಂಡ್ ಆಗಿರುವ ನಂದಿನಿಯೂ ಇದೀಗ ದೇಶದ ಆಹಾರ ಮತ್ತು ಪಾನೀಯ ಉತ್ಪನ್ನಗಳ ಮಾರಾಟ ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 4ನೇ ಅಗ್ರ ಶ್ರೇಯಾಂಕವನ್ನು ಪಡೆದು ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ.
ವಿಶ್ವದ ಮುಖ್ಯ ಬ್ರ್ಯಾಂಡ್ ಮೌಲ್ಯಮಾಪನ ಸಂಸ್ಥೆಯಾದ ಬ್ರ್ಯಾಂಡ್ ಫೈನಾನ್ಸ್ ತನ್ನ 2025ರ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ನಂದಿನಿ ಬ್ರ್ಯಾಂಡ್ ಗಮನಾರ್ಹ ಪ್ರಗತಿ ಸಾಧಿಸಿದೆ. ದೇಶದ ಮುಖ್ಯ ಬ್ರ್ಯಾಂಡ್‌ಗಳೊಂದಿಗೆ ತೀವ್ರ ಪೈಪೋಟಿ ಮಧ್ಯೆಯೂ ಆಹಾರ ಹಾಗೂ ಪಾನೀಯಗಳ ವಿಭಾಗದಲ್ಲಿ ಭಾರತದಲ್ಲಿಯೇ ನಾಲ್ಕನೇಯ ಸ್ಥಾನವನ್ನು ಕಾಯ್ದುಕೊಂಡಿದೆ.
ದಕ್ಷಿಣ ಭಾರತದಲ್ಲಿ ನಂದಿನಿ ವಿಸ್ತಾರಗೊಂಡಿದೆ. ಉತ್ತರ ಪ್ರದೇಶದಲ್ಲಿ ಹಂತ ಹಂತವಾಗಿ ವಹಿವಾಟವನ್ನು ವಿಸ್ತರಿಸುತ್ತಿದ್ದು, ಇದೀಗ ಸಿಂಗಾಪುರ ಮತ್ತು ದುಬೈ ರಾಷ್ಟ್ರಗಳಿಗೂ ನಂದಿನಿ ವ್ಯಾಪಾರ ವಹಿವಾಟು ಪ್ರಾರಂಭಿಸಿದೆ. ಅಲ್ಲದೇ ಈಗ ನಂದಿನಿ ತುಪ್ಪಕ್ಕೆ ಗಣನೀಯ ಬೇಡಿಕೆ ಇದ್ದು, ಆಂಧ್ರದ ತಿರುಪತಿ ದೇವಾಲಯಕ್ಕೆ ಪ್ರತಿ ತಿಂಗಳು 300 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎಫ್ ಪೂರೈಕೆ ಮಾಡುತ್ತಿದೆ.
ಇನ್ನೂ ಬ್ರ್ಯಾಂಡ್ ಫೈನಾನ್ಸ್ ಮೌಲ್ಯಮಾಪನ ಸಂಸ್ಥೆ ಬ್ರ್ಯಾಂಡ್‌ಗಳ ಆರ್ಥಿಕ ಸದೃಢತೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳ ಮೌಲ್ಯಮಾಪನವನ್ನು ಅಳೆಯುವ ಸಂಸ್ಥೆಯಾಗಿದೆ. ಲಂಡನ್‌ನಲ್ಲಿ ಇದರ ಕೇಂದ್ರ ಕಚೇರಿಯನ್ನು ಒಳಗೊಂಡಿದ್ದು, ಸುಮಾರು 25 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ವಾರ್ಷಿಕವಾಗಿ 6,000ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಬ್ರ್ಯಾಂಡ್ ಫೈನಾನ್ಸ್ ವಿವಿಧ ಬ್ರ್ಯಾಂಡ್‌ಗಳ ಆರ್ಥಿಕ ಮೌಲ್ಯವನ್ನು ಅಳೆಯುವುದರಿಂದ ಕಂಪನಿಗಳು ಕಾರ್ಯತಂತ್ರದ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಂಸ್ಥೆಯ ವರದಿಯೂ ಸಹಾಯಕಾರಿಯಾಗಿದೆ.
-
State14 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya10 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar16 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar10 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore11 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special15 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu10 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
State9 hours ago
ಆಗಸ್ಟ್.11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು: ಸುರೇಶ್ ಬಾಬು