Connect with us

Crime

ಭಯೋತ್ಪಾದಕ ಕೃತ್ಯಕ್ಕೆ ಸಂಚು: ಬೆಂಗಳೂರಿನಲ್ಲಿ ಎನ್ಐಎ ತಂಡ, ಬಂಧಿತ ಐವರು ಶಂಕಿತ ಉಗ್ರರ ವಿಚಾರಣೆ

Published

on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಇತರೆಡೆ ಬಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಐವರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಚಾರಣೆಗೊಳಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪೊಲೀಸ್ ವಶದಲ್ಲಿರುವ ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ ಮತ್ತು ಮೊಹಮ್ಮದ್ ಫಾಜಿಲ್ ರನ್ನು ಎನ್‌ಐಎ ತಂಡ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುತ್ತದೆಯೇ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಶಂಕಿತರ ವಿಚಾರಣೆ ನಡೆಸಬೇಕಿದ್ದು, ಆವರಿಂದ ವಶಪಡಿಸಿಕೊಂಡ ವಸ್ತು, ಇತರೆ ಮಾಹಿತಿಗಳ ಆಧಾರದ ಮೇಲೆ ತನಿಖೆಯೂ ಅವಲಂಬಿತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

2008 ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದಲ್ಲಿ ಕೈವಾಡವಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ತಡಿಯಂತವಿಡೆ ನಜೀರ್ ಪ್ರಕರಣದ ಮೇಲೆ ಕಣ್ಣಿಟ್ಟಿರುವ ಗುಪ್ತಚರ ಬ್ಯೂರೋ ಸಿಸಿಬಿಗೆ ಉಗ್ರರ ಕುರಿತು ಮಾಹಿತಿ ನೀಡಿತ್ತು. ಐಬಿ ನೀಡಿದ ಮಾಹಿತಿ ಅನ್ವಯ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡಸಿ ಐವರನ್ನು ಶಂಕಿತರನ್ನು ಬಂಧನಕ್ಕೊಳಪಡಿಸಿದೆ.

ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ)ದ ದಕ್ಷಿಣ ಭಾರತ ಕಮಾಂಡರ್ ಆಗಿದ್ದ ನಜೀರ್ ಹಾಗೂ ಆತನ ಸಹಚರ ಶಫಜ್ ನನ್ನು 2008 ರ ಬೆಂಗಳೂರು ಸ್ಫೋಟ ಪ್ರಕರಣ ಸಂಬಂಧ ಮೇಘಾಲಯದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.

ನಜೀರ್ ಕಮಾಂಡರ್ ಆಗುವಷ್ಟು ಬೆಳೆದಿದ್ದ. ಜಿಹಾದಿ ಪ್ರಚಾರದಲ್ಲಿ ದುರ್ಬಲ ಯುವಕರನ್ನು ಸುಲಭವಾಗಿ ಬಲೆಗೆ ಬೀಳಿಸುತ್ತಿದ್ದ. ಜೈಲಿನಲ್ಲಿದ್ದುಕೊಂಡೇ ಬೆಂಗಳೂರು ಭಯೋತ್ಪಾದಕ ಸಂಚಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ಜುನೈದ್, ಬಂಧಿತ ಐವರು ಶಂಕಿತರ ಉಗ್ರರು ಹಾಗೂ ಇನ್ನಿತರನ್ನು ಜಿಹಾದಿಗಳಾಗಿ ಪರಿವರ್ತಿಸಿದ್ದ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ತನಿಖೆ ಮುಂದುವರೆದಿದ್ದು, ಜಾಲಕ್ಕೆ ಬಿದ್ದ ಮತ್ತಷ್ಟು ಜನರ ಮಾಹಿತಿಗಳು ಬೆಳಕಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸುಹೇಲ್, ಉಮರ್, ಜಾಹಿದ್, ತಬ್ರೇಜ್, ಪಾಷಾ ಮತ್ತು ಫಾಜಿಲ್ ಅವರನ್ನು ಬಂಧಿಸಲಾಗಿದೆ.

ಈ ನಡುವೆ ಭದ್ರಪ್ಪ ಲೇಔಟ್‌ನಲ್ಲಿರುವ ತಬ್ರೇಜ್ ಮನೆಯಲ್ಲಿ ಗ್ರೆನೇಡ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಗ್ರೆನೇಡ್ ಗಳನ್ನು ಜುನೈದ್ ರವಾನಿಸಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಕುರಿತು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Crime

ದರ್ಶನ್’ನನ್ನು ಅಟ್ಟಿದ ‘ಬಳ್ಳಾರಿ ಸೆಂಟ್ರಲ್ ಜೈಲ್’ ಬಗ್ಗೆ ನಿಮಗೆಷ್ಟು ಗೊತ್ತು?

Published

on

Ballary Central jail: ದರ್ಶನ್’ನನ್ನು ಅಟ್ಟಿದ ‘ಬಳ್ಳಾರಿ ಸೆಂಟ್ರಲ್ ಜೈಲ್’ ಬಗ್ಗೆ ನಿಮಗೆಷ್ಟು ಗೊತ್ತು? ನಡುಗಿ ಹೋಗ್ತೀರಾ ಇದರ ಭಯಾನಕ ಇತಿಹಾಸ ಕೇಳಿದ್ರೆ !!

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದೀಗ ಜೈಲಲ್ಲಿ ಈ ನಟನ, ಆರೋಪಿಯ ಐಷಾರಾಮಿ ಆತಿಥ್ಯದ ಬಗ್ಗೆ ಎಲ್ಲರೂ ಗಮನಿಸಿದ್ದಾರೆ. ಸರ್ಕಾರ ಕೂಡ ಕಟ್ಟುನಿಟ್ಟಿ ಕ್ರಮ ಕೊಗೊಂಡು ಅವರನ್ನು ದೂರದ, ದೇಶದ ಅತೀ ಕಠಿಣ ಕಾರಾಗೃಹವಾಗಿರುವ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿ ಜೈಲು ಅಂದರೆ ಎಂತಾ ಖೈದಿಯು ಒಮ್ಮೆ ನಡುಗತ್ತಾನೆ. ಅಷ್ಟೇ ಏಕೆ ತಪ್ಪು ಮಾಡಿದಾಗ ನಿನ್ನನ್ನು ಬಳ್ಳಾರಿ ಜೈಲಿಗೆ ಕಳುಹಿಸುತ್ತೇನೆ ಎಂಬ ಮಾತು ಸಾಮಾನ್ಯವಾಗಿ ಆಡುವುದಿದೆ. ಸಿನೆಮಾಗಳಲ್ಲೂ ಈ ಬಗ್ಗೆ ಡೈಲಾಗ್‌ ಕೇಳುತ್ತೇವೆ. ಯಾಕೆಂದರೆ ಈ ಭಯಾನಕ ಕಾರಾಗೃಹದ ಇತಿಹಾಸವೇ ಹಾಗಿದೆ. ಹಾಗಿದ್ರೆ ಬನ್ನಿ ಗಣಿ ನಾಡಲ್ಲಿರೋ ‘ಕೇಂದ್ರ ಕಾರಾಗೃಹ ಬಳ್ಳಾರಿಯ ಇತಿಹಾಸ ಏನೆಂದು ತಿಳಿಯೋಣ. ಗಣಿನಾಡು ಎಂದು ಪ್ರಸಿದ್ಧಿಯಾಗಿರುವ ಬಳ್ಳಾರಿ ಈ ಮೊದಲು ಜೈಲುಗಳ ತಾಣವಾಗಿತ್ತು. ಇಂದಿಗೂ ಕೂಡ ದೇಶದ ಅತ್ಯಂತ ಕಠಿಣ ಜೈಲುಗಳಲ್ಲಿ ಬಳ್ಳಾರಿ ಜೈಲು ಕೂಡ ಒಂದಾಗಿದೆ. ಇದರ ಇತಿಹಾಸ ಸ್ವಾತಂತ್ರ್ಯ ಪೂರ್ವದಿದಂಲೂ ಇದೆ. ದೇಶದ್ರೋಹಿಗಳನ್ನು ಹಿಂಸಿಸಲು, ಶಿಕ್ಷೆ ನೀಡಲು ಹೇಳಿ ಮಾಡಿಸಿದ ಅಂಡಮಾನ್ ಜೈಲು ಬಿಟ್ಟರೆ ದೇಶದಲ್ಲಿ ಬಳ್ಳಾರಿ ಜೈಲು ಎರಡನೇ ಅತೀ ಕಠಿಣ ಜೈಲು ಎಂಬ ಸ್ಥಾನ ಪಡೆದಿದೆಯಂತೆ. ಅಲ್ಲದೆ ಸಿನಿಮಾಗಳಲ್ಲಿ ಬಳ್ಳಾರಿ ಜೈಲನ್ನು ಉದಾಹರಣೆಯಾಗಿಟ್ಟುಕೊಂಡು ಅದೆಷ್ಟು ಡೈಲಾಗ್‌ಗಳು ಬಂದಿವೆಯೋ ಲೆಕ್ಕ ಹಾಕುವುದು ಕಷ್ಟ. ಬಳ್ಳಾರಿ ಜೈಲು ಅಂದರ ಅಷ್ಟು ಕಠಿಣ ಅನ್ನೋ ಭಾವನೆಯಿದೆ.

ಕರ್ನಾಟಕದಲ್ಲಿರುವ ಕೆಲವೇ ಕೆಲವು ದೊಡ್ಡ ಜೈಲುಗಳ ಪೈಕಿ ಬಳ್ಳಾರಿ ಜೈಲು ಕೂಡ ಒಂದು. ಇಲ್ಲಿ ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಸಾವಿರ ಮಂದಿ ಹೋರಾಟಗಾರರನ್ನು ಬಂಧಿಸುವುದಕ್ಕೆ ಈ ಜೈಲನ್ನು ಬಳಕೆ ಮಾಡುತ್ತಿದ್ದರು ಎಂದು ವರದಿಯಾಗಿದೆ. ಇಂದಿಗೂ ಈ ಜೈಲು ಅಷ್ಟೇ ಭದ್ರವಾಗಿದೆ. ಅಂದಹಾಗೆ 1800 ರಲ್ಲಿ ಬಳ್ಳಾರಿಯನ್ನು ಮದ್ರಾಸ್ ಪ್ರೆಸಿಡೆನ್ಸಿಯೊಂದಿಗೆ ವಿಲೀನಗೊಳಿಸಿದ ನಂತರ, ಬ್ರಿಟಿಷರು ಇಲ್ಲಿ ಮೂರು ಜೈಲುಗಳನ್ನು ಸ್ಥಾಪಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ 1872 ರಲ್ಲಿ ಮೊದಲ ಕಾರಾಗೃಹವನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ಕೇಂದ್ರ ಕಾರಾಗೃಹ ಎಂದು ಕರೆಯಲಾಯಿತು. ಎರಡನೆಯದು ಅಲಿಪುರ ಬಯಲು ಜೈಲು, ಮತ್ತು ಮೂರನೆಯದು ಆರ್ಥರ್ ವೆಲ್ಲಿಸ್ಲಿ ಟಿ ಬಿ ಸ್ಯಾನಿಟೋರಿಯಂ ಜೈಲು, ಈ ಜೈಲಿನಲ್ಲಿ ಯುದ್ಧ ಕೈದಿಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರು ಕೂಡಿ ಹಾಕುತ್ತಿದ್ದರು. ಬಳ್ಳಾರಿ ಕೇಂದ್ರ ಕಾರಾಗೃಹವನ್ನು ಇನ್ನೂ ಬಳಸಲಾಗುತ್ತಿದೆ. ರಾಜರ ಕಾಲದಿಂದಲೂ ಇತ್ತು ಪ್ರಾಮುಖ್ಯತೆ: ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಪಡೆದಿತ್ತು.

ಗಲ್ಲು ಶಿಕ್ಷೆಗೂ ಇದೆ ವ್ಯವಸ್ಥೆ:
ಬಳ್ಳಾರಿ ಜೈಲಿನಲ್ಲಿ ಗಲ್ಲು ಶಿಕ್ಷೆಗೂ ವ್ಯವಸ್ಥೆಯಿದೆ. ದೇಶದಲ್ಲಿ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಇರುವ ಕೆಲವೇ ಕೆಲವು ಜೈಲುಗಳಲ್ಲಿ ಇದೂ ಕೂಡ ಒಂದು. ಇದೇ ಬಳ್ಳಾರಿ ಜೈಲ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಶಿಫ್ಟ್ ಮಾಡಲಾಗುತ್ತೆ. ಅಂದ್ಹಾಗೆ, ಈ ಜೈಲಿಗೆ ಜನಪ್ರಿಯರ ವ್ಯಕ್ತಿಗಳು ಭೇಟಿ ಕೊಟ್ಟಿದ್ದರು ಎಂದು ವರದಿಯಾಗಿವೆ.

ವಾಜಪೇಯಿ, ಅಡ್ವಾಣಿಯರನ್ನು ಬಂಧಿಸಿಟ್ಟ ಜೈಲು:
ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರನ್ನು ಬಳ್ಳಾರಿ ಜೈಲಿನಲ್ಲಿಡಲಾಗಿತ್ತಂತೆ. ಬಳ್ಳಾರಿ ಜೈಲಿಗೆ 1905 ಬಾಲ ಗಂಗಾಧರ ತಿಲಕ್ , 1937ರಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಕೂಡ ಭೇಟಿ ನೀಡಿದ್ದರು. ಮಹಾತ್ಮ ಗಾಂಧೀಜಿ ಎರಡು ಬಾರಿ ಭೇಟಿ ನೀಡಿದ್ದಾರೆ. ಚಕ್ರವರ್ತಿ ರಾಜಗೋಪಾಲಾಚಾರಿ, ದ್ರಾವಿಡ ಚಳುವಳಿಯ ನೇತಾರ ಅಣ್ಣಾ ದೊರೈ, 1942ರ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ವಿದೇಶಿ ಬಂಧಿಗಳನ್ನು ಬಳ್ಳಾರಿಯ ಜೈಲುಗಳಲ್ಲಿ ಬಂಧಿಸಿಡಲಾಗಿತ್ತು ಎನ್ನುವುದು ಗಮನಾರ್ಹ ಸಂಗತಿ.

Continue Reading

Chamarajanagar

ಪ್ರಸಾದ ಸೇವಿಸಿ 27 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Published

on

ಕೊಳ್ಳೇಗಾಲ…

ಪ್ರಸಾದ ಸೇವಿಸಿ 27 ಕ್ಕೂ ಹೆಚ್ಚು ಮಂದಿ ಅಸ್ವಸ್ಥ…

ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಘಟನೆ…

ಬುಧವಾರ ತಡರಾತ್ರಿ ಗ್ರಾಮದಲ್ಲಿ ನಡೆದಿದ್ದ ಕೃಷ್ಣನ ಉತ್ಸವ…

ಮಧ್ಯರಾತ್ರಿ ವಿತರಿಸಿದ್ದ ಪುಳಿಯೋಗರೆ ಮತ್ತು ಪಂಚಾಮೃತ ಪ್ರಸಾದವನ್ನು ಇಂದು ಬೆಳಗ್ಗೆ ಸೇವಿಸಿದ್ದ ಹಲವರು…

ಪ್ರಸಾದ ಸೇವನೆ ಮಾಡಿದ ಕೆಲವೇ ಗಂಟೆಗಳಲ್ಲಿ ವಾಂತಿ-ಬೇಧಿ….

ಸ್ಥಳಕ್ಕೆ ಪಾಳ್ಯ ಗ್ರಾಮ ಪಂಚಾಯಿತಿ ಅದ್ಯೇಕ್ಷೆ ಮಂಜುಳಾ ಭೇಟಿ ನೀಡಿ ಅಸ್ವಸ್ಥರ ಯೋಗ ಕ್ಷೇಮ ವಿಚಾರಿಸಿದರು….

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ 17 ಮಂದಿ, ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ಮಂದಿ ದಾಖಲು..

Continue Reading

Chikmagalur

ಸ್ಮಶಾನ ಜಾಗದಲ್ಲಿ ರಸ್ತೆ ನಿರ್ಮಾಣ-ತೆರವುಗೊಳಿಸಲು ಗ್ರಾಮಸ್ಥರ ಮನವಿ

Published

on

ಚಿಕ್ಕಮಗಳೂರು: ತಾಲ್ಲೂಕು ವಸ್ತಾರೆ ಹೋಬಳಿ ಬಾಚಿಗನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಜಮೀನಿನ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಹರ್ಷವರ್ಧನ್ ಅವರಿಗೆ ಗ್ರಾಮಸ್ಥರು ಮನವಿ ನೀಡಿದರು.
ಬಾಚಿಗನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಸರ್ವೆ ನಂಬರ್ ೪೫ ರಲ್ಲಿ ೩೮ ಗುಂಟೆ ಜಾಗವನ್ನು ಸುಮಾರು ೭೫ ವರ್ಷಗಳ ಹಿಂದೆ ಸ್ಮಶಾನಕ್ಕೆ ಸರ್ಕಾರ ಮಂಜೂರು ಮಾಡಿದ್ದು, ಈ ಜಾಗಕ್ಕೆ ಗ್ರಾ.ಪಂ ನಿಂದ ಬೇಲಿ ನಿರ್ಮಿಸಲಾಗಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈಗ ಸ್ಮಶಾನ ಜಾಗದಲ್ಲಿ ಲಕ್ಷ್ಮಣ್‌ಗೌಡ ಕುಟುಂಬದವರು ಜೆಸಿಬಿ ಮೂಲಕ ಸಮಾಧಿಗಳ ಮೇಲೆ ಮಣ್ಣುಹಾಕಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವರಿಗೆ ಬೇರೆ ಕಡೆ ರಸ್ತೆ ನಿರ್ಮಾಣ ಮಾಡಲು ಜಾಗವಿದ್ದರೂ ಇದೇ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆಂದು ಮನವಿಯಲ್ಲಿ ದೂರಿದ್ದಾರೆ.


ಈ ಸಂಬಂಧ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಈ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬಾರದೆಂದು ಹೇಳಿದಾಗ ಉಡಾಫೆ ಉತ್ತರ ನೀಡಿದ್ದಾರೆಂದು ಆರೋಪಿಸಿದರು.
ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸ್ಮಶಾನ ಜಾಗದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯವನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.


ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಮರ್ಲೆ ಅಣ್ಣಯ್ಯ, ವಸಂತ ಕುಮಾರ್, ರುದ್ರಯ್ಯ ಗ್ರಾಮಸ್ಥರುಗಳಾದ ಗೋಪಾಲ್‌ಕೃಷ್ಣ, ಕೋಮಲ್, ಸುರೇಶ್, ಲಕ್ಷ್ಮಯ್ಯ, ಉದಯ, ಕೃಷ್ಣಮೂರ್ತಿ, ರಾಜೇಶ್, ತಿಮ್ಮಯ್ಯ, ಚಂದ್ರಯ್ಯ, ದಿನೇಶ, ಮೋಹನ, ಮಹೇಶ್, ರಂಗಪ್ಪ, ಮಂಜುನಾಥ, ಸುನೀಲ್, ನಾಗರಾಜು, ರವಿ, ದಸಂಸ ಮುಖಂಡರುಗಳಾದ ಭಾಗವಹಿಸಿದ್ದರು.

Continue Reading

Trending

error: Content is protected !!