Connect with us

Hassan

ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವು

Published

on

ಹಾಸನ : ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವು

ವೆಂಟೇಶ್ (55) ಸಾವನ್ನಪ್ಪಿದ ಹೆಡ್‌ಕಾನ್ಸ್‌ಟೇಬಲ್

ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಜೋಡಿಗುಬ್ಬಿ ಕ್ರಾಸ್ ಬಳಿ ಘಟನೆ

ಕೊಣನೂರು ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿದ್ದ ವೆಂಕಟೇಶ್

ಸಮನ್ಸ್ ನೀಡಿ ಬೈಕ್‌ನಲ್ಲಿ ಪೊಲೀಸ್ ಠಾಣೆಗೆ ವಾಪಾಸ್ಸಾಗುತ್ತಿದ್ದ ಮುಖ್ಯಪೇದೆ ವೆಂಕಟೇಶ್

ಜೋಡಿಗುಬ್ಬಿ ಕ್ರಾಸ್‌ನಲ್ಲಿ ಹಂಪ್ಸ್ ಕಾಣದೆ ಆಯತಪ್ಪಿ ರಸ್ತೆಗೆ ಬಿದ್ದ ವೆಂಕಟೇಶ್

ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವೆಂಕಟೇಶ್ ಸಾವು

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading
Click to comment

Leave a Reply

Your email address will not be published. Required fields are marked *

Hassan

ಆಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

Published

on


ಆಲೂರು: ಆಲೂರು ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ವಿಶೇಷ ಮಹಾ ಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶಾಂತಕೃಷ್ಣ ಹುಣಸುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಜಿಲ್ಲಾ ಎಚ್ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆ ತಾಲೂಕು ಸೊಸೈಟಿಯಾಗಿದೆ. ಸಹಕಾರ ಸಂಘಗಳು ರೈತರಿಗೆ ವರದಾನ ಆಗಿವೆ, ಸಂಘದ ವಾರ್ಷಿಕ ಮಹಾಸಭೆಗಳು ಕೇವಲ ಲಾಭ-ನಷ್ಟಗಳ ಬಗ್ಗೆ ಚರ್ಚಿಸುವ ಸಭೆಯಾಗಬಾರದು. ರೈತರಿಗೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಬಗ್ಗೆ ಚರ್ಚೆ ಆಗಬೇಕು. ಪ್ರತಿಯೊಂದು ವಹಿವಾಟಿನಲ್ಲೂ ಸಾರ್ವಜನಿಕರಿಗೆ ಹಾಗೂ ಸಂಘದಲ್ಲಿನ ಷೇರುದಾರರಿಗೆ ಹಲವಾರು ರೀತಿಯ ಯೊಜನೆ ರೂಪಿಸಿದೆ. ಸಹಕಾರ ಸಂಘಗಳ ಮಹತ್ವ ಹೆಚ್ಚು ಇದ್ದು, ಅದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇದೇ ರೀತಿ ಸಂಘ ಮತ್ತಷ್ಟು ಅಬಿವೃದ್ಧಿ ಹೊಂದಲಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ಶಾಂತಕೃಷ್ಣ ಹುಣಸುವಳ್ಳಿ ಮಾತನಾಡಿ, ಆಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಎರಡು ಸಾವಿರ ಸದಸ್ಯರನ್ನ ಹೊಂದಿದೆ. 2023 24ನೇ ಸಾಲಿನಲ್ಲಿ ಒಟ್ಟು 8 ಕೋಟಿ ವ್ಯವಹಾರವನ್ನ ನಡೆಸಿದ್ದು. ಅಲ್ಪಾವಧಿ ಬೆಳೆಸಾಲವಾಗಿ 5.20 ಕೋಟಿ ರೂಗಳನ್ನು ಮತ್ತು ಮಧ್ಯಮವದಿ ಕೃಷಿ ಸಾಲವಾಗಿ 2.80 ಕೋಟಿ ರೂಗಳನ್ನು ನೀಡಲಾಗಿದೆ. ಸಹಕಾರ ಸಂಘಗಳು ಮುಕ್ತವಾಗಿ ಕೆಲಸ ಮಾಡಬೇಕು. ಸಹಕಾರ ಸಂಘಗಳ ಉಳಿವಿನಲ್ಲಿ ರೈತರ ಹಿತ ಮತ್ತು ಬಲವರ್ಧನೆಯು ಅಡಗಿದೆ. ಹಾಗಾಗಿ ಪಕ್ಷಾತೀತವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಎಲ್ಲಾ ರಾಜಕಾರಣಿಗಳು ಪಕ್ಷಬೇಧ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ಇದೇ ಸಂದರ್ಭದಲ್ಲಿ ಆಲೂರು ಸೊಸೈಟಿಯಲ್ಲಿ ಕಳೆದ 23 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮಂಜುನಾಥ್ ಅವರಿಗೆ ಬೀಳ್ಕೊಡುಗೆ ಸನ್ಮಾನವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟೇಗೌಡ, ನಿರ್ದೇಶಕರುಗಳಾದ ಸಂದೇಶ ಹಳೆಆಲೂರು, ಶಿವಣ್ಣ, ಮಲ್ಲೇಶ್, ಕಾಂತರಾಜು, ರಘುಕುಮಾರ್, ಟೌಫಿಕ್ ಅಹಮದ್, ಪ್ರಕಾಶ್, ವಿನೋದ, ರೇಖಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಅಕೌಂಟೆಂಟ್ ಶೇಖರ್ ಸೇರಿದಂತೆ ಮುಂತಾದವರು ಹಾಜರಿದ್ದರು.

ವರದಿ ಸತೀಶ್ ಚಿಕ್ಕಕಣಗಾಲು

Continue Reading

Hassan

ಸಕಲೇಶಪುರದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ, ಇನ್ನಷ್ಟು ಕಠಿಣ ಕ್ರಮಕ್ಕಾಗಿ ಎಸ್ಪಿ ಗೆ ಮನವಿ

Published

on

ಹಾಸನ: ಡ್ರಗ್ಸ್ ದಂಧೆ ಬಹಳ ಪ್ರಭಲವಾಗಿ ನಡೆಯುತ್ತಿರುವ ಸಕಲೇಶಪುರದಲ್ಲಿ ಕೆಲವು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ರವರಿಗೆ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ನಿಯೋಗ ಮನವಿ ಸಲ್ಲಿಸಿದರು.

ಅಮಲು ಮುಕ್ತ ಭಾರತದ ಆಂದೋಲನ ದೇಶಧ್ಯಾಂತ ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಸಕಲೇಶಪುರದಲ್ಲಿ ಚಾಲನೆ ನೀಡಲಾಗಿದ್ದು ಹಲವಾರು ಕಾರ್ಯಕ್ರಮಗಳನ್ನ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಸಕಲೇಶಪುರದಲ್ಲಿ ಡ್ರಗ್ಸ್ ದಂಧೆ ಬಹಳ ಪ್ರಭಲವಾಗಿ ನಡೆಯುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯ ಸಹಕಾರ ನಿಡುತ್ತಿದೆ ಅನೇಕ ಪ್ರಕರಣ ದಾಖಲಿಸಿದ್ದಾರೆ ಇನ್ನಷ್ಟು ಕ್ರಮದ ಅಗತ್ಯವಾಗಿದೆ. ತಾಲೂಕಿಗೆ ಸಂಬಂಧಿಸಿಂತೆ ಡ್ರಗ್ಸ್ ದಂದೆ ವಿರುದ್ಧ ದಿನದ ೨೪ ಗಂಟೆ ಕಾರ್ಯನಿರ್ವಹಿಸಲು ವಿಶೇಷ ಪಡೆಯನ್ನು ರಚಿಸಬೇಕಾಗಿ, ಜೊತೆಗೆ ಡ್ರಗ್ಸ್ ದಂದೆಕೋರರ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಣೆಗೆ ಸಹಾಯವಾಣಿ ತೆರಯುವುದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಕರು ಡ್ರಗ್ಸ್ ದಂದೆಗೆ ಸಂಬಂಧದ ಮಾಹಿತಿ ನೀಡಿದ ವ್ಯಕ್ತಿಗಳ ವಿಚಾರಣೆಯನ್ನು ನಡೆಸಬೇಕಾಗಿ ಮನವಿಮಾಡಿದರು

ಸಕಲೇಶಪುರ ಅಲೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ನೇತೃತ್ವದ ನಿಯೋಗದಲ್ಲಿ ಹಿರಿಯ ಹೋರಾಟಗಾರ ನಾರಾಯಣ ಆಡುವ ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಹಿರಿಯ ಪತ್ರಕರ್ತರಾದ ಸಾ ಸು ವಿಶ್ವನಾಥ್, ಮಲ್ನಾಡ್ ಮೆಹಬೂಬ್ ಇತರರು ಉಪಸ್ಥಿತರಿದ್ದರು.

 

Continue Reading

Hassan

ಸೆ.27 ರಂದು ಕೇದಾರ್ ನಾಥ್ ಕುರಿ ಫಾರಂ ಚಲನಚಿತ್ರ ಬಿಡುಗಡೆ – ನಿರ್ದೇಶಕ ಶ್ರೀನಿವಾಸ್

Published

on

ಹಾಸನ : ನೂರಕ್ಕೆ ೮೦ ಭಾಗ ಹಾಸ್ಯದಿಂದ ಕೂಡಿರುವ ಮತು ಕುಟುಂಬ ಸಮೇತ ವೀಕ್ಷಣೆ ಮಾಡಬಹುದಾದ ಹಾಗೂ ಹಾಸನದ ನಿವಾಸಿ ಮಡೆನೂರು ಮನು ನಾಯಕನಾಗಿ ಅಭಿನಯಿಸಿರುವ ಕೇದಾರ್ ನಾಥ್ ಕುರಿ ಫಾರಂ ಕನ್ನಡ ಚಲನಚಿತ್ರವು ಸೆಪ್ಟಂಬರ್ ೨೭ ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಭರ್ಜರಿ ಚಿತ್ರದ ಚೇತನ್ ಸಾಹಿತ್ಯ ನೀಡಿದ್ದಾರೆ. ಸಂತೋಷ್ ವೆಂಕಿ ಗಾಯಕರಾಗಿದ್ದಾರೆ. ಛಾಯಗ್ರಹಣ ರಾಕೇಶ್ ನಿರ್ವಹಿಸಿದ್ದಾರೆ. ಕ್ಯಾಮರ ಮೆನ್ ಏಳು ಕೋಟೆ ಚಂದ್ರು, ಕಥೆ, ಡೈಲಾಗ್, ಸಹ ನಿರ್ದೇಶನ ರಾಜೇಶ್ ಸಾಲುಂಡಿ ನಿರ್ವಹಿಸಿದ್ದಾರೆ. ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ ಚಿತ್ರದ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದು, ಎಲ್ಲರ ಮನ ಗೆಲ್ಲುವ ಸೆಂಟಿಮೆಂಟ್ ಪಾತ್ರ ನಿರ್ವಹಿ ಸಿದ್ದಾರೆ. ಚಿತ್ರದ ನಾಯಕಿ ಶಿಬಾನಿ ಮೊದಲ ಬಾರಿಗೆ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಎಂದರು. ಗ್ರಾಮೀಣ ಭಾಗದ ಹಿನ್ನಲೆ ಕೂಡಿರುವ ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ. ನಾಯಕ ನಟನು ಒಂದು ಕುರಿ ಫಾರಂನಲ್ಲಿದ್ದು, ನಂತರ ನಡೆಯುವ ಹಾಸ್ಯಮಯ ಘಟನೆಗಳು ಸಂಭವಿಸುತ್ತದೆ. ಈ ಚಿತ್ರದಲ್ಲಿ ಒಂದು ಹಾಡು ಮತ್ತು ಒಂದು ಫೈಟ್ ಇರುತ್ತದೆ. ನೂರು ರೂ ಕೊಟ್ಟು ಚಿತ್ರ ಮಂದಿರದಲ್ಲಿ ಕುಳಿತು ನೋಡುವ ಪ್ರೇಕ್ಷಕರಿಗೆ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಬೇಸರ ತರದೆ ಕೊಟ್ಟ ಹಣಕ್ಕೆ ಮನರಂಜನೆ ನೀಡಲಿದೆ ಎಂದು ಭರವಸೆ ನೀಡಿದರು. ಕರ್ನಾಕದಂತ ಈ ಚಿತ್ರ ಇದೆ ತಿಂಗಳು ೨೭ ರಂದು ತೆರೆ ಕಾಣಲಿದೆ ಎಂದು ಹೇಳಿದರು.

ನಾಯಕ ನಟ ಮಡೆನೂರು ಮನು ಮಾತನಾಡಿ, ಕೇದಾರ್ ನಾಥ್ ಕುರಿ ಫಾರಂ ಚಿತ್ರದಲ್ಲಿ ಶೇಕಡ ೮೦ ಭಾಗ ಹಾಸ್ಯ ಕಂಡು ಬಂದರೇ ಉಳಿದ ೨೦ ಭಾಗ ಕಥೆಯನ್ನು ಹೇಳುತ್ತದೆ. ಉತ್ತಮವಾದ ಕಥೆಯಿದ್ದು, ಇದರಲ್ಲಿ ಮುಖ್ಯವಾಗಿ ಹಾಸ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದರು.

ಹಿರಿಯ ನಟ ಹಾಗೂ ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ ಮಾತನಾಡಿ, ಇದುವರೆಗೂ ನೀವು ಸಿನಿಮಾದಲ್ಲಿ ನನ್ನನ್ನು ಹಾಸ್ಯ ನಟನಾಗಿ ನೋಡಿದ್ದು, ಕೇದಾರ್ ನಾಥ್ ಕುರಿ ಫಾರಂ ಚಿತ್ರದಲ್ಲಿ ವಿಭಿನ್ನ ಪಾತ್ರವಹಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಎಲ್ಲಾರು ಥಿಯೇಟರ್ ಗೆ ಬಂದು ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಕೆ.ಎಮ್ ನಟರಾಜು, ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ, ನಾಯಕನಟ ಮಡೆನೂರು ಮನು, ಸಿದ್ದು ಮಂಡ್ಯ, ನಟಿ ಶಿವಾನಿ ಅಮರ್, ಹರಿಣಿ, ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!