Hassan
ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಸ್ಥಳದಲ್ಲೇ ದಂಪತಿ ದುರ್ಮರಣ
ಹಾಸನ : ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ
ಸ್ಥಳದಲ್ಲೇ ದಂಪತಿ ದುರ್ಮರಣ
ಚಂದ್ರೇಗೌಡ (52) ಹೇಮಲತಾ (45) ಮೃತ ದುರ್ದೈವಿಗಳು
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಬರಗೂರು ಹ್ಯಾಂಡ್ ಪೋಸ್ಟ್ ಬಳಿ ಘಟನೆ
ಉದಯಪುರದಿಂದ ಮದುವೆ ಮುಗಿಸಿ ಬೈಕ್‌ನಲ್ಲಿ ಚನ್ನರಾಯಪಟ್ಟಣಕ್ಕೆ ವಾಪಾಸ್ ಆಗುತ್ತಿದ್ದ ದಂಪತಿ
ತಿರುವಿನಲ್ಲಿ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಕಾರು
ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ ದಂಪತಿ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Hassan
ಸೆ.06 ರಂದು ಕಾರ್ಜುವಳ್ಳಿ ಹಿರೇಮಠದಲ್ಲಿ ಸ್ವರ್ಣಗೌರಿ ವ್ರತ ಹಾಗೂ ಬಾಗಿನ ವಿತರಣೆ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಸೆ.06ರಂದು ಸ್ವರ್ಣಗೌರಿ ಹಬ್ಬದ ಅಂಗವಾಗಿ ಸ್ವರ್ಣಗೌರಿ ವ್ರತ ಮಾಡಲಾಗುತ್ತದೆ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ನೀಡಲಾಗುತ್ತದೆ ಎಂದು ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಭಾದ್ರಪದ ಮಾಸದ ಶುದ್ಧ ತದಿಗೆಯಂದು ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈಬಾರಿಯೂ ಶ್ರೀ ಮಠದ ಆವರಣದಲ್ಲಿ ಸೆ.06ರ ಬೆಳಗ್ಗೆ 9.30ರಿಂದ ಶ್ರೀ ಸ್ವರ್ಣಗೌರಿ ಪೂಜೆ ನೆರವೇರಿಲಿದೆ. 10.45 ಗಂಟೆಗೆ ಮಹಾಮಂಗಳಾರತಿ, 11 ರಿಂದ ಬಾಗಿನ ಕಾರ್ಯಕ್ರಮ ನಡೆಯಲಿದ್ದು, ಹೆಣ್ಣು ಮಕ್ಕಳು ಸ್ವೀಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Hassan
ನಾಳೆ ಗೌರಿ ಹಬ್ಬದ ದಿನ, ಗಂಗೆ ಪೂಜೆ ಮಾಡ್ತಿದ್ದೇವೆ – ಡಿಸಿಎಂ ಡಿ.ಕೆ.ಶಿವಕುಮಾರ್
ಹಾಸನ : ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
ಬಹಳ ಜನ ನಮಗೆ ಸಹಕಾರ ಕೊಟ್ಟಿದ್ದಾರೆ
ನಾಳೆ ಗೌರಿ ಹಬ್ಬದ ದಿನ, ಗಂಗೆ ಪೂಜೆ ಮಾಡ್ತಿದ್ದೇವೆ
ಒಂದು ಭಗೀರಥ ಪ್ರಯತ್ನ ಮಾಡಿದ್ದೇವೆ
ಗೌರಿ-ಗಂಗೆಗೆ ಜಗಳ ಆಗಿತ್ತು
ಇಲ್ಲಿ ಇಬ್ಬರನ್ನೂ ಒಂದು ಮಾಡುತ್ತಿದ್ದೇವೆ
ಇಬ್ಬರನ್ನು ಒಂದು ಮಾಡಿ ಪೂಜೆ ಮಾಡುತ್ತಿದ್ದೇವೆ
ನಮ್ಮ ರಾಜ್ಯದ ಇತಿಹಾಸ ಪುಟಕ್ಕೆ ಸೇರುವ ಕಾರ್ಯಕ್ರಮ
ನಾನು ಯಾರ ಟೀಕೆಗೂ ಉತ್ತರ ಕೊಡಲು ತಯಾರಿಲ್ಲ, ಅವಶ್ಯಕತೆ ಇಲ್ಲ
ಒಂದು ತೊಟ್ಟು ನೀರಿಗೆ ನಮ್ಮ ಜನ ಹೇಗೆ ಬಡಿದಾಡುತ್ತಾರೆ ಎಂದು ಗೊತ್ತು
ಇದು ಅಂತರರಾಜ್ಯ ಅಲ್ಲಾ, ನಮ್ಮ ರಾಜ್ಯದ ಯೋಜನೆ
ಎಲ್ಲರನ್ನೂ ಒಪ್ಪಿಸಿಕೊಂಡು ಈ ಯೋಜನೆ ಮಾಡುತ್ತಿದ್ದೇವೆ, ಬಹಳ ಚೆನ್ನಾಗಿ ಆಗಿದೆ
ನಾನು ಬಂದ ಮೇಲೆ ಇದಕ್ಕೊಂದು ಹೊಸ ರೂಪ ಕೊಟ್ಟಿದ್ದೇನೆ
ಅದಕ್ಕೆ ನಿಮ್ಮ ಕಣ್ಣುಗಳು, ಕ್ಯಾಮೆರಾಗಳೇ ಸಾಕ್ಷಿ
ಪಕ್ಷಭೇದ ಮರೆತು ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇನೆ
ಯಾರು ಬೇಕಾದರೂ ಬರಬಹುದು, ಪಾಲ್ಗೊಳ್ಳಬಹುದು, ಏನು ಗೌರವ ಕೊಡಬೇಕು ಕೊಡ್ತೇವೆ
ನಾಳೆ ಬೆಳಿಗ್ಗೆ 12 ಗಂಟೆಗೆ ಏಳು ವಿಯರ್‌ಗಳಲ್ಲಿ ಏಳು ಮಂತ್ರಿಗಳು ಪೂಜೆ ಮಾಡ್ತಾರೆ
ಇನ್ ಟೈಂಗೆ ಅವರು ಬರಬೇಕು, ರಾಹುಕಾಲದ ಒಳಗೆ ಬರಬೇಕು
ಇಲ್ಲ ಅಂದರೆ ಮಾಮೂಲಿ ಹನ್ನೆರಡು ಗಂಟೆಗೆ ಹೋಮ ಹವನ ನಡೆಯುತ್ತೆ
ಬೆಳಿಗ್ಗೆ ನಾನು ಪಾಲ್ಗೊಳ್ತಿನಿ, 10.30 ರೊಳಗೆ ರಾಹುಕಾಲ ಮುಗಿಯುವುದರೊಳಗೆ ಕೆಲವು ಶಾಸ್ತ್ರಗಳು ಮುಗಿಯುತ್ತವೆ
ಮಧ್ಯಾಹ್ನ 12 ಗಂಟೆಗೆ ಬಟನದ ಆನ್ ಮಾಡ್ತಾರೆ
ಸಿಎಂ ಇಲ್ಲಿಗೆ ಬಂದು ಗಂಗೆ ಪೂಜೆ ಮಾಡ್ತಾರೆ
ಚಾಮುಂಡಿಬೆಟ್ಟದ ದೀಕ್ಷಿತರನ್ನೇ ಬರಲು ಹೇಳಿದ್ದೇವೆ
ನಮ್ಮ ರಾಜ್ಯದ ಅಧಿದೇವತೆ ಚಾಮುಂಡಿ
ಅರ್ಚಕರ ಪ್ರಭಾವದಿಂದ ಶಿಲೆಯನ್ನು ಕಾಣಬಹುದಂತೆ
ಚಾಮುಂಡಿ ಬೆಟ್ಟದ ದೀಕ್ಷಕರನ್ನೇ ಕರೆಸಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ
ಎಲ್ಲಾ ಮಂತ್ರಿಗಳಿಗೂ ತಿಳಿಸಿದ್ದೇವೆ
ಇವತ್ತು ರಾತ್ರಿ ಯಾರು ಬರ್ತಾರೆ ಲೆಕ್ಕಾಚಾರ ಹಾಕ್ತಿವಿ
ಅಲ್ಲಿಲ್ಲಿ ಹೋಗಿ ಆನ್ ಮಾಡಲು ಅವಕಾಶ ಮಾಡಿ ಕೊಡ್ತಿವಿ
ಈ ವ್ಯಾಪ್ತಿಗೆ ಬರುವ ಎಲ್ಲಾ ಮಿನಿಸ್ಟರ್ ಬರ್ತಾರೆ
ಆಹ್ವಾನಪತ್ರಿಕೆಯಲ್ಲಿ ಯಾರ ಹೆಸರು ಹಾಕಬೇಕು ಎಲ್ಲರ ಹೆಸರು ಹಾಕಿದ್ದೀವಿ
ಈ ವ್ಯಾಪ್ತಿಗೆ ಬರುವ ಎಲ್ಲಾ ಎಂಎಲ್‌ಎ ಹೆಸರುಗಳನ್ನು ಹಾಕಿದ್ದೇವೆ
ಏನಾದರು ಇದ್ದರೆ ಸರಿ ಮಾಡೋಣ
ಚಿಕ್ಕಬಳ್ಳಾಪುರಕ್ಕೆ ಯೋಜನೆ ತಲುಪಿಲ್ಲ ಎಂದು ಅಲ್ಲಿನ ಶಾಸಕ ಅಸಮಾಧಾನ ವಿಚಾರ
ಆಲಮಟ್ಟಿ ಯೋಜನೆ ಭೂಮಿ ಪೂಜೆ ಆಗಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ
ಉದ್ಘಾಟನೆ ಆಗಿದ್ದು ಅಬ್ದುಲ್ ಕಲಾಂ ಅವರ ಕಾಲದಲ್ಲಿ
ಹತ್ತು ವರ್ಷದಲ್ಲೇ ಈ ನೀರು ತೆಗ್ದಿದ್ದೇವಿ
ಹಿಂದೆ ಬಿಜೆಪಿ ಮಂತ್ರಿ ನೂರು ಮೀಟರ್ ಓಪನ್ ಮಾಡಲು ಆಗಿರಲಿಲ್ಲ
ನಾನು ಬಂದು ಅದನ್ನು ಓಪನ್ ಮಾಡ್ಸಿ ಕೆಲಸ ಶುರು ಮಾಡ್ಸಿದ್ದೀನಿ
ಅರಣ್ಯ ಇಲಾಖೆಯವರ ಜೊತೆ ಮಾತನಾಡಿದ್ದೀನಿ
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ವಿಚಾರವಾಗಿ ತಮ್ಮ ವಿರುದ್ದ ಬಿಜೆಪಿ ಶಾಸಕ ಯತ್ನಾಳ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿಚಾರ
ಪ್ರತಿಕ್ರಿಯೆ ನೀಡದೆ ಹೊರಟ ಡಿಸಿಎಂ ಡಿ.ಕೆ.ಶಿವಕುಮಾರ್
Hassan
ಸೆ.7 ರಿಂದ 12ರ ವರೆಗೂ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆ ಮಹೋತ್ಸವ ವೇಣುಗೋಪಾಲ್
ಹಾಸನ: ಯಾವ ಸಮುದಾಯಕ್ಕೂ ದಕ್ಕೆ ಆಗದ ರೀತಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗಣಪತಿ ಪ್ರತಿಷ್ಠಾಪನೆಯು ಸೆಪ್ಟಂಬರ್ ೭ ರಿಂದ ೧೨ರ ವರೆಗೂ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ೧೫ ವರ್ಷದಿಂದ ಪಾಂಚಜನ್ಯ ಹಿಂದೂ ಗಣಪತಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದ್ದು ಸೆ. ೭ ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಗಣಪತಿ ಪ್ರತಿಷ್ಟಾಪಿಸಲಾಗುವುದು ಪ್ರತಿನಿತ್ಯ ಮ ೧೨ ಗಂಟೆಗೆ ಹಾಗೂ ಸಂಜೆ ೮ ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಸೆ. ೧೨ ರಂದು ಆಕರ್ಷಕ ಮೆರವಣಿಗೆ ಮೂಲಕ ವಿಸರ್ಜಿಸಲಾಗುವುದು ಎಂದರು.
೬ ದಿನಗಳ ಕಾಲ ನಡೆಯುವ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆಪ್ಟಂಬರ್ ೭ರ ಶನಿವಾರ ಸಂಜೆ ೬ ರಿಂದ ವಾಣಿನಾಗೇಂದ್ರ ಮತ್ತು ಸೃಷ್ಟಿ ನಾಗ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆ. ೮ ರಂದು ೪ ರಿಂದ ೬ ವರ್ಷದ ಮಕ್ಕಳಿಗೆ ಶ್ರೀ ಗಣೇಶನ ಚಿತ್ರಕಲಾ ಸ್ಪರ್ಧೆ, ೭ ರಿಂದ ೧೦ ವರ್ಷದ ಮಕ್ಕಳಿಗೆ ಜೇಡಿ ಮಣ್ಣಿನ ಗಣೇಶ ಮೂರ್ತಿ ರಚನೆ, ೧೦ ರಿಂದ ೧೪ ವರ್ಷದ ರಾಮಾಯಣ ಹಾಗೂ ಮಹಾಭಾರತ ಪಾತ್ರಗಳ ಛದ್ಮವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದ ಅವರು, ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಸಂಜೆ ೬ ರಿಂದ ಕುಟುಂಬ ಪ್ರಭೋದನ ಕಾರ್ಯಕ್ರಮವಿದೆ ಎಂದರು.
ಸೆ. ೯ರಂದು ಸಂಜೆ ೫ ರಿಂದ ದೇಶಭಕ್ತಿಗೀತೆ, ಸಂಜೆ ೬ ಗಂಟೆಗೆ ಮೇದಿನಿ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಂಜೆ ೭ ರಿಂದ ಕಳರಿ ಮನೂವರ್ ರವರಿಂದ ೧೧ ನೇ ಶತಮಾನದಲ್ಲಿಬಕೇರಳದಲ್ಲಿ ಹುಟ್ಟಿದ ಭಾರತೀಯ ಸಮರಕಲೆಯ ಯುದ್ದ ಪ್ರದರ್ಶನ ನಡೆಯಲಿದೆ. ಸೆ. ೧೦ ರಂದು ಮದ್ಯಾಹ್ನ ೩. ೩೦ ಕ್ಕೆ ಬೈಕ್ ರ್ಯಾಲಿ ಇದ್ದು ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಸಂಜೆ ಭಜನೆ, ೬ ಗಂಟೆಗೆ ವಿದ್ವಾನ್ ಉನ್ನತ್ ಅವರಿಂದ ಭರತನಾಟ್ಯ , ಸಂಜೆ ೭ ರಿಂದ ಮಾತನಾಡುವ ಗೊಂಬೆ ಏರ್ಪಡಿಸಲಾಗಿದೆ. ಸೆ. ೧೧ ರಂದು ಬೆಳಗ್ಗೆ ಗಣಹೋಮ, ಸಂಜೆ ೬ ಕ್ಕೆ ನೃತ್ಯ ಕಾರ್ಯಕ್ರಮ, ಸಂಜೆ ೭ ರಿಂದ ಕೊಳಲು ಗಾಯನ ಕಾರ್ಯಕ್ರಮಿದೆ ಎಂದು ಹೇಳಿದರು. ಸೆ. ೧೨ ರಂದು ಮಧ್ಯಾಹ್ನ ೧೨. ೩೦ಕ್ಕೆ ಪಾಂಚಜನ್ಯ ಹಿಂದೂಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾ ಯಾತ್ರೆ ನಡೆಯಲಿದ್ದು, ನಗರದ ವಿವಿದ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕಲಾಭವನದಿಂದ ಸಹ್ಯಾದ್ರಿ ಸರ್ಕಲ್- ಬಸವೇಶ್ವರ ಕಲ್ಯಾಣ ಮಂಟಪ- ಪೆನ್ ಷನ್ ಮೊಹಲ್ಲಾ- ಬಿಎಂ ರಸ್ತೆ- ಸುಭಾಷ್ ಚೌಕ ಮಾರ್ಗವಾಗಿ ಮೆರವಣೆಗೆ ನಡೆಯುವುದು ನಗರದ ದೇವಿಗೆರೆಯಲ್ಲಿ ಗಣಪತಿ ವಿಸರ್ಜಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲಿಪಾಂಚಜನ್ಯ ಹಿಂದೂ ಗಣಪತಿ ಸಮಿತಿಯ ಅಧ್ಯಕ್ಷ ವಾಸು, ರವಿಸೋಮು, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್ ಇತರರು ಉಪಸ್ಥಿತರಿದ್ದರು.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State7 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State7 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health7 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized3 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized9 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State7 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.