Hassan
“ಬೇಲೂರಿಲ್ಲಿ ಪ್ಲಾಸ್ಟಿಕ್ ಬಳಕೆ-ಮಾರಾಟ ಸಂಪೂರ್ಣ ನಿಷೇಧ”

Hassan
KSRTC ಬಸ್-ಸ್ಕೂಟಿ ಡಿಕ್ಕಿ: ಓರ್ವ ಯುವಕ ಸ್ಥಳದಲ್ಲೇ ಸಾ*ವು
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯಡೇಗೌಡನಹಳ್ಳಿಯ ಹಾಸನ – ಮೈಸೂರು ರಸ್ತೆಯಲ್ಲಿ KSRTC ಬಸ್‌ಗೆ ಸ್ಕೂಟಿ ಡಿಕ್ಕಿ ಹೊಡೆದು ಓರ್ವ ಯುವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ.
ಮೂವರು ಯುವಕರು ಒಂದೇ ಸ್ಕೂಟಿಯಲ್ಲಿ ತೆರಳುತ್ತಿದ್ದರು, ಈ ವೇಳೆ ಸಾರಿಗೆ ಬಸ್‌ಗೆ ನಡುವೆ ಅಪಘಾತ ಸಂಭವಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ಸಾವನ್ನಪ್ಪಿದ್ದರೆ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಇಬ್ಬರು ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಹಳ್ಳಿಮೈಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Hassan
ಪೌರ ಕಾರ್ಮಿಕರೂ ದೇಶ ಕಾಯುವ ಸೈನಿಕರಿದ್ದಂತೆ: ತಾಹೇರ ಬೇಗಂ
ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಸೈನಿಕರು ವಿರೋಧಿಗಳ ಗುಂಡಿಗೆ ಬಲಿಯಾದರೆ, ಪೌರ ಕಾರ್ಮಿಕರು ಗುಂಡಿ ಸ್ವಚ್ಛ ಮಾಡಲು ಬಲಿಯಾಗುತ್ತಿದ್ದಾರೆ. ಪೌರ ಕಾರ್ಮಿಕರೂ ದೇಶ ಕಾಯುವ ಸೈನಿಕರಿದ್ದಂತೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೇರ ಬೇಗಂ ಹೇಳಿದರು.

ಪಟ್ಟಣ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೈನಿಕರು ದೇಶ ರಕ್ಷಣೆ ಮಾಡಿದರೆ, ಪೌರ ಕಾರ್ಮಿಕರು ಊರು, ಕೇರಿ ಸ್ವಚ್ಛಗೊಳಿಸಿ ಎಲ್ಲ ಆರೋಗ್ಯ ಕಾಪಾಡುತ್ತಿದ್ದಾರೆ. ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಅಧಿಕಾರಿಗಳ ಮುಂದೆ ಕೈ ಚಾಚುವ ಕಾರ್ಮಿಕರಾಗಿ ಮಾಡದೆ, ಅಧಿಕಾರಿಗಳೇ ನಮಸ್ಕಾರ ಮಾಡುವಂತಹ ದೊಡ್ಡ ವ್ಯಕ್ತಿಯಾಗಿ ಮಾಡುವುದಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಪೌರ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ವಿಮೆ ಸೌಲಭ್ಯ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ಕಲ್ಪಿಸಲಾಗುತ್ತಿದೆ. ಅದನ್ನು ಎಲ್ಲರೂ ಬಳಸಿಕೊಳ್ಳಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ. ಪೌರಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ ಕಾಪಾಡಿಕೊಳಬೇಕು ಎಂದು ಸಲಹೆ ನೀಡಿದರು.
ಲಯನ್ ಸೇವಾ ಸಂಸ್ಥೆಯ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಪೌರ ಕಾರ್ಮಿಕರರು ಆರೋಗ್ಯವಾಗಿದ್ದರೆ ಮಾತ್ರ ನಗರವಾಸಿಗಳು ನಿವಾಸಿಗಳು ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನ ನಡೆಸಬೇಕು. ನಗರದ ಸ್ವಚ್ಛತೆ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಸುರಕ್ಷತಾ ಸಲಕರಣೆಗಳಿದ್ದೆ ಬರಿಗೈ ಕೆಲಸ ಮಾಡಿದರೆ ಆರೋಗ್ಯ ಹಾಳಾಗುತ್ತದೆ’ ಎಂದರು.

ಇದೇ ಸಂದರ್ಭದಲ್ಲಿ ಲಯನ್ ಸೇವಾ ಸಂಸ್ಥೆ ವತಿಯಿಂದ ಗೌರವಿಸಿ ಸನ್ಮಾನಿಸಿ ಟೀಶರ್ಟ್ ವಿತರಣೆ ಮಾಡಲಾಯಿತು. ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಪೌರ ಕಾರ್ಮಿಕರು ಮೆರವಣಿಗೆ ನಡೆಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್, ಧರ್ಮ, ಸಂತೋಷ್, ತೌಫಿಕ್ ಅಹಮದ್, ಸಿಬ್ಬಂದಿಗಳಾದ ರಾಜಲಕ್ಷ್ಮೀ, ಜಯಲಕ್ಷ್ಮೀ, ಬಿಜೆಪಿ ಯುವ ಮುಖಂಡ ಕಟಕದ್ದೆ ನಾಗರಾಜ್ ಲಯನ್ ಸೇವಾ ಸಂಸ್ಥೆಯ ಕಾರ್ಯದರ್ಶಿ ಶಾಂತಕುಮಾರ್, ಮಾಜಿ ಅಧ್ಯಕ್ಷರುಗಳಾದ ರೇಣುಕಾ ಪ್ರಸಾದ್, ಆನಂದ್ ಹೆಚ್. ಜಿ ಚಂದ್ರು ಹೊಸೂರು ಚಂದ್ರಶೇಖರ್, ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಅಜ್ಜಿ ತಾತಂದಿರ ದಿನದ ಸಂಭ್ರಮಾಚರಣೆ
ಹಾಸನ: ನಗರದ ಕೈಗಾರಿಕಾ ಹೊರವಲಯದಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಇಂದು ಅಜ್ಜಿ ತಾತಂದಿರ ದಿನದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶಾಲೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಪವನ್ ಮಂಜೇಗೌಡ ರವರು, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಅಜ್ಜಿ ತಾತಂದಿರ ಪ್ರೀತಿ, ಅಕ್ಕರೆಯ ಬಗ್ಗೆ ತಿಳಿಸಿದರು.
ನಂತರ ಶಾಲೆಯ ಪ್ರಾಂಶುಪಾಲರಾದ ಮಮತಾ ನಟೇಶ್ ರವರು, ಮಕ್ಕಳಿಗೆ ಅಜ್ಜಿ ಅಜ್ಜಂದಿರ ಬಗ್ಗೆ ಹಿತನುಡಿಗಳನ್ನು ಹೇಳಿ ಹರಸಿದರು. ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದ ಅಜ್ಜಿ ತಾತಂದಿರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅವರನ್ನು ರಂಜಿಸಿದರು. ಕೆಐಎಡಿಬಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕರಾದ ಶಾಲಿನಿ, ವಿಜಯನಗರ ಶಾಖೆಯ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ ಹಾಗೂ ಕೆ. ಆರ್. ಪುರಂ ಶಾಲೆಯ ಶಿಕ್ಷಕ ವೃಂದ, ಬೋಧಕ ಮತ್ತು ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
-
Mandya5 hours agoಭೈರಪ್ಪರವರದ್ದು ನಿಷ್ಪಕ್ಷಪಾತ ನೋಟ ,ಸತ್ಯಕ್ಕೆ ಬದ್ದತೆ: ವಿ.ಸಿ. ಉಮಾಶಂಕರ
-
Manglore4 hours agoಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನನ್ನು ಸೆ.30ಕ್ಕೆ ಮುಂದೂಡಿದ ಸೆಷನ್ಸ್ ಕೋರ್ಟ್
-
Hassan3 hours agoವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಅಜ್ಜಿ ತಾತಂದಿರ ದಿನದ ಸಂಭ್ರಮಾಚರಣೆ
-
Hassan5 hours agoಅರಣ್ಯ ಇಲಾಖೆಯ ಒತ್ತುವರಿ ಜಾಗ ತೆರವು| ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ವಾಗತ: ಬಿ. ಶಿವರಾಂ ಎಚ್ಚರಿಕೆ
-
Mysore2 hours agoಶ್ರೀ ಮಸಣಿಕ್ಕಮ್ಮ ದೇವಾಲಯದ ಗೋಲಕದಲ್ಲಿದ್ದ ಹಣವನ್ನು ಹೊತ್ತೊಯ್ದು ಕಳ್ಳರು
-
Hassan2 hours agoಪೌರ ಕಾರ್ಮಿಕರೂ ದೇಶ ಕಾಯುವ ಸೈನಿಕರಿದ್ದಂತೆ: ತಾಹೇರ ಬೇಗಂ
-
State5 hours agoನಾನು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲ್ಲ: ತೇಜಸ್ವಿ ಸೂರ್ಯ
-
Special11 hours ago12ನೇ ತರಗತಿ ಪಾಸಾದವರಿಗೆ 7 ಸಾವಿರಕ್ಕೂ ಹೆಚ್ಚು ದೆಹಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಅವಕಾಶ