Mysore
ಬೆಳೆ ಪರಿಹಾರದ ಬಗ್ಗೆ ಎಫ್ ಐ ಡಿ ಮಾಡಿಸುವ ಬಗ್ಗೆ ಮಾಹಿತಿ : ತಹಸೀಲ್ದಾರ್ ಪೂರ್ಣಿಮಾ
ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲೂಕಿನ ರೈತರು ಸರ್ಕಾರ ಬೆಳೆ ಹಾನಿ ಪರಿಹಾರವನ್ನು ನೀಡಬೇಕಾಗಿರುವುದರಿಂದ ಎಫ್. ಐ. ಡಿ. ಮತ್ತು ಆಧಾರ್ ನಂಬರ್ ಗಳನ್ನು ತಕ್ಷಣ ಕೃಷಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡುವಂತೆ ತಹಸಿಲ್ದಾರ್ ಪೂರ್ಣಿಮಾ ರೈತರಲ್ಲಿ ಮನವಿ ಮಾಡಿದರು.
ಪಟ್ಟಣದ ಮಿನಿ ಆಡಳಿತ ಸೌಧದ ಸಭಾಂಗಣದಲ್ಲಿ ತಹಸಿಲ್ದಾರ್ ಮಾಹಿತಿ ನೀಡಿ ಸಾಲಿಗ್ರಾಮ ತಾಲೂಕಿನವರಲ್ಲಿ ಇಲ್ಲಿಯವರೆಗೆ ಶೇಕಡ 73, ಕೆ ಆರ್ ನಗರ ತಾಲೂಕಿನಲ್ಲಿ ಶೇಕಡ 73ರಷ್ಟು ರೈತರು ಎಫ್ ಐ ಡಿ ಮಾಡಿಸಿದ್ದು ಉಳಿದವರು ತಕ್ಷಣ ಮಾಡಿಸಿ ಸರ್ಕಾರಿಂದ ಬರುವ ಪರಿಹಾರವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಈಗಾಗಲೇ ಪರಿಹಾರ ಪಡೆಯುತ್ತಿರುವ ರೈತರ ಮೂರು ಭಾಗಗಳಾಗಿ ವಿಂಗಡಿಸಿ ಅವರಿಗೆ ಪರಿಹಾರ ನೀಡಲು ತಯಾರಾಗಿದ್ದು, ಅವುಗಳು ಈ ರೀತಿ ಇವೆ ಮೊದಲನೆಯದು ಗ್ರೀನ್ ಲಿಸ್ಟ್, ರೈತರ ಪಾಣಿ ದಾಖಲೆ, ಬ್ಯಾಂಕ್ ಖಾತೆ ಹಾಗೂ ಇತರೆ ದಾಖಲೆಗಳ ತಾಳೆ ಇರುವಂತಹ ಪ್ರಕರಣಗಳು, ಎರಡನೆಯದು ಹೆಸರು ವ್ಯತ್ಯಾಸದ ಪ್ರಕರಣಗಳು, ರೈತರು ಆಧಾರ್ ನಲ್ಲಿರುವ ಹೆಸರಿಗೂ, ಪಾಣಿಯಲ್ಲಿರುವ ಹೆಸರಿಗೂ ಹಾಗೂ ಪರಿಹಾರ ಪಡೆಯಬೇಕಾದ ವ್ಯಕ್ತಿಯ ಹೆಸರಿಗೂ ವ್ಯತ್ಯಾಸ ಇರುವ ಪ್ರಕರಣಗಳು,ಅವುಗಳನ್ನು ಪರಿಶೀಲಿಸಿ ಪಾವತಿಸಬೇಕಾಗಿರುತ್ತದೆ ಎಂದರು.

ಮೂರನೇ ಪ್ರಕರಣ- ರೈತರ ಪಹಣಿ ವ್ಯತ್ಯಾಸ ಹಾಗೂ ಎಫ್ ಐಡಿ ನೋಂದಣಿ ಪ್ರಕರಣಗಳಲ್ಲಿ ವ್ಯತ್ಯಾಸ ಇರುವಂತಹ ಪ್ರಕರಣಗಳು ಪರಿಶೀಲಿಸಬೇಕಾಗಿರುತ್ತದೆ. ಆದ್ದರಿಂದ ಎಲ್ಲವುಗಳನ್ನು ಗ್ರಾಮ ಪಂಚಾಯಿತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪ್ರಕಟಿಸಲಾಗಿದ್ದು ಎಲ್ಲವನ್ನು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದರು. ಒಂದು ವೇಳೆ ನಿಗದಿತ ಅವಧಿಯೊಳಗೆ ರೈತರು ತಮ್ಮ ಬ್ಯಾಂಕ್ ಖಾತೆ ಪ್ರತಿ ಮತ್ತು ಆಧಾರ್ ಪ್ರತಿಗಳನ್ನು ನೀಡಿ ಎಫ್ ಐ ಡಿ ಆಗದಿದ್ದರೆ ಸರ್ಕಾರದಿಂದ ಬರುವ ಬರ ಪರಿಹಾರದ ಮೊತ್ತ ಪಾವತಿಯಾಗದಿದ್ದಲ್ಲಿ ಅಥವಾ ತಪ್ಪಾಗಿ ಬೇರೆ ರೈತರ ಖಾತೆಗೆ ಪಾವತಿಯಾದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹೊಣೆಗಾರರು ಆಗುವುದಿಲ್ಲ, ಈ ಬಗ್ಗೆ ರೈತರು ತಕ್ಷಣ ಪರೀಕ್ಷಿಸಿ ಪರಿಹಾರವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
Mysore
ಕಂಪ್ಯೂಟರ್ ಸಾಧನ ಕಂಡು ಹಿಡಿದ ಚಾರ್ಲ್ಸ್ ಬ್ಯಾಬೇಜ್ ಎಂಬ ಮಹಾನ್ ಜ್ಞಾನಿ : ರಘುನಾಥ್
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಕಂಪ್ಯೂಟರ್ ಕಂಡು ಹಿಡಿದ, ಕಂಪ್ಯೂಟರ್‌ನ ಪಿತಾಮಹ ಎಂದೇ ಕರೆಯಲಾಗುವ ಚಾರ್ಲ್ಸ್ ಬ್ಯಾಬೇಜ್ ಅವರನ್ನ ಕಂಪ್ಯೂಟರ್ ಬಳಸುವ ಪ್ರತಿಯೊಬ್ಬರು ನೆನೆಯಲೇ ಬೇಕೆಂದು ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕರಾದ ರಘುನಾಥ್ ಹೇಳಿದರು.
ಇಂದು ಶುಕ್ರವಾರ ನಂಜನಗೂಡು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದಕ್ಕೂ ಮುನ್ನ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಧಿಕಾರಿ ಸಿದ್ದರಾಜು, ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಂಘದ ಅಧ್ಯಕ್ಷ ಚೇತನ್ ಸೇರಿದಂತೆ ಇನ್ನಿತರೇ ಗಣ್ಯರುಗಳು ಚಾರ್ಲ್ಸ್ ಬ್ಯಾಬೇಜ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡುತ್ತಾವರು ಇಡೀ ವಿಶ್ವದಲ್ಲಿ ಕಂಪ್ಯೂಟರ್ ಅನ್ನೋದು ಅತೀವ ಬೇಡಿಕೆಯುಳ್ಳ ವಸ್ತುವಾಗಿದೆ. ಕಂಪ್ಯೂಟರ್ ಇಲ್ಲದ ಜನಜೀವನ ಮತ್ತು ವ್ಯವಸ್ಥೆಯನ್ನು ಊಹಿಸಿಕೊಳ್ಳಲು ಅಸಾಧ್ಯ. ಸರ್ಕಾರಿ. ಕ್ರೀಡಾ, ಉದ್ಯಮ ಸೇರಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಕಂಪ್ಯೂಟರ್ ಅನಿವಾರ್ಯವಾಗಿದೆ. ಕಂಪ್ಯೂಟರ್ ಇಲ್ಲದೇ ಯಾವುದೇ ವ್ಯವಹಾರ ಮತ್ತು ಜೀವನಾಂಶ ನಡೆಯದ ಸ್ಥಿತಿ ಎದುರಾಗಿದೆ. ಕಂಪ್ಯೂಟರ್‌ನಿಂದ ಕೋಟ್ಯಾಂತರ ಜನ ಬದುಕು ಕಟ್ಟಿಕೊಂಡಿದ್ದಾರೆ.

ಕಂಪ್ಯೂಟರ್ ಸಾಧನ ಕಂಡು ಹಿಡಿದ ಚಾರ್ಲ್ಸ್ ಬ್ಯಾಬೇಜ್ ಎಂಬ ಮಹಾನ್ ಜ್ಞಾನಿಯನ್ನ ಇವತ್ತು ತಾಲೂಕು ಪಂಚಾಯಿತಿ ಆವರಣದಲ್ಲಿ ನೆನೆಯಲಾಗುತ್ತಿದೆ. ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಂಘದಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿ, ಚಾಲ್ಸ್ ಬ್ಯಾಬೇಜ್ ಅವರ ಕಂಪ್ಯೂಟರ್ ಆವಿಷ್ಕಾರ ಮತ್ತು ಅದರಿಂದ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆ ವಿಷಯಗಳನ್ನು ತಿಳಿಸಿದರು.
ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಧಿಕಾರಿ ಸಿದ್ದರಾಜು ಮಾತನಾಡಿ, ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡಿದಂತೆ, ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ದಿನಾಚರಣೆ ಆಚರಣೆ ಮಾಡಬೇಕು. ವಿಶ್ವ ಕಂಪ್ಯೂಟರ್ ನಿರ್ವಾಹಕರ ದಿನವನ್ನಾಗಿ ತಾಲೂಕು ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಂಘದ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು, ಚಾಲ್ಸ್ ಬ್ಯಾಬೇಜ್ ಅವರನ್ನ ಸ್ಮರಿಸುತ್ತಿರುವುದು ಸಂತಸ ತಂದಿದೆ. ಇದೇ ಮೊದಲ ಬಾರಿಗೆ ಚಾಲ್ಸ್ ಬ್ಯಾಬೇಜ್ ಸಂಸ್ಮರಣಾ ದಿನಾಚರಣೆ ನಡೀತ ಇದ್ದು, ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ ಆವರಣ ಮಾತ್ರವಲ್ಲದೇ, ರಾಜ್ಯ ದೇಶದಾದ್ಯಂತ ಚಾಲ್ಸ್ ಬ್ಯಾಬೇಜ್ ಸಂಸ್ಮರಣೆ ದಿನಾಚರಣೆ ನಡೆಯುವಂತಾಗಲೀ ಅಂತ ಕಾರ್ಯಕ್ರಮಕ್ಕೆ ಶುಭ ಕೋರಿದರು.

ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಂಘದ ಅಧ್ಯಕ್ಷ ಚೇತನ್ ಮಾತನಾಡಿ, ಕಂಪ್ಯೂಟರ್ ಪಿತಾಮಹ ಚಾಲ್ಸ್ ಬ್ಯಾಬೇಜ್ ಅವರ ಸಂಸ್ಮರಣಾ ದಿನ ಆವರಣೆಯ ಹಿಂದೆ ಸಂಘದ ರಾಜ್ಯಾಧ್ಯಕ್ಷರಾದ ಭೀಮರೆಡ್ಡಿ ಪಾಟೀಲ್ ಅವರು ಕಾರಣ. ಅವರ ಉತ್ತೇಜನದಿಂದ ಇವತ್ತು ಎಲ್ಲಾ ನೌಕರರು ಮತ್ತು ಸಿಬ್ಬಂದಿಗಳು ಸೇರಿ 15 ವರ್ಷಗಳ ನಂತರ ತಾಲೂಕು ಪಂಚಾಯ್ತಿಯ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಎಂದು ಕಾರ್ಯಕ್ರಮದ ಸದುದ್ದೇಶವನ್ನು ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯಿತಿಯ ಕೆಲ ಮಹಿಳಾ ಮತ್ತು ಪುರುಷ ಸಿಬ್ಬಂದಿಗಳು ಮಾತನಾಡಿ, ಕಂಪ್ಯೂಟರ್ ಕ್ಷೇತ್ರವನ್ನೇ ಅವಲಂಬಿತರಾಗಿಸಿಕೊಂಡ ಅನೇಕರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾಲೂಕು ಪಂಚಾಯ್ತಿ ಕಂಪ್ಯೂಟರ್ ಕ್ಷೇತ್ರದ ನೌಕರರಾದ ನಾವು ಸಹ ಕೆಲಸದ ಒತ್ತಡ, ಪಿಎಫ್, ಇಎಸ್‌ಐ ಇಲ್ಲದೇ ಹತ್ತು ಹಲವು ಸಮಸ್ಯೆಗಳಿಂದ ಕೆಲಸ ಮಾಡುತ್ತಿದ್ದೇವೆ. ಇದೇ ಕ್ಷೇತ್ರವನ್ನೇ ನೆಚ್ಚಿಕೊಂಡ ನಮ್ಮನ್ನು, ನಮ್ಮ ಕುಟುಂಬದ ಸದಸ್ಯರು ನೆಚ್ಚಿಕೊಂಡಿದ್ದಾರೆ. ಸರ್ಕಾರ ಮತ್ತು ಸಂಬಂಧ ಪಟ್ಟ ಉನ್ನತ ಅಧಿಕಾರಿಗಳು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಅಂತ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಮಹದೇವ ನಾಯಕ, ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್‌ಗಳಾದ ಬೀರೇಶ್, ಪ್ರತಾಪ್, ಪ್ರಸಾದ್, ಸಿದ್ದೇಶ್, ಶಿವಶಂಕರ್, ಸೇರಿದಂತೆ ಇನ್ನಿತರ ಮಹಿಳಾ ಮತ್ತು ಪುರುಷ ಸಿಬ್ಬಂದಿಗಳು ಉಪಸ್ಥಿತರಿದ್ದರು.
Mysore
ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಮೈಸೂರು: ಸಾಂಸ್ಕೃತಿಕ ನಗರಿಯ ಅರಮನೆ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನ ಲಕ್ಷ್ಮಿ ( 29) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಲಕ್ಷ್ಮಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ರಾಜೇಶ್ ಪತ್ನಿಯಾಗಿದ್ದಾರೆ. ಮೂಲತಃ ಮಂಡ್ಯದ ಹೊಸಹಳ್ಳಿ ಗ್ರಾಮದ ನಿವಾಸಿ ರಾಜೇಶ್ ಅವರು ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ನೆನ್ನೆ ಮೈಸೂರಿನ ಬೆಳವಾಡಿಯ ಸಂಬಂಧಿಕರ ಮನೆಗೆ ಬಂದಿದ್ದರು.

ಸಿಲಿಂಡರ್ ಸ್ಪೋಟಗೊಂಡಾಗ ಲಕ್ಷ್ಮಿ ಅವರ ಹೊಟ್ಟೆಯಿಂದ ಕರುಳಿನ ಭಾಗ ಕಿತ್ತು ಬಂದಿತ್ತು. ಅಲ್ಲದೇ ತಲೆ, ಕೈ , ಕಾಲಿನ ಭಾಗ ಕೂಡ ಛಿದ್ರವಾಗಿತ್ತು. ಗಂಭೀರ ಗಾಯಗೊಂಡಿದ್ದ ಇವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Mysore
ಚೆಲುವಾಂಬ ಆಸ್ಪತ್ರೆಯಲ್ಲಿ ಬೆಂಕಿ: ಹಾಸಿಗೆಗಳು ಭಸ್ಮ
ಮೈಸೂರು: ಮೈಸೂರಿನ ಪ್ರತಿಷ್ಠಿತ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಕೆ.ಆರ್.ಆಸ್ಪತ್ರೆಯ ಹಳೇಯ ಕಟ್ಟಡಗಳ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಚಲುವಾಂಬ ಆಸ್ಪತ್ರೆಯಲ್ಲಿದ್ದ ಹಾಸಿನಗಳನ್ನು ಶೆಡ್‌ವೊಂದರಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಕಾಮಗಾರಿ ವೇಳೆ ವೆಲ್ಡಿಂಗ್ ಕಿಡಿಯಿಂದಾಗಿ ಶೆಡ್‌ನಲ್ಲಿದ್ದ ಹಾಸಿಗೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.

ಅಪಾರ ಪ್ರಮಾಣ ಹೊಗೆ ತುಂಬಿಕೊಂಡಿದ್ದ ಪರಿಣಾಮ ಕೆಲಕಾಲ ಆತಂಕ ಮನೆ ಮಾಡಿತ್ತು. ಸುಮಾರು 20 ಹಾಸಿಗೆಗಳು ಸುಟ್ಟುಹೋಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
-
Mandya8 hours agoಡಿ.28ಕ್ಕೆ ಸಂಪದ ಫೌಂಡೇಶನ್ ಉದ್ಘಾಟನೆ , ಕ್ಯಾಲೆಂಡರ್ ಬಿಡುಗಡೆ : ಡಾ.ನಾಗೇಶ್
-
Special13 hours agoBMRCLನಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿ: ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ
-
Mysore7 hours agoದೇಶ ನಿಂತಿರುವುದು ಅನ್ನದಾತರಿಂದ: ವಿದ್ಯಾ ಸಾಗರ್
-
Mysore7 hours agoಡಿ. 30ಕ್ಕೆ ವೈಕುಂಠ ಏಕಾದಶಿ: ಭಗವಂತ ಕೃಪೆಗೆ ಪಾತ್ರರಾಗಿ ಅರ್ಚಕರ ವಿನಂತಿ
-
Hassan9 hours agoಯಶಸ್ವಿಗೊಂಡ ರೈತ ದಿನಾಚರಣೆ ಹಾಗೂ ರೈತ ಸಮ್ಮಿಲನ ಕಾರ್ಯಕ್ರಮ
-
Hassan12 hours agoಡಿ. 27 ರಂದು ಸಪ್ನಾ ಪ್ರಕಟಿಸಿರುವ 70 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ
-
Hassan9 hours agoಹಸುವಿನ ಮೇಲೆ ಚಿರತೆ ದಾಳಿ: ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯ
-
Politics10 hours agoಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶವಿಲ್ಲ: ದಿನೇಶ್ ಗುಂಡೂರಾವ್
