Connect with us

Chamarajanagar

ಬೆಟ್ಟಳ್ಳಿ ಮಾರಮ್ಮವಾಲಿಭಾಲ್ ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್

Published

on

ಪಟ್ಟಣದಲ್ಲಿ ನೆಡೆದ ರಾಜ್ಯ ಮಟ್ಟದ ವಾಲಿಭಾಲ್ ಟೂರ್ನಿಯಲ್ಲಿ ಧಾಸಪುರ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಚನ್ನರಾಯಪಟ್ಟಣ ತಂಡಗಳಿಸಿದೆ

ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ವಾಲಿಭಾಲ್ ಅಸೋಸಿಯೇಷನ್ ಹಾಗೂ ಕಲ್ಕಿ ಬಾಯ್ಸ್ ವತಿಯಿಂದ ಶಾಸಕ ಎಂ.ಆರ್ ಮಂಜುನಾಥ್ ಕಪ್ ಎಂಬ ಶೀರ್ಷಿಕೆಯಡಿಯಲ್ಲಿ ಹೊನಲು ಬೆಳಕಿನ ಪುರುಷರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು ಅಂತೀಮವಾಗಿ ದಾಸಪುರ ತಂಡ ಪ್ರಥಮ ಸ್ಥಾನಗಳಿಸಿದರೆ, ಚನ್ನರಾಯಪಟ್ಟಣ ತಂಡ ದ್ವೀತಿಯ ಸ್ಥಾನ, ತೃತೀಯ ಸ್ಥಾನವನ್ನು ಕಲ್ಕಿ ಭಾಯ್ಸ್ ,ನಾಲ್ಕನೇ ಬಹುಮಾನ ಕಲ್ಕಿ ವಾರಿರ‍್ಸ್ ತಂಡಗಳು ಗಳಿಸಿಕೊಂಡವು.

ಈ ಟೂರ್ನಿಯಲ್ಲಿ ಮೈಸೂರು, ಮಂಡ್ಯ ಚಾಮರಾಜನಗ, ರಾಮನಗರ, ಹಾಸನ ಜಿಲ್ಲೆಯ ನಾನಾ ಕಡೆಗಳಿಂದ ಹೆಚ್ಚಿನ ತಂಡಗಳು ಪಾಲ್ಗೊಂಡಿದ್ದವು ಈ ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ 25000 (ಆಕರ್ಷಕ ಟ್ರೋಪಿ)ದ್ವಿತೀಯ ಬಹುಮಾನ ರೂ 20000 ಆಕರ್ಷಕ ಟ್ರೋಪಿಹಾಗೂ ತೃತೀಯ ಬಹುಮಾನ ರೂ 15000 ಆಕರ್ಷಕ ಟ್ರೋಫಿ, ರೂ 10000 ಆಕರ್ಷಕ ಟ್ರೋಫಿ ನಿಗಧಿಪಡಿಸಲಾಗಿತ್ತು.

ಈ ಟೂರ್ನಿಯ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಶಾಸಕ ಎಮ್ ಆರ್ ಮಂಜುನಾಥ್ ಮಾತನಾಡಿ ಸೋಲು ಗೆಲುವು ಯಾವುದೇ ಇರಲಿ ಸ್ನೇಹಮಯದಿಂದ ಆಡಬೇಕು ಕ್ಷೇತ್ರದಲ್ಲಿನ ಉತ್ತಮ ಆಟಗಾರರ ಪ್ರತಿಭೆಗಳಿಗೆ ಶಕ್ತಿ ತುಂಬಲು ಸದಾ ಸಿದ್ದಾ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್, ಸಭ್ ಇನ್ಸಪೆಕ್ಟರ್ ಮಂಜುನಾಥ್ ಪ್ರಸಾದ್, ಮಡಿವಾಳ ಸಮುದಾಯ ಸಂಘದ ಅದ್ಯಕ್ಷ ವಿಜಯ್ ಸ್ಥಳೀಯ ಮುಖಂಡರಾದ ರಾಜುಗೌಡ, ಆಯೋಜಕರಾದ ವಿಶ್ವಾಸ್, ಶ್ರೀನಿವಾಸ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ

Published

on

ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 28 ದಿನಗಳ ಅವಧಿಯಲ್ಲಿ 2.53 ಕೋಟಿ  ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಹಾಗೂ ಸಾಲೂರು ಬೃಹನ್ ಮಠದ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಸಮ್ಮುಖದಲ್ಲಿ ಇಂದು ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಗೊಂಡು ಸಂಜೆ 6 ಗಂಟೆಗೆ ಮುಕ್ತಾಯವಾಯಿತು.

ಸರ್ಕಾರಿ ರಜಾ ದಿನ, ಅಮಾವಾಸ್ಯೆ , ಕಾರ್ತಿಕ ಮಾಸ, ಜಾತ್ರಾ ಮಹೋತ್ಸವ ಸೇರಿದಂತೆ ರಾಜ್ಯ ಸರ್ಕಾರದu ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ 28 ದಿನಗಳ ಅವಧಿಯಲ್ಲಿ 2,53,98,859 ನಗದು ಹಣ, 25 ಗ್ರಾಂ ಚಿನ್ನ ಹಾಗೂ 1 ಕೆಜಿ 253 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹುಂಡಿಗೆ ಕಾಣಿಕೆ ಸಲ್ಲಿಸಿದ್ದಾರೆ. ಅಲ್ಲದೆ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 3 ನೋಟುಗಳು 16 ವಿದೇಶಿ ನೋಟುಗಳು ಕಂಡುಬಂದಿವೆ.

 

ಈ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರಾದ ಮಹದೇವು.ಸಿ, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಧೀಕ್ಷಕರಾದ ಗುರುಮಲ್ಲಯ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ , ಭಾರತಿ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.

Continue Reading

Chamarajanagar

ಮನೆಯ ಬೀಗ ಮುರಿದು ಹಾಡ ಹಗಲಿನಲ್ಲಿಯೇ ಕಳ್ಳತನ

Published

on

ಚಾಮರಾಜನಗರ: ಹಾಡ ಹಗಲಲ್ಲೇ ಮನೆ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಇಂದು ಸಂಭವಿಸಿದೆ.

ಕರಿನಂಜನಪುರದ ನಿವಾಸಿ ನಾರಾಯಣಸ್ವಾಮಿ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಕಳ್ಳರು ಮನೆ ಒಳನುಗ್ಗಿ ಬೀರು ಹೊಡೆದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರು. ಖದೀಮರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

Continue Reading

Chamarajanagar

ಪತ್ರಿಕಾ ಛಾಯಾಗ್ರಾಹಕ ಹಬೀಬ್ ಉಲ್ಲಾಗೆ ಶ್ರದ್ಧಾಂಜಲಿ ಸಲ್ಲಿಕೆ

Published

on

ಕೊಳ್ಳೇಗಾಲ: ಪಟ್ಟಣದ ಸಂಗಮ್ ಸ್ಟುಡಿಯೋ ಮಾಲೀಕರು ಹಾಗೂ ಹಿರಿಯ ಪತ್ರಿಕಾ ಛಾಯಾಗ್ರಾಹಕ ಹಬೀಬ್ ಉಲ್ಲಾ ನಿಧನಗೊಂಡ ಹಿನ್ನೆಲೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತ ಹಬೀಬ್ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಸಚಿವರು ಎನ್.ಮಹೇಶ್, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಆರ್.ನರೇಂದ್ರ, ಪರಿಮಳಾ ನಾಗಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್, ಹೆಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಶ್ರೀವರ್ಧನ್ ಆರ್.ಕೆ, ನಗರಸಭೆ ಮಾಜಿ ಸದಸ್ಯರು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಫೋಟೋಗ್ರಾಫರ್ ಸಂಘ ಪದಾಧಿಕಾರಿಗಳು ಹಾಗೂ ಇತರೆ ಮುಖಂಡರು ಇತರರು ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪವನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಡಿ.ನಟರಾಜು, ನಿರ್ದೇಶಕರಾದ ಮರಿಸ್ವಾಮಿ, ರಾಜಶೇಖರ್, ಚಿಕ್ಕಮಾಳಿಗೆ, ರಾಜೇಶ್, ನಟರಾಜು, ಸುರೇಶ್, ಅವಿನ್ ಪ್ರಕಾಶ್, ಮೂಗೂರು ಮಹೇಶ್, ಸುರೇಂದ್ರ, ಶಂಕರ್, ಚಂದ್ರಶೇಖರ್, ಅಣಗಳ್ಳಿ ಮಹೇಶ್, ಸ್ಯಾಮುವೇಲ್, ವಸಂತಕುಮಾರ್, ಸಾಗರ್, ಕಾರ್ತಿಕ್, ಪ್ರೇಮ್, ನಟರಾಜು, ಲಿಂಗರಾಜು, ಗಿರೀಶ್ ಇದ್ದರು.

Continue Reading

Trending

error: Content is protected !!