Connect with us

National - International

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 15ನೇ ಆವೃತ್ತಿಯ ಸಂಘಟನಾ ಸಮಿತಿ ಸಭೆಯ ಮುಖ್ಯಾಂಶಗಳು

Published

on

ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ (inclusiveness) ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಯಿತು

1. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ಆಯೋಜಿಸುವ ಕುರಿತು ಸಂಘಟನಾ ಸಮಿತಿಯ ಸಭೆಯನ್ನು ಇಂದು ನಡೆಸಿದ್ದೇನೆ.
2. ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ.
3. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿದೆ. ಬೆಲ್ಜಿಯಂ ನ ಅಂತರರಾಷ್ಟ್ರೀಯ ಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟವಾದ FIAPF ನ ಮಾನ್ಯತೆಯನ್ನು ಪಡೆದುಕೊಂಡಿದೆ.
4. 15 ನೇ ಚಲನಚಿತ್ರೋತ್ಸವವನ್ನು ಫೆಬ್ರುವರಿ 29 ರಿಂದ ಮಾರ್ಚ್‌ 7 ರ ವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ.


5. ಪ್ರತಿ ವರ್ಷವೂ ಫೆಬ್ರವರಿ, ಮಾರ್ಚ್ ಮಾಹೆಯಲ್ಲಿ ಚಿತ್ರೋತ್ಸವವನ್ನು ಏರ್ಪಡಿಸುತ್ತಿದ್ದು, ಬಾರಿಯೂ ಫೆಬ್ರವರಿ / ಮಾರ್ಚ್ ತಿಂಗಳಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಏರ್ಪಡಿಸಲು ಕೆಳಕಂಡಂತೆ ತಾತ್ಕಾಲಿಕ ದಿನಾಂಕಗಳ ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ.
a. ಫೆಬ್ರವರಿ 29 ರಂದು ಗುರುವಾರ ಸಂಜೆ ಉದ್ಘಾಟನಾ ಸಮಾರಂಭ (ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆ)
b. ಮಾರ್ಚ್ 01 ರಿಂದ 07 ರವರೆಗೆ ಚಿತ್ರೋತ್ಸವದ ಚಲನಚಿತ್ರ ಪ್ರದರ್ಶನ
c. ಮಾರ್ಚ್ 07 ರಂದು ಗುರುವಾರ ಸಂಜೆ ಸಮಾರೋಪ ಸಮಾರಂಭ (ಮಾನ್ಯ ರಾಜ್ಯಪಾಲರಿಂದ ಪ್ರಶಸ್ತಿ ವಿತರಣೆ)
6. ಉದ್ಘಾಟನಾ ಸಮಾರಂಭವನ್ನು ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗುವುದು. ಸಮಾರೋಪ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗುವುದು.


7. ಚಲನಚಿತ್ರೋತ್ಸವ ಆಯೋಜನೆಗೆ 1.61 ಕೋಟಿ ರೂ. ಲಭ್ಯವಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
8. ಲೀಲಾವತಿ, ಭಗವಾನ್‌ ಮತ್ತು ಸಿ.ವಿ. ಶಿವಶಂಕರ್‌ ಮೊದಲಾದ ಕನ್ನಡ ಚಿತ್ರರಂಗದ ಅಗಲಿದ ಗಣ್ಯರಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
9. ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ (inclusiveness) ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಯಿತು.
10. ಈ ನಿಟ್ಟಿನಲ್ಲಿ ಸರ್ಕಾರವು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಡಿಸುವ ಸಲುವಾಗಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಚಿತ್ರೋತ್ಸವದ ಸಂಘಟನಾ ಸಮಿತಿಯನ್ನು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಕೋರ್ ಸಮಿತಿಯನ್ನು ದಿನಾಂಕ : 30.12.2023 ರಂದು ರಚಿಸಿ ಆದೇಶ ಹೊರಡಿಸಿದೆ.11. ಅದರನ್ವಯ ಚಿತ್ರೋತ್ಸವದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ದೇಶ-ವಿದೇಶಗಳ ಉತ್ತಮ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿನ ಪ್ರದರ್ಶನಕ್ಕಾಗಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
12. ಚಿತ್ರೋತ್ಸವದ ಕೆಲಸಗಳಲ್ಲಿ ಪರಿಣಿತಿ ಹೊಂದಿರುವ ವಿದ್ಯಾಶಂಕರ್‌ ಅವರನ್ನು ಕಲಾತ್ಮಕ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಇದರೊಂದಿಗೆ ಸಂಘಟಕರು / ತಾಂತ್ರಿಕ ಸಲಹೆಗಾರರು / ಸ್ವಯಂ ಸೇವಕರುಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಸಂಭಾವನೆ ಆಧಾರದಲ್ಲಿ ಇವರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
13. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೂ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.
14. ಪ್ರತಿ ವರ್ಷದಂತೆ ಒರಿಯಾನ್ ಮಾಲ್ ನಲ್ಲಿರುವ ಪಿವಿಆರ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುವುದು.

National - International

Tesla Robotaxi – ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯಿಂದ ಸ್ಟೇರಿಂಗ್ ಇಲ್ಲದ AI ಚಾಲಿತ ರೋಬೊ ಟ್ಯಾಕ್ಸಿ ಬಿಡುಗಡೆ

Published

on

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಇದೀಗ ಹೊಸ ಮಾದರಿಯ ರೋಬೋ ಟ್ಯಾಕ್ಸಿಯನ್ನು ಬಿಡುಗಡೆ ಮಾಡಿದ್ದು, ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಇತ್ತೀಚಿಗೆ ಹಾಲಿವುಡ್ ಸ್ಟುಡಿಯೋದಲ್ಲಿ ನೂತನ ರೋಬೋ ಟ್ಯಾಕ್ಸಿಯನ್ನು ಅನಾವರಣಗೊಳಿಸಿಲಾಯಿತು. ಇದರ ವಿಶೇಷತೆ ಏನೆಂದರೆ ಇದು ಎಐ ಚಾಲಿತವಾಗಿದ್ದು, ಯಾವುದೇ ಸ್ಟೇರಿಂಗ್ ಪೆಡಲ್ ಹೊಂದಿರದೆ ಇರುವ ಈ ರೋಬೊ ಟ್ಯಾಕ್ಸಿ ಮನುಷ್ಯನ ಹಸ್ತಕ್ಷೇಪವಿಲ್ಲದೆ ಇದು ಚಲಿಸಬಲ್ಲದು. ಇದನ್ನು ಹೊರತುಪಡಿಸಿ ಪ್ರಯಾಣಿಕರಿಗೆ ವಿಶೇಷ ರೀತಿಯ ಅನುಭವವನ್ನು ನೀಡಬಲ್ಲದು. ಅವುಗಳೆಂದರೆ ಪ್ರಯಾಣಿಕರು ಆರಾಮವಾಗಿ ನಿದ್ರಿಸಬಹುದಾಗಿದೆ ಹಾಗೂ ಅವರ ತಲುಪುವ ಜಾಗದಲ್ಲಿ ತಂತ್ರಜ್ಞಾನದ ಸಹಾಯದಿಂದ ಎಚ್ಚರಗೊಳ್ಳಬಹುದು.

ಟೆಸ್ಲಾ ಕಂಪನಿಯು ಕಳೆದ ಹಲವು ವರ್ಷಗಳಿಂದ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಹಲವು ಆವಿಷ್ಕಾರಗಳನ್ನು ಮಾಡುತ್ತಿದೆ. ಸದ್ಯಕ್ಕೆ ಅನಾವರಣಗೊಳಿಸಿರುವ ಈ ರೋಬೋ ಟ್ಯಾಕ್ಸಿಯು 2 ಸೀಟರ್ ಸಾಮರ್ಥ್ಯ ಹೊಂದಿರುವುದಾಗಿದ್ದು, ಇದೆ ತಂತ್ರಜ್ಞಾನವನ್ನು ಉಪಯೋಗಿಸಿ ನೋಡಲು ಮಿನಿ ಬಸ್ ನಂತೆ ಇರುವ 20 ಜನರು ಪ್ರಯಾಣಿಸಬಹುದಾದ ಟ್ಯಾಕ್ಸಿಯನ್ನು ಮಾರುಕಟ್ಟೆಗೆ ತರಲಿದ್ದಾರೆ. ಇದರ ವೆಚ್ಚವನ್ನು ನೋಡುವುದಾದರೆ, 30 ಸಾವಿರ ಅಮೇರಿಕನ್ ಡಾಲರ್ ( ಸದ್ಯದ ಭಾರತೀಯ ರೂಪಾಯಿಯ ಮೊತ್ತ – 25 ಲಕ್ಷದ ಆಸು ಪಾಸು ). ಇದು 2026ರ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

Continue Reading

National - International

ಜನಪ್ರಿಯ ಟಾಟಾ ಇಂಡಿಕಾದಿಂದ ಟಾಟಾ ನ್ಯಾನೋ ತನಕ ಎಲ್ಲವೂ ರತನ್ ಟಾಟಾ ಉತ್ಪನ್ನಗಳು !

Published

on

Ratan Naval Tata: ರತನ್ ಟಾಟಾ ಅವರು ಈ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಗೌರವಾನ್ವಿತ ಗೌರವ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ರಾತ್ರಿ 86 ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸೋಮವಾರವಷ್ಟೇ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಮ್ಮ ಆರೋಗ್ಯದ ಸುತ್ತಲಿನ ಊಹಾಪೋಹಗಳನ್ನು ತಳ್ಳಿಹಾಕಿದ್ದರು ಮತ್ತು ವಯಸ್ಸಿನ ಕಾರಣದಿಂದಾಗಿ ಅವರು ರೋಟೀನ್ ವೈದ್ಯಕೀಯ ತನಿಖೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು.

1991 ರಿಂದ 2012 ರವರೆಗೆ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ ವ್ಯಕ್ತಿಯಾಗಿದ್ದರು ರತನ್ ಟಾಟಾ. ಈ ಸಂದರ್ಭದಲ್ಲಿ ಟಾಟಾ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ವಿಸ್ತರಿಸಿದರು. ಕೇವಲ ಅತ್ಯುನ್ನತ ವ್ಯಾಪಾರ ಸಾಧನೆಗಳಲ್ಲಿ ಮಾತ್ರವಲ್ಲ “ಭಾರತ ಮತ್ತು ಭಾರತೀಯರನ್ನು ಮೊದಲು” ಎನ್ನುವ ನೀತಿಯನ್ನು ಅವರು ತಮ್ಮ ವ್ಯಾಪಾರದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದರು.

ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ ಅವರು ಪ್ರತಿಷ್ಠಿತ ಪಾರ್ಸಿ ಕುಟುಂಬದಿಂದ ಬಂದವರು. ಮುಂಬೈಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು ಅವರ ಮೂಲ ಕುಟುಂಬ ಬಂದಿರುವುದು ಗುಜರಾತಿನಿಂದ. ಅವರ ತಾತ ಜಂಶೆಡ್ಡಿ ಟಾಟಾ ಭಾರತದ ಕೈಗಾರಿಕೋದ್ಯಮದ ಪಿತಾಮಹ. ಅಂತಹ ಕುಟುಂಬದಲ್ಲಿ ಮೂರನೆಯ ತಲೆಮಾರಿನವರಾಗಿ ಹುಟ್ಟಿ ಬೆಳೆದ ರತನ್ ಟಾಟಾರವರು 1962 ರಲ್ಲಿ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದರು.

ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದ ಅವರು ಸ್ವಲ್ಪ ಸಮಯದ ನಂತರ ಟಾಟಾ ಕುಟುಂಬ ವ್ಯವಹಾರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮತ್ತು ಶೀಘ್ರವಾಗಿ 1991ರಲ್ಲಿ ಅತ್ಯಂತ ಸವಾಲಿನ ಅವಧಿಯಲ್ಲಿ ಟಾಟಾ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ಕೇವಲ 5.8 ಶತಕೋಟಿ ಡಾಲರ್ ಆದಾಯವನ್ನು ಹೊಂದಿದ್ದ ಗುಂಪಿಗೆ ಸವಾಲಿನ ಅವಧಿಯಲ್ಲಿ ಅವರ ಉಸ್ತುವಾರಿಯಲ್ಲಿ, ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು ಮತ್ತು ಹೊಸ ಹೊಸ ಬ್ಯುಸಿನೆಸ್ ವೆಂಚರ್ ಳನ್ನು ಶುರು ಮಾಡಿತು. ಆ ಮೂಲಕ ಟಾಟಾ ಸಂಸ್ಥೆಗಳ ಆದಾಯವು 2011-12 ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್ ಏರಿತು.

ಜನಪ್ರಿಯ ‘ಟಾಟಾ ಇಂಡಿಕಾ’ ರತನ್ ಟಾಟಾ ಉತ್ಪನ್ನ!
ಟಾಟಾ ಇಂಡಿಕಾವನ್ನು 1998 ರಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿತು, ಮತ್ತು ಅದು ಡೀಸೆಲ್ ಎಂಜಿನ್ ಹೊಂದಿರುವ ಮೊದಲ ಭಾರತೀಯ ಹ್ಯಾಚ್‌ಬ್ಯಾಕ್ ಕಾರ್ ಆಗಿತ್ತು. ಆ ಕಾರು ತನ್ನ ಕಡಿಮೆ ಬೆಲೆ ಮತ್ತು ಅತ್ಯಧಿಕ ಮೈಲೇಜ್ ಗೋಸ್ಕರ ದೇಶ ವ್ಯಾಪ್ತಿಯಾಗಿ ಭರ್ಜರಿ ಮಾರಾಟ ಕಂಡಿತು. ಇದು ಟಾಟಾ ಮೋಟಾರ್ಸ್‌ನ ಮೊದಲ ಪ್ರಯಾಣಿಕ ಹ್ಯಾಚ್‌ಬ್ಯಾಕ್. ಟಾಟಾ ಇಂಡಿಕಾದ ಅಭೂತಪೂರ್ವ ಯಶಸ್ಸಿನ ನಂತರ ಇದೇ ಮಾದರಿಯ ಹಲವು ಕಾರುಗಳನ್ನು 2004 ರ ಅಂತ್ಯದಿಂದ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲಾಯಿತು. ಸರಿಸುಮಾರು 20 ವರ್ಷಗಳ ಕಾಲ ಜನಪ್ರಿಯ ಇಂಡಿಕಾ ಭಾರತದ ರಿಟೇಲ್ ಕಾರು ಮಾರುಕಟ್ಟೆಯಲ್ಲಿ ಕಾರುಬಾರು ಮಾಡಿತ್ತು. ಇತ್ತೀಚೆಗೆ ಐದು ವರ್ಷಗಳ ಹಿಂದೆ ಕಾರನ್ನು ಏಪ್ರಿಲ್ 2018 ರಲ್ಲಿ ನಿಲ್ಲಿಸಲಾಯಿತು.

ಟಾಟಾ ನ್ಯಾನೋ ಎಂಬ 1 ಲಕ್ಷದ ಕಾರು
ಬಹುಶಃ 2008 ರಲ್ಲಿ ಬಿಡುಗಡೆಯಾದ ಟಾಟಾ ನ್ಯಾನೋಗಿಂತ ರತನ್ ಟಾಟಾ ಅವರ ಭಾರತದ ಬದ್ಧತೆಯನ್ನು ಸೂಚಿಸುವ ಯಾವುದೇ ಯೋಜನೆ ಮತ್ತೊಂದು ಸುಲಭವಾಗಿ ಸಿಗಲಿಕ್ಕಿಲ್ಲ.
ಭಾರತೀಯ ಮಧ್ಯಮ ವರ್ಗದವರಿಗೆ ಕೈಗೆಟುಕುವ 1 ಲಕ್ಷ ರೂಪಾಯಿ ಬೆಲೆಯ ವಿಶ್ವದ ಅತ್ಯಂತ ಅಗ್ಗದ ಕಾರನ್ನು ರಚಿಸುವುದು ಅವರ ಉದ್ದೇಶವಾಗಿತ್ತು. ಅವರ ಉದ್ದೇಶವನ್ನು ಅವರು ಯಶಸ್ವಿಯಾಗಿ ಪೂರೈಸಿದರು. ಒಂದು ಲಕ್ಷದ, ವಿಶ್ವದ ಕಾರನ್ನು ಅವರು ವಿಶ್ವಕ್ಕೆ ಪರಿಚಯಿಸಿದರು.

ಅವರ ಅಧಿಕಾರಾವಧಿಯ ಉದ್ದಕ್ಕೂ, ರತನ್ ಟಾಟಾ ಅವರು ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಕೋರಸ್ ಸ್ಟೀಲ್ ಸೇರಿದಂತೆ ಅಂತರಾಷ್ಟ್ರೀಯ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಕ್ಕು, ಆಟೋಮೊಬೈಲ್ಗಳು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಮುಖ ಕೈಗಾರಿಕೋದ್ಯಮಿ ಯಾಗಿ ಅವರು ಹೊರಹೊಮ್ಮಿ ಅವರು ಟಾಟಾ ಗ್ರೂಪ್ ಅನ್ನು ಬೆಳೆಸಿದರು. ರತನ್ ಟಾಟಾ ಅವರು ಡಿಸೆಂಬರ್ 2012 ರಲ್ಲಿ ನಿವೃತ್ತರಾದರು. ಆಗ ಟಾಟಾ ಸನ್ಸ್ ಅವರಿಗೆ ಚೇರ್ಮನ್ ಎಮೆರಿಟಸ್ ಎಂಬ ಗೌರವ ಪ್ರಶಸ್ತಿಯನ್ನು ನೀಡಿತು.

ವ್ಯಾಪಾರದ ಹೊರತಾಗಿ, ರತನ್ ಟಾಟಾ ಅವರು ಲೋಕೋಪಕಾರಕ್ಕೂ ಬದ್ಧರಾಗಿದ್ದರು, ಇದು ಭಾರತದಲ್ಲಿ ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಉಪಕ್ರಮಗಳ ಮೇಲೆ ಕೇಂದ್ರೀಕರಿಸುವ ಟಾಟಾ ಟ್ರಸ್ಟ್‌ಗಳ ನಾಯಕತ್ವದಲ್ಲಿ ಮುಂಚೂಣಿಯಲ್ಲಿತ್ತು, ಈಗಲೂ ಇದೆ. ಅವರು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಸುಧಾರಿಸಲು ಸಮರ್ಪಿತರಾಗಿದ್ದರು, ಲೆಕ್ಕವಿಲ್ಲದಷ್ಟು ಜನರ ಮೇಲೆ ಅವರು ಶಾಶ್ವತವಾದ ಪ್ರಭಾವವನ್ನು ಬೀರಿದರು.

ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಪದ್ಮವಿಭೂಷಣ, ಮತ್ತು ಬ್ರಿಟಿಷ್ ಸಾಮ್ರಾಜ್ಯದ ನೈಟ್ ಗ್ರ್ಯಾಂಡ್ ಕ್ರಾಸ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳೊಂದಿಗೆ ಗೌರವಿಸಲ್ಪಟ್ಟ ರತನ್ ಟಾಟಾ ಅವರು ತಮ್ಮ ಕೆಲಸದ ಶ್ರದ್ಧೆ ಮತ್ತು ಸಮಗ್ರತೆಗಾಗಿ ಹೆಸರುವಾಸಿ. ಅವರ ಈ ಸಾವು ಸಮಸ್ತ ಭಾರತೀಯರನ್ನು ಚಂಚಲಗೊಳಿಸಿದೆ.

Continue Reading

National - International

ಮುತ್ತಯ್ಯ ಮುರಳೀಧರನ್ ದಾಖಲೆ ಸರಿಗಟ್ಟಿದ ಆರ್.ಅಶ್ವಿನ್

Published

on

ಚೆನ್ನೈ: ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುತ್ತಯ್ಯ ಮುರಳೀಧರನ್ ಅವರ ಟೆಸ್ಟ್ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಾನ್ಪುರದಲ್ಲಿ ನಡೆದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದ ನಂತರ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಚೆನ್ನೈನಲ್ಲಿ ತಮ್ಮ ತವರು ಮೈದಾನದಲ್ಲಿ ಪಂದ್ಯ ಗೆಲ್ಲುವ ಶತಕ ಸೇರಿದಂತೆ 114 ರನ್ ಗಳಿಸಿದರು ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಳ್ಳಲು 11 ವಿಕೆಟ್‌ಗಳನ್ನು ಪಡೆದರು. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳಿಧರನ್ ಅವರೊಂದಿಗೆ ಸಮಬಲ ಸಾಧಿಸಲು ವೃತ್ತಿಜೀವನದಲ್ಲಿ 11 ನೇ ಬಾರಿಗೆ ಪಿಒಎಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಳೆದ ಟೆಸ್ಟ್‌ನಲ್ಲಿ ಗೆದ್ದ ಪ್ರಶಸ್ತಿ ಸೇರಿದಂತೆ 10 ಪಂದ್ಯದ ಆಟಗಾರ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಮುರಳೀಧರನ್ ತಮ್ಮ 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಶ್ರೀಲಂಕಾ ಪರ 61 ಟೆಸ್ಟ್ ಸರಣಿಗಳಲ್ಲಿ ಕಾಣಿಸಿಕೊಂಡರು, 2011 ರಲ್ಲಿ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನು ಮಾಡಿದ ಅಶ್ವಿನ್, ಬಾಂಗ್ಲಾದೇಶದ ವಿರುದ್ಧ ತಮ್ಮ 42 ನೇ ಪಂದ್ಯವನ್ನು ಆಡಿದ್ದಾರೆ

Continue Reading

Trending

error: Content is protected !!