Connect with us

State

ಬಿಲ್ಲವಾಸ್ ಕತಾರ್ ನ ನೂತನ ನಿರ್ವಹಣಾ ಸಮಿತಿಯ ಪದಗ್ರಹಣ

Published

on

“ಬಿಲ್ಲವಾಸ್ ಕತಾರ್” ಒಂದು ತುಂಬಾ ಕ್ರಿಯಾಶಾಲಿ ಸಂಸ್ಥೆಯಾಗಿದ್ದು, ಭಾರತೀಯ ರಾಯಭಾರ ಕಛೇರಿಯ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಭಾರತೀಯ ಸಾಂಸ್ಕೃತಿಕ ಕೇಂದ್ರ – ಕತಾರ್” (ಐ ಸಿ ಸಿ -ಕತಾರ್ )ನ ಸಹವರ್ತಿ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವುದು ಉಲ್ಲೇಖನೀಯ.
“ಬಿಲ್ಲವಾಸ್ ಕತಾರ್”, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಉತ್ತೇಜನವನ್ನು ಕೊಡುವುದಕ್ಕೆ ಸಮರ್ಪಕವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟು ನಮ್ಮ ತಾಯ್ನಾಡಿನ ಕಂಪನ್ನು ವಿಶೇಷವಾಗಿ ಯುವಜನರಿಗೆ ತಲುಪಿಸುವಲ್ಲಿ ಸದಾ ಶ್ರಮಿಸುತ್ತಿದೆ.

ದಿನಾಂಕ 25 ಜನವರಿ, 2024 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಲ್ಲವಾಸ್ ಕತಾರ್ 2024-25 ನೇ ಸಾಲಿನ ಹೊಸ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡಿತು. ಶ್ರೀ ಸಂದೀಪ್ ಮಲ್ಲಾರ್ ಅವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಶ್ರೀಮತಿ ಅಪರ್ಣಾ ಶರತ್ ಉಪಾಧ್ಯಕ್ಷರಾಗಿ, ಶ್ರೀ ಮಹೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ ಆಗಿ ಆಯ್ಕೆಯಾದರು. ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸಂದೀಪ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಶ್ರೀ ಅಜಯ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಪೂಜಾ ಜಿತಿನ್, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಶ್ವೇತಾ ಸುವರ್ಣ, ಸದಸ್ಯತ್ವ ಸಂಯೋಜಕರಾಗಿ ಶ್ರೀಮತಿ ಚಂಚಲಾಕ್ಷಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಸೀಮಾ ಉಮೇಶ್ ಪೂಜಾರಿ, ಮಾಧ್ಯಮ ಸಂಯೋಜಕರಾಗಿ ಶ್ರೀ ನಿತಿನ್ ಸನಿಲ್, ಸರಬರಾಜು(ಲಾಜಿಸ್ಟಿಕ್ಸ್) ಸಂಯೋಜಕರಾಗಿ ಶ್ರೀ ನಿತಿನ್ ಕುಂಪಲ ಅವರು ಆಯ್ಕೆಯಾದರು.


ಪೂರ್ವಾಧ್ಯಕ್ಷರಾದ ಶ್ರೀ ರಘುನಾಥ್ ಅಂಚನ್ ಅವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ನೂತನ ಸಮಿತಿಗೆ ಶುಭ ಹಾರೈಸಿದರು. ಹಿಂದಿನ ಸಮಿತಿಯ ಸದಸ್ಯರು ಮತ್ತು ಬಿಲ್ಲವಾಸ್ ಕತಾರ್ ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

State

ವಿವೋ ಕಂಪನಿಯ ಅದ್ಭುತ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಬಿಡುಗಡೆ

Published

on

ವಿವೋ ಕಂಪನಿಯು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇದ್ದು ಇದೀಗ ಹೊಸ Vivo V40 ಸರಣಿಯ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸರಣಿಯ ಸ್ಮಾರ್ಟ್ ಫೋನ್ ಯಾವ ಯಾವ ಫ್ಯೂಚರ್ಸಗಳನ್ನು ಹೊಂದಿದೆ ಎಂಬ ಮಾಹಿತಿ ಇಲ್ಲಿದೆ..

Vivo V40 ಸರಣಿ ಸ್ಮಾರ್ಟ್ ಫೋನ್ ವಿಶೇಷತೆ :

ವೀವೋ ಕಂಪನಿಯ ಈ ಹೊಸ Vivo V40 ಸರಣಿ ಮೊಬೈಲ್ 120Hz ರಿಫ್ರೆಶ್ ದರ ಹೊಂದಿದೆ. ಈ ಮೊಬೈಲ್ 6.77 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು, 1080×2392 ಫಿಕ್ಸಲ್ ರೆಸೂಲೇಷನ್ ನೀಡುವುದರ ಮುಖಾಂತರ ಗ್ರಾಹಕರಿಗೆ ಉತ್ತಮ ಅನುಭವ ನೀಡಲಿದೆ. ಇದರ ಪ್ರಮುಖ ವಿಶೇಷತೆ ಏನೆಂದರೆ, ಮೊಬೈಲ್ ನಲ್ಲಿ ಹೋಗುವ ಧೂಳು ಮತ್ತು ನೀರಿನ ರಕ್ಷಣೆಗಾಗಿ IP64 ರೇಟಿಂಗ್ ಇದ್ದು ಮೊಬೈಲ್ ನ ಸುರಕ್ಷತೆ ಹೆಚ್ಚಿಸಿದೆ. ಮೊಬೈಲ್‌ನ ತೂಕ ನೋಡುವುದಾದರೆ, ಇದು ಒಟ್ಟು 183 ಗ್ರಾಂ ನಷ್ಟು ಭಾರವಿದೆ.

Vivo V40 ಮೊಬೈಲ್ ಬ್ಯಾಟರಿಯ ವಿವರ :

ಇದು 5500 mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು 80 ವಾಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದರಲ್ಲಿ ಇರಲಿದೆ.

ಬಣ್ಣದ ಆಯ್ಕೆಗಳು :

ವಿವೋ ಕಂಪನಿಯ V40 ಸರಣಿಯ ಈ ಮೊಬೈಲ್ ಸದ್ಯಕ್ಕೆ ಎರಡು ಬಣ್ಣಗಳಲ್ಲಿ ಲಾಂಚ್ ಆಗಿದ್ದು, ಒಂದು ಮಿಂಟ್ ಗ್ರೀನ್ ಮತ್ತೊಂದು ರಾಯಲ್ ಕಂಚಿನ ಬಣ್ಣದ್ದು.

ಮಾರುಕಟ್ಟೆಯ ದರ :

ಈ ಸರಣಿಯ ಮೊಬೈಲ್ ನ ಬೆಲೆಯು ಸ್ಟೋರೇಜ್ ನ ಮೇಲೆ ಬದಲಾವಣೆ ಹೊಂದಿದ್ದು ಈ ಕೇಳಗಿನಂತಿದೆ.
* 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಮೊಬೈಲ್ ನ ಬೆಲೆಯೂ – 28,999ರೂ.
* 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಮೊಬೈಲ್ ನ ಬೆಲೆಯೂ – 30,999ರೂ.

Continue Reading

State

ದಸರಾ ಹಬ್ಬದ ಪ್ರಯುಕ್ತ ಸರ್ಕಾರದಿಂದ ವಿಶೇಷ ಬಸ್ ಗಳ ಬಿಡುಗಡೆಗೆ ಸಿದ್ಧತೆ

Published

on

ಕರ್ನಾಟಕ ರಾಜ್ಯದ ನಾಡ ಹಬ್ಬವಾಗಿರುವ ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಜ್ಯಾದ್ಯಂತ ಜನರಿಗೆ ದಸರಾ ಹಬ್ಬ ಮೈಸೂರಿಗೆ ಹೋಗಲು ಸಹಾಯವಾಗುವಂತೆ 2000ಕ್ಕಿಂತಲೂ ಹೆಚ್ಚು ವಿಶೇಷ ಬಸ್ ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಇದೇ ಅಕ್ಟೋಬರ್ 9ನೇ ತಾರೀಖಿನಿಂದ 12ನೇ ತಾರೀಖಿನವರೆಗೆ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ನಗರಗಳಿಗೆ ವಿಶೇಷ ಬಸ್ ಗಳ ಸಂಚಾರವೂ ಇರಲಿದೆ. ಅದೇ ರೀತಿ ಅಕ್ಟೋಬರ್ 13 ಹಾಗೂ 14ನೇ ತಾರೀಕಿನಂದು ರಾಜ್ಯದ ವಿವಿಧ ನಗರಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳ ಸಂಚಾರ ಇರಲಿದ್ದು, ದಸರಾ ಹಬ್ಬಕ್ಕೆ ಪ್ರವಾಸಿಗರಿಗೆ ಸರಾಗವಾಗಿ ಪ್ರಯಾಣ ಬೆಳೆಸಲು ಇದು ಸಹಾಯಕರಯಾಗಿದೆ.

ಯಾವೆಲ್ಲಾ ಬಸ್ ಗಳು ಲಭ್ಯವಿರುತ್ತವೆ?

ನಿಗದಿಪಡಿಸಿದ ಈ ದಿನಾಂಕಗಳಂದು, ಕರ್ನಾಟಕ ಸಾರಿಗೆ ಇಲಾಖೆಯ ವಿಶೇಷ ಬಸ್ ಗಳಾದ ಐರಾವತ, ರಾಜಹಂಸ, ಅಂಬಾರಿ ಕ್ಲಬ್ ಕ್ಲಾಸ್, ಐರಾವತ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸೇರಿದಂತೆ ವಿವಿಧ ಬಸ್ ಗಳು ರಾಜ್ಯಾದ್ಯಂತ ಸಂಚಾರ ನಡೆಸಲಿದ್ದು, ಇದು ಪ್ರವಾಸಿಗರಿಗೆ ಬಹು ಪ್ರಯೋಜನಕಾರಿಯಾಗಲಿದೆ ಎಂದು ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಮೈಸೂರುನಲ್ಲಿಯೇ ವಿಶೇಷ 660 ಬಸ್ ಗಳ ವ್ಯವಸ್ಥೆ!

ಹೌದು ಬಂಧುಗಳೇ, ಬೆಂಗಳೂರಿನಲ್ಲಿರುವ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರಯಾಣ ಬೆಳೆಸಲು ಪ್ರತ್ಯೇಕ 260 ಹೆಚ್ಚುವರಿ ವಾಹನಗಳು ಸಂಚರಿಸಲಿವೆ. ಅದೇ ರೀತಿ ಮೈಸೂರಿನಿಂದ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳಾದ ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ನಂಜನಗೂಡು, ಕೆ ಆರ್ ಎಸ್ ಡ್ಯಾಮ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೆಚ್ಚುವರಿ 400 ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

KSRTC ಬಸ್ ಗಳಲ್ಲಿ ನಿಗದಿತ ದಿನಾಂಕಗಳಂದು ಪ್ರಯಾಣಿಸಲು ನೀವು ಮುಂಗಡ ಟಿಕೆಟ್ ಬುಕ್ ಮಾಡುವುದಾದರೆ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ ಬುಕ್ ಮಾಡಿ – www.ksrtc.karnataka.gov.in

Continue Reading

State

ಇನ್ನೂ ಮುಂದೆ ಬೈಕ್ ಖರೀದಿಸಲು ಶೋರೂಮ್ ಹೋಗುವ ಅವಶ್ಯಕತೆ ಇಲ್ಲ! ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಿದರೆ ಸಾಕು

Published

on

ಪ್ರತಿಯೊಂದು ಕೆಲಸ ಕಾರ್ಯವು ಈಗ ಡಿಜಿಟಲೀಕರಣದತ್ತ ಸಾಗುತ್ತಿದ್ದೂ ಕೇವಲ ಬಟ್ಟೆ, ಎಲೆಕ್ಟ್ರಾನಿಕ್ ಗ್ಯಾಜೆಟ್ಸ್, ಗೃಹ ಬಳಕೆ ವಸ್ತುಗಳಿಗೆ ಮಾತ್ರ ಸೀಮಿತವಲ್ಲದೆ ಇದೀಗ ಬೈಕ್ ಗಳನ್ನು ಕೂಡ ಆನ್ಲೈನ್ ಮುಖಾಂತರ ಮಾರಾಟ ಮಾಡಲು ಫ್ಲಿಪ್ ಕಾರ್ಟ್ ಶಾಪಿಂಗ್ ಆಪ್ ಮುಂದಾಗಿದೆ.

ಭಾರತ ದೇಶದ ಸ್ವದೇಶಿ ಇ – ಕಾಮರ್ಸ್ ಪ್ಲಾಟ್ಫಾರ್ಮ್ ಆದಂತಹ ಫ್ಲಿಪ್ ಕಾರ್ಟ್ ಕಂಪನಿಯು ಮನೆಯಲ್ಲಿಯೇ ಕುಳಿತು ಆನ್ಲೈನ್ ಮುಖಾಂತರ ಶಾಪಿಂಗ್ ಮಾಡುವಂತಹ ಗ್ರಾಹಕರಿಗೆ ದ್ವಿಚಕ್ರ ವಾಹನಗಳನ್ನು ಕೂಡ ಆನ್ಲೈನ್ ಮುಖಾಂತರ ಖರೀದಿಸಲು ಒಂದು ಉತ್ತಮ ಅವಕಾಶ ಮಾಡಿಕೊಟ್ಟಿದೆ. ಈ ಆಪ್ ನ ಮುಖಾಂತರ ನೀವು ವಿವಿಧ ಬ್ರಾಂಡ್ ಗಳಾದ ಹಿರೋ, ಟಿವಿಎಸ್, ಓಲಾ, ಬಜಾಜ್ ಸೇರಿದಂತೆ ವಿವಿಧ ಪೆಟ್ರೋಲ್ ಚಾಲಿತ ವಾಹನಗಳು ಹಾಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಸುಲಭವಾಗಿ ಆನ್ಲೈನ್ ಮೂಲಕ ಆರ್ಡರ್ ಮಾಡಬಹುದು.

ಭಾರತ ದೇಶಾದ್ಯಂತ ಸದ್ಯಕ್ಕೆ ಒಟ್ಟು 700 ನಗರಗಳ 12 ಸಾಗರಕ್ಕಿಂತಲೂ ಹೆಚ್ಚು ಪಿನ್ ಕೋಡ್ ಗಳ ವಿಳಾಸಕ್ಕೆ ವಾಹನಗಳನ್ನು ಪೂರೈಸುವ ಸೌಲಭ್ಯವನ್ನು ಫ್ಲಿಪ್ಕಾರ್ಟ್ ಹೊಂದಿದೆ.

ಆನ್ಲೈನ್ ಮೂಲಕ ಶಾಪಿಂಗ್ ಮಾಡುವುದರ ಪ್ರಯೋಜನಗಳೇನು?

ಆನ್ಲೈನ್ ಮೂಲಕ ಶಾಪಿಂಗ್ ಮಾಡುವುದರಿಂದ ಪ್ರಮುಖವಾಗಿ ನೀವು ಸಮಯವನ್ನು ಉಳಿಸಬಹುದು. ಅದಕ್ಕಿಂತ ಪ್ರಮುಖವಾಗಿ ನೀವು ವಿವಿಧ ರೀತಿಯ ರಿಯಾಯಿತಿಗಳನ್ನು ಅಥವಾ ಡಿಸ್ಕೌಂಟ್ ಆಫರ್ ಳನ್ನು ಪಡೆಯಬಹುದು. ಅದು ಹೇಗೆಂದರೆ ವಿವಿಧ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಳಸಿ ಆರ್ಡರ್ ಮಾಡಿದರೆ ನೀವು 5% ನವರೆಗೆ ರಿಯಾಯಿತಿ ಪಡೆಯಬಹುದು. ಅದೇ ರೀತಿ ಹಲವು ಈಎಂಐ ಆಯ್ಕೆಗಳು ನಿಮಗಾಗಿ ಇದರಲ್ಲಿ ಲಭ್ಯವಿದೆ.

Continue Reading

Trending

error: Content is protected !!