Connect with us

Uncategorized

ಬಿರಿಯಾನಿ ತಿಂದು ೧೭ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Published

on

ಚಿಕ್ಕಮಗಳೂರು : ಬಿರಿಯಾನಿ ತಿಂದು 17 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಒಂದು ದಿನ ಹಿಂದೆ ಮಾಡಿದ್ದ ಬಿರಿಯಾನಿ ತಿಂದಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಿರಿಯಾನಿ ಸೇವಿಸಿದವರಲ್ಲಿ 17 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಡೂರು ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ಮಾಡಲಾಗಿತ್ತು. ಆದರೆ, ಬಿರಿಯಾನಿಯನ್ನು ತಿಂದ ಕೂಡಲೇ ವಾಂತಿ ಭೇದಿಯಾಗಿದೆ.
ತಕ್ಷಣ ಅಸ್ವಸ್ಥಗೊಂಡವರನ್ನು ಕಡೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕ್ಕ ಪುಟ್ಟ ಮಕ್ಕಳು ಸೇರಿದಂತೆ 17 ಜನ ಅಸ್ವಸ್ಥಗೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ

Continue Reading
Click to comment

Leave a Reply

Your email address will not be published. Required fields are marked *

Uncategorized

ರಾಜ್ಯ ಸರ್ಕಾರ ಹಾಲು ಉತ್ಪಾಧಕ ರೈತರಿಗೆ 67 ಕೋಟಿ. ರೂ ಬಾಕಿ ಉಳಿಸಿಕೊಂಡಿದೆ – ಮನ್ ಮುಲ್ ಉಪಾಧ್ಯಕ್ಷ ರಘುನಂದನ್ ಆರೋಪ

Published

on

ಮಂಡ್ಯ : ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಹಾಗೂ ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಿಂದಿನ ಸರ್ಕಾರ ರೈತರಿಗೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ಪ್ರತಿ ಲೀಟರ್ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಹೈನುಗಾರಿಕೆಗೆ ಹೊಡೆತ ಬೀಳುವ ಹಾಗೆ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.

ಹಾಲು ಉತ್ಪಾದಕರಿಗೆ ಸರಿಯಾದ ಸಮಯದಲ್ಲಿ ಪ್ರೋತ್ಸಾಹ ಧನ ನೀಡುತ್ತಿಲ್ಲ. ರಾಜ್ಯದಲ್ಲಿ 600 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಬೇಕಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಗೆ 67 ಕೋಟಿ ರೂಪಾಯಿ ಕೊಡಬೇಕಾಗಿದೆ. ಆದ್ದರಿಂದ ತಕ್ಷಣವೇ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ದನವನ್ನು ವಿತರಿಸಬೇಕು ಎಂದು ಆಗ್ರಹ ಪಡಿಸಿದರು .

ಮಂಡ್ಯ ಜಿಲ್ಲೆಯಲ್ಲಿರುವ ಸಹಕಾರ ಇಲಾಖೆ ಅಧಿಕಾರಿಗಳು ಮಂಡ್ಯ ಉಪ ವಿಭಾಗ ಹಾಗೂ ಪಾಂಡವಪುರ ವಿಭಾಗದ ಅಧಿಕಾರಿಗಳು ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾಪಕ್ಷದ ಆಡಳಿತವಿರುವ ಸಹಕಾರ ಸಂಘಗಳಲ್ಲಿ ಮನಸ್ಸು ಇಚ್ಛೆ ಬಂದ ಹಾಗೆ ನಿರ್ದೇಶಕರನ್ನು ವಜಾ ಮಾಡಲಾಗುತ್ತಿದೆ ಎಂದು ಆರೋಪಿಸಿದರು .

ಸಹಕಾರ ಸಂಘಗಳನ್ನು ವಜಾ ಮಾಡುವುದರ ಮುಖಾಂತರ ಕಾಂಗ್ರೆಸ್ ಕೈಗೊಂಬೆಗಳಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

ಇದು ಸಹಕಾರ ತತ್ವ ನಿಯಮಗಳು ಮತ್ತು ಕಾಯಿದೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿದರು .

ಇದೇ ರೀತಿ ಸಂಘಗಳನ್ನು ನಿರ್ದೇಶಕರನ್ನು ವಜಾ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಸಹಕಾರ ಇಲಾಖೆಯಲ್ಲಿ ಅನವಶ್ಯಕ ರಾಜ್ಯ ಸರ್ಕಾರದ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಒಳಗಾಗಿ ಸಹಕಾರ ಸಂಘಗಳ ಇಲ್ಲದಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು .

ಡಿ.ಆರ್ ಮತ್ತು ಎ.ಆರ್ ರಾಜಕೀಯ ಪ್ರೇರಿತವಾಗಿ ಕಾನೂನು ತತ್ವ ಸಿದ್ಧಾಂತ ಪಾಲಿಸದೆ ಜೆಡಿಎಸ್ ಮತ್ತು ಬಿಜೆಪಿ ನಿರ್ದೇಶಕರು ಇರುವ ಸಂಘವನ್ನು ವಜಾ ಮಾಡುತ್ತಿದ್ದಾರೆ. ರಾಮಚಂದ್ರು, ರೂಪ ಸೇರಿದಂತೆ ಇತರರನ್ನು ವಜಾ ಮಾಡಿದ್ದು, ಆದರೆ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.

ಕಾಳೇಗೌಡ ಅವರು ಮಾತನಾಡಿ, ಹಿಂದಿನ ಆಡಳಿತ ಮಂಡಳಿಯ ವೈಫಲ್ಯವನ್ನು ಮುಚ್ಚಿಡಲಾಗುತ್ತಿದೆ. ನಮ್ಮ ಕೆಲಸಗಳನ್ನು ಮಾಡಿಕೊಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಆದರೆ ಚುನಾವಣೆ ವಿಚಾರದಲ್ಲಿ ಮಾತ್ರ ನಮ್ಮನ್ನು ಗುರಿಯಾಗಿಟ್ಟುಕೊಂಡು ತೊಂದರೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು .

ಗೋಷ್ಟಿಯಲ್ಲಿ ರಾಮಚಂದ್ರ, ರೂಪ, ನೆಲ್ಲಿಗೆರೆ ಬಾಲು, ವಸಂತ್ ಕುಮಾರ್ ಉಪಸ್ಥಿತರಿದ್ದರು.

Continue Reading

Mysore

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಸಾವು

Published

on

ಹನಗೋಡು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯ ಪ್ರಾಣಿಗಳ ಒಳ ಕಾದಾಟದಿಂದ ಐದು ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಭಾಗ-1 ಶಾಖೆಯ ಸಿ.ಪಿ.ಟಿ-01 ಗಸ್ತಿನ ಲಕ್ಷ್ಮೀಪುರ ಕಳ್ಳಬೇಟೆ ತಡೆ ಶಿಬಿರದ ಗೋವಿಂದೇಗೌಡ ಕಂಡಿ ಅರಣ್ಯ ಪ್ರದೇಶದಲ್ಲಿ ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ಮಾಡುವಾಗ 5 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಾ.ಕುಮಾರ್ ಚಿಕ್ಕನರಗುಂದ, ಪಶು ವೈದ್ಯಾಧಿಕಾರಿ ಮತ್ತು ಆನೆ ಪ್ರಭಾರಕರಾದ ಡಾ.ರಮೇಶ್, ಡಾ.ಬಿ.ಸಿ.ಚಿಟ್ಟಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್.ದಯಾನಂದ, ವನ್ಯಜೀವಿ ಪರಿಪಾಲಕ ಕೃತಿಕಾ ಮೋಹನ್, ಎನ್.ಟಿ.ಸಿ.ಎ ನಾಮ ನಿರ್ದೇಶನ ಸದಸ್ಯ ಕೆ.ವಿ.ಬೋಸ್ ಮಾದಪ್ಪ, ಸ್ಥಳೀಯ ಸರ್ಕಾರೇತರ ಸಂಸ್ಥೆಯ ಸದಸ್ಯ ತಮ್ಮಯ್ಯ.ಸಿ.ಕೆ., ಸ್ವಾಮಿ.ಸಿ.ಎನ್, ವಲಯ ಅರಣ್ಯಾಧಿಕಾರಿ ಕೆ.ಇ. ಸುಬ್ರಮಣ್ಯ, ಚೌತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುತ್ತುರಾಜ್.ಸಿ.ಎಸ್., ಇವರ ಉಪಸ್ಥಿತಿಯಲ್ಲಿ ಸದರಿ ಸ್ಥಳ ಪರಿಶೀಲನೆ ಮಾಡಿ. ಎನ್.ಟಿ.ಸಿ.ಎ. ಮಾರ್ಗಸೂಚಿಯಂತೆ ಮರಣೋತ್ತರ ಪರೀಕ್ಷೆಯನ್ನು ನಡೆಸಿ ನಿಯಮಾನುಸಾರ ಮೃತಪಟ್ಟಿರುವ ಹುಲಿಯ ದೇಹವನ್ನು ದಹಿಸಲಾಯಿತು.

Continue Reading

Uncategorized

ಅಪ್ರಾಪ್ತ ಮಗನಿಂದ ಸ್ಕೂಟಿ ಚಲಾಯಿಸಿ ಪಾದಚಾರಿ ಮೃತ್ಯು ತಾಯಿಗೆ ನ್ಯಾಯಾಂಗ ಬಂಧನ

Published

on

ಅಪ್ರಾಪ್ತ ವಯಸ್ಸಿನ ಬಾಲಕ ಸ್ಕೂಟಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪಾದಚಾರಿಯ ಸಾವಿಗೆ ಕಾರಣನಾದ ತಪ್ಪಿಗೆ ಸರ್ಕಾರಿ ವೀಕ್ಷಣಾಲಯಕ್ಕೆ ಸೇರಿಸಲ್ಪಟ್ಟಿದ್ದರೆ, ಈತನಿಗೆ ಸ್ಕೂಟಿಯನ್ನು ಚಲಾಯಿಸಲು ನೀಡಿದ ಪ್ರಮಾದಕ್ಕೆ ತಾಯಿ ಬಂಧನಕ್ಕೊಳಗಾಗಿದ್ದಾರೆ.


ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ದುಂಡಳ್ಳಿ ಪಂಚಾಯತ್ ರಸ್ತೆಯಲ್ಲಿ ಜೂ. 1 ರಂದು ರಾತ್ರಿ ಸುಮಾರು 7.15ರ ಸಮಯದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯಪ್ಪ ಎಂಬುವವರಿಗೆ ಸ್ಕೂಟಿ ಡಿಕ್ಕಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜಯಪ್ಪಅವರನ್ನು ಹಾಸನದ ಎಸ್.ಎಸ್.ಎಂ. ಆಸ್ಪತ್ರೆಗೆ ದಾಖಲಿಸಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಜೂ. 2 ರಂದು ಮೃತರಾಗಿದ್ದರು. ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ 278, 304(ಎ) ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ,

ಸಕಲೇಶಪುರ ತಾಲ್ಲೂಕು ಚಂಗಡಹಳ್ಳಿ ಗ್ರಾಮದ ನಿವಾಸಿಯಾದ ಕುಶಾಲ ಎಂಬುವವರ ಪತ್ನಿ ಯಶೋಧರವರ ಅಪ್ರಾಪ್ತ ವಯಸ್ಸಿನ ಮಗ ಸ್ಕೂಟಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಾದಚಾರಿಗೆ ಡಿಕ್ಕಿಪಡಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟಿಯನ್ನು ಚಲಾಯಿಸಲು ನೀಡಿದ್ದರಿಂದ, ಸ್ಕೂಟಿ ಮಾಲೀಕರೂ ಆಗಿರುವ ಯಶೋಧರವರ ವಿರುದ್ದ ಪ್ರಕರಣವನ್ನು ದಾಖಲಿಸಿ ಜೂ. 10 ರಂದು ತಾಯಿ ಮತ್ತು ಮಗ ಇವರಿಬ್ಬರನ್ನೂ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಅಪಘಾತಕ್ಕೆ ಕಾರಣವಾದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.


ಪ್ರಕರಣದ ವಿಚಾರಣೆ ನಡೆಸಿದ ಸೋಮವಾರಪೇಟೆ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಕನೂನು ಸಂಘರ್ಷಕ್ಕೆ ಒಳಗಾದಅಪ್ರಾಪ್ತ ಬಾಲಕನಿಗೆ 11 ದಿನಗಳ ಕಾಲ ಸುಧಾರಣೆ ಸಲುವಾಗಿ ಮೈಸೂರಿನ ಸರ್ಕಾರಿ ವೀಕ್ಷಣಾಲಯಕ್ಕೆ ಕಳುಹಿಸಲು ಆದೇಶಿಸಿದೆ.

Continue Reading

Trending

error: Content is protected !!