Connect with us

Uncategorized

ಬರ ಪಟ್ಟಿಯಿಂದ ಅರಸೀಕೆರೆ ತಾಲ್ಲೂಕನ್ನು ಕೈಬಿಟ್ಟಿದ್ದಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಕ್ರೋಶ

Published

on

ಹಾಸನದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ

ಇವತ್ತು ರಾಜ್ಯ, ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಗೈಡ್‌ಲೈನ್ಸ್‌ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಗೈಡ್‌ಲೈನ್ಸ್‌ನಿಂದ ಕೇಂದ್ರ ಸರ್ಕಾರ ರೈತರಿಗೆ ಮಣ್ಣು ಎರೆಚುತ್ತಿದೆ

ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ

ಇವತ್ತು ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ

ಗೈಡ್‌ಲೈನ್ಸ್‌ ಅನ್ನು ಚೇಂಜ್ ಮಾಡ್ತಿಲ್ಲ

ರೈನ್ ಗೇಜ್ ಇಡ್ತಾರೆ ಸರಿಯಾಗಿ ವರ್ಕ್ ಮಾಡ್ತವೋ, ಇಲ್ಲವೋ ಗೊತ್ತಿಲ್ಲ

ಏಪ್ರಿಲ್‌ನಲ್ಲಿ ಸರಿಯಾಗಿ ಮಳೆ ಬರಲಿಲ್ಲ

ಬಂದ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ರು

ಸಂಪೂರ್ಣವಾಗಿ ಮುಂಗಾರು ಮಳೆ ಬಾರದಿದ್ದರಿಂದ ನಾಶವಾಯ್ತು

ಇದನ್ನು ಸರ್ಕಾರವೇ ಘೋಷಣೆ ಮಾಡಿತು

ಮೇ.15 ರಿಂದ ಜುಲೈ ಅಂತ್ಯದವರೆಗೂ ಸ್ವಲ್ಪ ಮಳೆ ಬಂತು

ರೈತರು ಮನೆಯಲ್ಲಿದ್ದಿದ್ದನ್ನೆಲ್ಲಾ ಅಡವಿಟ್ಟು ಸಾಲ ಮಾಡಿ ಬಿತ್ತನೆ ಮಾಡಿದರು

40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ, 15,16 ಸಾವಿರ ಹೆಕ್ಟೇರ್‌ನಲ್ಲಿ ಉಳಿದ ಬೆಳೆ ಬಿತ್ತನೆ ಮಾಡಿದರು

ಆಗಸ್ಟ್ ‌ನಿಂದ ಇಲ್ಲಿಯವರಗೂ ಒಂದು ಹನಿ ಮಳೆ ಬಂದಿಲ್ಲ

ಮೇ, ಜೂನ್‌ನಲ್ಲಿ ಮಳೆ ಆದರೆ ಬಂದಿರುವ ಬೆಳೆ ಯಾವುದು

ನಮ್ಮ‌ ಅರಸೀಕೆರೆ ತಾಲ್ಲೂಕನ್ನೂ ಏಕೆ ಬರಗಾಲ ಎಂದು ಘೋಷಣೆ ಮಾಡಿಲ್ಲ

ನಮ್ಮ ತಾಲ್ಲೂಕನ್ನು ಎ ಗ್ರೇಡ್‌ಗೆ ಸೇರಿಸಿದ್ದಾರೆ

ನಿಮ್ಮ ರೈನ್ ಗೇಜ್ ಕಿತ್ತು ಎಸೆಯಿರಿ, ಸ್ಥಳಕ್ಕೆ ಬಂದು ಅಧ್ಯಯನ ಮಾಡಿ

ನಮ್ಮಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ, ಬರ ಎಂದು ಡಿಕ್ಲೇರ್ ಮಾಡಿ

ಈ ಕಷ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕಿತ್ತು

ಸಭೆ ಮಾಡಬೇಕಿತ್ತು, ಮಾಡಲಿಲ್ಲ

ಅಧಿಕಾರಿಗಳು ಖಾಲಿ ಡಬ್ಬಗಳನ್ನು ಇಟ್ಟುಕೊಂಡಿದ್ದಾರೆ

ಖಾಲಿ ಡಬ್ಬಗಳನ್ನು ಇಟ್ಕಂಡು ರಿಸಲ್ಟ್ ಕೊಡ್ತಾ ಇದ್ದಾರೆ

ಎನ್‌ಡಿಆರ್‌ಅಫ್ ಗೈಡ್‌ಲೈನ್ಸ್ ನವೀಕರಣ ಆಗಲೇಬೇಕು

ನಮ್ಮ ತಾಲ್ಲೂಕಿನ 33% ಪರ್ಸೆಂಟ್ ಬೆಳೆ ಬಂದಿದಿಯಾ ಚಾಲೆಂಜ್ ಮಾಡ್ತಿನಿ

ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಚೇಂಜ್ ಮಾಡಲೇಬೇಕು

ಇದರ ಬಗ್ಗೆ ಹೋರಾಟ ಮಾಡುತ್ತೇನೆ

ನಾಳೆ ಹನ್ನೆರಡು ಗಂಟೆಗೆ ಮುಖ್ಯಮಂತ್ರಿ ಭೇಟಿ ಮಾಡ್ತಿನಿ

ನಮ್ಮ ತಾಲ್ಲೂಕನ್ನು ಬರ ಎಂದು ಘೋಷಣೆ ಮಾಡಲೇಬೇಕು

Continue Reading
Click to comment

Leave a Reply

Your email address will not be published. Required fields are marked *

Uncategorized

ಬಿರಿಯಾನಿ ತಿಂದು ೧೭ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Published

on

ಚಿಕ್ಕಮಗಳೂರು : ಬಿರಿಯಾನಿ ತಿಂದು 17 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಒಂದು ದಿನ ಹಿಂದೆ ಮಾಡಿದ್ದ ಬಿರಿಯಾನಿ ತಿಂದಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಿರಿಯಾನಿ ಸೇವಿಸಿದವರಲ್ಲಿ 17 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಡೂರು ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ಮಾಡಲಾಗಿತ್ತು. ಆದರೆ, ಬಿರಿಯಾನಿಯನ್ನು ತಿಂದ ಕೂಡಲೇ ವಾಂತಿ ಭೇದಿಯಾಗಿದೆ.
ತಕ್ಷಣ ಅಸ್ವಸ್ಥಗೊಂಡವರನ್ನು ಕಡೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕ್ಕ ಪುಟ್ಟ ಮಕ್ಕಳು ಸೇರಿದಂತೆ 17 ಜನ ಅಸ್ವಸ್ಥಗೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ

Continue Reading

Uncategorized

ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರ ಬಂಧನ

Published

on

ಮಡಿಕೇರಿ : ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹೆಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ನ. 19 ರಂದು ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕುಂಜಿಲ ನಿವಾಸಿ ನೌಫಲ್ (25), ಎಮ್ಮೆಮಾಡು ಪೈಸಾರಿ ನಿವಾಸಿ ಸಾದಿಕ್ (32) ಎಂಬುವವರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಜಿಲಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

Continue Reading

Uncategorized

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Published

on

ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಚನ್ನರಾಯಪಟ್ಟಣ ತಾಲ್ಲೂಕು ಅತ್ತಿಹಳ್ಳಿ ಗ್ರಾಮದ
ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಸ್ಥಾನದ
ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೊತೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ಹಾಗೂ ಗ್ರಾಮಸ್ಥರು ಇದ್ದರು.

Continue Reading

Trending

error: Content is protected !!