Connect with us

Hassan

ಬಡ ದಲಿತ ಕುಟುಂಬಕ್ಕೆ ಚಿತ್ರಹಿಂಸೆ, ಅಧಿಕಾರಿಗಳ ವರ್ಗಾವಣೆ, ನ್ಯಾಯಕ್ಕೆ ಆಗ್ರಹಿಸಿ ಆರ್.ಪಿ.ಐ. ಪಕ್ಷದಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ

Published

on

ಹಾಸನ: ಬಡ ದಲಿತ ಕುಟುಂಬಕ್ಕೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವರ್ಗಾವಣೆ ಮಾಡಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ಬಡ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿ ಅನ್ನಪೂರ್ಣೇಶ್ವರಿ ಪರವಾಗಿ ಕೆಲಸ ಮಾಡುತ್ತಿರುವ, ಮತ್ತು ಪ್ರಭಾವಿ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವ ಹಾಗೂ ಕಡು ಭ್ರಷ್ಟ ಮುಖ್ಯಾಧಿಕಾರಿ ಆಗಿರುವ ರಮೇಶ್ ರವರನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆ ಮಾಡಬೇಕು. ದುರ್ಗೇಶ್ ಮತ್ತು ಶ್ರೀಮತಿ ರೂಪ ಇಬ್ಬರು ಹೇಮಾವತಿ ಮಕ್ಕಳಾಗಿದ್ದು, ಪುರಸಭೆಗೆ ದೂರು ನೀಡಿದ್ದು, ಪುರಸಭೆ ಇಂಜಿನಿಯರ್ ಅನ್ನಪೂರ್ಣೇಶ್ವರಿರವರು ೧೨೭.೬೬% (೧೬೪.೨೫ ಚ.ಮೀ ಹೆಚ್ಚುವರಿ ಕಟ್ಟಡ) ಮತ್ತು ಹೇಮಾವತಿರವರು ೩೪.೫೦%(೫೧.೪೨ ಚ.ಮೀ ಹೆಚ್ಚುವರಿ ಕಟ್ಟಡ) ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿರುವ ಬಗ್ಗೆ ವರದಿಯನ್ನು ನೀಡಿದ್ದರು. ವರದಿಯಲ್ಲಿ ಅನ್ನಪೂರ್ಣೇಶ್ವರಿರವರು ಹೇಮಾವತಿ ಮನೆಕಡೆ ಯಾವುದೇ ಸೆಟ್ ಬ್ಯಾಕ್ ಬಿಡದೆ ಕಟ್ಟಡ ನಿರ್ಮಾಣ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಪುರಸಭೆ ಮುಖ್ಯಾಧಿಕಾರಿ, ಅನ್ನಪೂರ್ಣೇಶ್ವರಿಯವರಿಗೆ ಇಲ್ಲಿಯ ವರೆಗೆ ಒಂದು ನೋಟೀಸ್ ನೀಡದೆ, ಕೇವಲ ಹೇಮಾವತಿ ರವರಿಗೆ ಪದೇ ಪದೇ ನೋಟೀಸ್ ನೀಡಿರುವುದಕ್ಕೆ, ಮುಖ್ಯಾಧಿಕಾರಿ ಪ್ರಭಾವಿ ಪರವಾಗಿ ನಿಂತಿರುವುದು ಕಂಡುಬರುತ್ತದೆ ಎಂದು ದೂರಿದರು.

ಹೇಮಾವತಿರವರ ಮಕ್ಕಳು ಅನ್ನಪೂರ್ಣೇಶ್ವರಿರವರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದರೆ, ಅನ್ನಪೂರ್ಣೇಶ್ವರಿರವರ ಬಗ್ಗೆ ವಿಚಾರಣೆ ನೆಡೆಸುವುದು ಬಿಟ್ಟು, ಸಕಲೇಶಪುರ ಪೊಲೀಸ್ ಉಪ-ಅಧೀಕ್ಷಕರಾದ ಪ್ರಮೋದ್ ಕುಮಾರ್ ವರು ಸಹ, ಮುಖ್ಯಾಧಿಕಾರಿ ವರದಿ ಮೇರೆಗೆ ಹೇಮಾವತಿ ಮಗಳಾದ ರೂಪರವರಿಗೆ ಆಸ್ತಿಯ ದಾಖಲೆಗಳನ್ನು ಹಾಜರು ಪಡಿಸಿ ಅಂತ ನೋಟೀಸ್ ನೀಡುತ್ತಾರೆ. ಅಂದರೆ ಇಲ್ಲೂ ಸಹ ಈ ರೀತಿ ನೋಟೀಸ್‌ಗಳು ಪ್ರಭಾವಿ ವ್ಯಕ್ತಿ ಆಗಿರುವ ಅನ್ನಪೂರ್ಣೇಶ್ವರಿಯವರಿಗೆ ನೀಡಿರುವುದಿಲ್ಲ, ಬದಲಾಗಿ ಬಡ ದಲಿತ ಕುಟುಂಬವನ್ನು ಗುರಿ ಮಾಡಲಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು, ಅಕ್ರಮ ಖಾತೆ, ಅಕ್ರಮ ಕಟ್ಟಡ ಮತ್ತು ತೆರಿಗೆ ವಂಚಿಸಿರುವ ಪ್ರಭಾವಿ ವ್ಯಕ್ತಿ ಆಗಿರುವ ಅನ್ನಪೂರ್ಣೇಶ್ವರಿರವರಿಗೆ, ದಲಿತ ಕುಟುಂದ ಮೇಲೆ ಸವಾರಿ ಮಾಡಲು ಪುರಸಭೆ ಮುಖ್ಯಾಧಿಕಾರಿ ರಮೇಶ್ ರವರು ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಅತ್ಯಂತ ಪ್ರಭಾವಿ ವ್ಯಕ್ತಿ ಆಗಿರುವ ಅನ್ನಪೂರ್ಣೇಶ್ವರಿ ಪರವಾಗಿ ಮತ್ತು ದಲಿತ ಕುಟುಂಬವಾದ ಹೇಮಾವತಿ ವಿರುದ್ಧಾವಾಗಿ ಸುಳ್ಳು ದಾಖಲೆಗಳನ್ನು ಮುಖ್ಯಾಧಿಕಾರಿ ನೀಡುವು ಮುಖಾಂತರ, ಅನ್ನಪೂರ್ಣೇಶ್ವರಿರವರು ಪೊಲೀಸ್ ಸ್ಟೇಷನ್ ಮತ್ತು ಕೋರ್ಟಿಗಳಲ್ಲಿ ಕೇಸ್‌ಗಳನ್ನು ಗೆಲ್ಲುತಿದ್ದಾರೆ, ಬಡ ದಲಿತ ಕುಟುಂಬ ಎಲ್ಲಾ ಕಡೆ ಸೋಲುತ್ತಾ ಬರುತ್ತಿರುವುದಾಗಿ ಹೇಳಿದರು.

ತನ್ನ ಪ್ರಭಾವ ಬಳಸಿ ಅಕ್ರಮವಾಗಿ ಜಾಗ ಕಬಳಿಸಿ ಅಕ್ರಮ ಕಟ್ಟಡ ಕಟ್ಟಿರುವುದಲ್ಲದೆ ದಲಿತ ಕುಟಂಬಕ್ಕೆ ಚಿತ್ರಹಿಂಸೆ ನೀಡುತ್ತಿರುವ ಸಕಲೇಶಪುರ ಪುರಸಭೆಯ ವಾರ್ಡ ನಂ.೧೩, ಸದಸ್ಯೆ ಅನ್ನಪೂರ್ಣೇಶ್ವರಿ ಸದಸ್ಯತ್ವನ್ನು ರದ್ದು ಪಡಿಸುವ ಬಗ್ಗೆ ಹಾಗೂ ಅಕ್ರಮ ಎಸಗಿರುವ ಸಕಲೇಶಪುರ ಪುರಸಭೆಯ ವಾರ್ಡ ನಂ.೧೩, ಸದಸ್ಯೆ ಶ್ರೀಮತಿ ಅನ್ನಪೂರ್ಣೇಶ್ವರಿ ಪರವಾಗಿ ನಿಂತು ದಲಿತ ಕುಟುಂಬಕ್ಕೆ ಅನ್ಯಾಯ ಮಾಡುತ್ತಿರುವ ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ರಮೇಶ್ ಕುಮಾರ್ ರವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕಾಗಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ದಸಂಸ ಮೈಸೂರು ವಿಭಾಗೀಯ ಅಧ್ಯಕ್ಷ ಕುಮಾರಸ್ವಾಮಿ, ರಘುವೀರ್, ಸುಬ್ರಮಣ್ಯ, ಹರೀಶ್, ನಟರಾಜ್, ರಂಗಸ್ವಾಮಿ, ಶರತ್ ಕುಮಾರ್, ಮಧು, ವಿಜಯಕುಮಾರ್ ಬಾಗಿವಾಳ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಆರು ಜನ ನಿವೃತ್ತ ಸರಕಾರಿ ವಾಹನ ಚಾಲಕರಿಗೆ ಸನ್ಮಾನ

Published

on

ಹಾಸನ: ಅನೇಕ ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸ್ಲಲ್ಲಿಸಿ ನಿವೃತ್ತಗೊಂಡ ಆರು ಜನ ಸರಕಾರಿ ವಾಹನ ಚಾಲಕರನ್ನು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಶಿವಾನಂದ್ ನೇತೃತ್ವದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ ಅವರು ಸನ್ಮಾನಿಸಿ ಗೌರವಿಸಲಾಯಿತು.

ಇದೆ ವೇಳೆ ಮಾಧ್ಯಮದೊಂದಿಗೆ ಈ. ಕೃಷ್ಣೇಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಒಟ್ಟು ೨೪ ಸಾವಿರ ಜನ ಸರಕಾರಿ ನೌಕರರು ಇದ್ದು, ಇವರಲ್ಲಿ ವಾಹನ ಚಾಲಕರಾಗಿ ೬ ಜನರು ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರಿಗೆ ವಾಹನ ಚಾಲಕರ ಸಂಘದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ತಮ್ಮ ಸೇವಾವಧಿಯಲ್ಲಿ ಸರಕಾರಿ ಅಧಿಕಾರಿಗಳೊಂದಿಗೆ ಕಾರ್ಯ ಧಕ್ಷತೆಯೊಂದಿಗೆ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಗೊಂಡ ವಾಹನ ಚಾಲಕರ ಕುಟುಂಬಕ್ಕೆ ದೇವರು ಒಳ್ಳೆಯದನ್ನು

ಮಾಡಲಿ ಎಂದು ಹಾರೈಸಿದರು. ವಾಹನ ಚಾಲಕರ ಕಷ್ಟಗಳಿವೆ ಅದಕ್ಕೆ ಸರಕಾರ ಮತ್ತು ಸರಕಾರಿ ನೌಕರರ ಸಂಘ ಸದಾ ಅವರ ಜೊತೆ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ವಾಹನ ಚಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಧರಿಯಾಗಿ ಸಂಘಟನೆ ಮಾಡಿಕೊಂಡು ಬರುತ್ತಿದೆ. ಯಾವಾಗಲು ನಿಮ್ಮ ಜೊತೆ ಸಂಘ ಇರುವುದಾಗಿ ಹೇಳಿದರು.

ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್, ಕಂದಾಯ ಇಲಾಖೆಯ ಎಂ.ಎನ್. ಬಸಪ್ಪ, ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೊಳೆನರಸೀಪುರದ ರಂಗನಾಥ್, ಡಿ.ಹೆಚ್.ಓ. ಆರೋಗ್ಯ ನಿರ್ದೇಶಕರ ಚಾಲಕರಾಗಿದ್ದ ದಿಗಂಬರಗೌಡ, ಅರಸೀಕೆರೆ

ಆರೋಗ್ಯ ಇಲಾಖೆಯಲ್ಲಿ ವಾಹ ಚಾಲಕರಾಗಿ ಕರ್ತವ್ಯ ಇಲಾಖೆಯ ಹೆಚ್.ಎಸ್. ಪಂಚಾಕ್ಷರಿ ಈ ಆರು ಜನರು ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರನ್ನು ವಾಹನ ಚಾಲಕರ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು.

Continue Reading

Hassan

ಹೊಳೆನರಸೀಪುರದಲ್ಲಿ ವಿಧಾನ ಪರಿಷತ್ ಸದಸ್ಯ ಯತಿಂದ್ರ ಸಿದ್ದರಾಮಯ್ಯ

Published

on

ಹೊಳೆನರಸೀಪುದಲ್ಲಿ ಆಯೋಜಿಸಿದ್ದ ನೂತನ ಲೋಕಸಭಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿಕೆ

*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷಗಳು ಸತತ ಕುತಂತ್ರ ನಡೆಸುತ್ತಿವೆ*

*ಜಾತಿ ವ್ಯವಸ್ಥೆ ಎಷ್ಟಿದೆ ಎಂದರೆ ಒಬ್ಬ ಹಿಂದುಳಿದ ವರ್ಗದವರು ಎರಡನೇ ಬಾರಿ ಮುಖ್ಯಮಂತ್ರಿ ಆಗುವುದಕ್ಕೆ ಆಗಿಲ್ಲ*

ದೇವರಾಜ ಅರಸು ಅವರನ್ನು ಬಿಟ್ಟರೆ ಎರಡನೇ ಬಾರಿ ಹಿಂದುಳಿದ ವರ್ಗದಿಂದ ಮುಖ್ಯಮಂತ್ರಿ ಆಗಿರುವುದು ಸಿದ್ದರಾಮಯ್ಯ

ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ನೀವು ಕಾರಣ

*ನೀವು ಒಗ್ಗಟ್ಟಾಗಿ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದರಿಂದ ಅವರು ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿದ್ದಾರೆ*

*ಇಷ್ಟೆಲ್ಲಾ ರಾಜಕೀಯ ವಿರೋಧಗಳಿದ್ದರೂ ಕೂಡ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ*

*ನೀವು ಎಲ್ಲಿಯವರೆಗೆ ರಾಜಕೀಯವಾಗಿ ಅವರ ಹಿಂದೆ ನಿಂತಿರುತ್ತೀರೋ ಅಲ್ಲಿಯವರೆಗೆ ಅವರನ್ನು ರಾಜಕೀಯವಾಗಿ ಅಳಿಯಲು, ಸೋಲಿಸಲು ಆಗುವುದಿಲ್ಲ*

*ಅಧಿಕಾರದಲ್ಲಿದ್ದಾಗ ಅವರಿಗೆ ಪ್ರತಿ ಹೆಜ್ಜೆಯಲ್ಲೂ ಅಗ್ನಿಪರೀಕ್ಷೆ ಇರುತ್ತದೆ*

*ಸಣ್ಣ ತಪ್ಪು ಮಾಡಿದರೂ ಸಹ ಕಾಯುತ್ತಾ ಇರುತ್ತಾರೆ*

*ಸಣ್ಣ ತಪ್ಪು ಮಾಡಿದರೂ ಸಹ ಅದನ್ನು ದೊಡ್ಡದಾಗಿ ಬಿಂಬಿಸಿ ಅವರನ್ನು ಕಾಲೆಳೆಯಲು, ಅಧಿಕಾರದಿಂದ ಕೆಳಗಿಳಿಸಲು ಎಂದು ಕಾಯ್ತಾ ಇರ್ತಾರೆ*

*ಆದರೂ ಸಹ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯ್ಕೆ ಆಗಿರುವುದಕ್ಕೆ ನಿಮ್ಮಗಳ ಬೆಂಬಲವೇ ಕಾರಣ*

*ಯಾರೇ ಎಷ್ಟು ಅಪಪ್ರಚಾರ ಮಾಡಿದರು ಸಹ ಅದಕ್ಕೆ ಕಿವಿ ಕೊಡಬೇಡಿ ಅದನ್ನು ನಂಬಬೇಡಿ*

ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ನಿಮಗೆ ಗೊತ್ತಿದೆ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು

ಸಿದ್ದರಾಮಯ್ಯ ಅವರು ಸಮಾಜದ ಕಟ್ಟ ಕಡೆಯ, ತುಳಿತಕ್ಕೆ, ಶೋಷಣೆಗೆ ಒಳಗಾದ ವ್ಯಕ್ತಿಗೆ ಬೆಂಬಲ ನೀಡಿಕೊಂಡು ಸುಮಾರು 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ

ಬೇರೆ ಯಾರಾದರೂ ಮುಖ್ಯಮಂತ್ರಿ ಆಗಿದ್ದರೆ

ಇಷ್ಟೊಂದು ಗ್ಯಾರೆಂಟಿ ಯೋಜನೆಗಳಿಗೆ 50 ರಿಂದ 60 ಸಾವಿರ ಕೋಟಿ ವೆಚ್ಚವಾಗುವ ಹಣವನ್ನು ನೇರವಾಗಿ ಜನರ ಕೈಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದರಾ

ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತವಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಆರ್ಥಿಕ ಪರಿಸ್ಥಿತಿ ಕುಸಿಯದಂತೆ ನೋಡಿಕೊಳ್ಳುತ್ತಿರುವುದು ಮುಖ್ಯಮಂತ್ರಿಗಳ ಸಾಧನೆಯಾಗಿದೆ

ಚುನಾವಣಾ ಸಮಯದಲ್ಲಿ ಮಾತ್ರ ನಾವು ರಾಜಕೀಯ ಮಾಡಬೇಕು ಪಕ್ಷದ ಪರವಾಗಿ ನಿಲ್ಲಬೇಕು

ಎಲ್ಲರಿಗೂ ಸರಿಯಾದ ನ್ಯಾಯ ಸಿಗುತ್ತಿದೆ ಎಂದರೆ ಅದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ

Continue Reading

Hassan

ಪಿಯು ಎಂದರೇ ಪ್ರಧಾನವಾದ ಕಾಲಘಟ್ಟ, ಸಾಧನೆ ಮಾಡಿ – ಹೆಚ್.ಎಲ್. ಮಲ್ಲೇಶ್ ಗೌಡ

Published

on

ಹಾಸನ: ಪಿಯುಸಿ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಇದೊಂದು ಪ್ರಧಾನವಾದ ಕಾಲಘಟ್ಟವಾಗಿದ್ದು, ಈ ಹಂತದಲ್ಲಿ ಸಾಧನೆ ಮಾಡಿದರೇ ನಿಮ್ಮ ಪೋಷಕರಿಗೆ ಹಾಗೂ ಶಿಕ್ಷರಿಗೂ ಸೇರಿದಂತೆ ಎಲ್ಲಾರಿಗೂ ಸಂತೋಷ ತರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸುಜಲಾ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಸುಜಲ ಕಾಲೇಜಿನ ಅಧ್ಯಕ್ಷರಾದ ಲೋಕೇಶ್ ಅವರು ವಿಶೇಷ ಆಸಕ್ತಿಯನ್ನು ಇಟ್ಟುಕೊಂಡು ಸಂಸ್ಥೆಯಲ್ಲಿ ಬೆಳೆಸುವ

ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಜನರು ನನ್ನ ಶಿಷ್ಯರು ಹಾಗೂ ಗಂಗೇಗೌಡರ ಶಿಷ್ಯರು ಕೂಡ ಇರುವುದು ನಮಗೆ ಸಂತೋಷ ತಂದಿದೆ. ಇದೊಂದು ಬಹಳ ಪ್ರೀತಿಯ ಶಿಕ್ಷಣ ಸಂಸ್ಥೆ ಎಂದು ಬಣ್ಣಿಸಿದರು. ಪಿಯುಸಿ ಎಂದರೇ ತಮ್ಮೆಲ್ಲಾ ಪ್ರತಿಭೆಯನ್ನು ಹೊರಗೆ ಹಚ್ಚಿ ತಮ್ಮೆಲ್ಲ ಶ್ರಮವನ್ನು ಪರೀಕ್ಷೆಗೆ ಒಳಪಡಿಸಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕೆ

ಇದೊಂದು ಪ್ರಧಾನವಾದ ಕಾಲಘಟ್ಟ ಎಂದು ಭಾವಿಸಿದ್ದೇನೆ ಎಂದರು. ಪಿಯುಸಿ ಓದುವಾಗ ಮಕ್ಕಳು ಮಾತ್ರ ಓದುವುದಿಲ್ಲ. ಅವರ ಶಿಕ್ಷಕರು ಕೂಡ ಓದುತ್ತಿರುತ್ತಾರೆ. ಜೊತೆಗೆ ಅವರ ಅಪ್ಪ ಅಮ್ಮಂದಿರು ಕೂಡ ಓದುತ್ತಿರುತ್ತಾರೆ. ನಿಮ್ಮ ಸಾಧನೆ ಒಬ್ಬರಿಗೆ ಮಾತ್ರ ಖುಷಿ ಕೊಡುವಂತದಲ್ಲ. ನಿಮಗೆ ಪಾಠ ಮಾಡಿದ ಶಿಕ್ಷಕರಿಗೆ ಅಪಾರವಾದ ಸಂತೋಷ ತಂದರೇ ಇನ್ನು ನಿಮ್ಮ ತಂದೆ ತಾಯಿಗೆ ಇನ್ನು ಹೆಚ್ಚಿನ ರೀತಿ ಖುಷಿ ಕೊಡಲಿದೆ ಎಂದು ಕಿವಿಮಾತು ಹೇಳಿದರು. ಮಕ್ಕಳು ಏನಾದರೂ ಹೆಚ್ಚಿನ ಅಂಕವನ್ನು ಗಳಿಸಿಬಿಟ್ಟರೇ ಎಲ್ಲಾರಿಗೂ ಈ ವಿಚಾರ ಹೇಳಿಕೊಳ್ಳುವ ಹಂಬಲ ಹೊಂದಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಇದೆ ವೇಳೆ ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಗಂಗೇಗೌಡ, ಸುಜಲ ಕಾಲೇಜು ಅಧ್ಯಕ್ಷರಾದ ಲೋಕೇಶ್, ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲರಾದ ನಾಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Continue Reading

Trending

error: Content is protected !!