Hassan
ಫೆ.೨೫ ರಂದು ಡಾ. ಎಂ.ಜಿ. ವೆಂಕಟೇಶ್ ಮೂರ್ತಿಯವರಿಗೆ ಅಭಿನಂದನೆ ಕೆ.ಎಸ್. ಜಯಂತ್
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಿತಿಯಿಂದ ಫೆಬ್ರವರಿ ೨೫ರ ಭಾನುವಾರದಂದು ಬೆಳಿಗ್ಗೆ ೧೦:೩೦ಕ್ಕೆ ಡಾ. ಎಂ.ಜಿ. ವೆಂಕಟೇಶ್ ಮೂರ್ತಿ ರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂಸಿಇ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕೆ.ಎಸ್. ಜಯಂತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಡಾ.ಎಂ.ಜಿ.ವೆಂಕಟೇಶ್ ಮೂರ್ತಿರವರು ಎಲೆಕ್ಷ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ೫೨ ವರ್ಷಗಳ ಶೈಕ್ಷಣಿಕ ಮತ್ತು ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ನಿರ್ವಹಿಸಿದ ಹಲವು ಹುದ್ದೆಗಳಲ್ಲಿನ ಅವಿರತ ವಿಶಿಷ್ಟ ಸೇವೆಯನ್ನು ಗುರುತಿಸಿ ಅವರ ಗೌರವಾರ್ಥ ಇದೆ ಭಾನುವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದರು. ಬೆಳಗ್ಗೆ ೧೦೩೦ ರಿಂದ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಜಿ.ಎಲ್.ಮುದ್ದೇಗೌಡರು ಗೌರವ ಸಮರ್ಪಣೆ ಮಾಡಲಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಕರಿಸಿದ್ದಪ್ಪ ಇವರು ಅಭಿನಂದನಾ ಗ್ರಂಥ (ಇ-ಬುಕ್) ಬಿಡುಗಡೆ ಮಾಡುವರು. ಕಂಪ್ಯೂಟರ್‌ಸೈನ್ಸ್ ಹಾಗೂ ವಿಶ್ರಾಂತ ಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾ.ಕೆ. ಚಿದಾನಾಂದಾಗೌಡ ಅವರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಇದಾದ ಮೇಲೆ ವಿಚಾರ ಸಂಕಿರಣದಲ್ಲಿ ಅಂತರರಾಷ್ಟ್ರೀಯ ವಿಚಾರವಾದಿ ಎ.ಹೆಚ್. ಸಾಗರ್ ಅವರು ಬೆಳಗ್ಗೆ ೯೩೦ ರಿಂದ ೧೦:೩೦ ಗಂಟೆಯವರೆಗೆ ಅಧ್ಯಾಪಕವರ್ಗಕ್ಕೆ, ಮಧ್ಯಾಹ್ನ ೨ ರಿಂದ ೩:೩೦ ಗಂಟೆಯವರೆಗೆ ಪದವಿ ವಿದ್ಯಾರ್ಥಿಗಳಿಗೆ ಮತ್ತು ಸಂಜೆ: ೪ ರಿಂದ ೫:೩೦ ಗಂಟೆಯವರೆಗೆ, ಹಾಗೂ ಡಾ.ಎಂ.ಕೆ. ರವಿಶಂಕರ್ ರವರು ೫:೩೦ ರಿಂದ ೬:೩೦ ಗಂಟೆಯವರೆಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಕೆ. ರವಿಶಂಕರ್, ಡಾ. ಬಿ. ಉಮಾ, ಉಪ ಪ್ರಾಂಶುಪಾಲರಾದ ಮೈನಾ, ಶಿವರಾಮ್ ಇತರರು ಉಪಸ್ಥಿತರಿದ್ದರು.
Hassan
ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸರ್ಕಾರದಿಂದ ಭೂಮೌಲ್ಯ ವಿನಾಯಿತಿ – ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ
ಹಾಸನ: ಹಾಸನ ಜಿಲ್ಲಾ ಒಕ್ಕಲಿಗರ ಸಂಘವು ಜಿಲ್ಲೆಯ ಹಿರಿಯರ ಸಹಕಾರ, ಸಮಾಜಮುಖಿ ಚಿಂತನೆ ಹಾಗೂ ದಾನಿಗಳ ಉದಾರ ಮನಸ್ಸಿನ ಫಲವಾಗಿ 1936ನೇ ಇಸವಿಯಲ್ಲಿ ಸ್ಥಾಪನೆಯಾಗಿ, ಕಳೆದ ಎಂಟು ದಶಕಗಳಿಂದ ಶಿಕ್ಷಣ, ವಸತಿ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಕೇಂದ್ರಬಿಂದು ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಮುದ್ದೇಗೌಡ ಅವರು ತಿಳಿಸಿದರು.
ಸಂಘದ ಬೆಳವಣಿಗೆಯಲ್ಲಿ ದಿವಂಗತ ಎಂ.ಆರ್. ಪುಟ್ಟಸ್ವಾಮಯ್ಯ ಅವರು ಹಾಸನ ನಗರದ ಶಂಕರ ಮಠ ರಸ್ತೆಯಲ್ಲಿ ಒಕ್ಕಲಿಗರ ವಿದ್ಯಾರ್ಥಿ ನಿಲಯ ಸ್ಥಾಪನೆಗಾಗಿ ವಿಶಾಲ ನಿವೇಶನವನ್ನು ದಾನವಾಗಿ ನೀಡಿದ್ದು, ಅದು ಸಂಘದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ದಿವಂಗತ ಜಿ.ಎ. ತಿಮ್ಮಪ್ಪ ಗೌಡರು ಸುಮಾರು 30 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಮಾಜದ ಸಹಕಾರದೊಂದಿಗೆ ಊಟದ ಮನೆ ಹಾಗೂ ದಕ್ಷಿಣ ದಿಕ್ಕಿನ ಕಟ್ಟಡಗಳನ್ನು ನಿರ್ಮಿಸಿ ಸಂಘದ ಬುನಾದಿಯನ್ನು ಬಲಪಡಿಸಿದ್ದಾರೆ ಎಂದರು.

ರವೀಂದ್ರನಗರ ಬಡಾವಣೆಯಲ್ಲಿ ಪುರಸಭೆಗೆ ಹಣ ಪಾವತಿಸಿ ಮಂಜೂರಾದ ವಿಶಾಲ ನಿವೇಶನವನ್ನು ದಿವಂಗತ ಹೆಮ್ಮಿಗೆ ಸಿದ್ದಪ್ಪನವರು ಸಂಘಕ್ಕೆ ಕೊಡುಗೆಯಾಗಿ ನೀಡಿದರು. ಆ ಸ್ಥಳದಲ್ಲಿ ಜಿ.ಎಲ್. ಮುದ್ದೇಗೌಡರ ಅಧ್ಯಕ್ಷತೆಯಲ್ಲಿ ಮಹಿಳಾ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಗೊಂಡಿದೆ ಎಂದರು.
2001ರಿಂದ ಅಭಿವೃದ್ಧಿಗೆ ವೇಗ 2001ರಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಿ.ಎಲ್. ಮುದ್ದೇಗೌಡರ ನೇತೃತ್ವದ ಕಾರ್ಯಕಾರಿಣಿ ಸಮಿತಿಯವರು ಹಲವಾರು ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ರವೀಂದ್ರನಗರದಲ್ಲಿ 400 ಹೆಣ್ಣು ಮಕ್ಕಳಿಗೆ ವಸತಿ ಕಲ್ಪಿಸುವ ವಿದ್ಯಾರ್ಥಿನಿಯರ ನಿಲಯ, ಬಿ.ಎಂ. ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ 500 ವಿದ್ಯಾರ್ಥಿನಿಯರಿಗೆ ವ್ಯವಸ್ಥೆ, ಸತ್ಯಮಂಗಲ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಪಡೆದ ಒಂದು ಎಕರೆ ನಿವೇಶನದಲ್ಲಿ 250 ಗಂಡು ಮಕ್ಕಳಿಗೆ ವಸತಿ ನಿಲಯ ನಿರ್ಮಾಣ ಸೇರಿದಂತೆ ಒಟ್ಟು ಸುಮಾರು 1,000 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ ಎಂದರು.

ಶಾಶ್ವತ ಆದಾಯಕ್ಕಾಗಿ ಕಲ್ಯಾಣ ಮಂಟಪ ಈ ಸೇವೆಯನ್ನು ಮುಂದುವರಿಸಲು ಶಾಶ್ವತ ಆದಾಯದ ಅಗತ್ಯವಿರುವುದನ್ನು ಗಮನಿಸಿ, ಎಸ್.ಎಂ.ಕೆ ನಗರ ಬಡಾವಣೆಯಲ್ಲಿ ಒಂದು ಎಕರೆ ನಿವೇಶನ ಪಡೆದು ಕಲ್ಯಾಣ ಮಂಟಪ ನಿರ್ಮಿಸಿ ಅದರ ಆದಾಯವನ್ನು ವಿದ್ಯಾರ್ಥಿಗಳ ವಸತಿ ಹಾಗೂ ನಿರ್ವಹಣೆಗೆ ಬಳಸಲು ಕಾರ್ಯಕಾರಿಣಿ ಸಮಿತಿ ತೀರ್ಮಾನಿಸಿತು. ಈ ಸಂಬಂಧ ಅಂದಿನ ಶಾಸಕರಾದ ಪ್ರೀತಂ ಜೆ ಗೌಡ ಅವರನ್ನು ಸಂಪರ್ಕಿಸಿದಾಗ ಸರ್ಕಾರದಿಂದ ನಿವೇಶನ ಮಂಜೂರಾಯಿತು ಎಂದರು.
ನಿವೇಶನ ಮೌಲ್ಯದ ಶೇಕಡಾ 10ರಷ್ಟು ಮೊತ್ತವನ್ನು ಸಂಘ ಪಾವತಿಸಿದ್ದು, ಉಳಿದ ನಾಲ್ಕು ಕೋಟಿ ರೂ. ಪಾವತಿ ಸಮಸ್ಯೆಯಾಗಿ ಎದುರಾಯಿತು. ಈ ಸಂದರ್ಭದಲ್ಲಿ ಇಂದಿನ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿ ಕಲ್ಯಾಣ ಮಂಟಪದ ಸಮಾಜಮುಖಿ ಉದ್ದೇಶವನ್ನು ವಿವರಿಸಲಾಯಿತು.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅವರು ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸಿ, ಮುಖ್ಯಮಂತ್ರಿಗಳು ಹಾಗೂ ಸಹೋದ್ಯೋಗಿಗಳನ್ನು ಮನವರಿಕೆ ಮಾಡಿ ಸರ್ಕಾರಕ್ಕೆ ಪಾವತಿಸಬೇಕಿದ್ದ ದೊಡ್ಡ ಮೊತ್ತವನ್ನು ಸಂಪೂರ್ಣವಾಗಿ ವಿನಾಯಿತಿ ಮಾಡಿಸಿದರು. ಇದು ಹಾಸನ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ದೊರೆತ ಅಪೂರ್ವ ನೆರವಾಗಿದ್ದು, ಸಂಘವು ಅವರ ಸಹಕಾರವನ್ನು ಸದಾಕಾಲ ಸ್ಮರಿಸುತ್ತದೆ ಎಂದರು.
ಗಣ್ಯರ ಕೊಡುಗೆ ಸ್ಮರಣೆ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ನೇರ–ಪರೋಕ್ಷವಾಗಿ ನೆರವು ನೀಡಿದ ಮಾಜಿ ಪ್ರಧಾನಮಂತ್ರಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡ, ಹಾಲಿ ಸಂಸದರಾದ ಡಾ. ಮಂಜುನಾಥ್, ಮಾನ್ಯ ಶ್ರೀ ಶ್ರೇಯಸ್ ಎಂ. ಪಟೇಲ್, ವಿಧಾನಪರಿಷತ್ ಸದಸ್ಯರಾದ ಮಧುಮಾದೇಗೌಡ, ಹಾಲಿ ಶಾಸಕರಾದ ಸ್ವರೂಪ್ ಪ್ರಕಾಶ್, ಶ್ರೀ ಬಾಲಕೃಷ್ಣ, ಶ್ರೀ ಹೆಚ್.ಕೆ. ಸುರೇಶ್, ಮಾಜಿ ಶಾಸಕರಾದ ಪ್ರೀತಂ ಜೆ ಗೌಡ, ಹಲವು ಗಣಿ ಮಾಲೀಕರು, ಗುತ್ತಿಗೆದಾರರು, ವ್ಯವಸಾಯಗಾರರು, ಹಾಸನ ಜಿಲ್ಲಾ ಸಹಕಾರ ಬ್ಯಾಂಕ್, ಕೃಷಿಕ್ ಸರ್ವೋದಯ ಫೌಂಡೇಶನ್ ಬೆಂಗಳೂರು ಹಾಗೂ ಅನೇಕ ದಾನಿಗಳಿಗೆ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಮ್ಮಿಗೆ ಮೋಹನ್, ಅನಂತಕುಮಾರ್, ಲಕ್ಷ್ಮಣ್, ಗಣೇಶ್, ಅಪ್ಪೆ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.
Hassan
ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವು
ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಬದಿ ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ಗೂಡಂಗಡಿಗಳ ವಿರುದ್ಧ ಮಹಾನಗರಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವು ಕಾರ್ಯಾಚರಣೆ ನಡೆಸಿದರು.
ರಸ್ತೆ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಪೂರ್ವ ಸೂಚನೆ ನೀಡಿ ಗಡುವು ನೀಡಲಾಗಿತ್ತು. ಆದರೆ ನೀಡಿದ ಅವಧಿಯೊಳಗೆ ತೆರವುಗೊಳಿಸದ ಹಿನ್ನಲೆಯಲ್ಲಿ ಮಹಾನಗರಪಾಲಿಕೆ ಸಿಬ್ಬಂದಿ ಕಠಿಣ ಕ್ರಮಕ್ಕೆ ಮುಂದಾದರು.

ಮಹಾನಗರಪಾಲಿಕೆ ಇಂಜಿನಿಯರ್ ಕವಿತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಹತ್ತಾರು ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.
ಪೌರಕಾರ್ಮಿಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿಯುತವಾಗಿ ಕಾರ್ಯಾಚರಣೆ ನಡೆಸಲಾಯಿತು., ಯಾವುದೇ
ಮಾರುಕಟ್ಟೆಗೆ ಆಗಮಿಸುವ ಸಾರ್ವಜನಿಕರಿಗೆ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿರುವುದು ಹಾಗೂ ರಸ್ತೆ ಸಂಕುಚಿತವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ರಸ್ತೆ ಒತ್ತುವರಿ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ಮಹಾನಗರಪಾಲಿಕೆ ಎಚ್ಚರಿಕೆ ನೀಡಿದೆ.
Hassan
ಸ್ಕೂಟಿ-ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸಾ*ವು
ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದೊಡ್ಢರಿ ಕಾವಲು ಗೇಟ್ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಧಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಮೇಶ್ (23), ಪುರುಷೋತ್ತಮ್ (26) ಮೃತ ದುರ್ದೈವಿಗಳು.

ರಮೇಶ್ ಹಾಗೂ ಕಿರಣ್ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ, ಎದುರು ದಿಕ್ಕಿನಿಂದ ವೇಗವಾಗಿ ಬಂದ ಪುರುಷೋತ್ತಮ್ ಚಾಲಿತ ಬೈಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ತೀವ್ರತೆಯಿಂದ ರಮೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಮೇಶ್, ಹೆಲ್ಮೆಟ್ ಧರಿಸಿಕೊಂಡಿದ್ದರೂ ಡಿಕ್ಕಿಯ ರಭಸಕ್ಕೆ ಬೈಕ್ ಹ್ಯಾಂಡಲ್ ಎದೆಗೆ ಒತ್ತಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೈಕ್ ಸವಾರ ಪುರುಷೋತ್ತಮ್ ಕೂಡ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿ ಇದ್ದ ಕಿರಣ್ ಗಂಭೀರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಸಾವೆ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪಘಾತದಿಂದಾಗಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳೀಯರು ರಸ್ತೆ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಆಗ್ರಹಿಸಿದ್ದಾರೆ.
-
Kodagu3 hours agoಡಿ ಗ್ರೂಪ್ ನೌಕರ ಲೋಕಾಯುಕ್ತ ಬಲೆಗೆ
-
Hassan23 hours agoಹಾಸನದಲ್ಲಿ ಜೊಮ್ಯಾಟೋ ರೈಡರ್ಗಳ ಮುಷ್ಕರ ಎಂಟನೇ ದಿನಕ್ಕೆ; ಬೇಡಿಕೆಗಳಿಗೆ ಸ್ಪಂದನೆ ಇಲ್ಲದೆ ಸೇವೆ ವ್ಯತ್ಯಯ
-
Hassan19 hours agoಸ್ಕೂಟಿ-ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸಾ*ವು
-
Kodagu21 hours agoಫೆ.28 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ| ಸುಗಮ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ: ಎಸ್.ಜೆ.ಸೋಮಶೇಖರ್
-
Manglore20 hours agoಎಸ್ಸಿಡಿಸಿಸಿ ಬ್ಯಾಂಕ್ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಯುಪಿಐ & ಐಎಂಪಿಎಸ್ ಆರಂಭ
-
Manglore16 hours agoಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಕಸ್ಟೋಡಿಯನ್ಶಿಪ್ ಪ್ರಶಸ್ತಿ
-
Mysore18 hours agoವಿದ್ಯುತ್ ಇಲ್ಲದೆ ಒಣಗಿದ ಬೆಳೆ: ರೈತನ ಪ್ರಶ್ನೆಗೆ ಸೆಸ್ಕ್ ಅಧಿಕಾರಿಗಳು ಕಕ್ಕಾಬಿಕ್ಕಿ
-
Kodagu21 hours agoಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿ ಕೋಲೆಯಂಡ ಗಿರೀಶ್ ಆಯ್ಕೆ
