Connect with us

Mysore

ಫೆ.೧೩ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯಿಂದ ದೇಶದ ರೈತರ ಮಹಾಸಂಗಮ ರ್‍ಯಾಲಿ ಆಯೋಜಿಸಲಾಗಿದೆ.

Published

on

ಮೈಸೂರು: ಫೆ.೧೩ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯಿಂದ ದೇಶದ ರೈತರ ಮಹಾಸಂಗಮ ರ್‍ಯಾಲಿ ಆಯೋಜಿಸಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ೧೪ ಕಿಸಾನ್ ಮಹಾ ಪಂಚಾಯತ್ ಸಮಾವೇಶ ನಡೆಸಿ ರೈತರನ್ನು ಜಾಗೃತಿಗೊಳಿಸಲಾಗಿದೆ ಎಂದು ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚ ಸಂಚಾಲಕ ಕುರುಬೂರ್ ಶಾಂತಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರಿಗೆ ಪ್ರಧಾನಿಯವರು ಭರವಸೆ ನೀಡಿ ಹುಸಿಗೊಳಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ಜಾರಿಗಾಗಿ, ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿ ಮಾಡಲು, ದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾಕಾಗಿ ಒತ್ತಾಯಿಸಲು ದೆಹಲಿಯಲ್ಲಿ ಫೆ.೧೩ರಂದು ದೇಶದ ಎಲ್ಲಾ ರೈತ ಸಂಘಟನೆಗಳ ಮಹಾಸಂಗಮ ರ್‍ಯಾಲಿ ನಡೆಯಲಿದೆ ಎಂದರು.
ದೇಶದ ರೈತರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ಕನಿಷ್ಠ ೪೦೦೦ ರೂಗಳಿಗೆ ಏರಿಕೆ ಮಾಡಬೇಕು. ೬೦ ವರ್ಷ ತುಂಬಿದ ರೈತರಿಗೆ ಕನಿಷ್ಠ ೧೦,೦೦೦ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಯಿಸಬೇಕು. ಎಲ್ಲಾ ಬೆಳೆಗಳಿಗೂ ಬೆಳೆವಿಮೆ ಜಾರಿ ಆಗಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.


ಕಾರ್ಖಾನೆ ವಶಕ್ಕೆ ಒತ್ತಾಯ: ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ರಹದಾರಿ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ಹಾಗೂ ರೈತರಿಗೆ ಹಲವು ವಿಧದಲ್ಲಿ ಸುಳ್ಳು ಮಾಹಿತಿ ನೀಡಿ ವಂಚಿಸುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ದಕ್ಷ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಬೇಕು. ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವಶಕ್ಕೆ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸಹಕಾರಿ ವ್ಯವಸ್ಥೆಯಲ್ಲಿರುವ ಎಪಿಎಂಸಿ, ಸಹಕಾರಿ ಬ್ಯಾಂಕುಗಳು, ಹಾಲು ಉತ್ಪಾದಕರ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ನಾಮನಿರ್ದೇಶನ ಪ್ರತಿನಿಧಿಗಳನ್ನು ನೇಮಕ ಮಾಡುವುದನ್ನು ಕೈ ಬಿಡಬೇಕು. ಸಂಸ್ಥೆಗಳು ದುರ್ಬಲವಾಗಲು ರಾಜಕೀಯ ಪ್ರವೇಶ ಕಾರಣವಾಗಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದರು.
ಜ.೨೪ ರಂದು ವಿಮರ್ಶೆ ಗೋಷ್ಠಿ: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಇಂದಿನ ಮಾಧ್ಯಮ ಹಾಗೂ ಪ್ರಜಾತಂತ್ರ ವ್ಯವಸ್ಥೆ ಕುರಿತು ವಿಚಾರ ವಿಮರ್ಶೆ ಗೋಷ್ಠಿಯನ್ನು ಜ.೨೪ರಂದು ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ನಿವೃತ್ತ ನ್ಯಾಯಾಧೀಶರು, ಚಿಂತಕರು, ಗೋಷ್ಠಿಯಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರ ಶಂಕರ, ರಂಗರಾಜು, ಮಾರ್ಬಳ್ಳಿ ನೀಲಕಂಠಪ್ಪ, ಬಸವರಾಜು, ಗೌರಿಶಂಕರ್, ವೆಂಕಟೇಶ ನಾಗೇಶ, ಪಟೇಲ್ ಶಿವಮೂರ್ತಿ, ರೇವಣ್ಣ, ಶಿವಣ್ಣ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಕೇಂದ್ರ ವಾರ್ತಾ ಶಾಖೆಯ ನಿರ್ದೇಶಕರಾಗಿದ್ದ ಕೇಶವಮೂರ್ತಿ ನಿಧನ

Published

on

ಮೈಸೂರು: ನವದೆಹಲಿಯ ಕೇಂದ್ರ ವಾರ್ತಾ ಶಾಖೆ(PIB) ಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಡಾ.ಎಚ್‌.ಆರ್‌. ಕೇಶವಮೂರ್ತಿ (59) ಅವರು ಮೈಸೂರಿನಲ್ಲಿ ಕೊನೆಯುಸಿರೆಳೆದರು.

1995ರ ಶ್ರೇಣಿಯ ಭಾರತೀಯ ಸಮಾಚಾರ ಸೇವಾ ಅಧಿಕಾರಿಯಾಗಿದ್ದ ಕೇಶವಮೂರ್ತಿ ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಅವರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಕೇಶವಮೂರ್ತಿ ಅವರು ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ, ಕೃಷಿ ಸಚಿವಾಲಯ, ದೂರ ಸಂಪರ್ಕ ಸಚಿವಾಲಯ ಹಾಗೂ ಈಶಾನ್ಯದ ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು.

ಕೇಶವಮೂರ್ತಿ ಅವರ ನಿಧನಕ್ಕೆ ಪಿ.ಐ.ಬಿ. ಕರ್ನಾಟಕ ವಲಯದ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ಜಿ. ರವೀಂದ್ರ ಹಾಗೂ ಕೇಂದ್ರ ಸಂವಹನ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Continue Reading

Mysore

ಶಿವಲಿಂಗಯ್ಯಗೆ 2024 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

Published

on

ಮೈಸೂರು: ಭಾರತ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಇಲಾಖೆಯ ವತಿಯಿಂದ ನೀಡಲ್ಪಡುವ 2024 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ನಗರದ ಎನ್.ಆರ್.ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಕೆ.ಜೆ.ಶಿವಲಿಂಗಯ್ಯ ಅವರು ಭಾಜನರಾಗಿರುತ್ತಾರೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು.ಜೆ, ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ ತಾಂತ್ರಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಬೋಪಯ್ಯ.ಸಿ.ಯು, ಕಾರ್ಯದರ್ಶಿ ಭಾಸ್ಕರ.ಪಿ.ಬಿ, ಪದಾಧಿಕಾರಿಗಳು ಹಾಗು ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಿವಲಿಂಗಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು

Continue Reading

Mysore

ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುಷ್ಪ ಹರೀಶ್ ಅವಿರೋಧ ಆಯ್ಕೆ

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ತಾಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಬಳ್ಳೂರು ಗ್ರಾಮದ ಪುಷ್ಪಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಈ ಹಿಂದೆ ಉಪಾಧ್ಯಕ್ಷರಾಗಿದ್ದ ಭಾರತಿ ಮಹದೇವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಪುಷ್ಪ ಹರೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ರವರು ಅಧಿಕೃತವಾಗಿ ಘೋಷಣೆ ಮಾಡಿದರು.


ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾ. ಪಂ. ಅಧ್ಯಕ್ಷೆ  ಮಣಿಲಾ ಮಂಜುನಾಥ, ಸದಸ್ಯರಾದ ಭಾರತಿ ಮಹದೇವ, ಕಾಳಮ್ಮಶಿವಣ್ಣ, ಪಾಪಣ್ಣ, ಬೈಲಾಪುರ ಹುಚ್ಚೇಗೌಡ, ಕೃಷ್ಣೇಗೌಡ, ನಾಗೇಂದ್ರ, ರಂಗೇಗೌಡ, ಭವಾನಿನರೇಂದ್ರ, ಶಾಂತಮ್ಮರಾಮಯ್ಯ, ಸುಂದರಮ್ಮ ಸೋಮಣ್ಣಚಾರ್, ನಾಗರಾಜು, ನೀತನ್, ಗೌರಮ್ಮ ವೆಂಕಟೇಶ್, ಪುಷ್ಪಹರೀಶ್, ಪಿಡಿಓ ಎಂ.ರಂಗೇಗೌಡ, ಕಾರ್ಯದರ್ಶಿ ಎಸ್.ಬಿ.ಮಾದೇಗೌಡ ಭಾಗವಹಿಸಿದ್ದರು.


ಫಲಿತಾಂಶ ಪ್ರಕಟವಾದ ನಂತರ ನೂತನ ಉಪಾಧ್ಯಕ್ಷರನ್ನು ಗ್ರಾ.ಪಂ. ಸದಸ್ಯರುಗಳು, ಸಿಬ್ಬಂದಿ ವರ್ಗದವರು, ಮುಖಂಡರುಗಳು ಅಭಿನಂದಿಸಿದರು. ಬೆಂಬಲಿಗರು ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಸಣ್ಣಪ್ಪ, ಮುಖಂಡರಾದ ಹರೀಶ್, ಕರೀಗೌಡ, ಗೋವಿಂದ, ಮಂಜಯ್ಯ, ತಮ್ಮಯ್ಯ, ಪಂಚಾಯಿತಿ ಸಿಬ್ಬಂದಿಗಳಾದ ಅಪ್ಪಾಜಿಗೌಡ, ಮಹೇಶ್, ಮಧು, ಗಿರೀಶ್, ಸಂದೀಪ್ ಸೇರಿದಂತೆ ಹಲವರು ಇದ್ದರು.

Continue Reading

Trending

error: Content is protected !!