Connect with us

Hassan

ಪ್ರೀತಿಸುವಂತೆ ಕಿರುಕುಳ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮನನೊಂದು ಯುವತಿ ಆತ್ಮಹತ್ಯೆ

Published

on

ಹಾಸನ : ಪ್ರೀತಿಸುವಂತೆ ಕಿರುಕುಳ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ

ಮನನೊಂದು ಯುವತಿ ಆತ್ಮಹತ್ಯೆ

ಸಂಗೀತಾ (21) ಮೃತ ಯುವತಿ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ನಿಡಗೂಡು ಗ್ರಾಮದಲ್ಲಿ ಘಟನೆ

ಬಿಕಾಂ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಸಂಗೀತಾ

ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದ ಇದೇ ಗ್ರಾಮದ ಶಿವು

ಅಲ್ಲದೆ ನನಗೆ ಮದುವೆ ಮಾಡಿಕೊಡುವಂತೆ ಯುವತಿ ಪೋಷಕರ ಬಳಿ ಕೇಳಿದ್ದ ಶಿವು

ಮದುವೆ ಮಾಡಿಕೊಡಲು ನಿರಾಕರಿಸಿದ್ದ ಸಂಗೀತ

ಆದರೂ ಸಂಗೀತಾಳನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಶಿವು

ಜ.11 ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ಸಂಗೀತಾ ಕುಟುಂಬ

ದೇವಸ್ಥಾನದ ಬಳಿಗೆ ಬಂದಿದ್ದ ಶಿವು

ಸಂಗೀತಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಫೋನ್ ಏಕೆ ರಿಸೀವ್ ಮಾಡಲ್ಲ ಎಂದು ತಲೆಗೆ ಹೊಡೆದಿದ್ದ ಶಿವು

ನನ್ನನ್ನು ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದ ಶಿವು

ಇದರಿಂದ ಮನನೊಂದ ಸಂಗೀತಾ

ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸಂಗೀತ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಶಿವನನ್ನು ವಶಕ್ಕೆ ಪಡೆದ ಪೊಲೀಸರು

ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Continue Reading
Click to comment

Leave a Reply

Your email address will not be published. Required fields are marked *

Hassan

ಸಿದ್ಧಾಂತ ಶಿಖಾಮಣಿ ತತ್ವಸಂದೇಶ ಅಳವಡಿಸಿಕೊಳ್ಳಿ : ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಜಿ

Published

on

 

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಎಲ್ಲ ಸಿದ್ದಾಂತಗಳಿಗಿಂತ ಮೇಲಿನ ಸ್ತರದಲ್ಲಿರುವುದರಿಂದ ವೀರಶೈವ ಧರ್ಮದ ಪ್ರಮುಖ ಗ್ರಂಥ ಸಿದ್ಧಾಂತ ಶಿಖಾಮಣಿ ಎಂದು ಕರೆಯಲಾಗಿದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ಮಡಬಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆ ಕೊಪ್ಪಲು ಗ್ರಾಮದ ಗಾಯತ್ರಿ ರುದ್ರೇಗೌಡ್ರು ಮನೆಯಲ್ಲಿ ಜಗದ್ಗುರು ರೇಣುಕರ ” ಮನೆಗೆ ರೇಣುಕ ಮನ-ಮನಕೆ ರೇಣುಕ ಸಿದ್ಧಾಂತ ಶಿಖಾಮಣೀ ತತ್ತ್ವ ಪ್ರಸಾರ ಅಭೀಯಾನ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಇಷ್ಟಲಿಂಗ ಪೂಜೆ ನೆರವೇರಿಸಿ ಆಶೀರ್ವಾದ. ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ. ಇದನ್ನು ವೀರಶೈವರ ಧರ್ಮಗ್ರಂಥ ಎಂದು ಕರೆದಿದ್ದರೂ ಅದು ವೀರಶೈವರಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮದವರೂ ಇದನ್ನು ಓದುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ ಎಂದರು.

ಜಗದ್ಗುರು ರೇಣುಕಾಚಾರ್ಯರು ಜಾತಿ ಮತ ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಕಾರುಣ್ಯಶೀಲರು. ನೊಂದವರ ಬೆಂದವರ ಧ್ವನಿಯಾಗಿ ಸಕಲ ಸಮುದಾಯಗಳ ಶ್ರೇಯಸ್ಸನ್ನು ಬಯಸಿದವರು. ಜಗತ್ತಿನ ಕತ್ತಲೆಯನ್ನು ಕಳೆಯಲು ಸೂರ್ಯನಿದ್ದಂತೆ, ಬಾಳಿನ ಅಜ್ಞಾನ ನಿವಾರಿಸಲು ಗುರು ಬೇಕು. ಗುರು ಜ್ಞಾನದ ಸಂಕೇತ. ಅರಿವಿನ ಮಹಾಸಾಗರ, ಕರ್ಮದ ಕತ್ತಲೆ ಕಳೆದು ಧರ್ಮ ಬೀಜವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ವಿಶ್ವಬಂಧುತ್ವದ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನ-ಮಂಥನಗಳು ಜನ ಸಮುದಾಯಕ್ಕೆ ದಾರೀದೀಪವಾಗಿವೆ. ಅಶಾಂತಿಯಿಂದ ತತ್ತರಿಸುತ್ತಿರುವ ಬದುಕಿಗೆ ಶಾಂತಿ ಸಂಸ್ಕಾರವನ್ನಿತ್ತವರು, ಸರ್ವಧರ್ಮಗಳ ಹಾಗೂ ಮಾನವ ಜನಾಂಗಗಳ ಸಂಬಂಧ, ಭಾವನೆಗಳನ್ನು ಶಿವಜ್ಞಾನದ ಮೂಲಕ ಬೆಸೆಯುವ ಕಾರ್ಯ ಮಾಡಿದ್ದು ಮನುಕುಲದ ಸೌಭಾಗ್ಯ‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷ ಹೇಮಂತ್ ಕುಮಾರ್, ಭಾರತ್ ಗ್ಯಾಸ್ ಮಾಲೀಕ ಮಂಜುನಾಥ್, ಕಾಫಿ ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೋಟೆ ಮಹೇಶ್, ಶ್ರೀ ರಾಮ್ ಸೂಪರ್ ಮಾರ್ಕೆಟ್ ಮಾಲಿಕರಾದ ಕಿರಣ್,ಗ್ಯಾಸ್ ಮಂಜಣ್ಣ, ದೇವರಾಜ್ ಶಾಸ್ತ್ರಿ, ವೇ ಮೂ ಯತೀಶ್ ಶಾಸ್ತ್ರಿ, ದರ್ಶನ ಆರಾಧ್ಯ ತಗರೆ ರೇವಪ್ಪ, ಬಸಂತ್ ಯಶವಂತ್ ಮನು ಸೇರಿದಂತೆ ವಿನಯ್ ಶೈವ ಮಲ್ನಾಡ್ ಕುಟುಂಬದವರು ಹಾಜರಿದ್ದರು.

Continue Reading

Hassan

ಹೊಯ್ಸಳ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮದ ಗಣೇಶ ಪ್ರತಿಷ್ಠಾಪನೆ

Published

on

ಹೊಯ್ಸಳ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮದ ಗಣೇಶ ಪ್ರತಿಷ್ಠಾಪನೆ

ಹಾಸನ: ನಗರದ ತಣ್ಣೀರುಹಳ್ಳ ಹಾಲುವಾಗಿಲು ರಸ್ತೆ ಬಳಿ ಇರುವ ಪ್ರತಿಷ್ಠಿತ ಹೊಯ್ಸಳ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಬಾರಿಗೆ ಗಣೇಶ ಪ್ರತಿಷ್ಠಾಪನೆಯನ್ನು ಶಾಲಾ ಆವರಣದಲ್ಲಿ ಮಕ್ಕಳ ಜೊತೆ ಶನಿವಾರ ಬೆಳಿಗ್ಗೆ ನೆರವೇರಿಸಿ ಸಂಭ್ರಮಿಸಿದರು.

ಹೊಯ್ಸಳ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ನವೀನ್ ಮಾಧ್ಯಮದೊಂದಿಗೆ ಮಾತನಾಡಿ, ಇಂತಹ ಗಣೇಶ ಹಬ್ಬವನ್ನು ಹೊಯ್ಸಳ ಪಬ್ಲಿಕ್ ಶಾಲೆಯಲ್ಲಿ ಶಾಲಾ ಮಕ್ಕಳೊಂದಿಗೆ ಎಲ್ಲಾರೂ ಒಗ್ಗೂಡಿ ಆಚರಿಸುತ್ತಿದ್ದೇವೆ. ಶಾಲೆಯ ಶೋಭ ನಾಗರಾಜು ಅವರ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಗಣೇಶವನ್ನು ಪ್ರತಿಷ್ಠಾಪಿಸಿದ್ದು, ಬುಧವಾರದಂದು ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದರು.

ಮುಂದಿನ ವರ್ಷ ಇಂತಹ ಹಬ್ಬವನ್ನು ಇನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿದ್ದೇವೆ ಎಂದರು. ಪ್ರಸ್ತೂತದಲ್ಲಿ ಮಕ್ಕಳು ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದು, ಇಂತಹ ಗಣೇಶನ ಉತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಕೆಲ ಬದಲಾವಣೆಗೊಂಡು ಶ್ರದ್ಧೆ, ಭಕ್ತಿ ಹಾಗೂ ಏಕಾಗ್ರತೆ ಇದರಿಂದ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಹತ್ತನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿ ರಿಫಾನ್ ಮಾತನಾಡಿ, ನಾನು ಹೊಯ್ಸಳ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಶಾಲೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ಸಹಕಾರ ನೀಡಿರುವ ಶಿಕ್ಷಣ ಸಂಸ್ಥೆಯ ಶೋಭ ನಾಗರಾಜು ಅವರಿಗೆ ಧನ್ಯವಾದವನ್ನು ಮೊದಲು ಹೇಳುತ್ತೇವೆ. ಅವರ ಮಾರ್ಗದರ್ಶನದಲ್ಲಿ ಈ ಗಣಪತಿ ಮೂರ್ತಿ ಇಡಲಾಗಿದೆ. ಹಿಂದಿನ ಸ್ವಾತಂತ್ರ್ಯ ಹೋರಾಟದ ವೇಳೆ ಈ ಗಣೇಶ ಹಬ್ಬವನ್ನು ಪ್ರಾರಂಭಿಸಿ ಜನರಲ್ಲಿ ಒಗ್ಗಟ್ಟು ಮೂಡಿಸಲಾಯಿತು. ಹಿಂದಿನ ಈ ಗಣೇಶ ಮೂರ್ತಿ ಪ್ರತಿಷ್ಠಾಪನೆ ಇಂದಿಗೂ ಕೂಡ ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

Continue Reading

Hassan

ಅದ್ಧೂರಿಯಾಗಿ ನೆರವೇರಿದ ಪಾಂಚಜನ್ಯ ಗಣೇಶ ಪ್ರತಿಷ್ಠಾಪನೆ

Published

on

ಅದ್ಧೂರಿಯಾಗಿ ನೆರವೇರಿದ ಪಾಂಚಜನ್ಯ ಗಣೇಶ ಪ್ರತಿಷ್ಠಾಪನೆ

ಹಾಸನ: ಎಲ್ಲಾರ ಗಮನಸೆಳೆದಿರುವ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಶನಿವಾರ ಮದ್ಯಾಹ್ನದಂದು ಗಣ್ಯರ ಎದುರು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಗಣೇಶ ಪ್ರತಿಷ್ಠಾಪನೆಯು ಅದ್ಧೂರಿಯಾಗಿ ನೆರವೇರಿತು.

ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ ಪಾಂಚಜನ್ಯವತಿಯಿಂದ ಎಲ್ಲಾಸ್ವಯಂ ಸೇವಕರು ಸೇರಿ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನಮ್ಮ ಜಿಲ್ಲೆ ಮತ್ತು ರಾಜ್ಯದ ಜನೆತೆಗೆ ಆರೋಗ್ಯ, ಆಯಾಸ್ಸು, ಐಶ್ವರ್ಯ ಮತ್ತು ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ ಎಂದು ಭಗವಂತನಲ್ಲಿ ಹಾರೈಸುತ್ತೇನೆ. ಪ್ರತಿ ವರ್ಷವೂ ಕೂಡ ಪಾಂಚಜನ್ಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಕೂಡ ಒಳ್ಳೆ ರೀತಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ವಿಸರ್ಜನೆ ವೇಳೆಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಲಿ ಎಂದು ಹಾರೈಸುವುದಾಗಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಮೊದಲು ಗೌರಿ ಗಣಪತಿ ಹಬ್ಬದ ಶುಭಾಶಯಗಳನು ತಿಳಿಸುತ್ತೇನೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಲಿ. ಸಮಾಜದಲ್ಲಿ ಸೌಹಾರ್ಧತೆ ಇನ್ನಷ್ಟು ಹೆಚ್ಚಿಸಲಿ. ಬಂದು ಬಾಂಧವರಿಗೆ ಉತ್ತಮ ಆರೋಗ್ಯ ಕಲ್ಪಿಸಿ, ಪಾಂಚಜನ್ಯ ಹಿಂದೂ ಗಣಪತಿ ಸ್ಥಾಪನೆಗೊಂಡಿದ್ದು, ಸೆಪ್ಟಂಬರ್ ೭ ರಿಂದ ೧೨ರ ವರೆಗೂ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟಂಂಬರ್ ೧೨ ರಂದು ಬೃಹತ್ ಶೋಭಯಾತ್ರೆಯೊಂದಿಗೆ ದೇವಗೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.ಇದೊಂದು ಭಾವಕೈತೆಯ ಸಂಕೇತವಾಗಿದ್ದು, ನಾಡಿನ ಎಲ್ಲಾ ಜನರು ಒಗ್ಗಟ್ಟಾಗಿ ಬಂದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಇದೆ ವೇಳೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಮಾಜಿ ಅಧ್ಯಕ್ಷ ಆರ್. ಮೋಹನ್, ಸದಸ್ಯ ಶಂಕರ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ. ವಕೀಲ ಸಂಘದ ಮಾಜಿ ಅಧ್ಯಕ್ಷ ಶೇಖರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಅಖಿಲ ಭಾರತ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಎಂದು ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ವಾಸು, ಕಾರ್ಯದರ್ಶಿ ವೇಣುಗೋಪಾಲ್, ರವಿಸೋಮು, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್, ರಕ್ಷಿತ್ ಶೆಟ್ಟಿ, ಆರ್.ಎಸ್.ಎಸ್. ಮುಖಂಡ ಮೋಹನ್, ಶೋಬನ್ ಬಾಬು, ವಿಶಾಲ್ ಅಗರವಾಲ್, ಮೋಹನ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!