Connect with us

Hassan

ಪ್ರಿಯಕರನಿಂದ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ – ವಿಷ ಸೇವಿಸಿ ಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

Published

on

ಹಾಸನ : ಪ್ರಿಯಕರನಿಂದ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ

ವಿಷ ಸೇವಿಸಿ ಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

ಆಶಾ (20) ಸಾವನ್ನಪ್ಪಿದ ಯುವತಿ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬೆಳ್ಳೊಟ್ಟೆ ಗ್ರಾಮದಲ್ಲಿ ಘಟನೆ

ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಆಶಾ

ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಮಂಜುನಾಥ

ಮಂಜುನಾಥ ಆಲೂರು ತಾಲ್ಲೂಕಿನ, ಕಾಟೀಹಳ್ಳಿ ಗ್ರಾಮದವನು

ಪ್ರತಿದಿನ ಆಶಾಳೊಂದಿಗೆ ಸುತ್ತಾಡುತ್ತಿದ್ದ ಮಂಜುನಾಥ

ಇತ್ತೀಚಿಗೆ ಬೇರೊಂದು ಹುಡುಗಿ ಜೊತೆ ಸುತ್ತಾಡುತ್ತಿದ್ದ ಮಂಜುನಾಥ

ಮಂಜುನಾಥನನ್ನು ಪ್ರಶ್ನಿಸಿದ್ದ ಆಶಾ

ಪ್ರಶ್ನಿಸಿದರೆ ನಿನ್ನನ್ನು ಕೊಲೆ ಮಾಡುತ್ತೇನೆ

ನನ್ನೊಂದಿಗೆ ನೀನು ಸುತ್ತಾಡಿರುವ ಫೋಟೋ, ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಬೆದರಿಕೆ ಹಾಕಿದ್ದ ಆರೋಪ

ಇದರಿಂದ ಮನನೊಂದು ಕಾಲೇಜಿನ ಬಳಿ ವಿಷ ಕುಡಿದಿದ್ದ ಆಶಾ

ಆಶಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ ಮಂಜುನಾಥ

ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಆಶಾ

ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಆಶಾ

ಮಂಜುನಾಥನ ವಿರುದ್ಧ ಪೋಲಿಸರಿಗೆ ದೂರು ನೀಡಿರುವ ಆಶಾ ತಂದೆ ರಾಮಯ್ಯ

ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲು

Continue Reading
Click to comment

Leave a Reply

Your email address will not be published. Required fields are marked *

Hassan

ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯ, ವಿಶ್ವಕ್ಕೆ ಶಾಂತಿ ಬಯಸುವ ಆಶಯ ಹೊಂದಿದೆ: ಸದಾಶಿವ ಶಿವಾಚಾರ್ಯ ಸ್ವಾಮೀಜಿ

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ಜಗದ್ಗುರು ರೇಣುಕರಿಂದ ಸ್ಥಾಪಿಸಲ್ಪಟ್ಟ ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯ ಮತ್ತು ವಿಶ್ವಕ್ಕೆ ಶಾಂತಿ ಬಯಸುವ ಆಶಯ ಹೊಂದಿದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ  ತಿಳಿಸಿದ್ದಾರೆ.

ತಾಲೂಕಿನ ಕಾರ್ಜುವಳ್ಳಿ ಹಿರೇಮಠದ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳಾದ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ, ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ (ರಿ), ಬೆಂಗಳೂರು ಇದರ ಶಿವಮೊಗ್ಗ ದಾವಣಗೆರೆ. ಚಿಕ್ಕಮಗಳೂರು ಹಾಗೂ ಹಾಸನ (ಮಂಗಳೂರು-ಕೊಡಗು) ಜಿಲ್ಲಾ ಘಟಕಗಳ ಮತ್ತು ಶ್ರೀ ಸಂಸ್ಥಾನ ಹಿರೇಮಠ, ಕಾರ್ಜುವಳ್ಳಿ ಇವರ ಸಹಯೋಗದಲ್ಲಿ ಕಾರ್ಜುವಳ್ಳಿಯ ಕೂಡಿಗೆಯಿಂದ ಕಾರ್ಜವಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೂ ಶಿವಾಚಾರ್ಯರ ಸದ್ಧೋಧನಾ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ವೀರಶೈವ ಧರ್ಮದ ಪಂಚಾಚಾರ್ಯರು ಯುಗ ಪುರುಷರು ಇವರು ತತ್ವೋಪದೇಶ ಬೋಧಿಸಿದರೆ, ಶರಣರು ಶತಮಾನ ಪುರುಷರು. ಈ ಇಬ್ಬರ ಧ್ಯೇಯೋದ್ದೇಶಗಳು ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸಮೃದ್ಧಿ ತರುವುದಾಗಿದೆ. ಇಂದು ಜನರು ಆಧುನಿಕತೆಗೆ ಮಾರುಹೋದ ಹಿನ್ನೆಲೆಯಲ್ಲಿ ಅಶಾಂತಿ, ಅತೃಪ್ತಿ ತಾಂಡವವಾಡುತ್ತಿದೆ. ಈ ಅಶಾಂತಿ ತೂಲಗಿ ನೆಮ್ಮದಿಯ ಬದುಕು ಬೇಕಾದರೆ ಎಲ್ಲರಲ್ಲೂ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಧ್ಯೇಯ ವಾಕ್ಯ ಮೈಗೂಡಬೇಕಾಗಿದೆ ಎಂದರು.

ಪಾದಯಾತ್ರೆಯ ಮಾರ್ಗಮಧ್ಯೆ ಭಕ್ತರಿಗೆ ರುದ್ರಾಕ್ಷ, ವಿಭೂತಿ ಧಾರಣೆ, ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ವಿತರಣೆ ಮಾಡಲಾಗುವುದು, ನಂತರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಪಾದಯಾತ್ರೆ ಮಂಗಲವಾಡುವ ಮೂಲಕ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕಡೆನಂದಿಹಳ್ಳಿಯ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ತೊಗರ್ಸಿ ಪಂಚವಣ್ಣಿಗೆ ಮಠದ ಮಠದ ಚೆನ್ನವೀರಾ ದೇಶಿ ಕೇಂದ್ರ ಸ್ವಾಮಿಗಳು, ಹಾರನಹಳ್ಳಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಚೆನ್ನಗಿರಿ ಮಠದ ಕೇದಾರಲಿಂಗ ಶಿವ ಶಾಂತವೀರಾ ಶಿವಾಚಾರ್ಯ ಸ್ವಾಮೀಜಿಗಳು, ಬಳಸಗೋಡು ಮಠದ ಗುರು ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ರೇಣುಕವಾಗಿ ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಶ್ರೀಮಠದ ಭಕ್ತರು ಹಾಜರಿದ್ದರು.

 

Continue Reading

Hassan

ತಿರುಪತಿಹಳ್ಳಿ ಬೆಟ್ಟದ ಮೇಲೆ ಜಿಮಿನಾಯ್ಡ್ ಉಲ್ಕೆಗಳ ಸುರಿಮಳೆ: ಸಂಭ್ರಮಿಸಿದ ವಿದ್ಯಾರ್ಥಿಗಳು

Published

on

ಹಾಸನ:   ಜಿಲ್ಲೆಯ ತಿರುಪತಿಹಳ್ಳಿ ಬೆಟ್ಟದ ಮೇಲೆ ಶನಿವಾರ (ಡಿ.13) ರಾತ್ರಿ 12 ಗಂಟೆಗೆ ಸುಮಾರು 50ಕ್ಕೂ ಅಧಿಕ ಜಿಮಿನಾಯ್ಡ್ ಉಲ್ಕೆಗಳ ಸುರಿಮಳೆಯನ್ನು ಕಣ್ತುಂಬಿಸಿಕೊಂಡು  ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಭ್ರಮಪಟ್ಟಿದ್ದಾರೆ.

ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿ ನಿಟ್ಟೂರು ಗ್ರಾಮ ಪಂಚಾಯಿತಿಯ ಸಹಯೋಗ ಹಾಗೂ ಶ್ರೀ ಚಿಕ್ಕರಂಗನಾಥ ಸೇವಾನ್ಯಾಸದ ಸಹಕಾರದೊಂದಿಗೆ ತಿರುಪತಿಯಲ್ಲಿ ಬೆಟ್ಟದಲ್ಲಿ “ಆಕಾಶದ ಅದ್ಭುತ ಉಲ್ಕೆಗಳ ಸುರಿಮಳೆ” ಎಂಬ ಶೀರ್ಷಿಕೆಯಡಿ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಜಿಲ್ಲೆಯ ವಿವಿಧ ಭಾಗಗಳಿಂದ ತಮ್ಮ ಸ್ವಂತ ವಾಹನ ಹಾಗೂ ಬಿಜಿವಿಎಸ್ ಆಯೋಜಿಸಿದ್ದ ಬಸ್ಸುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿಜ್ಞಾನ ಆಸಕ್ತರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಸಂಜೆ ಆರು ಗಂಟೆಯಿಂದಲೂ ಬೆಟ್ಟದ ಮೇಲೆ ಕಿಕ್ಕಿರಿದು ಬೆಟ್ಟದ ಪಶ್ಚಿಮ ತುದಿಯಿಂದ ಸರ‍್ಯಾಸ್ತಮಾನ ನೋಡಿ ಬೆರಗಾಗಿದ್ದಾರೆ. ಟೆಲೆಸ್ಕೋಪಿನ ಮೂಲಕ ಶನಿಗ್ರಹದ ಬಳೆಗಳನ್ನು ಗುರುಗ್ರಹದ ಸಾಲುಹಿಡಿದು ನಿಂತಿದ್ದ ಗ್ಯಾನಿಮಿಡ, ಕ್ಯಾಲೆಸ್ಟೊ, ಐಯೋ ಹಾಗೂ ಯೂರೋಪ ಉಪಗ್ರಹಗಳನ್ನು ವೀಕ್ಷಿಸಿ, ಉಲ್ಕಾಪಾತ ನೋಡಿ ಸಂಭ್ರಮಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳ ಸುತ್ತ ಬಂಡೆಯ ಮೇಲೆ ಅಂಗಾತ ಮಲಗಿ ತಮ್ಮ ರಾಶಿ ಹಾಗೂ ಮದುವೆಯಲ್ಲಿ ತೋರಿಸುವ ಅರುಂಧತಿ ನಕ್ಷತ್ರಗಳನ್ನು ನೋಡಿ ಖುಷಿಪಟ್ಟರು. ಅಲ್ಲದೇ ಸಂಪನ್ಮೂಲ ವ್ಯಕ್ತಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಜೊತೆ ಜೊತೆಗೆ ಸರ್ ಸರ್ ಎಂದು ಬೀಳುತ್ತಿದ್ದ ಒಂದೊಂದೆ ಉಲ್ಕೆಗಳನ್ನು ಎಣಿಸಿ ಎಣಿಸಿ ಕುಣಿದಾಡಿದರು.  11 ಗಂಟೆಗೆೆ 8 ರಿಂದ 10 ಬೀಳುತ್ತಿದ್ದ ಉಲ್ಕೆಗಳು 11 ರ ನಂತರ 10ರಿಂದ 15ಕ್ಕೇರಿತು ನಂತರ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರು ವಿಜ್ಞಾನ ಕೇಂದ್ರದ ರವಿಶಂಕರ ಮಾತನಾಡಿ, ಆಕಾಶ ವೀಕ್ಷಣೆ ಮಾಡುವ ವಿಧಾನ, ವಿವಿಧ ಗ್ರಹಗಳು ಹಾಗೂ ಆ ರಾತ್ರಿ ಕಾಣಿಸಿಕೊಳ್ಳುವ ಉಲ್ಕೆಗಳನ್ನು ಯಾವ ದಿಕ್ಕಿನಲ್ಲಿ ವೀಕ್ಷಿಸಬೇಕೆಂಬುದನ್ನು ವಿವರಿಸಿದರು.

ಅಹಮದ್ ಅಗರೆ ಅವರು, ಪಿಪಿಟಿ ಮೂಲಕ ಆಕಾಶದ ರಾಶಿ ನಕ್ಷತ್ರಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ತಿಳಿಸಿ, ನೇರವಾಗಿ ಆಕಾಶದಲ್ಲಿಯೇ ಅವುಗಳನ್ನು ಗುರುತಿಸುವ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಿದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಕೆ.ಎಸ್. ರವಿಕುಮಾರ್ ಅವರು “ಆಕಾಶ ಮತ್ತು ಆರೋಗ್ಯ” ವಿಷಯದ ಕುರಿತು ಪಿಪಿಟಿ ಮೂಲಕ ಆಕಾಶ ವೀಕ್ಷಣೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಆಗುವ ಲಾಭಗಳನ್ನು ವಿವರಿಸಿದರು.

ನಂತರ ಸಂಪನ್ಮೂಲ ವ್ಯಕ್ತಿ ಕವಿತಾ ಕೆ.ವಿ. ಅವರು ಸೌರಮಂಡಲದ ಉಗಮ ಹಾಗೂ ಉಲ್ಕಾಪಾತ ಸಂಭವಿಸುವ ಕಾರಣಗಳನ್ನು ವಿಡಿಯೋ ಮತ್ತು ಪಿಪಿಟಿ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ-ಕಾಲೇಜುಗಳ ಮಕ್ಕಳಿಂದ ಹಿಡಿದು ಮಕ್ಕಳ ಪೋಷಕರು, ಗ್ರಾಮ ಪಂಚಾಯತಿ ಅಧ್ಯಕ್ಷ, ಕಾರ್ಯದರ್ಶಿಗಳು, ಎಂ.ಸಿ.ಎಫ್‌ನ ವಿಜ್ಞಾನಿಗಳು, ಊರಿನ ಜನರು ಎಲ್ಲರೂ ನೇರವಾಗಿ 50ಕ್ಕೂ ಹೆಚ್ಚು ಉಲ್ಕೆಗಳು ಆಕಾಶದಲ್ಲಿ ಬೀಳುವುದನ್ನು ವೀಕ್ಷಿಸಿ ಅಪಾರ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉಲ್ಕೆಗಳ ರೂಪದಲ್ಲಿ ಅಲಂಕರಿಸಿದ್ದ ಚಾಕೊಲೇಟುಗಳನ್ನು ಸಭಿಕರ ಮೇಲೆ ಎರಚುವ ಮೂಲಕ ವಿನೂತನವಾಗಿ ಉದ್ಘಾಟಿಸಿದ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಂ ನಟರಾಜ್ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಕಾಶದ ಅದ್ಭುತ ಉಲ್ಕೆಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಟ್ಟೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಶೇಖರ್ ಮಾತನಾಡಿ, ಇಂದಿನ ಯುವ ಜನತೆ ಮೊಬೈಲ್ ನಂತಹ ಆಧುನಿಕ ತಂತ್ರಜ್ಞಾನಗಳಿಗೆ ಮಾರು ಹೋಗದೆ, ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಹಾಸನ ತಾಲೂಕು ಬಿಜಿವಿಎಸ್ ಅಧ್ಯಕ್ಷ ಡಾ. ಎಚ್.ಜಿ.ಮಂಜುನಾಥ್ ಮಾತನಾಡಿ, ಖಗೋಳ ವಿಜ್ಞಾನದ ಮಹಾತಾಯಿ ಎನ್ನುತ್ತಾರೆ. ಆಕಾಶದಲ್ಲಿ ನಡೆಯುವ ಸೌರ ವಿದ್ಯಮಾನಗಳು ವಿರ್ಶವ ವಿಕಾಸದ ಗುಟ್ಟನ್ನು ಹುದುಗಿಸಿಟ್ಟುಕೊಂಡಿರುತ್ತವೆ. ಅವನ್ನು ವೀಕ್ಷಿಸಿ ಅಧ್ಯಯನ ಮಾಡುವ ಮೂಲಕ ಅದರೊಳಗಿನ ಅವಿತ ಸತ್ಯವನ್ನು ಬಯಲು ಮಾಡುವುದೇ ವಿಜ್ಞಾನ ಅಂತಹ ವಿಜ್ಞಾನಿಗಳು ನೀವಾಗಿ ದೇಶವನ್ನು ವಿಜ್ಞಾನ ಸ್ವಾವಲಂಬನೆಯತ್ತ ಕೊಂಡೊಯ್ಯುವ ವಿಜ್ಞಾನಿಗಳಾಗ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಮಾತನಾಡಿ, ಆಕಾಶವನ್ನು ದಿನನಿತ್ಯ ನೋಡುವುದರಿಂದ ನಮ್ಮೊಳಗಿನ ಹೇಡಿತನ, ಮೌಢ್ಯ ಹಾಗೂ ವಿಶ್ವದ ರಚನೆಯ ಅದ್ಭುತಗಳನ್ನು ತಿಳಿಯಲು ಸಾಧ್ಯ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿಗಳಾದ ಚಿನ್ನೇನಹಳ್ಳಿ ಸ್ವಾಮಿ  ಪ್ರಾಸ್ತಾವಿಕ ಭಾಷಣ ಮಾಡಿ, ಬಿಜಿವಿಎಸ್‌ನ ಉದ್ದೇಶ ಮತ್ತು ಹಿನ್ನೆಲೆಯನ್ನು ತಿಳಿಸಿ, ಈ ಕಾರ್ಯಕ್ರಮವು ವಿಜ್ಞಾನ ಜಾಗೃತಿ ಮೂಡಿಸುವುದರ ಜೊತೆಗೆ ಆಕಾಶ ವೀಕ್ಷಣೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ತಲುಪಿಸುತ್ತದೆ ಎಂದರು.

ಕಾರ್ಯಕ್ರದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕುಮಾರ್, ತಿರುಪತಿಹಳ್ಳಿ ಬೆಟ್ಟದ ಸಭಾಂಗಣದ ಉಸ್ತುವಾರಿ ಬಿ.ಎಸ್.ರಂಗನಾಥ್, ಬಿಜಿವಿಎಸ್ ಹಾಸನ ಜಿಲ್ಲಾ ಉಪಾಧ್ಯಕ್ಷ ಧರ್ಮರಾಜು, ಮಲ್ನಾಡ್ ಎಂಜಿನೀಯರಿಂಗ್ ಕಾಲೇಜು ಉಪನ್ಯಾಸಕಿ ಉಮಾ, ಎ.ವಿ.ಕೆ.ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್. ಭಾಗವಹಿಸಿದ್ದರು.

ಬಿಜಿವಿಎಸ್ ಹಾಸನ ತಾಲೂಕು ಕಾರ್ಯದರ್ಶಿ ಲೋಲಾಕ್ಷಿ ಸ್ವಾಗತಿಸಿದರು. ಬಿಜಿವಿಎಸ್ ಜಿಲ್ಲಾ ಖಜಾಂಚಿ ರವೀಶ್ ನಿರೂಪಣೆ ಮಾಡಿ ವಂದಿಸಿದರು. ಶಿಕ್ಷಣ ಉಪಸಮಿತಿಯ ಸದಸ್ಯರಾದ ಜಯಪ್ರಕಾಶ್ ಅವರು ವಿನೂತನ ರೀತಿಯಲ್ಲಿ ಉದ್ಘಾಟನೆ ಮಾಡಲು ಸಹಕರಿಸಿದರು. ಕವಿತ, ರವೀಶ್, ಜಾನಕಿ, ಹಾಗೂ ಮೋನಿಕಾ ನಡುನಡುವೆ ಖಗೋಳ ರಸಪ್ರಶನೆಗಳನ್ನು, ಪ್ರಯೋಗಗಳನ್ನು ಮಾಡಿ ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮವು ವಿಜ್ಞಾನ ಜಾಗೃತಿ ಮೂಡಿಸುವುದರ ಜೊತೆಗೆ ಆಕಾಶ ವೀಕ್ಷಣೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ತಲುಪಿಸಿತು.

Continue Reading

Hassan

ತಾಂತ್ರಿಕ ಶಿಕ್ಷಣದ ಪದವೀಧರರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಕೆಲಸ ಮಾಡಿ: ಡಿಸಿ ಕೆ. ಎಸ್. ಲತಾ ಕುಮಾರಿ

Published

on

ಹಾಸನ: ಇಂಜಿನಿಯರಿಂಗ್ ಪದವಿ ಪ್ರಮಾಣ ಪತ್ರ ಪಡೆದ ಪದವೀಧರರು ತಮ್ಮ ಮುಂದಿನ ಜೀವನದಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಹಾರನಹಳ್ಳಿ ರಾಮಸ್ವಾಮಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ  2021-2025 ನೇ ಬ್ಯಾಚ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ 15 ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ  ತಂದೆ ತಾಯಿಯಂದಿರಿಗೆ ಅವರು ನೀಡಿದ ಪರಿಶ್ರಮಕ್ಕೆ ಗೌರವ ನೀಡಬೇಕು. ಇಂದು ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಯಶ ಸ್ವಿಯಾಗಿ ನಡೆಸಬೇಕಾಗಿದೆ. ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ನಿಮ್ಮ ಅನೇಕ ವರ್ಷಗಳ ಪರಿಶ್ರಮದಿಂದ ಉತ್ತಮ ಅಧ್ಯಯನ ನಡೆಸಿ ಮಹತ್ವದ ಘಟ್ಟವನ್ನು ತಲುಪಿದ್ದೀರಿ ಈ ಯಶಸ್ವಿ ಹಂತ ನಿಮ್ಮ ಕಾರ್ಯಕ್ಕೆ ಶುಭವಾಗಲಿ ಎಂದರು.

ನೀವುಗಳು ಸಮಾಜದೊಂದಿಗೆ ಸಾಮಾಜಿಕ ಕಾರ್ಯಗಳಿಗೆ ಹೊಂದಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಿ. ನಿರಂತರವಾಗಿ ಕಲಿಯಿರಿ ಅನಗತ್ಯ ವಿಚಾರಗಳಲ್ಲಿ ಕಾಲ ಕಳೆಯಬೇಡಿ, ಮುಖ್ಯವಾದ ವಿಷಯಗಳಿಗೆ ಮಾತ್ರ ಗಮನ ನೀಡಿ. ನೀವು ತಿಳಿದಿರುವಂತೆ ಪ್ರತಿ ವರ್ಷ ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಇಂಜಿನಿಯರಿಂಗ್ ಪದವೀಧರರು, 25 ಲಕ್ಷ ಬಿ.ಎ ಪದವೀಧರರು, 12 ಲಕ್ಷ ವಿಜ್ಞಾನ ಪದವೀಧರರು,12 ಲಕ್ಷ ಬಿ.ಕಾಂ ಪದವೀಧರರು, ಸುಮಾರು ಒಂದು ಕೋಟಿ ವಿವಿಧ ಪದವೀಧರರು ಹೊರಬರುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪದವೀಧರರು ಪದವಿ ಪಡೆಯುತ್ತಿದ್ದು ಶೈಕ್ಷಣಿಕ ಜ್ಞಾನ ಜವಾಬ್ದಾರಿತನ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಕೌಶಲ್ಯಗಳ ಅಸಮತೋಲನದಿಂದ ಅನುಭವದ ಕೊರತೆಯಿಂದ ಪ್ರಾಯೋಗಿಕ ಕೌಶಲ್ಯದ ಅಭಾವದಿಂದಾಗಿ ಸುಮಾರು ಶೇ. 83 ರಷ್ಟು ಇಂಜಿನಿಯರಿಂಗ್ ಪದವೀಧರರು ಪಧವಿ ಪಡೆದ ನಂತರ ಉದ್ಯೋಗ ಅಥವಾ ಇಂಟೆನ್ಶಿಪ್ ಪಡೆಯಲು ವಿಫಲರಾಗತ್ತಿರುವುದು ಇಂದಿನ ಪದವೀಧರರ ದೊಡ್ಡ ಸಮಸ್ಯೆ. ಸಾಮಾನ್ಯ ಜ್ಞಾನ ಮತ್ತು ಪರಿಶ್ರಮದಿಂದ ಉದ್ಯೋಗ ಗಳಿಸಿ ಹಾಗೂ ಹಲವಾರು ವಿವಿಧ ರಂಗದಲ್ಲಿ ತಾವು ಕಾರ್ಯ ಚಟುವಟಿಕೆಗಳನ್ನು ಬೆಳೆಸಿಕೊಳ್ಳಿ ಹಾಗೂ ಸ್ವಯಂ ಉದ್ಯೋಗದ ಕಡೆ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಟಿ.ದೇವೇಗೌಡರವರು  ಮಾತನಾಡಿ, ಇಂದು ಎಲ್ಲರಂಗದಲ್ಲಿಯೂ ಇಂಜಿನಿಯರ್ ಪದವೀಧರರ ಅವಶ್ಯಕತೆ ಇದೆ. ತಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿ ಮಾಡಿಕೊಳ್ಳಿ ಹಾಗೂ ನಿಮ್ಮನ್ನು ಇಂಜಿನಿಯರಿಂಗ್ ಪದವಿ ಮಾಡಿಸಲು ತಂದೆ ತಾಯಿಯಂದಿರು ಪೋಷಕರು ಬಹಳ ಶ್ರಮಪಟ್ಟಿದ್ದಾರೆ. ಅವರಿಗೆ ನೀವು ಹೆಚ್ಚಿನ ರೀತಿ ಸಹಕಾರ ನೀಡಿ ಎಂದರು.

ನೀವು ಪಡೆದಿರುವ ಜ್ಞಾನದಿಂದ ಹಲವಾರು ರೀತಿಯಲ್ಲಿ ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸವನ್ನು ನಿರ್ವಹಿಸಿ ತಾವು ವ್ಯಾಸಂಗ ಮಾಡಿದ ಕಾಲೇಜಿಗೆ ಕೀರ್ತಿ ತರುವಂತಾಗಬೇಕು ಹಾಗೂ ಪೋಷಕರಿಗೆ ಗೌರವ ಉಳಿಯುವಂತ ಕೆಲಸ ಆಗಬೇಕು ಎಂದು ತಿಳಿಸಿದರು ತಾವು ಮಾಡುವ ಕೆಲಸ ಸಮಾಜದ ಒಳಿತಿಗಾಗಿರಬೇಕೆ ಹೊರತು ಮಾರಕವಾಗಬಾರದು , ಉತ್ತಮ ಕೆಲಸವನ್ನು ಮಾಡುವ ಮೂಲಕ ಸತ್ಪ್ರಜೆಗಳಾಗಿ ಬದುಕಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡವಳ್ಳಿ ಜಗದೀಶ್ ಸಂಸ್ಥೆಯ ಖಜಾಂಚಿ ಎಚ್. ಡಿ. ಪಾರ್ಶ್ವನಾಥ್, ಹಾರನಹಳ್ಳಿ ಉನ್ನತ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಬಿ. ಹೇಮಂತ್ ಕುಮಾರ್, ಎ.ವಿ.ಕೆ ಪಿ.ಯು.ಕಾಲೇಜ್ ಉಪಾಧ್ಯಕ್ಷ ನಾಗರಾಜ್ ಜೈನ್, ಮಲ್ನಾಡ್ ಇಂಟರ್ನ್ಯಾಷನಲ್ ಶಾಲೆಯ ಉಪಾಧ್ಯಕ್ಷ ಬಿ. ಆರ್. ರಾಜಶೇಖರ್, ನಿರ್ದೇಶಕ ಶಾಂತಿಗ್ರಾಮ ಶಂಕರ್, ಎಚ್. ಸುರೇಶ್ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಜೆ. ಅಮರೇಂದ್ರ, ಕಾಲೇಜಿನ ನಿರ್ದೇಶಕ ಎಸ್. ಪ್ರದೀಪ್ ಹಾಗೂ ಕಾಲೇಜಿನ ಡೀನ್ ರವರು ಎಲ್ಲಾ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.

2021 -25 ನೇ ಬ್ಯಾಚಿನಲ್ಲಿ ಏಳು ವಿದ್ಯಾರ್ಥಿಗಳು ಗೋಲ್ಡ್ ಮೆಡಲ್ ಪಡೆದರು. 2021 25 ನೇ ಅಂತಿಮ ವರ್ಷದಲ್ಲಿ ಏಳು ವಿದ್ಯಾರ್ಥಿಗಳು ಟಾಪರ್ಸ ಅಗಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಇಂಜಿನಿಯರಿಂಗ್ ಡಿಗ್ರಿ ಕಾನ್ವೋಕೇಷನ್ ಅನ್ನು ಸಿವಿಲ್ ವಿಭಾಗದಿಂದ 115 ವಿದ್ಯಾರ್ಥಿಗಳು,
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಿಂದ 129 ವಿದ್ಯಾರ್ಥಿಗಳು, ಮೆಕಾನಿಕಲ್ ವಿಭಾಗದಿಂದ 147 ವಿದ್ಯಾರ್ಥಿಗಳು, ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ವಿಭಾಗದಿಂದ 124 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 212 ವಿದ್ಯಾರ್ಥಿಗಳು ಇನ್ಸ್ಟ್ರುಮೇಶನ್ ಇಂಜಿನಿಯರಿಂಗ್ ವಿಭಾಗದಿಂದ 49 ವಿದ್ಯಾರ್ಥಿಗಳು, ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದಿಂದ ನಾಲ್ಕು ವಿದ್ಯಾರ್ಥಿಗಳು, ಇಂಡಸ್ಟ್ರಿಯಲ್ ಪ್ರೊಡಕ್ಷನ್ ವಿಭಾಗದಿಂದ ಮೂರು ವಿದ್ಯಾರ್ಥಿಗಳು, ಇನ್ಫ್‌ರ್ಮೇಷನ್ ಸೈನ್ಸ್ ವಿಭಾಗದಿಂದ 134 ವಿದ್ಯಾರ್ಥಿಗಳು, ಒಟ್ಟು 917 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾನ್ವೋಕೇಷನ್ ಪದವಿ ಪ್ರಮಾಣ ಪತ್ರ ಪಡೆದರು. ಎಂ.ಟೆಕ್ ವಿಭಾಗದಿಂದ ಒಟ್ಟು 18 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ.

2021- 25 ರ ಬ್ಯಾಚ್ ನ ಗೋಲ್ಡ್ ಮೆಡಲಿಸ್ಟ್ ಗಳು

1.ಸಿ.ಪಿ.ಪೃಥ್ವಿ,
2.ಹೆಚ್. ಅರ್ಜುನ್,
3.ಬಿ.ಆರ್ ಸೋನು,
4.ಕೆ.ಆರ್ ಚಿಂತನ
5.ಕೆ.ಎಂ. ಶರಣ್ಯ
6.ಎಚ್.ಆರ್. ವಿನಯ್

2021 -25 ನೇ ಸಾಲಿನ ಅಂತಿಮ ವರ್ಷದ ಟಾಪರ್ಸ್ 
1.ಚಿರಂತ್ ಎನ್. ಜೈನ್
2.ಹೆಚ್.ಎಸ್‌.ಪ್ರಕೃತಿ
3.ಬಿ.ಆರ್.ಸೋನು
4.ಕೆ.ಆರ್.ಚಿಂತನ
5.ವಿ.ಎಂ.ಡೆಲಿನ
6.ಎ.ಬಿ.ಪೂಜಾ
7.ಎಚ್.ಆರ್.ವಿನಯ್‌

ಎಂ. ಟಿ.ಇ.ಎಸ್,ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ಸ್ 2025 ಎಚ್. ಯು.ದೀಕ್ಷಿತ್, ಹಾಗೂ ಎ.ಬಿ ಪೂಜಾ ಅವಾರ್ಡ್ ಪಡೆದಿದ್ದಾರೆ.ಎಂಟಿಎಸ್ ಬೆಸ್ಟ್ ಔಟ್ ಗೋಯಿಂಗ್ ಸ್ಪೋರ್ಟ್ಸ್ ಮ್ಯಾನ್ ಅವಾರ್ಡ್ ಅನ್ನು ಸಿ.ಬಿ.ನಂದನ್ ಪಡೆದಿದ್ದಾರೆ. ಒಟ್ಟು 935 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪಧವಿ ಪ್ರಮಾಣ ಪತ್ರ ನಿಡಲಾಯಿತು.

 

Continue Reading

Trending

error: Content is protected !!