Connect with us

Chamarajanagar

ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದಲ್ಲಿ ಕಳೆದ ಮೂರು ತಿಂಗಳಿಂದ ಒಟ್ಟು 27,16,873 ರೂಪಾಯಿಗಳು ಸಂಗ್ರಹ

Published

on

ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದಲ್ಲಿ ಕಳೆದ ಮೂರು ತಿಂಗಳಿಂದ ಒಟ್ಟು 27,16,873 ರೂಪಾಯಿಗಳು ಸಂಗ್ರಹವಾಗಿದೆ. ಜೊತೆಗೆ 40 ಅಮೆರಿಕನ್ ಡಾಲರ್, ವಿದೇಶಿ ಕರೆನ್ಸಿಗಳು ಸಿಕ್ಕಿದೆ .

ಹುಂಡಿ ಎಣಿಕೆ ಕಾರ್ಯ ತಹಶೀಲ್ದಾರ್ ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಮೂರು ತಿಂಗಳಿಂದ ಶಕ್ತಿ ಯೋಜನೆ ಪ್ರಭಾವದಿಂದ ಹೆಚ್ಚಾಗಿ ಮಹಿಳಾ ಪ್ರವಾಸಿಗರು ಮತ್ತು ಭಕ್ತರು ಆಗಮಿಸಿದ್ದರು. ಪ್ರತಿನಿತ್ಯ ಹಾಗೂ ಶನಿವಾರ ಭಾನುವಾರ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಅದರಲ್ಲೂ ಮಹಿಳೆಯರ ಹೆಚ್ಚಾಗಿ ಆಗಮಿಸಿದ್ದರು ಹಾಗಾಗಿ ಹಣದ ಜೊತೆಗೆ ಮೂರು ಚಿಕ್ಕ ಲಕ್ಷ್ಮಿ ಕಾಸು, ಏಳು ಬಟ್ಟು ತಾಳಿ, ಒಂದು ಚಿಕ್ಕ ಉಂಗುರ, ಒಂದು ಚಿಕ್ಕ ಬೆಳ್ಳಿ ಗಂಟೆ, ಒಂದು ಜೊತೆ ಬೆಳ್ಳಿ ಕಾಲುಂಗುರ ಹಾಗೂ ವಿದೇಶಿ ಕರೆನ್ಸಿಗಳು ಸಿಕ್ಕಿದೆ.

ಶಿರಸ್ತೆದಾರ್ ಶಾಂತಿ, ದೇವಾಲಯದ ಇಒ ಮೋಹನ್, ಆಗಮಿಕ ನಾಗರಾಜ್ ಭಟ್ ಅರ್ಚಕರಾದ ರವಿಕುಮಾರ್, ಶೇಷಾದ್ರಿ, ದೇವಾಲಯದ ವ್ಯವಸ್ಥಾಪಕ ರಾಜಣ್ಣ, ದೇವಾಲಯ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಆಹಾರ ಭದ್ರತೆ, ಸುರಕ್ಷತೆ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ: ಡಾ.ಎಚ್. ಕೃಷ್ಣ

Published

on

ಚಾಮರಾಜನಗರ: ಜಿಲ್ಲೆಯಲ್ಲಿ ಆಹಾರ ಭದ್ರತೆ ಹಾಗೂ ಆಹಾರ ಸುರಕ್ಷತಾ ಕಾಯ್ದೆ ನಿಯಮಗಳ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ಭಾರತ ದೇಶದಲ್ಲಿ ಆಹಾರ ಭದ್ರತೆ ಇದೆ. ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯಡಿ ಬಡವರು, ದುರ್ಬಲರು, ಮಹಿಳೆಯರು, ಅಂಗವಿಕಲರು, ವೃದ್ಧರು ಸೇರಿದಂತೆ ಪ್ರತಿಯೊಬ್ಬರಿಗೂ ಸಮರ್ಪಕ ಆಹಾರ ಒದಗಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಆಹಾರ ಯೋಜನೆ, ಕಾರ್ಯಕ್ರಮಗಳ ಪರಿಶೀಲನೆಗಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.

ಆಹಾರ ಭದ್ರತೆಯಷ್ಟೆ ಆಹಾರ ಸುರಕ್ಷತೆಯು ಮಹತ್ವ ಪಡೆದಿದೆ. ಅಂಗನವಾಡಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಸುರಕ್ಷತೆ ಹಾಗೂ ಗುಣಮಟ್ಟದ ಆಹಾರ ಪೂರೈಸುವುದು ಸಂಬAಧಪಟ್ಟ ಇಲಾಖೆಗಳ ಅಧಿಕಾರಿ, ನೌಕರರ ಜವಾಬ್ದಾರಿಯಾಗಿದೆ. ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಗೆ 14 ಇಲಾಖೆಗಳು ಬರಲಿವೆ. ಆಹಾರ ಕಾಯ್ದೆ, ಸುರಕ್ಷತೆಯ ಬಗ್ಗೆ ಜನರಿಗೆ ಅರಿವಿನ ಕೊರತೆ ಇದ್ದು, ಪ್ರತಿಯೊಬ್ಬರಿಗೂ ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಧ್ಯಕ್ಷರು ತಿಳಿಸಿದರು.

ವಿವಿಧ ಜಿಲ್ಲೆಗಳಿಗೆ ಭೇಟಿ ಸಂದರ್ಭದಲ್ಲಿ ಆಹಾರ ಪೂರೈಕೆ ಸಂಬಂಧ ಲೆಕ್ಕ ಪರಿಶೋಧನೆ, ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ದಾಖಲಾಗುವ ದೂರುಗಳು ಹಾಗೂ ಆಹಾರ ಉಗ್ರಾಣಗಳಲ್ಲಿ ಸ್ವಚ್ಚತೆ ಸೇರಿದಂತೆ ಮೂಲಸೌಲಭ್ಯಗಳ ಪರಿಶೀಲನೆ, ಅರ್ಹರಿಗೆ ಪಡಿತರ ಚೀಟಿ ವಿತರಣೆ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಮರ್ಪಕ ವಿತರಣೆ, ಬಯೋಮೆಟ್ರಿಕ್ ನಿರ್ವಹಣೆಯಲ್ಲಿ ಸಾರ್ವಜನಿಕ ದೂರುಗಳನ್ನು ಆಯೋಗ ಪರಿಶೀಲಿಸುತ್ತಿದೆ. ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಮುಂದಾಗುವAತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಉತ್ತಮವಾಗಿರಬೇಕು. ಅದಕ್ಕಾಗಿ ಗುಣಮಟ್ಟದ ಅಕ್ಕಿ, ತರಕಾರಿ, ಕಾಳು, ಮೊಟ್ಟೆಯನ್ನೇ ಖರೀದಿಸಬೇಕು. ಬಿಸಿಯೂಟವನ್ನು ಮೆನು ಪ್ರಕಾರವೇ ನೀಡಬೇಕು. ಈ ಬಗ್ಗೆ ಮಕ್ಕಳಿಂದ ಯಾವುದೇ ದೂರುಗಳು ಬರಬಾರದು. ಬಿಸಿಯೂಟದ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಬೇಕು. ಶಾಲೆ, ವಿದ್ಯಾರ್ಥಿನಿಲಯ, ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ಶುದ್ಧ ಕುಡಿಯುವ ನೀರು, ಸ್ವಚ್ಚತೆ, ಶೌಚಾಲಯ ನಿರ್ವಹಣೆ ಸಮರ್ಪಕವಾಗಿರಬೇಕು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಅಂಗನವಾಡಿ ಮೂಲಕ ಗರ್ಭಿಣಿಯರಿಗೆ, ತಾಯಂದಿರಿಗೆ ಪೌಷ್ಠಿಕ ಆಹಾರವನ್ನು ತಲುಪಿಸಬೇಕು. ಯಾವುದೇ ಕಾರಣಕ್ಕೂ ಪೋಷಣಾ ಹಕ್ಕುಗಳ ಉಲ್ಲಂಘನೆ ಆಗಬಾರದು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ವೃದ್ಧಾಶ್ರಮಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಪ್ರತಿಯೊಬ್ಬರ ಅಹಾರದ ಹಕ್ಕುಗಳಿಗೂ ಕಾನೂನಿನಾತ್ಮಕ ರಕ್ಷಣೆ ಇದೆ. ಬಡವರಿಗೆ ಹಾಗೂ ದುರ್ಬಲ ವರ್ಗದವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಚಾಮರಾಜನಗರ ಜಿಲ್ಲೆಯಲ್ಲಿ ಆಹಾರ ಉಗ್ರಾಣದ ಅವಶ್ಯವಿದೆ. 90 ಸಾವಿರ ಕ್ವಿಂಟಾಲ್ ದಾಸ್ತಾನು ಇಡಲು ಸುಸಜ್ಜಿತ ಉಗ್ರಾಣ ತೆರೆಯಲು ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ಅವರು ಹೇಳಿದರು.

ಆಹಾರ ಮತ್ತು ನಾಗರಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಡಾ. ವಸುಂಧರಾ ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾ ಅಧಿಕಾರಿ ಮಂಜುಳಾ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Continue Reading

Chamarajanagar

ಜಿಲ್ಲಾಧ್ಯಕ್ಷ ನವೀನ್ ಮೌರ್ಯಗೆ ಸನ್ಮಾನ

Published

on

ಚಾಮರಾಜನಗರ: ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಮಂಗಳವಾರ ನಡೆದ ಗ್ರಾಮ ದೇವತೆ ಹಬ್ಬಕ್ಕೆ ಆಗಮಿಸಿದ ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ನವೀನ ಮೌರ್ಯ ಅವರಿಗೆ ಮುತ್ತಿಗೆ ಅಂಬೇಡ್ಕರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾದ ಸಂಘಟನಾ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ವಕೀಲರಾದ ಸಂಪತ್ ಕುಮಾರ್, ನಾಗಸ್ವಾಮಿ ಮುಖಂಡ ಶ್ರೀನಿವಾಸ್ ಪಾಳ್ಯ ಮುತ್ತಿಗೆ ದೊರೆಸ್ವಾಮಿ ಹಾಗೂ ಅಂಬೇಡ್ಕರ್ ಸಂಘದ ಸದಸ್ಯರು ಹಾಜರಿದ್ದರು.

Continue Reading

Chamarajanagar

ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು

Published

on

ಕೊಳ್ಳೇಗಾಲ:  ಇಲ್ಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಮೀನಾ ಲಗ್ನದಲ್ಲಿ ನಡೆದ ರಥೋತ್ಸವಕ್ಕೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.

ಬಳಿಕ ನೆರೆದಿದ್ದ ಭಕ್ತರು ರಥ ಹೇಳಿಯುವ ಮೂಲಕ ರಥೋತ್ಸವಕ್ಕೆ ಮೆರಗು ನೀಡಿದರು. ಭಕ್ತರು ಹಣ್ಣು ಗಳನ್ನು ತೆರಿಗೆ ಎಸೆಯುವ ಮುಖಾಂತರ ಹರಕೆ ತೀರಿಸಿದರು. ರಥವನ್ನು ಮಠದ ಬೀದಿ ಯಿಂದ ಕಾವೇರಿ ಪ್ರಮುಖ  ರಸ್ತೆಯ ಮೂಲಕ ಒಂದು ಸುತ್ತು ತೇರು ಎಳೆದು ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನ ದ ಮುಂಭಾಗ ಮುಂಭಾಗಕ್ಕೆ ತಲುಪಿದ ನಂತರ ರಥೋತ್ಸವಕ್ಕೆ ತೆರೆ ಬೀಳಲಿದೆ. ರಸ್ತೆಯ ಉದ್ದಗಲಕ್ಕೂ ಭಕ್ತರಿಗೆ ತೇರು ಎಳೆಯುವರಿಗೆ ಮಜ್ಜಿಗೆ ಪಾನಕ ವಿತರಿಸಲಾಯಿತು. ಸಹಸ್ರಾರು ಭಕ್ತರು ಬಾಗಿ ಯಾಗಿ ರಥೋತ್ಸವಕ್ಕೆ ಮೆರಗು ಹೆಚ್ಚಿಸಿದರು.

ಇಂದಿನ ಪೂಜಾ ಕಾರ್ಯವನ್ನು ದೇವಸ್ಥಾನದ ಪ್ರಧಾನ ಅರ್ಚಕರು ಶೇಷಾದ್ರಿ ಭಟ್ಟರು, ಸುದರ್ಶನ್ ನಡೆಸಿದರು. ವೀರಾಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ಟಿ.ವಿ.ಎಸ್.ರಾಘವನ್, ನಂದಕುಮಾರ್ ಹಾಗೂ ಇತರರು ಇದ್ದರು.

ಈ ಸಂಧರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರು ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಅಪರ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ತಹಶೀಲ್ದಾರ್ ಬಸವರಾಜು, ನಗರಸಭೆ ಪೌರಯುಕ್ತ ರುದ್ರಮ್ಮ ಶರಣಯ್ಯ, ಮಾಜಿ ಸದಸ್ಯರು, ಮುಖಂಡರು ಕಂದಹಳ್ಳಿ ನಂಜುಂಡಸ್ವಾಮಿ, ಕೊಪ್ಪಾಳಿ ಮಹದೇವ ನಾಯಕ ಹಾಗೂ ಇತರರು ಇದ್ದರು.

ರಥೋತ್ಸವದಲ್ಲಿ ಡಿವೈಎಸ್‌ಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

Continue Reading

Trending

error: Content is protected !!