Mysore
ಪ್ರವಾಸೋದ್ಯಮದ ಅಭಿವೃದ್ಧಿಗೆ ಹೋಟೆಲ್ ಉದ್ಯಮದ ಆತಿಥ್ಯ ಬಹಳ ಮುಖ್ಯ – ಮುಖ್ಯಮಂತ್ರಿ ಸಿದ್ದರಾಮಯ್ಯ

ಅತಿಥಿಗಳ ಸೇವೆಯೇ ನಿಜವಾದ ಸಮಾಜ ಸೇವೆ
ಪ್ರವಾಸೋದ್ಯಮದ ಅಭಿವೃದ್ಧಿಗೆ ಹೋಟೆಲ್ ಉದ್ಯಮದ ಆತಿಥ್ಯ ಬಹಳ ಮುಖ್ಯ
ಮೈಸೂರಿನ ಅಭಿವೃದ್ಧಿಗೆ ಸರ್ಕಾರ ಬದ್ಧ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು – ಡಿಸೆಂಬರ್ 23: ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬದ್ಧವಾಗಿದೆ. ಮೈಸೂರಿನ ಅಭಿವೃದ್ಧಿ, ಪ್ರವಾಸೋದ್ಯಮ, ಸಾಂಸ್ಕೃತಿಕ ನಗರವಾಗಿ ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಪ್ರಾರಂಭವಾದಾಗ ಉದ್ಘಾಟಿಸಿ, ಇಂದು ರಜತ ಮಹೋತ್ಸವವನ್ನು ನಾನೇ ಉದ್ಘಾಟಿಸಿರುವುದು ಸಂತೋಷ ತಂದಿದೆ. ಈ ಸಂಘ ಶತಮಾನೋತ್ಸವವನ್ನೂ ಆಚರಿಸಲಿ ಎಂದು ಶುಭ ಹಾರೈಸಿದ ಮುಖ್ಯಮಂತ್ರಿಗಳು ಹೋಟೆಲ್ ನವರಿಗೂ ನನಗೂ ಅವಿನಾಭಾವ ಸಂಬಂಧವಿದೆ. ನಾನು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಊಟಕ್ಕಾಗಿ ಹೋಟೆಲ್ ನ್ನೇ ನೆಚ್ಚಿಕೊಂಡಿದ್ದೆ. ನಾನ್ ವೆಜ್ ಊಟ ಹೆಚ್ಚು ಪ್ರಿಯವಾಗಿದ್ದು, ಅಂತಹ ಹೋಟೆಲ್ ಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದುದ್ದನ್ನು ಸ್ಮರಿಸಿಕೊಂಡರು.
ಅತಿಥಿ ದೇವೋ ಭವ :
ಮೈಸೂರು ಪ್ರವಾಸೋದ್ಯಮದ ಕೇಂದ್ರ. ಅತಿಥಿ ದೇವೋ ಭವ ಎಂಬ ಭಾರತೀಯ ಸಂಸ್ಕೃತಿಯಂತೆ ಅತಿಥಿಗಳನ್ನು ದೇವರಂತೆ ಕಂಡು ಆತಿಥ್ಯ ನೀಡಬೇಕು. ತಲೆಮಾರುಗಳಿಂದ ಹೋಟೆಲ್ ಉದ್ಯಮವನ್ನು ಹಲವು ದಶಕಗಳ ನಡೆಸಿಕೊಂಡು ಬಂದ ಸಾಧಕರಿದ್ದಾರೆ. ಅತಿಥಿಗಳ ಸೇವೆಯೇ ನಿಜವಾದ ಸಮಾಜ ಸೇವೆ. ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಲು ಹಾಗೂ ಜನರ ಕೈಗೆ ದುಡ್ಡನ್ನು ನೀಡುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಪ್ರವಾಸಿಗರು ಹೆಚ್ಚಾದಾಗ ಅಲ್ಲಿನ ಹೋಟೆಲ್ ಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ರಾಜ್ಯದ ಜಿಡಿಪಿ ಅಭಿವೃದ್ಧಿಯಾಗಲು ಸಹಕಾರಿ ಎಂದರು.
ಜನರ ಕೈಯಲ್ಲಿ ದುಡ್ಡಿದ್ದರೆ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ:
ಜನರ ಕೈಯಲ್ಲಿ ದುಡ್ಡು ಇಲ್ಲದಿದ್ದರೆ ಜೀವನ ದುಸ್ತರವಾಗುತ್ತದೆ. ಆದ್ದರಿಂದ ಜನರ ಕೈಗೆ ದುಡ್ಡು ನೀಡಿದಾಗ, ಆರ್ಥಿಕ ಚಟುವಟಿಕೆ ವೃದ್ಧಿಯಾಗುತ್ತದೆ. 1.16 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ತಲಾ 2000 ರೂ.ಗಳನ್ನು ನೀಡಲಾಗುತ್ತಿದೆ. ಮೈಸೂರನ್ನು ಪ್ರವಾಸಿ ಕೇಂದ್ರವಾಗಿಸಲು ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಮೈಸೂರಿನಲ್ಲಿ ಫಿಲ್ಮ ಸಿಟಿ ಸ್ಥಾಪಿಸಿ ಬಜೆಟ್ ನಲ್ಲಿ ಘೋಷಿಸಿದಂತೆ ಸ್ಥಾಪಿಸಲಾಗುವುದು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನ ಅಭಿವೃದ್ಧಿಯನ್ನು ಕೈಗೊಳ್ಳಲಾಗಿತ್ತು. ಈಗ ಪುನ: ನಮ್ಮ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
Mysore
ಜನತಾ ದರ್ಶನದಲ್ಲಿ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ್ ನಂಜನಗೂಡು ಕ್ಷೇತ್ರದಲ್ಲಿ ಇಂದು ತಮ್ಮ ಕಚೇರಿಯ ಆವರಣದಲ್ಲಿ ಸಾರ್ವಜನಿಕರ ಕುಂದು -ಕೊರತೆಗಳಯ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ಜನತಾ ದರ್ಶನದಲ್ಲಿ – ನಂಜನಗೂಡು ತಾಲ್ಲೂಕಿನಾದ್ಯಂತ ಆಗಮಿಸಿದ ಸಾವಿರಾರು ಜನಸಾಮಾನ್ಯರು ಆಗಮಿಸಿದರು.
ನಂಜನಗೂಡು ತಾಲ್ಲೂಕು ಪಂಚಾಯತಿ ಕಾರ್ಯಾಲಯ ಶಾಸಕರ ಕಚೇರಿಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಕೇಳಿ,ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಆಗುವಂತಹ ಕೆಲಸಗಳನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಕೆಲವು ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ಚರ್ಚಿಸಿ ನಿಮ್ಮ ಕೆಲಸಗಳನ್ನು ಶೀಘ್ರದಲ್ಲೇ ಬಗೆಹರಿಸಿ ಕೊಡುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಧಿಕಾರಿ ಜೆರಾಲ್ಡ್ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ತಾಲೂಕು ಕಚೇರಿ ಶಿರಸ್ತೇದರು ರಾಜು , ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.
Mysore
ಜಾತಿಗಣತಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯಗೆ ಏನು ಗೊತ್ತು ?

ಜಾತಿಗಣತಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯಗೆ ಏನು ಗೊತ್ತು ?
ಅವರು ಇನ್ನೂ ಇದರ ಬಗ್ಗೆ ತಿಳಿದುಕೊಳ್ಳಬೇಕು
ಸೋಷಿಯೋ ಎಕನಾಮಿಕ್ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ
ಲಿಂಗಾಯತರು ವಿರೋಧ ಮಾಡಿದರು
ಹಾಗಾಗಿ ಮತ್ತೊಮ್ಮೆ ಜಾತಿಗಣತಿ ಮಾಡುತ್ತೇವೆ ಅಂತಾರೆ
39 ಜನ ಶಾಸಕರು ಲಿಂಗಾಯತರು ಇದ್ದಾರೆ
ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡ್ತಾರಾ ?
ವಿರೋಧ ಇದ್ದರೆ ಕುರ್ಚಿ ಬಿಟ್ಟು ಕೊಡಲಿ
ಯತೀಂದ್ರ ತಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನೋ ಹೇಳುತ್ತಿದ್ದಾರೆ
ನಿಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನೋ ಹೇಳಬೇಡಿ
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ಕೇಂದ್ರ ಸರ್ಕಾರ ರಾಜಕೀಯವಾಗಿ ಬಲ ತೋರಿಸಲು ಈ ಸರ್ವೇ ಮಾಡುತ್ತಿಲ್ಲ
ಜನರ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿಯಲು ಸರ್ವೇ ಮಾಡುತ್ತಿದೆ
ನಮ್ಮ ಸರ್ವೇ ಆಗುತ್ತದೆ ನೀವು ಸುಮ್ಮನೆ ಇರಿ
ನಿಮ್ಮ ಸರ್ವೇ ನಮಗೆ ಅಗತ್ಯವಿಲ್ಲ
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ಕುರ್ಚಿ ಉಳಿಸಿಕೊಳ್ಳಲು ಪ್ರತಿದಿನ ಸಿದ್ದರಾಮಯ್ಯ ಜನರನ್ನು ಡೈವರ್ಟ್ ಮಾಡುತ್ತಿದ್ದಾರೆ
ಒಬ್ಬರು ಕುರ್ಚಿ ಉಳಿಸಿಕೊಳ್ಳಲು ನೋಡುತ್ತಿದ್ದಾರೆ
ಇನ್ನೊಬ್ಬರು ಕುರ್ಚಿ ಎಳೆಯುತ್ತಿದ್ದಾರೆ
ಇಬ್ಬರ ಕುರ್ಚಿ ಗಲಾಟೆಯಲ್ಲಿ ನಮಗೇನಾದರೂ ಲಾಭ ಆಗುತ್ತಾ ಅಂತ ಇನ್ನೊಂದು ಸ್ವಲ್ಪ ಜನ ಕಾಯುತ್ತಿದ್ದಾರೆ
ಸಿದ್ದರಾಮಯ್ಯ ಮೈಸೂರಿಗೆ ಏನೂ ಅಭಿವೃದ್ದಿ ಕೆಲಸ ಮಾಡಲಿಲ್ಲ
ಸಿದ್ದರಾಮಯ್ಯ ಬದಲಾಗುತ್ತಾರಾ ಅನ್ನೋದನ್ನಾ ಡಿ ಕೆ ಶಿವಕುಮಾರ್ ಕೇಳಿ
ಇದರಲ್ಲಿ ತಂತ್ರ ಮಂತ್ರ ಏನು ಮಾಡಿದ್ದಾರೋ ಗೊತ್ತಿಲ್ಲ
ನವೆಂಬರ್ ನಲ್ಲಿ ಬದಲಾವಣೆ ಅಗತ್ತೊ ಇಲ್ಲವೋ ಗೊತ್ತಿಲ್ಲ
ಆದರೆ ಇನ್ನೂ 3 ವರ್ಷ ಇವರ ಕುರ್ಚಿ ಕಿತ್ತಾಟದ ಅಸಹ್ಯ ನಡೆಯುತ್ತಲೆ ಇರುತ್ತದೆ
ರಾಜ್ಯದ ಜನ ಅಂತೂ ಅವರಿಗೆ 136 ಸೀಟು ಕೊಟ್ಟಿದ್ದಾರೆ
ಹಾಗಾಗಿ ಇನ್ನು 3 ವರ್ಷ ಇವರ ಕಿತ್ತಾಟ ನೋಡಬೇಕು
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ರಾಜ್ಯದಲ್ಲಿ ಮರು ಜಾತಿಗಣತಿ ವಿಚಾರ
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ಸಿದ್ದರಾಮಯ್ಯ 150 ಕೋಟಿ ರೂಪಾಯಿ ವ್ಯಯ ಮಾಡಿ ಕಾಟಾಚಾರಕ್ಕೆ ಈ ಗಣತಿ ಮಾಡಿದ್ದರು
ಇದನ್ನು ಬಿಜೆಪಿ ಜೆಡಿಎಸ್ ವಿರೋಧ ಮಾಡಿತು
ಇದು ಅವೈಜ್ಞಾನಿಕ ಅಂತ ಎಲ್ಲಾರಿಗೂ ಗೊತ್ತಿತ್ತು
ಈಗ ರಾಹುಲ್ ಗಾಂಧಿ ಭೇಟಿ ಮಾಡಿದ ಬಳಿಕ ಮತ್ತೊಂದು ಬಾರಿ ಸಮೀಕ್ಷೆ ಮಾಡುತ್ತೇವೆ ಅಂತ ಹೇಳಿದ್ದಾರೆ
ಇದರಿಂದ 150 ಕೋಟಿ ಹಣ ವ್ಯರ್ಥ
ಈಗಾಗಲೇ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೇವೆ ಅಂತ ಹೇಳಿದೆ
ಹೀಗಿದ್ದಾಗ ಮತ್ತೊಂದು ಬಾರಿ ನಿಮ್ಮ ಗಣತಿ ಮಾಡುವುದು ಬೇಡ
ಇದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಮಾಡುತ್ತಿರುವ ತಂತ್ರ ಅಷ್ಟೇ
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರ ವಿರೋಧಕ್ಕೆ ಮರು ಜಾತಿಗಣತಿ ಎಂಬ ವಿಚಾರ.
ಹಳೆ ಜಾತಿಗಣತಿ ಸರ್ವೇಯಿಂದ ನೂರಾರು ಕೋಟಿ ಹಣ ಪೋಲಾಗಿದೆ
ಜನರನ್ನು ಡೈವರ್ಟ್ ಮಾಡಲು ಸಿಎಂ ಹೊರಟಿದ್ದಾರೆ
ಈ ಹಿಂದೆಯೇ ಲಿಂಗಾಯತ ಒಕ್ಕಲಿಗರು ಗಣತಿಗೆ ಒಪ್ಪಿರಲಿಲ್ಲ
10 ವರ್ಷ ಹಳೆಯ ಗಣತಿ ಇದು ಅಂಕಿ ಅಂಶಗಳು ಸರಿಯಿಲ್ಲ ಅಂತ ಹೇಳಿದ್ದೆವು
ಆದರೆ ನಾವು ಇದೇ ಜಾತಿಗಣತಿ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದರು
ಈಗ ಹೈ ಕಮಾಂಡ್ ಹೇಳಿದೆ ಅಂತ ಮತ್ತೊಮ್ಮೆ ಗಣತಿ ಮಾಡಲು ಹೊರಟಿದ್ದಾರೆ
ಇದಕ್ಕೆ ಹಣ ಎಲ್ಲಿಂದ ತರುತ್ತಾರೆ ?
ಮ್ಯಾನ್ ಪವರ್ ಎಲ್ಲಿಂದ ಮಾಡುತ್ತಾರೆ ?
ರಾಜ್ಯದ ಜನರಲ್ಲಿ ಮೂಡಿಸಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ
ಮೈಸೂರಿನಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಹೇಳಿಕೆ
Mysore
ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ಸಹಸ್ರ ಚಂಡೀಯಾಗ ಸಂಪನ್ನ

ಮೈಸೂರು: ಮೈಸೂರಿನ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜೂನ್ 6 ರಿಂದ ಹಮ್ಮಿಕೊಂಡಿದ್ದ ವನ ದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ಮತ್ತು ಸಹಸ್ರ ಚಂಡೀಯಾಗ ಇಂದು ಸಂಪನ್ನಗೊಂಡಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಸನಾತನ ವೈದಿಕ ವಿಧಿಗಳು ಮತ್ತು ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಜೂನ್ 6 ರಿಂದ ಸಹಸ್ರ ಚಂಡೀ ಯಾಗವನ್ನು ವಿಶ್ವ ರಕ್ಷಣೆ, ಸಮೃದ್ಧಿ ಹಾಗೂ ಸಾಮರಸ್ಯಕ್ಕಾಗಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಗಣಪತಿ ಶ್ರೀಗಳು ಪ್ರಾರಂಭಿಸಿದ್ದರು.
ಇದು ವಿಶ್ವದಲ್ಲೇ ಮೊಟ್ಟ ಮೊದಲ ಮಹಾ ಯಾಗವೆಂಬುದು ವಿಶೇಷ. ಇತ್ತೀಚೆಗೆ ನಡೆದ ಅವಘಡಗಳು,ಯುದ್ದಗಳು,ಸಾವು, ನೋವುತಿಳಿದು ಗಣಪತಿ ಶ್ರೀ ಗಳು ಬಹಳ ಬೇಸರಗೊಂಡಿದ್ದರು.
ಹಾಗಾಗಿ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ,ಲೋಕ ಕಲ್ಯಾರ್ಥವಾಗಿ ಈ ಮಹಾ ಯಾಗವನ್ನು ಜೂನ್ 6 ರಿಂದ ಪ್ರಾರಂಭಿಸಿ ಜೂನ್ 15 ಅಂದರೆ ಇಂದಿನವರೆಗೆ ಎಲ್ಲೂ ಯಾವುದೇ ಲೋಪವಾಗದಂತೆ ಸಂಪನ್ನಗೊಳಿಸಿದ್ದಾರೆ.
ಗಣಪತಿ ಶ್ರೀಗಳಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಬೆನ್ನೆಲುಬಾಗಿ ನಿಂತು ಎಲ್ಲಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಪ್ರಕೃತಿ ವಿಕೋಪ, ಪರಿಸರ ಅಸಮತೋಲನ ತಡೆಯುವ ದೃಷ್ಟಿ ಇಟ್ಟುಕೊಂಡು ಶ್ರೀಗಳು ವೃಕ್ಷ ಶಾಂತಿ ಮಹಾಯಜ್ಞವನ್ನು ಹಮ್ಮಿಕೊಂಡರು.
ಪರಿಸರ ಸಮತೋಲನ ಸೂಚಕವಾಗಿಯೇ ಈ ವನದುರ್ಗ ವೃಕ್ಷ ಮಹಾಯಜ್ಞವನ್ನು ಕೈಗೊಂಡ ಗಣಪತಿ ಶ್ರೀಗಳು 8000 ಪವಿತ್ರ ಬೋನ್ಸಾಯ್ ವೃಕ್ಷ ಗಳನ್ನು ಪೂಜಿಸಿ ಸಮರ್ಪಿಸಿದ್ದಾರೆ.
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳನ್ನು ಹೊಂದಿರುವ ಖ್ಯಾತಿ ಕೂಡಾ ಅವಧೂತ ದತ್ತ ಪೀಠಕ್ಕೆ ಸಂದಿದೆ.ಹಾಗಾಗಿ ಗಿನ್ನೀಸ್ ವರ್ಡ್ ರೆಕಾರ್ಡ್ ಕೂಡಾ ಅವಧೂತ ದತ್ತಪೀಠಕ್ಕೆ ಸಂದಿದೆ.
ಇಂದು ಮುಂಜಾನೆ ಎಂದರೆ ಗಣಪತಿ ಶ್ರೀಗಳು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮಿಗಳು ಸಹಸ್ರ ಚಂಡೀಯಾಗದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಶ್ರಮದ ಆವರಣದಲ್ಲಿ ಈ ಮಹಾ ಯಾಗಕ್ಕಾಗಿ ನಿರ್ಮಿಸಿದ್ದ 11 ಹೋಮ ಕುಂಡಗಳ ಬಳಿಯೂ ಪೂರ್ಣಹುತಿಯನ್ನು ನೆರವೇರಿಸಿದರು. ತದನಂತರ ಪ್ರಧಾನ ಹೋಮಕುಂಡದಲ್ಲಿ ಅತಿ ಪ್ರಮುಖವಾದ ಪೂರ್ಣಾಹುತಿಯನ್ನು ನೆರವೇರಿಸಿ ಯಾಗವನ್ನು ಸಂಪನ್ನಗೊಳಿಸಿದರು.
ನಂತರ ಸಪ್ತ ಋಷಿ ಸರೋವರದಲ್ಲಿ ದೇವಿಯನ್ನು ಉತ್ಸವದಲ್ಲಿ ಕೊಂಡೊಯ್ದು ಅವಭೃತ ಸ್ನಾನ ನೆರವೇರಿಸುವ ಮೂಲಕ ಇಡೀ ಯಾಗವನ್ನು ಸಂಪನ್ನಗೊಳಿಸಲಾಯಿತು.
ಇದೇ ವೇಳೆ ನೂರಾರು ಭಕ್ತರು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಪಠಿಸಿದರು. ಆಶ್ರಮದ ಆವರಣದಲ್ಲಿ ಸಂಜೆ ವನದುರ್ಗ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ದೇಶಾದ್ಯಂತ ಹಲವಾರು ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೃಕ್ಷ ಶಾಂತಿ ಮಹಾ ಯಜ್ಞ ಮತ್ತು ವಿಶ್ವದ ಮೊಟ್ಟಮೊದಲ ಸಹಸ್ರ ಚಂಡೀಯಾಗವನ್ನು ಕಣ್ತುಂಬಿಕೊಂಡು ಪುನೀತರಾದರು.
-
Hassan12 hours ago
ಹಾಸನದ ಖಾಸಗಿ ಶಾಲಾ-ಕಾಲೇಜಿಗೆ ಬಾಂಬ್ ಹಾಕುವ ಬೆದರಿಕೆ
-
Kodagu10 hours ago
ಪಂಚಾಯತಿಯಲ್ಲಿ ಶೇ.25 ನಿಧಿಯಲ್ಲಿ ಹೊಲಿಗೆ ಯಂತ್ರ ವಿತರಣೆ.
-
Mandya6 hours ago
ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು
-
Chikmagalur13 hours ago
ಕೊಪ್ಪ ತಾಲ್ಲೂಕಿನಲ್ಲಿ ಬೃಹತ್ ಗಾತ್ರದ ಮರ ಉರುಳಿ ರಸ್ತೆ ಬಂದ್
-
Kodagu13 hours ago
ಕೊಡವರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ
-
Chikmagalur11 hours ago
ಮರ ಬಿದ್ದು ಬೈಕ್ ಸವಾರ ದು*ರ್ಮರಣ
-
Kodagu13 hours ago
ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೊಡವ ಸಮಾಜ
-
Kodagu13 hours ago
ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ