Connect with us

Chamarajanagar

ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಅಭಿ ವಿನ್ಯಾಸ ಕಾರ್ಯಕ್ರಮ

Published

on

ಯಳಂದೂರು ಪಟ್ಟಣದ ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಲೇಜಿನ ಐಕ್ಯೂ ಏ ಸಿ ವಿಭಾಗಗಳ ಸಂಯುಕ್ತ ವಿಷಯದಲ್ಲಿ ದಿನಾಂಕ ಆರು ಹತ್ತು 2023 ರಂದು ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಅಭಿ ವಿನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಿಜಯ ಪ್ರಾಂಶುಪಾಲರು ವಹಿಸಿದ್ದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಇತಿಹಾಸದ ಉಪನ್ಯಾಸಕರಾದ ಡಾಕ್ಟರ್ ಕೆ ಎಮ್ ಮಹದೇವಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಕುರಿತು ಭವಿಷ್ಯತ್ತಿನಲ್ಲಿ ಓದಿನ ಮಹತ್ವ ಎಷ್ಟು ಮುಖ್ಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ಬದುಕನ್ನು ಕಟ್ಟಿಕೊಳ್ಳಲು ಎಷ್ಟು ಅಡೆತಡೆಗಳಿವೆ ಅದಕ್ಕೆಲ್ಲ ಅಸ್ತ್ರವಾಗಿರುವ ಶಿಕ್ಷಣವನ್ನು ಅತ್ಯಂತ ಜನದಿಂದ ಅಭ್ಯಾಸ ಮಾಡುವಂತೆ ತಿಳಿಸಿದರು ಸಾಕಷ್ಟು ಸಾಧಕರನ್ನು ಪರಿಚಯಿಸುತ್ತಲೇ ಮಾತನಾಡಿದ ಶ್ರೀಯುತರು ಅಪಾರವಾದ ಸಾಧನೆ ಆರಂಭವಾಗುವುದು ಅತ್ಯಂತ ಸಣ್ಣ ಪ್ರಯತ್ನದಿಂದಲೇ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಪದವಿಯನ್ನು ಪೂರೈಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಆಯ್ಕೆಯಾಗುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕೆಂದು ತಿಳಿಹೇಳಿದರು ಅಗ್ನಿಪತ್ ಯೋಜನೆ ಬಗ್ಗೆ ಮಾತನಾಡಿದ ಶ್ರೀಯುತರು ಅದರ ಸವಿವರಣೆಯನ್ನು ನೀಡಿದರು ಅದರ ಜೊತೆಗೆ ನಮ್ಮ ಪರಂಪರೆ ನಮ್ಮ ನಾಡು ನುಡಿ ಮತ್ತು ಚರಿತ್ರೆಯ ಪ್ರಜ್ಞೆ ಪ್ರತಿಯೊಬ್ಬ ಮನುಷ್ಯನಿಗ್ ಎಷ್ಟು ಅವಶ್ಯಕತೆ ಎಂದು ತಿಳಿಸುತ್ತಲೇ ಎಳಂದೂರಿನ ಸ್ಥಳೀಯ ಇತಿಹಾಸವನ್ನು ಕೆದಕುತ್ತ ಮೈಸೂರು ಸಾಮ್ರಾಜ್ಯದ ನಿರ್ಮಾಣದಲ್ಲಿ ದಿವಾನ್ ಪೂರ್ಣಯ್ಯನವರ ಪಾತ್ರ ಎಷ್ಟು ಮಹತ್ವ ಎಂಬುದನ್ನು ಅವರು ಮನಗಾಣಿಸಿದರು ಇದಲ್ಲದೆ ಐಎಎಸ್, ಕೆ ಎಎಸ್ ಹಾಗೂಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆಯಾಗುವ ವಿದ್ಯಾರ್ಥಿಗಳ ಬದುಕು ಅತ್ಯಂತ ಯಶಸ್ಸಿನಿಂದ ಕೂಡಿರುತ್ತದೆ ಎಂಬುದನ್ನು ತಿಳಿಸಿ ಸಮಯ ಪ್ರಜ್ಞೆಗೆ ಹೆಚ್ಚಿನ ಆದ್ಯತೆ ಕೊಟ್ಟು ವಿದ್ಯಾರ್ಥಿಗಳಾದವರು ಈ ಅವಧಿಯಲ್ಲಿ ಕಲಿಕೆಯನ್ನು ಸಮರ್ಪಕಗೊಳಿಸುವಂತೆ ತಪಸ್ವಿಗಳ ಆಗಬೇಕೆಂಬ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯ ಅವರು ಮಾತನಾಡಿ ಹಿಂದಿನ ದಿನಗಳಲ್ಲಿ ಬದುಕು ಚೆನ್ನಾಗಿತ್ತು ಆದರೆ ಇಂದಿನ ದಿನಗಳಲ್ಲಿ ಬದುಕಲ್ಲಿ ಭರವಸೆಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ ಅವರ ಆಕರ್ಷಣೆಗಳು ಬೇರೆ ಬೇರೆಯಾಗಿವೆ. ಮೊಬೈಲ್ ಜಗತ್ತು ಅವರನ್ನು ತೀವ್ರವಾಗಿ ಕಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ಪದವಿ ಅಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಮೂರು ವರ್ಷಗಳ ಕಾಲ ಅಭ್ಯಾಸ ಮಾಡಿದ್ದಲ್ಲಿ ಅವರ ಬದುಕು ಮತ್ತೊರವರಿಗೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ ಎಂಬ ನುಡಿಯನ್ನು ನುಡಿಯುತ್ತಾ ಸ್ಪರ್ಧಾತ್ಮಕ ಜಗತ್ತಿಗೆ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶುಭನುಡಿದರು.

ಕೋರ್ಸ್

ಇಂದಿನ ವಿದ್ಯಾರ್ಥಿಗಳು ಮೊಬೈಲ್ಗಳಿಗೆ ಬೀಳದೆ ಅಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕು ಜ್ಞಾನ ವೇಲ ದೀಪದ ಬೆಳಕನ್ನು ನಿಮ್ಮ ಭವಿಷ್ಯಕ್ಕೆ ಮಾರ್ಗ ವನ್ನಾಗಿ ಮಾಡಿಕೊಳ್ಳಬೇಕು ದೂರ ದೃಷ್ಟಿಯಿಂದ ಆಲೋಚಿಸಿ ವಿದ್ಯಾಭ್ಯಾಸ ಮಾಡಬೇಕು. ಪದವಿ ಶಿಕ್ಷಣ ವೆಂಬುದು ಬರೀ ಕಲಿಕೆಯಾಗಿದೆ ಜೀವನ ಮೌಲ್ಯವನ್ನು ಬಿತ್ತುವ ಹೆಮ್ಮರ ವಾಗಬೇಕು. ಯಾವುದೇ ಕ್ಷೇತ್ರವಾಗಲಿ ಆಸಕ್ತಿಯಿಂದ ಶ್ರದ್ಧೆಯಿಂದ ಕೇಳಿ ಕಲಿಯಬೇಕು.

ಎಲ್ ಮಹೇಶ್ ಸರ್ಕಾರಿ ಪದವಿ ಪೂರ್ವ ಕಾಲೇಜು..

ಕಾರ್ಯಕ್ರಮದಲ್ಲಿ ಐಕೆಎಸ್ ಸಂಚಾಲಕರಾದ ವಿಕಾಸ್. ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಹಾಂತೇಶ್. ರಾಜ್ಯಶಾಸ್ತ್ರ ವಿಭಾಗದ ಶ್ವೇತಾ. ವಾಣಿಜ್ಯ ಶಾಸ್ತ್ರ ವಿಭಾಗದ ದಾಕ್ಷಾಯಿಣಿ. ಹಾಗೂ ಡಾ. ಲಿಖಿತಾ ಎಸ್ ಅನುರಾಧ. ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪದ್ಮ. ಎಚ್ಎಸ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗಿರಿಜಾ. ಹಾಗೂ ಎಲ್ಲಾ ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು ಮತ್ತು ವಿದ್ಯಾರ್ಥಿಗಳು ಹಾಜರಾಗಿದ್ದರು

Continue Reading
Click to comment

Leave a Reply

Your email address will not be published. Required fields are marked *

Chamarajanagar

ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

Published

on

ಯಳಂದೂರು ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ವಿಜಯ ರವರು ತಿಳಿಸಿದರು

2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಶಿಕ್ಷಣ ನೀತಿಗೆ ಎಸ್ ಇ ಪಿ ಅನುಗುಣವಾಗಿ ಮೂರು ವರ್ಷಗಳ ಬಿ.ಎ ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳು ಹೆಚ್ ಇ ಕೆ , ಹೆಚ್ ಪಿ ಕೆ, ಪಿ ಇ ಎಸ್, ಹೆಚ್ ಎಸ್ ಕೆ, ಈ ಕೋರ್ಸುಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದು

Continue Reading

Chamarajanagar

ಸಾರ್ವಜನಿಕರು ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ, ಶಕ್ತಿ, ಸುಕನ್ಯಾ ಸಮೃದ್ಧಿ ಯೋಜನೆ

Published

on

ಸಾರ್ವಜನಿಕರು ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ, ಶಕ್ತಿ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ನೋಡಲ್ ಅಧಿಕಾರಿ ಸಕಲೇಶ್ವರ್ ಅವರು ತಿಳಿಸಿದರು.

ಅವರು ತಾಲೂಕಿನ ಎರಗಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು 14 15ನೇ ಹಣಕಾಸಿನ ಯೋಜನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನರೇಗಾ ಯೋಜನೆ ಮತ್ತು ಸರ್ಕಾರದಿಂದ ಸಾವು ಸಿಗುವಂತಹ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.

ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿ ನಾರಾಯಣ್ ಮಾತನಾಡಿ ಯರಗಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಗ್ರಾಮ ಪಂಚಾಯತಿ ವತಿಯಿಂದ 119 ಕಾಮಗಾರಿಗಳು, ತೋಟಗಾರಿಕೆ ಇಲಾಖೆ ವತಿಯಿಂದ 9 ಅರಣ್ಯ ಇಲಾಖೆಯಿಂದ ಒಂಬತ್ತು ಕೃಷಿ ಇಲಾಖೆಯಿಂದ ಒಂಬತ್ತು ಕಾಮಗಾರಿಗಳು ಮಾಡಲಾಗಿದ್ದು ಒಟ್ಟು 156 ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಒಟ್ಟು ಕೂಲಿ ಮತ್ತು 18,24,927 ರೂಪಾಯಿಗಳು ಮತ್ತು ಸಾಮಗ್ರಿ ಮತ್ತು 51,82,599 ರೂಪಾಯಿಗಳು ಸೇರಿ ಒಟ್ಟು ಮೊತ್ತ 70,7,2525 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದಕ್ಕಾಗಿ ಒಟ್ಟು 596 ಮಾನವ ದಿನಗಳನ್ನು ನಿರ್ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರೇಷ್ಮೆ ಇಲಾಖೆ ಸಾಮಾಜಿಕ ಅರಣ್ಯ ಇಲಾಖೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಯಲ್ಲಿ ಬರುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯ, ಸದಸ್ಯರಾದ ಮಲ್ಲು ಸಿದ್ದರಾಜು, ಪಿಡಿಒ ಮಂಜು, ಸಿಬ್ಬಂದಿಗಳಾದ ಇಂದ್ರ ,ಸಿದ್ದರಾಮು,ಅಧಿಕಾರಿಗಳಾದ ರಂಜಿನಿ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು

Continue Reading

Chamarajanagar

ಪರಿಹಾರ, ನಾಲೆ ಹಾಗೂ ಒಳ ಚರಂಡಿ   ಮುಚ್ಚಿರುವುದು, ಎ ಸಿ ಗೆ ಮನವಿ 

Published

on

ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಉಪ – ವಿಭಾಗಧಿಕಾರಿ ರವರಿಗೆ

ಕೆ – ಶಿಪ್ ರವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು, ಭೂಮಿ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಿಲ್ಲ,  ಆದರೂ ಕಾಮಗಾರಿ ಮಾಡುವುದಾಗಿ ಹೇಳುತ್ತಿದ್ದಾರೆ.    ಪಟ್ಟಣದ ಸಮೀಪ ಇರುವ  ಹಾರಂಗಿ ಕಿರು ಕಾಲುವೆಯನ್ನು  ಮುಚ್ಚಿದ್ದು, ಈ ಭಾಗದಲ್ಲಿ ಧನ – ಕರು,

ಜಾನುವಾರುಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಮತ್ತು ಒಳ ಚರಂಡಿಯನ್ನು ಮುಚ್ಚಿ, ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಹಿಂಸೆ ಆಗುತ್ತಿದೆ. ಕೇಳಲು ಹೋದರೆ    ಹೆದರಿಸುತ್ತಿದ್ದಾರೆ, ಸ್ಥಳ ಪರಿಶೀಲನೆ ಮಾಡಬೇಕು  ಎಂದು ಡಿ ಎಸ್ ಎಸ್  ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹುಣಸೂರು ಉಪ – ವಿಭಾಗಾಧಿಕಾರಿ ಮಹಮದ್ ಯಾರಿಸ್ ಸುಮೈ ರ್ ರವರಿಗೆ ಮನವಿ ಸಲ್ಲಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಉಪ – ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಿ, ಭೂ ಮಾಲೀಕರಿಗೆ ಪರಿಹಾರ,ಕೊಡಿಸುವ ಭರವಸೆ ನೀಡಿದರು.

ತಹಸೀಲ್ದಾರ್ ನರಗುಂದ, ಉಪ – ತಹಸೀಲ್ದಾರ್ ಮಹೇಶ್,ರೈತ ಮತ್ತು ಕಾರ್ಮಿಕ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಚಂದ್ರು, ಲಕ್ಕಿಕುಪ್ಪೆ ರಮೇಶ್, ಸ್ಥಳೀಯ ವಾಸಿ ವಿನಯ್, ಹರೀಶ್ ಇನ್ನಿತರರು ಇದ್ದಾರೆ.

Continue Reading

Trending

error: Content is protected !!