Hassan
ಪ್ರಥಮ ಬಾರಿಗೆ ಮಗುವಿಗೆ ಮೊದಲನೆ ಯಶಸ್ವಿ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ
ಮಾ.೧ ರಂದು ಸಿಎಂ ಉದ್ಘಾಟನೆ: ಡಾ. ಎಸ್. ಸಂತೋಷ್
ಹಾಸನ: ಪ್ರಪಥಮ ಬಾರಿಗೆ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲನೆಯ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಮಗುವಿಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹಿಮ್ಸ್ ನಿರ್ದೇಶಕ ಡಾ. ಎಸ್. ಸಂತೋಷ್ ತಿಳಿಸಿದರು.
ತಮ್ಮ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅರಸೀಕೆರೆ ತಾಲೂಕಿನ ಲಕ್ಷ್ಮೀದೇವರ ಹಳ್ಳಿಯ ನಿವಾಸಿ ರಮೇಶ್ ಮತ್ತು ಪೃಥ್ವಿ ದಂಪತಿಗಳ ಪುತ್ರ ಕುಶ್ವಂತ್ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಶ್ರವಣದೋಷ ಎಂದರೇ ಪ್ರಸ್ತೂತದಲ್ಲಿ ತುಂಬಾ ಸಾಮಾನ್ಯವಾದ ಸಮಸ್ಯೆ ಆಗಿದೆ. ತೀವ್ರ ಮತ್ತು ಅತೀವ್ರ ಶ್ರವಣ ದೋಷಕ್ಕೆ ಯಶಸ್ವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಉತ್ತಮ ಪರಿಹಾರವಾಗಿದ್ದು, ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಿವಿ. ಮೂಗು ಮತ್ತು ಗಂಟಲು ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ರಾಘವೇಂದ್ರ ಪ್ರಸಾದ್ ಮತ್ತು ತಂಡದವರು ಹಾಗೂ ಅರವಳಿಕೆ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರಾದ ಡಾ. ಹನುಮಂತಪ್ಪ ವಿ. ಐರಾನಿ ಇಂಡದವರು ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಿ ಈಗ ಮಗು ಆರೋಗ್ಯವಾಗಿದೆ ಎಂದರು.
ನಗರದ ಹಿಮ್ಸ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿರುವ ವಿಕಿರಣ ಚಿಕಿತ್ಸಾ ಘಟಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಶುಕ್ರೂಷಾಧಿಕಾರಿಗಳ ವಸತಿ ಸಮುಚ್ಚಯ ಮಾರ್ಚ್ ೧ರ ಶುಕ್ರವಾರದಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆ ನೀಡುವ ಈ ರೀತಿಯ ತಂತ್ರಜ್ಞಾನ ವಿಶ್ವದಲ್ಲೇ ಇಲ್ಲ. ಮೊದಲ ಬಾರಿಗೆ ಸ್ವದೇಶಿಯಾಗಿ ತಯಾರಿಸಲಾಗಿದೆ. ನವ ನವೀನ ತಂತ್ರಜ್ಞಾನವನ್ನು ನಿರ್ವಹಣೆ ಮಾಡುವುದು ಸುಲಭ ಎಂದ ಅವರು, ಮುಂದಿನ ೧ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಹಾಗೆಯೇ ಬೆಂಗಳೂರಿನ ಬಿಇಎಲ್ ಸಿಎಸ್‌ಆರ್ ಫಂಡ್‌ನಲ್ಲಿ ಬಡ ರೋಗಿಗಳಿಗೆ ಅನುಕೂಲವಾಗುವಂತೆ, ಹಿಮ್ಸ್ ೮ ಡಯಾಲಿಸಿಸ್ ಯಂತ್ರ, ೧ ಆಂಬುಲೆನ್ಸ್ ನೀಡಲಾಗುತ್ತಿದೆ. ಇದರ ಒಟ್ಟು ಮೌಲ್ಯ ಅಂದಾಜು ೧.೬ ಕೋಟಿ ಎಂದು ಹೇಳಿದರು. ಈ ಹಿಂದೆ ಇದ್ದ ಮಹಿಳಾ-ಮಕ್ಕಳ ಆಸ್ಪತ್ರೆಯಲ್ಲಿದ್ದ ಯಂತ್ರಗಳನ್ನು ಹೊಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯಂತ್ರೋಪಕರಣ ಹಾಗೂ ಓಪಿಡಿಯನ್ನೂ ಸ್ಥಳಾಂತರ ಮಾಡಲಾ ಗಿದೆ ಎಂದ ಅವರು, ಮಾ.೨ ರಿಂದ ಹೆರಿಗೆ, ಆಪರೇಷನ್, ನವಜಾತ ಶಿಶುಗಳ ಆರೈಕೆ, ಪ್ರಯೋಗಾಲಯ, ಲೇಬರ್‌ವಾರ್ಡ್ ಎಲ್ಲವೂ ಹೊಸ ಆಸ್ಪತ್ರೆಯಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ವಿವರಿಸಿದರು. ಹೊಸ ತಂತ್ರಜ್ಞಾನದ ಓಟಿ ತುಂಬಾ ಚೆನ್ನಾಗಿದೆ. ಆಮ್ಲಜನಕ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ನೂತನ ಆಸ್ಪತ್ರೆಯಲ್ಲಿವೆ ಎಂದು ಹೇಳಿದರು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ರವರು ಸಿ.ಎಸ್.ಆರ್. ಯೋಜನೆಯಡಿ ಬಡರೋಗಿಗಳಿಗೆ ಅನುಕೂಲವಾಗುವಂತೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ೦೧ ಆಂಬುಲೆನ್ಸ್ ಹಾಗೂ ೦೬ ಡಯಾಲಿಸಿಸ್ ಯಂತ್ರಗಳನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದರು.
ಹಿಮ್ಸ್ ಆಸ್ಪತ್ರೆಯ ಪ್ರಾಂಶುಪಾಲ ಬಿ.ಸಿ. ರವಿಕುಮಾರ್ ಮಾತನಾಡಿ, ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡದೇ ಇದ್ದಿದ್ದರೆ ಜೀವನ ಪೂರ್ತಿ ಮೂಕವಾಗಿರುತ್ತಿತ್ತು. ಹೊರಗೆ ಹೋಗಿ ಈ ಆಪರೇಷನ್ ಮಾಡಿಸಿದ್ದರೇ ೫ ರಿಂದ ೧೨ ಲಕ್ಷ ಖರ್ಚಾಗುತಿತ್ತು. ಈ ವೆಚ್ಚ ಭರಿಸಲು ಇದು ಸಾಮಾನ್ಯರಿಗೆ ಹೊರೆಯಾಗಲಿದೆ. ನಾವು ಕಡಿಮೆ ದರದಲ್ಲಿ ಮಾಡಿದ್ದೇವೆ. ಇನ್ನು ಮೂರ‍್ನಾಲ್ಕು ವಾರದಲ್ಲಿ ಮಗು ಚೇತರಿಸಿಕೊಳ್ಳಲಿದೆ ಎಂದರು. ಮಕ್ಕಳ ಘಟಕ ಇತರೆಯನ್ನು ಮುಖ್ಯಮಂತ್ರಿUಳು ಉದ್ಘಾಟಿಸಿದ ನಂತರ ಶಿಶುಗಳ ವಾರ್ಡ್‌ಗಳನ್ನು ಶಿಫ್ಟ್ ಮಾಡಲು ತುಂಬ ಜಾಗರತಿವಹಿಸಬೇಕು. ಇನ್ನುಳಿದ ಕಾರ್ಯಚಟುವಟಿಕೆಗಳು ಮಾರ್ಚ್ ತಿಂಗಳ ಒಳಗೆ ಕಾರ್ಯಾರಂಭವಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಹಿಮ್ಸ್ ವೈದ್ಯರಾದ ಡಾ .ರಾಘವೇಂದ್ರ ಪ್ರಸಾದ್, ಡಾ. ಹರೀಶ್, ಡಾ. ಪ್ರವೀಣ್, ಡಾ.ಹನುಮಂತಪ್ಪ, ಡಾ.ರವಿಕಿರಣ್, ಡಾ. ಸುಧಾ, ಶಸ್ತ್ರ ಚಿಕಿತ್ಸಕ ಡಾ. ಲೋಕೇಶ್ ಇತರರು ಉಪಸ್ಥಿತರಿದ್ದರು.
Hassan
ಬಾರಿ ಮಳೆಗೆ ಕುಸಿದ ಪಂಪ್ ಸೆಟ್ ಗೋಡೆ
ಹಾಸನ: ಬಾರಿ ಮಳೆಗೆ ನಗರದ ಸಮೀಪ ರಿಂಗ್ ರಸ್ತೆ ಬಳಿ ಇರುವ ಗುಂಡೇಗೌಡನ ಕೊಪ್ಪಲು ಗ್ರಾಮದಲಿ ಮಂಜುನಾಥ್ ಎಂಬುವರ ಪಂಪ್ ಸೆಟ್ ಮನೆಯ ಗೋಡೆ ಕುಸಿದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಹೆಚ್ಚಿನ ಮಳೆಯಿಂದ ಮಣ್ಣಿನ ಗೋಡೆಗಳು ಅಲ್ಲಲ್ಲಿ ಕುಸಿಯುತ್ತಿದ್ದು, ಗುಂಡೇಗೌಡನ ಕೊಪ್ಪಲು ಗ್ರಾಮದಲಿ ಪಂಪ್ ಸೆಟ್ ಗಾಗಿ ಹಾಕಲಾಗಿದ್ದ ಶೆಡ್ ಸಂಪೂರ್ಣ ಕಳೆಗೆ ಬಿದ್ದಿದೆ. ಪಕ್ಕದಲ್ಲೆ ವಿದ್ಯುತ್ ಕಂಬ ಅಳವಡಿಸಿದ್ದು, ಅದು ಕೂಡ ಬಾಗಿದೆ. ರಾತ್ರಿ ಗೋಡೆ ಕುಸಿದಿರುವುದರಿಂದ ಯಾವುದೇ ಅಪಾಯ ಸಂಭವಿಸಿರುವುದಿಲ್ಲ ಏನಾದರೂ
ಹಗಲಲ್ಲಿ ಬಿದ್ದಿದ್ದರೇ ಬಾರಿ ಅನಾಹುತವೇ ಆಗುತಿತ್ತು. ಶೆಡ್ ಮಲೀಕ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಹೆಚ್ಚಿನ ಮಳೆಯ ಅವಾಂತರದಿಂದ ಗುಂಡೇಗೌಡನ ಕೊಪ್ಪಲು ಗ್ರಾಮದಲ್ಲಿರುವ ಪಂಪ್ ಸೆಟ್ ಮನೆ ಕೆಳಗೆ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಆಗಿರುವುದಿಲ್ಲ. ಒಳಗಿದ್ದ ವಸ್ತುಗಳು ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ಬಿದ್ದಿರುವುದರಿಂದ ಯಾವ ಅನಾಹುತ ಆಗಿರುವುದಿಲ್ಲ. ಏನಾದರೂ ಹಗಲು ವೇಳೆ ಗೋಡೆ ಕುಸಿದಿದ್ದರೇ ವಿದ್ಯುತ್ ತಗಲಿ ಬಾರಿ ಅನಾಹುತವೇ ಆಗುತಿತ್ತು ಎಂದು ಹೇಳಿದ್ದಾರೆ.
Hassan
ಮಕ್ಕಳ ಜೊತೆ ಪೋಷಕರು ಹೆಚ್ಚು ಸಮಯ ಬೆರೆತು ಸಂಸ್ಕಾರ ಕಲಿಸಿ
ಹಾಸನ: ಮನೆಯಲ್ಲಿ ತಂದೆ ತಾಯಾಂದಿರು ಮೊಬೈಲ್ ಹಾಗೂ ಟಿವಿಯಲ್ಲೆ ಹೆಚ್ಚು ಕಳೆಯುವ ಬದಲು ಮಕ್ಕಳ ಜೊತೆ ಹೆಚ್ಚು ಸಮಯ ಕಳೆದು ಸಂಸ್ಕಾರ ಕಲಿಸಿದರೇ ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಬಹುದು ಎಂದು ವೇದ ಭಾರತಿಯ ಹರಿಹರಪುರ ಶ್ರೀಧರ್ ತಿಳಿಸಿದರು.
ನಗರದ ತಣ್ಣೀರುಹಳ್ಳಿ ಬೇಲೂರು ರಸ್ತೆಯ ಬಳಿ ಇರುವ ವಿಜಯನಗರ ಪತಂಜಲಿ ಯೋಗ ಸಂಘದ ವತಿಯಿಂದ ಗುರುಪೂರ್ಣಿಮೆಯಲ್ಲಿ ತಮ್ಮ ಶಿಷ್ಯ ವೃಂದದೊಂದಿಗೆ ಅಗ್ನಿಹೋತ್ರ ನಡೆಸಿಕೊಟ್ಟು ಮಾತನಾಡಿದ ಅವರು, ಮನೆಯಲ್ಲಿ ತಂದೆ ತಾಯಂದಿರು ಮಕ್ಕಳು ಹಾಗೂ ಕುಟುಂಬದವರೊಟ್ಟಿಗೆ ಹೆಚ್ಚು ಸಮಯ ಕಳೆಯಬೇಕು. ತಾಯಂದಿರು ಅಡುಗೆ ಮಾಡುವಾಗ ಮೊಬೈಲ್ ಬಳಕೆ ಮಾಡದಂತೆ ತಿಳಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘ ಪರಿವಾರದ ನಗರ ಸಂಚಾಲಕರಾದ ಪಾರಸ್ಮಲ್ ರವರು ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವಲ್ಲಿ ತಂದೆ ತಾಯಿ, ಅಜ್ಜ ಅಜ್ಜಿಯ ಪಾತ್ರ ಮುಖ್ಯವಾದುದು. ಯಾವುದೇ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಮಾಡುವಲ್ಲಿ ಚಿಂತನೆ ಪ್ರತಿಯೊಂದು ಕುಟುಂಬದಲ್ಲಿ ಆಗಬೇಕು ಎಂದು ಕಿವಿಮಾತು ಹೇಳಿದರು. ಪೋಷಕರು ಮಕ್ಕಳೊಂದಿಗೆ ಒಟ್ಟಿಗೆ ಕೂತು ಊಟ ಮಾಡುವಲ್ಲಿ, ದೇವಸ್ಥಾನಗಳಿಗೆ ಬಂಧುಗಳ ಮನೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಲ್ಲಿ ಉತ್ತಮ ಸಂಬಂಧ ಹೊಂದಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಪತಂಜಲಿ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಸ್.ಡಿ. ಲೋಕನಾಥ್ ರವರಿಗೆ ಹಾಗೂ ಶ್ರೀಧರ್ ಹರಿಹರಪುರ, ಜಿಲ್ಲಾ ಪ್ರಭಾರಿಗಳಾದ ಸುರೇಶ ಪ್ರಜಾಪತಿ, ಶೇಷಾಪ್ಪಾಜಿ, ನಾಗೇಶ್, ಪತಂಜಲಿ ಯೋಗ ಕೇಂದ್ರದ ಶಿಕ್ಷಕರಿಗೆ ಸನ್ಮಾನಿಸಿ ವಂದಿಸಲಾಯಿತು. ಕುಮಾರಿ ಸಿಂಚನ ಭರತನಾಟ್ಯ ಮುಖೇನ ಗುರುನಮನ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶೇಷಾಶೆಟ್ಟಿ, ಶಿವನಂಜೇಗೌಡ, ಶಾಂತಣ್ಣ, ಸಚಿನ್,ಸುರೇಶ್,ಲತಾ, ಯಶೋದ ಇತರರು ಭಾಗವಹಿಸಿದ್ದರು.
ಭಾಗವಹಿಸಿದ್ದರು.
Hassan
ನೂತನ ಶ್ರೀ ನೀಲಕಂಠೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡುವಂತೆ ನೇಕಾರ ಕುರುಹಿನಶೆಟ್ಟಿ ಸಮುದಾಯಕ್ಕೆ ಜಿ. ಸೋಮಶೇಖರ್ ಮನವಿ
ಹಾಸನ: ನಗರದ ಸಮೀಪ ಎಸ್.ಎಮ್. ಕೃಷ್ಣ ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ನೀಲಕಂಠೇಶ್ವರ ಪಾರ್ವತಮ್ಮ ರವರ ದೇವಾಲಯದ ಕಟ್ಟಡದ ಕೆಲಸವು ಪ್ರಗತಿಯಲ್ಲಿದ್ದು, ಈಗಾಗಲೇ ೪೦ ಲಕ್ಷ ಕಾಮಗಾರಿ ಮಾತ್ರ ಮುಗಿದಿದ್ದು, ಉಳಿದ ಹಣವನ್ನು ಕುಲಬಾಂಧವರು ಧನ ಸಹಾಯ ಮಾಡುವ ಮೂಲಕ ದೇವಸ್ಥಾನದ ಕೆಲಸ ಮುಗಿಸಲು ಸಹಕಾರ ನೀಡುವಂತೆ ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷ ಜಿ. ಸೋಮಶೇಖರ್ ಮನವಿ ಮಾಡಿದರು.
ನಗರದ ಎನ್.ಸಿ.ಸಿ. ಕಛೇರಿ ಹಿಂಬಾಗ ರಂಗೋಲಿ ಹಳ್ಳದಲ್ಲಿರುವ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘ ಹಾಗೂ ಮಹಿಳಾ ಸಂಘದವತಿಯಿಂದ ಭಾನುವಾರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಹೆಚ್ಚು ಅಂಕ ಪಡೆದ ಸಮುದಾಯದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮನವಿ ಕರಪತ್ರ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಒಂದು ಉತ್ತಮ ಜಾಗದಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯ ಹಾಗೂ ನಮ್ಮ ಸಮುದಾಯದ ೮ ಸಾವಿರ ಜನರಿಗೆ ನಿವೇಶನ ನಿರ್ಮಾಣ ಮಾಡಿ ಕೊಡಬೇಕು ಎನ್ನುವ ಉದ್ದೇಶವನ್ನು ಪುಟ್ಟಸ್ವಾಮಿ ಶೆಟ್ಟರು ಹೊಂದಿದ್ದಾರೆ. ಈಗಾಗಲೇ ಎಸ್.ಎಂ. ಕೃಷ್ಣ ನಗರದ ಬಡಾವಣೆ ಜಾಗದಲ್ಲಿ ಕಾಮಗಾರಿಯ ಶಂಕುಸ್ಥಾಪನೆಯಾಗಿ ದೇವಸ್ಥಾನದ ಕೆಲಸ ದಾನಿಗಳ ಸಹಾಯದಿಂದ ಈಗಾಗಲೇ ೪೦ ಲಕ್ಷ ರೂಗಳ ವೆಚ್ಚದ ನಡೆಯುತ್ತಿದೆ. ಅಂದಾಜು ಉಳಿದ ಎರಡು ಕೋಟಿ ರೂಗಳ ಕೆಲಸ ಬಾಕಿ
ಇದ್ದು, ರಾಜ್ಯದಲ್ಲಿರುವ ನಮ್ಮ ಸಮುದಾಯಗಳಿಂದ ಹಣ ಸಂಗ್ರಹಿಸಿ, ಎಲ್ಲಾ ಸಹಕಾರದಲ್ಲಿ ಕಾಮಗಾರಿ ಪೂರೈಸಬೇಕಾಗಿದೆ ಎಂದರು. ದಯಮಾಡಿ ಒಂದು ವಿದ್ಯಾಸಂಸ್ಥೆಯನ್ನು ಕೊಟ್ಟರೇ ಸಾಕು. ಈಗ ಅದಕ್ಕೂ ಕೂಡ ಒಪ್ಪಿಗೆ ಕೊಡಲಾಗಿದ್ದು, ಅದಕ್ಕೆ ನಮ್ಮ ಸಹಕಾರ ಕೂಡ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಕೇಂದ್ರ ಸರಕಾರವು ಒಂದು ಆದೇಶ ಹೊರಡಿಸಿದ್ದು, ಕುರುಹಿನಶೆಟ್ಟಿ ಬಹಳ ವರ್ಷದಿಂದ ನೆನೆಗುದ್ದಿಗೆ ಬಿದ್ದಿದಂದು ಅಕ್ಷರದ ತೊಡಕು ಈಗ ನಿವಾರಣೆ ಆಗಿದ್ದು, ಈಗ ಕೇಂದ್ರದ ಯಾವುದೆ ಹುದ್ದೆಗಾಗಲಿ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ನೀಲಕಂಠೇಶ್ವರ ದೇವಾಲಯ ನಿರ್ಮಾಣ ಪ್ರಾರಂಭಿಸಿ ಮೂರು ವರ್ಷ ಆಗಿದೆ. ಸಭೆ ಕರೆದಾಗ ಪ್ರತಿಭಾ ಪುರಸ್ಕಾರ ಮಾಡಲು ಒತ್ತಾಯ ಕೇಳಿ ಬಂದಿತು. ದೇವಾಲಯದ ಕಾಮಗಾರಿ ನಡೆಯುತ್ತಿರುವುದರಿಂದ ಪ್ರತಿಭಾ ಪುರಸ್ಕಾರ ಬೇಡ ಎಂದಾಗ ಸದಸ್ಯರು ನಡೆಸಲು ಒತ್ತಾಯ ಕೇಳಿ ಬಂದು ಸಹಕಾರ ಕೊಡುವುದಾಗಿ ಹೇಳಿದ್ದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕರ್ನಾಟಕದಲ್ಲಿ ನಮ್ಮ ಸಮುದಾಯದಲ್ಲಿ ಒಟ್ಟು ೫೦ ಲಕ್ಷ ಜನರು ಇದ್ದು, ಒಬ್ಬಬರೂ ೧ ರೂ ಕೊಟ್ಟರೂ ೫೦ ಕ್ಷ ಸಂಗ್ರಹವಾಗುತ್ತದೆ. ಶ್ರೀ ನೀಲಕಂಠೇಶ್ವರ ದೇವಸ್ಥಾನ ಕಟ್ಟಲು ಮುಂದಾಗಿದ್ದು, ಎಲ್ಲಾರ ಸಹಕಾರ ಅವಶ್ಯಕವಾಗಿ ಬೇಕಾಗಿದೆ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ನೇಕಾರ ಕುರುಹಿನಶೆಟ್ಟಿ ಸಂಘದ ದಾವಣಗೆರೆ ಖಜಾಂಚಿ ವಿಠಲ್ ಆಮಾಸಿ, ಕೇಂದ್ರ ಸಂಘದ ಖಜಾಂಚಿ ದೊರೆಸ್ವಾಮಿ, ಸಿಟಿ ಡ್ರಗ್ ಹೌಸ್ ಮಾಲೀಕರಾದ ಜಿ.ಕೆ. ನಾರಾಯಣಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಮ ಶೆಟ್ಟಿ, ನಗರಸಭೆ ಮಾಜಿ ಸದಸ್ಯ ಬಿ. ಗೋಪಾಲ್, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘದ ಉಪಾಧ್ಯಕ್ಷ ಕುಮಾರ್, ಗೋವಿಂದಶೆಟ್ಟಿ, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ರತ್ನ ವೆಂಕಟೇಶ್, ಸಂಘದ ಖಜಾಂಚಿ ಕೆ.ಟಿ. ಲಕ್ಷ್ಮಣ್ ಶೆಟ್ಟಿ, ಕಾರ್ಯದರ್ಶಿ ಮಲ್ಲೇಶ್, ಜಿಲ್ಲಾ ಸಂಚಾಲಕ ಪುಟ್ಟಣ ಗೋಕಾಕ್, ನಿವೃತ್ತ ಇಂಜಿನಿಯರ್ ತಿಮ್ಮಶೆಟ್ಟಿ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗವನ್ನು ಮಲೇಶ್ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಪುಟ್ಟಣ್ಣ ನಡೆಸಿಕೊಟ್ಟರು. ಧನಲಕ್ಷ್ಮಿ ನಿರೂಪಿಸಿದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.