Connect with us

Chamarajanagar

ಪ್ರತಿಭಾ ಕಾರಂಜಿಗಳಂತ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಮಕ್ಕಳ ಭೌತಿಕ ವಿಕಾಸಕ್ಕೆ ಕಾರಣ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.

Published

on

ಯಳಂದೂರು : ಪಟ್ಟಣದ ಎಸ್ ಡಿ ಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಶಾಸಕ ಎ ಆರ್ ಕೃಷ್ಣಮೂರ್ತಿ ಮಾತನಾಡಿದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆ ಹೊರ ಚಿಮ್ಮುವುದು ಎಂದು ತಿಳಿಸಿದರು. ತೀರ್ಪುಗಾರರು ಅಂಕ ನೀಡುವುದರಲ್ಲಿ ತಾರತಮ್ಯ ಮಾಡಬಾರದು ಎಂದು ಸಲಹೆ ನೀಡಿದರು. ಸರ್ಕಾರ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದೆ ಆದ್ದರಿಂದ ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾತನಾಡಿದರು.

ಎಸ್ ಡಿ ಎಸ್ ವಿದ್ಯಾಸಂಸ್ಥೆ ಸಂಸ್ಥಾಪಕರಾದ ದುಗ್ಗಹಟ್ಟಿ ವೀರಭದ್ರಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್, ರಂಗನಾಥ, ತಹಶೀಲ್ದಾರ್ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸರಿದಂತೆ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

 

Continue Reading
Click to comment

Leave a Reply

Your email address will not be published. Required fields are marked *

Chamarajanagar

ಕೊಳ್ಳೇಗಾಲ ಸಂಸ್ಥೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ

Published

on

ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಪಿಎಂಎಸ್ಆರ್, ಕೊಳ್ಳೇಗಾಲ ಸಂಸ್ಥೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಮಾಡುವ ಕುರಿತು ಹಾಗೂ ಬಾಲ್ಯ ವಿವಾಹಗಳನ್ನು ತಡೆಯುವ ಸಂಬಂಧ ಸಭೆಯನ್ನು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೊನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟ ಬಸವಯ್ಯ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಮಾಡುವ ಜೊತೆಗೆ ಬಾಲ್ಯ ವಿವಾಹವನ್ನು ಮಾಡದಿರುವ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಸೇರಿಸುವ ಕುರಿತು ಚರ್ಚಿಸಿದರು. ಇದರ ಜೊತೆಗೆ ಮಕ್ಕಳು ಎದರಿಸುತ್ತಿರುವ ಲಿಂಗ ತಾರತಮ್ಯ ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್, ನೇತ್ರಾವತಿ,ಪಿಡಿಒ ನಿರಂಜನ್ ಕುಮಾರ್,
ಎಂ ಎಲ್ ಎಚ್ ಪಿ ಮಹದೇವ ಶಂಕರ್, ಭೀಮರಾವ್ ರಾಮ್ ಜಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಮೋದ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ರವಿಕುಮಾರ್ ,ನಂಜುಂಡಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆಯ ಸರಸ್ವತಿ ಪಿಎಂಎಸ್ಆರ್ ಸಂಸ್ಥೆಯ ಕಾರ್ಯದರ್ಶಿ ಅರ್ನಾಲ್ಡ್ ಸಂಯೋಜಕ ಸಿದ್ದರಾಜು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Chamarajanagar

ಹೊನ್ನೂರು ಗ್ರಾಮದಲ್ಲಿ ರಾತ್ರೋರಾತ್ರಿ ದೇವಾಲಯದ ಹುಂಡಿ ಕಳ್ಳತನ

Published

on

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ತಡರಾತ್ರಿ ರಾಕಸಮ್ಮ ದೇವಾಲಯದಲ್ಲಿ ಗೋಲುಕ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ತಾಲೂಕಿನ ಹೊನ್ನೂರು ಗ್ರಾಮದ ಶ್ರೀ ರಾಕಸಮ್ಮ ದೇವಾಲಯದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ. ದೇವಾಲಯ ಮುಂಬಾಗಿಲನ್ನು ಒಡೆದು ಕಳ್ಳರು ದೇವಾಲಯದ ಒಳನುಗ್ಗಿದ್ದು, ದೇವರ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ.

ಸೋಮವಾರ ಮುಂಜಾನೆ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳು ಕಳ್ಳತನ ಆಗಿರುವುದನ್ನು ಗಮನಿಸಿ ಗ್ರಾಮಸ್ಥರಿಗೆ ಕಳ್ಳತನ ನಡೆದಿರುವ ಬಗ್ಗೆ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ 112 ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ.
ಯಳಂದೂರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಈ ಬಗ್ಗೆ ದೇವಾಲಯದ ಹುಂಡಿಯನ್ನು ಗ್ರಾಮದ ಹೊರ ವಲಯದಲ್ಲಿ ಹಣದೋಚಿ ಬಿಸಾಕಿ ಹೋಗಿರುವ ಘಟನೆ ನಡೆದಿರುವ ಬಗ್ಗೆ ಮಾಹಿತಿ ನೀಡಿ ಗ್ರಾಮಸ್ಥರು ಠಾಣೆಗೆ ಬಂದು ದೂರು ನೀಡುವಂತೆ ಸೂಚನೆ ನೀಡಿದು ಗ್ರಾಮಸ್ಥರು ಠಾಣೆಗೆ ಬಂದು ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ಹನುಮಂತ ಉಪ್ಪಾರ ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Chamarajanagar

ಇಂದು ಸುರಿದ ಮಳೆಯಿಂದ ಪಟ್ಟಣದಲ್ಲಿ ನಡೆಯುವ ಭಾನುವಾರದ ಸಂತೆಗೆ ತೊಂದರೆ

Published

on

ಯಳಂದೂರು ಜುಲೈ 14

ಪಟ್ಟಣ ಹಾಗೂ ತಾಲೂಕಿನಾದ್ಯಂತ ಭಾನುವಾರ ಉತ್ತಮವಾಗಿ ಮಳೆಯಾಗಿ ಪಟ್ಟಣದಲ್ಲಿ ನಡೆಯುವ ಭಾನುವಾರದ ಸಂತೆಗೆ ತೊಂದರೆ ಉಂಟು ಮಾಡಿತು.

ಭಾನುವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಪಟ್ಟಣದಲ್ಲಿ ಇತ್ತು, ಸುಮಾರು ಐದು ಬಾರಿ ಮಳೆ ಬಿಟ್ಟು ಬಿಟ್ಟು ಬಂದು ಸಾರ್ವಜನಿಕರು ಮತ್ತು ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ತೊಂದರೆಯನ್ನು ಉಂಟು ಮಾಡಿತು.

ಮಧ್ಯಾಹ್ನದ ವೇಳೆಗೆ ಮಳೆ ಹೆಚ್ಚಾಗಿ ಓಡಾಡಲು ಸಾರ್ವಜನಿಕರಿಗೆ ತೊಂದರೆಯಾಯಿತು. ಜೊತೆಗೆ ವ್ಯಾಪಾರಿಗಳು ತಾವು ಮಾರಾಟ ಮಾಡಲು ತಂದಿರುವ ತರಕಾರಿಗಳು ಮತ್ತು ಇತರ ಪದಾರ್ಥಗಳನ್ನು ಮುಚ್ಚಲು ಟಾರ್ಪಲ್ ಗಳ ಮೊರೆ ಹೋಗಿದ್ದು ಕಂಡು ಬಂತು. ಪಟ್ಟಣವಲ್ಲದೆ ಐತಿಹಾಸಿಕ ಪ್ರಸಿದ್ಧ ಸ್ಥಳ ಬಿಳಿಗಿರಂಗನ ಬೆಟ್ಟ, ಗುಂಬಳ್ಳಿ ,ಯರಗಂಬಳ್ಳಿ ಯರಿಯೂರು ಗ್ರಾಮಗಳು ಸೇರಿದಂತೆ ತಾಲೂಕಿನ ಅಕ್ಕಪಕ್ಕ ಇರುವ ಗ್ರಾಮಗಳಲ್ಲೂ ಸಹ ಉತ್ತಮವಾಗಿ ಮಳೆಯಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ದ್ವಿಚಕ್ರ ವಾಹನ ಮತ್ತು ಇತರ ವಾಹನಗಳು ಓಡಲು ಸವಾರರು ಪರದಾಡಿದರು. ಕೆಲವು ಕಡೆ ರಸ್ತೆಯಲ್ಲೇ ಗುಂಡಿ ಬಿದ್ದು ಗೊತ್ತಾಗದೆ ಗುಂಡಿಯಲ್ಲೇ ದ್ವಿಚಕ್ರ ವಾಹನವನ್ನು ಓಡಿಸಿದರು.

Continue Reading

Trending

error: Content is protected !!