Connect with us

Hassan

ಪುಟಾಣಿ ಮಕ್ಕಳ ಕೈಲಿ ಮೂಡಿ ಬಂದ ಚಿತ್ತಾರ ಚಿತ್ರಕಲೆ ಸ್ಪರ್ದೆಯಲ್ಲಿ ಗಮನಸೆಳೆದ ಬಾಲ್ಯ ಕಲಾವಿದರು

Published

on

ಹಾಸನ: ಚಿತ್ರಕಲೆ ಒಂದು ರೀತಿಯಲ್ಲಿ ಸಾಗರ. ಅದರ ವಿಸ್ತಾರ ಊಹೆಗೂ ನಿಲುಕದ್ದು, ಕಲ್ಪನೆಗಳು ಮತ್ತು ಭಾವನೆಗಳ ಅಭಿವ್ಯಕ್ತಿ, ಕೆಲವು ಸೌಂದರ್ಯ ಗುಣಗಳ ರಚನೆಯೊಂದಿಗೆ ಎರಡು ಆಯಾಮದ ದೃಶ್ಯಭಾಷೆ. ಎಂಬಂತೆ ಪುಟಾಣಿ ಮಕ್ಕಳು ಈ ಚಿತ್ರಕಲೆಯಲ್ಲಿ ಪಾಲ್ಗೊಂಡು ತಮ್ಮದೆಯಾದ ಕಲ್ಪನೆಯಲ್ಲಿ ಹಾಳೆ ಮೇಲೆ ಗೀಚಿ ಅದಕ್ಕೆ ಬಣ್ಣ ತುಂಬಿದರು.

ಚಿತ್ರ ರಚನೆಯು ಎಲ್ಲಿಯೂ ನಿಂತ ನೀರಾಗಿಲ್ಲ ಪ್ರಾಚೀನ ಕಾಲದಿಂದಲೂನಿರಂತರವಾಗಿ ಸಾಗಿ ಬರುತ್ತಿದ್ದು, ಇದು ಒಂದು ಭಾಷೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಚಿತ್ರಗಳು ಮಕ್ಕಳ ಭಾಷೆ ಅವರಿಗೆ ಮೊದಲು ಬರುವುದೇ ಚಿತ್ರ ಕಲೆ ಆನಂತರ ಬರಹ, ಓದು ಚಿತ್ರ ಗೀಚುವುದೇ ಅವರಿಗೆ ಆನಂದ. ಮನುಷ್ಯ ಮಾತಿನಲ್ಲಿ ವ್ಯಕ್ತ ಪಡಿಸಲಾಗದ ತನ್ನ ಸಂವೇದನೆಯನ್ನು ಹೊರಗೆಡವಲು ಚಿತ್ರಕಲೆಯಂತಹ ಮೌನಭಾಷೆಯನ್ನು ಅವಲಭಿಸುತ್ತಾನೆ. ಚಿತ್ರಕಲೆಯೆಂಬ ಈ ವರ್ಣಮಯ ಕ್ರಿಯೆ ಮನುಷ್ಯನಿಗೆ ಆಪ್ತಮಿತ್ರನಂತೆ ಯಾಕೆಂದರೆ ತಾನೂ ರೂಪಿಸಿದ ಚಿತ್ರದ ಮೂಲಕ ತನ್ನ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪವನ್ನು ತಾನೇ ಸೃಷ್ಟಿಸಿ ಅದನ್ನು ತಾನೇ ನೋಡಿ ಆನಂದಿಸುತ್ತಾನೆ. ಹಾಸನದ ಶಾಂತಲಾ ಲಲಿತ ಕಲಾ ಶಾಲೆ ಹಾಗೂ ಶಾಂತಲಾ ಆರ್ಟ್ ಕ್ಲಬ್ ವತಿಯಿಂದ ಹಾಸನ ನಗರದ ಸಂಸೃತಭವನದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ಹಾಸನ ನಗರದ ನೂರಾರು ಮಕ್ಕಳು ಭಾಗವಹಿಸಿ ತಮ್ಮಲ್ಲಿ ಅಡಗಿದ್ದ ಸುಪ್ತಪ್ರತಿಭೆಯನ್ನು ಪ್ರದರ್ಶಿಸಿದರು. ಭಾಗವಹಿಸಿದ್ದ ಬಹುತೇಕ ಮಕ್ಕಳು ಪರಿಸರಕ್ಕೆ ಸಂಬಂಧಪಟ್ಟ ಚಿತ್ರಕಲೆಯನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು ನೋಡುಗರ ಗಮನವನ್ನು ಸೆಳೆಯಿತು. ಕೆಲವು ಮಕ್ಕಳು ಪ್ರಾಣಿ ಚಿತ್ರಿಸಿದರೆ ಮತ್ತಷ್ಟು ಮಕ್ಕಳು ಮನೆ ಮೋಡ ಸೂರ‍್ಯ ದೇವಾಲಯ ಮಹಿಳೆಯರು ಹೀಗೆ ಬಗೆಬಗೆಯ ಚಿತ್ರಗಳನ್ನು ಚಿತ್ರಿಸಿ ಬಣ್ಣಗಳನ್ನು ತುಂಬಿ ಹರ್ಷವ್ಯಕ್ತಪಡಿಸಿದ್ದು ಕಲೆ ಮನುಷ್ಯನ ಮನಸ್ಸನ್ನು ಉಲ್ಲಾಸಪಡಿಸುತ್ತದೆ ಅನ್ನುವುದಕ್ಕೆ ಸಾಕ್ಷಿಯಾಯಿತು.

ಇನ್ನೂ ಹಾಸನದ ಇಪ್ಪತ್ತನಾಲ್ಕು ಮಂದಿ ಕಲಾವಿದರಿಂದ ಸಮೂಹ ಚಿತ್ರಕಲಾ ಪ್ರದರ್ಶನವು ನಡೆಯಿತು. ಈ ಕಲಾ ಪ್ರದರ್ಶನದಲ್ಲಿ ಕಲಾವಿದರಾದ ರಂಜಿತಾ.ಹೆಚ್.ಯು, ಕಮಲ ಜೈನ್, ಅಕ್ಷತಾ. ಯು.ಎಂ, ಭವಾನಿ, ಕಿರಣ್ .ಟಿ.ಆರ್, ಸೌಮ್ಯ. ಎಸ್, ಪುನೀತ್ ನಾಯಕ್, ವೃತ್ತಿಕ್, ಹೇಮಲತಾ, ಪ್ರೇಮ, ಬಬಿತಾ ಸಿ.ಎಸ್. ಲತಾ.ಎಲ್ .ಜಿ.ಅಸ್ಮತರ, ಬಸವರಾಜ್.ಸಿ.ಎಸ್. ಕೆ.ಜೆ.ಶಿವಶಂಕರ್ , ಆರ್ .ಶಿವಕುಮಾರ್, ನಂದಿನಿ, ಚಂದ್ರಕಾಂತ್ ನಯ್ಯರ್, ಯೋಗನಂದ. ಹೆಚ್.ಎನ್, ನಿಜಾಮುದ್ದಿನ್, ಮಂಜುಳ, ವಿಮಲ, ಸಿ.ಎನ್. ಶೋಭಾ, ಲಕ್ಷ್ಮಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದು, ಚಿತ್ರಕಲೆಗಳು ೨*೨, ೫*೪, ೪*೪ ಅಡಿ ಕ್ಯಾನ್ವಾಸ್ ನಲ್ಲಿ ಆಕ್ರಲಿಕ್, ತೈಲವರ್ಣ, ಜಲವರ್ಣ, ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಗಣೇಶ, ಲಾಟೀನ್ , ಪುಸ್ತಕ ಚಕ್ರ , ಜಗ್ಗು , ಹುಡುಗಿಯರು, ಬುದ್ದ , ಕಡವೆ, ಮಳೆಯಲ್ಲಿ ನೆನೆಯುತ್ತಿರುವ ಹುಡುಗಿ, ಕುಂಬಳ ಹೀಗೆ ಪೋಟ್ರೈಟ್ , ಸ್ಟಿಲ್‌ಲೈಪ್, ಲ್ಯಾಂಡ್‌ಸ್ಕೇಪ್‌ನಲ್ಲಿ ಚಿತ್ತಾರದ ಚಿತ್ರಾಕರ್ಷಕವಾಗಿ ಕಲೆಗಳನ್ನು ಕಲಾವಿದರು ತಮ್ಮ ಅಂತರಂಗದ ಭಾವನೆಗಳಲ್ಲಿ ಅಭಿವ್ಯಕ್ತಿಯಲ್ಲಿ ಅರಳಿದ ಕಲೆಗಳಾಗಿದ್ದು ದೇಶಿತನವನ್ನು ಬಿಂಬಿಸಲಾಗಿತ್ತು. ಕಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಒಬ್ಬ ಜನಪದ , ಸಾಂಪ್ರದಾಯಿಕ , ರೇಖೆ ಪ್ರಧಾನ ಚಿತ್ರಕಲಾಕೃತಿಗಳು ಆಗಿದ್ದರೂ ಕೂಡ ಯುವಕಲಾವಿದರು ತಮ್ಮ ಕಲೆಯನ್ನು ಸೃಜಶೀಲತೆಯ ಗುಣವನ್ನು ಆರಂಭದಲ್ಲಿಯೇ ಅಳವಡಿಸಿಕೊಂಡರೆ ಉತ್ತಮ ಕಲಾವಿದನಾಗಲು ಸಾಧ್ಯವಾಗಬಹುದು. ಪ್ರದರ್ಶನಗೊಂಡಿದ್ದ ಬಹುತೇಕ ಕಲೆಗಳು ನೋಡುತ್ತಿದ್ದರೆ ನೋಡುಗನನ್ನು ಕೆಲವು ಕಲಾಕೃತಿಗಳು ಒಂದು ಕ್ಷಣ ಹಿಡಿದಿಟ್ಟರು ಸಹ ಹಳೆಯ ಮಾದರಿಯಾಗಿದ್ದು ಕಲಾವಿದ ನೋಡಗನಿಗೆ ಹೊಸತನವನ್ನು ಚಿತ್ರಿಸುವಲ್ಲಿ ಸೋತಿದ್ದಾರೆ. ಕಲೆಗಳು ಹೆಚ್ಚು ವಾಸ್ತವವಾದ ಹೆಚ್ಚು ಸಂಗತವಾಗಿದ್ದು ಒಂದು ಪರಿಸರದಿಂದ ಅವಿರ್ಭವಿಸಿದ ಶೈಲಿಯಲ್ಲಿ ಮಾತ್ರ ಯಥಾರ್ಥವಾದ ಚಿತ್ರಣವಾಗಿದ್ದು ಹೆಚ್ಚು ಜನರನ್ನು ತಲುಪುತ್ತದೆ. ಏಕೆಂದರೆ ಕಲೆಯ ಬಗ್ಗೆ ಅರಿವಿಲ್ಲದವನ್ನು ತನ್ನ ರೂಪವನ್ನೇ ಹೋಲುವ ಬಿಂಬಗಳನ್ನು ಹೆಚ್ಚು ಇಷ್ಟಪಡುತ್ತಾನೆ.ಸ್ಥಳೀಯತೆಯಲ್ಲೇ ಬೇರೂರಿದ್ದರೂ ತನ್ನ ಸ್ಥಳೀಯ ಪರಿಮಳವನ್ನು ಸಾರ್ವತ್ರಿಕಗೊಳಿಸುವ ಸಾಮರ್ಥ್ಯ ಪಡೆದಿದ್ದರೆ ಅಂಥ ಶೈಲಿ ಈಗ ಜಗತ್ತಿನ ಕಲಾಕ್ಷೇತ್ರದಲ್ಲಿ ಗರಿಗಟ್ಟಿಕೊಳ್ಳುತ್ತಿರುವ ವಾಸ್ತವ ಶೈಲಿಯ ಪುನಶ್ಚೇತನ ಪ್ರಕ್ರಿಯೆಯ ಭಾಗವಾಗಬಹುದು. ಉದಯೋನ್ಮಖ ಕಲಾವಿದರು ಹಿರಿಯ ಕಲಾವಿದರ ಕಲೆಗಳನ್ನು ಹೆಚ್ಚು ವೀಕ್ಷಿಸಿ ಅವರ ಶೈಲಿ ಮೀಮಾಂಸೆ , ಸೃಜನಶೀಲತೆ ಯನ್ನು ಗಮನಿಸಿದರೆ ತಮ್ಮದೇ ಆದ ಹೊಸ ಮೀಮಾಂಸೆಯಲ್ಲಿ ಕಲೆಗಳನ್ನು ರಚಿಸಲು ಸಾದ್ಯವಾಗುವುದರಲ್ಲಿ ಎರಡು ಮಾತಿಲ್ಲ. ಹಾಸನದಲ್ಲಿ ಇಂತಹ ಕಲಾಪ್ರದರ್ಶನಗಳು ಕಲಾವಿದರು ಹೆಚ್ಚು ಹೆಚ್ಚು ಪ್ರದರ್ಶಿಸಿ ನೋಡುಗರ ಗಮನವನ್ನು ಸೆಳೆಯುವುದರ ಜೊತೆಗೆ ಕಲೆಯನ್ನು ಉಳಿಸಿ ಬೆಳಸುವಂತಾಗಲಿ.

ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಮಕ್ಕಳು ಸಂತೋಷದಿಂದ ಚಿತ್ರ ಬಿಡಿಸುತ್ತಿರುವುದನ್ನು ನೋಡಿದರೇ ನಮ್ಮ ಪೈಂಟಿಂಗ್ ಇವರ ಮುಂದೆ ಏನು ಇಲ್ಲ ಅನಿಸುತ್ತದೆ. ಅವರ ಮನಸ್ಸಿನಲ್ಲಿ ಇರುವ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಿದ್ದಾರೆ. ಈತರ ಶಿಬಿರಗಳನ್ನು ಹೆಚ್ಚೆಚ್ಚು ನಡೆಸಿಕೊಂಡು ಹೋದರೇ ತುಂಬ ಚಿತ್ರಕಲಾವಿದರು ನಮಗೆ ಸಿಗುತ್ತಾರೆ. ಹೆಚ್ಚು ಪರಿಸರಕ್ಕೆ ಸಂಬಂಧಿಸಿದ ಚಿತ್ರವನ್ನು ಮಕ್ಕಳು ಬಿಡಿಸುತ್ತಿದ್ದಾರೆ ಎಂದರು. ಒಂದು ವಿಷಯ ಕೊಟ್ಟರೇ ಸ್ಪರ್ದಾ ಮನೋಭಾವದಲ್ಲಿ ಇನ್ನು ಚನ್ನಾಗಿ ಮೂಡಿಬರುತ್ತದೆ. ಪೋಷಕರು ಕೂಡ ಮಕ್ಕಳಿಗೆ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತ ಮಾಡಿದರೇ ಸಾಲದು ಅವರ ಪ್ರತಿಭೆಗೂ ಪ್ರೋತ್ಸಹ ಕೊಡುವ ಕೆಲಸ ಮಾಡಬೇಕೆಂದರು.

ಇದಾದ ನಂತರ ಮಾಧ್ಯಮದೊಂದಿಗೆ ಮಕ್ಕಳ ಪೋಷಕರು ಕೂಡ ಮಾತನಾಡಿ, ನಮ್ಮ ಮಕ್ಕಳು ಓದುವುದರ ಜೊತೆಯಲ್ಲಿ ಚಿತ್ರಕಲೆಯಲ್ಲೂ ಕೂಡ ಆಸಕ್ತಿ ತೋರಿಸಿದ್ದು, ಅದಕ್ಕೆ ಪ್ರೋತ್ಸಹಿಸುವ ಕೆಲಸ ಮಾಡಲಾಗುತ್ತಿದೆ. ಕೇವಲ ಓದುವಿಗೆ ಮಾತ್ರ ಸೀಮಿತ ಮಾಡಿರುವುದಿಲ್ಲ. ಅವರ ಅಭಿಲಾಶೆ ಗುರುತಿಸಿ ಅದಕ್ಕೆ ಸೇತುವೆ ಆಗುತ್ತಿದ್ದೇವೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದೆ ವೇಳೆ ಸಾಹಿತಿ ಸಿ.ಸುವರ್ಣ ಶಿವಪ್ರಸಾದ್, ಚಿತ್ರಕಲಾವಿದರಾದ ಶಿವಕುಮಾರ್, ಎಲ್.ಜೆ. ಲತಾ, ಬಸವರಾಜು, ನಂದಿನಿ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಬಿ.ಕಾಂ, ತರಗತಿಯ ಹೊಸ ಕೋರ್ಸು ಆರಂಭ, ಶಿಕ್ಷಣದ ಜೊತೆ ಉದ್ಯೋಗ, ಮೇ.೩೦ ರಂದು ಬೃಹತ್ ಉದ್ಯೋಗ ಮೇಳ: ಕೆ.ಜಿ. ಕವಿತ

Published

on

ಹಾಸನ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ೨೦೨೪-೨೫ನೇ ಸಾಲಿನಲ್ಲಿ ಬಿ.ಕಾಂ. ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಪ್ ಎಂಬಾಡೆಂಡ್ ಡಿಗ್ರಿ ಪ್ರೊಗ್ರಾಮ್ ಎಂಬ ನೂತನ ಕೋರ್ಸ್‌ನ್ನು ಪ್ರಾರಂಭಿಸಲು ಮುಂದಾಗಿದ್ದು, ಶಿಕ್ಷಣದ ಜೊತೆಯಲ್ಲಿ ಉದ್ಯೋಗದ ಮೂಲಕ ಗಳಿಕೆ ಮಾಡಬಹುದು. ಮೇ.೩೦ ರ ಗುರುವಾರದಂದು ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಕೆ.ಜಿ. ಕವಿತ ಮತ್ತು ವಾಣಿಜ್ಯ ಶಾಸ್ತ್ರದ ಮುಖ್ಯಸ್ಥರಾದ ರಾಜಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಹೊಸ ಕೋರ್ಸು ಈಗಾಗಲೇ ತೆಲಗಾಂಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದು, ನಮ್ಮ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಗದಗ, ಧಾರವಾಡ, ಹಾವೇರಿ, ಮೈಸೂರು ಮತ್ತು ಹಾಸನ ೬ ಜಿಲ್ಲೆಗಳಲ್ಲಿ ಈ ಕೋರ್ಸ್‌ನ್ನು ಪ್ರಾರಂಭಿಸಲು ಅನುಮತಿ ನೀಡಿದೆ. ಅದರಲ್ಲಿ ನಮ್ಮ ಕಾಲೇಜು ಕೂಡ ಒಂದಾಗಿದೆ. ಈ ಕೋರ್ಸ್ ಮೂರು ವರ್ಷದ ಪದವಿಯಾಗಿದ್ದು, ಪ್ರಥಮ ಮತ್ತು ದ್ವಿತೀಯ ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ಮತ್ತು ಅಂತಿಮ ವರ್ಷ ಖಾಸಗಿ ಕಂಪನಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಲ್ಲಿದ್ದಾರೆ. ತರಬೇತಿ ಅವಧಿಯಲ್ಲಿ ರೂ.೭೦೦೦ ರಿಂದ ರೂ. ೧೦೦೦೦ ಗಳವರೆಗೆ ಸ್ಪೆಫಂಡ್‌ನ್ನು ನೀಡುತ್ತಾರೆ. ಕಾಲೇಜು ಶಿಕ್ಷಣ ಇಲಾಖೆಯು ಖಂSಅI ಖಇಖಿಂIಐ ಂSSಔಅIಂಖಿIಔಓ SಏIಐಐS ಅಔUಓಅIಐ ಔಈ IಓಆIಂ) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಈ ನೂತನ ಕೋರ್ಸ್‌ಗೆ ಒಂದು ವರ್ಷದಲ್ಲಿ ೬೦ ವಿದ್ಯಾರ್ಥಿಗಳಿಗೆ ಮಾತ್ರ ಕಲಿಯಲು ಅವಕಾಶ ಸಿಗಲಿದೆ ಎಂದರು. ೨ ವರ್ಷ ಕಾಲೇಜಿನಲ್ಲೇ ವ್ಯಾಸಂಗ ಮಾಡಿದ ಬಳಿಕ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕಾರ್ಖಾನೆ ಅಥವಾ ಕಂಪನಿಗಳಲ್ಲೇ ಉಳಿದು ಕೆಲಸ ಮಾಡಬೇಕು. ಆ ಅವಧಿಯಲ್ಲಿ ಮಾಸಿಕ ೧೦ ಸಾವಿರ ಸೈಫಂಡ್ ಸಿಗಲಿದೆ ಎಂದರು. ಉದ್ಯೋಗಕ್ಕೆ ಪೂರಕವಾದ ಪಡೆಯಲು ಕೌಶಲ್ಯವನ್ನು ಕಾಲೇಜು ಜೊತೆಗೆ ಅಲ್ಲೂ ಕಲಿತು ಈ ಕೊಳ್ಳಬಹುದು ಎಂದ ಅವರು, ಈ ಸಂಬಂಧ ಸರ್ಕಾರ ರಾಜ್ಯದ ಒಟ್ಟು ೧೧ ಜಿಲ್ಲೆಗಳ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪದವಿನ ಜೊತೆಗೆ ಸಂಪಾದನೆಯೂ ಆಗಲಿದೆ. ತಿಳುವಳಿಕೆ ಜೊತೆಗೆ ಉದ್ಯೋಗ ನಿರ್ವಹಣೆಯ ಚಾಕಚಾಕ್ಯತೆ ಸಹ ಪಡೆಯಬಹುದು. ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ಪದವಿ ಕೋರ್ಸುಗಳಾದ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ., ಮತ್ತು ಬಿ.ಬಿ.ಎ. ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭವಾಗಿರುತ್ತದೆ ಎಂದು ಹೇಳಿದರು.

ಮೇ ೩೦ರ ಗುರುವಾರದಂದು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕೆ. ಹರ್ಷ,. ಯೋಗೀಶ್, ಮಂಜೂಳಾ, ಮಧುಸೂದನ್ ಇತರರು ಉಪಸ್ಥಿತರಿದ್ರು.

Continue Reading

Hassan

ಜಾಲತಾಣದಲ್ಲಿ ಪೋಸ್ಟ್ ಹಾಕಿದ ನಾಗೇಶ್ ಗೆ ಕಠಿಣ ಶಿಕ್ಷೆ ವಿಧಿಸುವಂತೆ ಬನವಾಸೆ ರಂಗಸ್ವಾಮಿ ಆಗ್ರಹ

Published

on

ಹಾಸನ: ಹಿಂದುಳಿದ ವರ್ಗಗಳ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂರುವ ಬಿಜೆಪಿ ಪಕ್ಷದ ನಾಗೇಶ್ ಎಂಬವನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಅವರು ಆಗ್ರಹಿಸಿ ಎಸ್ಪಿ ಅವರಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಿಡಿಗೇಡಿ ಬಿಜೆಪಿ ಕಾರ್ಯಕರ್ತನೋರ್ವ ಮುಸ್ಲಿಂ, ಕ್ರಿಶ್ಚನ್ ಹಾಗೂ ಅಲ್ಪಸಂಖ್ಯಾತರು ಸೇರಿ ಕಾಂಗ್ರೆಸ್ ಗೆ ಸಹಕಾರ ಕೊಡುತ್ತಿದ್ದಾರೆ. ದೇಶದ್ರೋಹಿಗಳು ಎಂದು ಜಾಲತಾಣಗಳಲ್ಲಿ ಪೋಸ್ಟರ್ ಹಾಕಲಾಗಿದ್ದು, ಕೂಡಲೇ ಆತನನ್ನು ಈ ಕ್ಷಣದಲ್ಲಿ ಬಂಧಿಸಿ ಶಿಕ್ಷೆ ಕೊಡಬೇಕೆಂದು ಮನವಿ ಮಾಡುತ್ತಿದ್ದೇವೆ. ಕಠಿಣ ಶಿಕ್ಷೆ ಏನಾದರೂ ಕೊಡದಿದ್ದರೇ ಕಾಂಗ್ರೆಸ್ ಪಕ್ದವತಿಯಿಂದ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ದೇಶದಲ್ಲಿರುವ ಎಲ್ಲಾರೂ ಕೂಡ ಅಣ್ಣ ತಮ್ಮಂದಿರಂತೆ ಹಿಂದೂ, ಮುಸ್ಲಿಂ, ಕ್ರಿಶ್ಚನ್ ಬಾಳಿ ಬದುಕುತ್ತಿದ್ದೇವೆ. ಆದರೇ ಇದಕ್ಕೆ ಹುಳಿ ಇಂಡುವ ಕೆಲಸ ಬಿಜೆಪಿಯ ಕೆಲ ಚೇಲಗಳು ಮಾಡುತ್ತಿದ್ದಾರೆ. ಕೂಡಲೇ ನಾಗೇಶ್ ಎನ್ನುವ ವ್ಯಕ್ತಿಯನ್ನ ಗಡಿಪಾರು ಮಾಡಿ ಶಿಕ್ಷೆ ವಿಧಿಸುವಂತೆ ಆಗ್ರಹವ್ಯಕ್ತಪಡಿಸಿದರು.

Continue Reading

Hassan

ಪ್ರಜ್ವಲ್ ಲೈಂಗಿಕ ಪ್ರಕರಣ : ಬಂಧನಕ್ಕೆ ಆಗ್ರಹಿಸಿ ಮೇ. 30 ರಂದು ಹಾಸನ ಚಲೋ

Published

on

ಮಂಡ್ಯ: ಸಂಸದ ಪ್ರಜ್ವಲ್ ರೇವಣ್ಣ ಅವರ ಡಿಪ್ಲೋಮೆಟಿಕ್ ಪಾಸ್ಪೋರ್ಟ್ ರದ್ದುಪಡಿಸಿ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ಇದೇ ಮೇ 30ರಂದು ಹಾಸನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ತಿಳಿಸಿದರು .

ವರ್ಗಾವಣೆ, ಬಡ್ತಿ ಸೇರಿದಂತೆ ಇನ್ನಿತರ ವಿಚಾರವಾಗಿ ಸಹಾಯ ಬಯಸಿ ಹೋದ ಹೆಣ್ಣನ್ನು ಸಂಸದ ಪ್ರಜ್ವಲ್ ರೇವಣ್ಣ ಈ ರೀತಿ ಬಳಸಿಕೊಂಡಿರುವುದು ಖಂಡನನಯ ಎಂದರು .

ಇಂತಹ ಘಟನೆಗಳು ನಡೆದಾಗ ಜನಪ್ರತಿನಿಧಿಗಳ ಹತ್ತಿರ ಮಾತನಾಡಲು ಆಗುವುದಿಲ್ಲ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ರಾಜಕಾರಣ ಮಾಡುತ್ತಿದ್ದು , ತಪ್ಪಿತಸ್ಥರಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೋರಾಡಬೇಕು ಎಂದರು.

ಎಸ್ಐಟಿ ರಚನೆಯಾದ ನಂತರ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ಪರಾರಿಯಾಗಿದ್ದಾರೆ. ಈ ವಿಚಾರ ಕೇಂದ್ರ ಸರ್ಕಾರ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಗೊತ್ತಿದೆ. ಆದರೆ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ನೇಹ ವಿಚಾರದಲ್ಲಿ ಬಿಜೆಪಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದೆ. ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣರ ಮೂಲ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ದೇವೇಗೌಡರು ಈ ವಿಚಾರ ನನಗೆ ನೋವು ತಂದಿದೆ ಎನ್ನುತ್ತಿದ್ದು, ಆದರೆ ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.

ಈಗ ನಡೆದಿರುವ ಘಟನೆ ಹೆಣ್ಣಿನ ಘನತೆ ವಿಚಾರವಾಗಿದೆ. ರಾಜಕೀಯ ಪಕ್ಷಗಳು ರಾಜಕೀಯವನ್ನು ಬದಿಗಿಟ್ಟು ಹೆಣ್ಣಿನ ಘನತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸಿಐಟಿಯು ವತಿಯಿಂದ ಮೇ 30ರಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದುಪಡಿಸಿ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಾಸನ ಚಲೋ ನಡೆಸಲಾಗುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಜಿಲ್ಲಾ ಖಜಾಂಚಿ ಮಹದೇವಮ್ಮ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಉಪಸ್ಥಿತರಿದ್ದರು.

Continue Reading

Trending

error: Content is protected !!