Connect with us

Uncategorized

ಪಿತೃ ಪಕ್ಷದಲ್ಲಿ ಮರೆತರು ಈ 8 ತಪ್ಪುಗಳನ್ನ ಮಾಡಬೇಡಿ ಪಿತೃ ದೋಷ ಅಂಟುತ್ತದೆ!

Published

on

ಸಾಮಾನ್ಯವಾಗಿ ದೇವರ ಪೂಜೆಯನ್ನು ಶ್ರೇದ್ದೆ ಭಕ್ತಿಯಿಂದ ಮಾಡುತ್ತೀರಾ.ಇದೆ ರೀತಿ ಪಿತೃ ಪಕ್ಷ ಆಚರಣೆಯನ್ನು ಮಾಡಬೇಕಾಗುತ್ತದೆ.ಪ್ರತಿಯೊಬ್ಬರೂ ಕೂಡ ಆಚರಣೆ ಮಾಡಲೇಬೇಕು.ಪಿತೃ ಪಕ್ಷವನ್ನು ಕೆಲವರು ಗಣೇಶ ಹಬ್ಬದಲ್ಲಿ, ದೀಪಾವಳಿ ಹಾಗೂ ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಮಾಡುತ್ತಾರೆ.ಯಾವುದೇ ಸಮಯದಲ್ಲಿ ಪಿತೃ ಪಕ್ಷ ಮಾಡಿದರು ಈ ತಪ್ಪುಗಳನ್ನು ಮಾಡಬಾರದು.ಭದ್ರಪದ ಮಾಸ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ದಿನಾಂಕದಿಂದ ಶುರು ಆಗಿದೆ.ಅಶ್ವಿಜ ಮಾಸದ ಅಮವಾಸ್ಯೆವರೆಗೆ ಪಿತೃ ಪಕ್ಷ ಇರುತ್ತದೆ.ಈ 15 ದಿನಗಳಲ್ಲಿ ಹಿರಿಯನ್ನು ನೆನಪಿಸುತ್ತ ಪಿತೃ ಪಕ್ಷ ಆಚರಣೆ ಮಾಡಬೇಕು.ಈ ಸಮಯದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಕೂಡ ಇದೆ. ಅವರಿಗೆ ಖುಷಿ ಆಗುವ ರೀತಿಯಲ್ಲಿ ಶ್ರದಾಂಜಲಿ ಆಚರಣೆ ಮಾಡಿದರೆ ಅವರಿಗೂ ಕೂಡ ತುಂಬಾ ಖುಷಿ ಆಗುತ್ತಾದೇ ಹಾಗೂ ಹಿರಿಯರ ಆಶೀರ್ವಾದ ಸಿಗುತ್ತದೆ.
ಪಿತೃ ಪಕ್ಷದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

1, ಪಿತೃ ಪಕ್ಷದ ದಿನ ಹೇರ್ ಕಟ್ ಮಾಡಬಾರದು.2, ಪಿತೃ ಪಕ್ಷ ಸಮಯದಲ್ಲಿ ಮುಡಿ ಅನ್ನು ಕೊಡಬಾರದು.
3, ಪಿತೃ ಪಕ್ಷ ಸಮಯದಲ್ಲಿ ನಿಮಗೆ ಅಥವಾ ನಿಮ್ಮ ಮನೆಯವರಿಗೆ ಬಟ್ಟೆಯನ್ನು ತೆಗೆದುಕೊಳ್ಳಬೇಡಿ. ಹಿರಿಯರಿಗೆ ಮಾತ್ರ ಬಟ್ಟೆಯನ್ನು ತೆಗೆದುಕೊಳ್ಳಿ
4,ಪಿತೃ ಪಕ್ಷ ಸಮಯದಲ್ಲಿ ಚಿನ್ನ ಬೆಳ್ಳಿ ತೆಗೆದುಕೊಂಡು ಬರುವುದನ್ನು ಕೂಡ ಅವಾಯ್ಡ್ ಮಾಡಬೇಕು.
5,ಹೊಸದಾಗಿ ವ್ರತವನ್ನು ಶುರು ಮಾಡುವುದಕ್ಕೆ ಈ ಸಮಯ ಸೂಕ್ತವಲ್ಲ.
6, ಪಿತೃ ಪಕ್ಷ ಸಮಯದಲ್ಲಿ ಯಾವುದೇ ಕಾರಣಕ್ಕೂ ದೂರದ ಪ್ರಯಾಣವನ್ನು ಮಾಡಬಾರದು.
7, ಪಿತೃ ಪಕ್ಷ ಸಮಯದಲ್ಲಿ ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಮಾಂಸ ಆಹಾರವನ್ನು ತೆಗೆದುಕೊಂಡು ಹೋಗಬಾರದು. 8,ಪಿತೃ ಪಕ್ಷ ಸಮಯದಲ್ಲಿ ಮನೆ ಶಿಫ್ಟಿಂಗ್ ಅನ್ನು ಕೂಡ ಮಾಡಬಾರದು.9,ಗರ್ಭಿಣಿ ಮಹಿಳೆಯರು ಈ ಸಮಯದಲ್ಲಿ ತುಂಬಾ ಕೇರ್ಫುಲ್ ಆಗಿ ಇರಬೇಕು ಮತ್ತು ರಾತ್ರಿ ಸಮಯದಲ್ಲಿ ಪ್ರಯಾಣವನ್ನು ಅವಾಯ್ಡ್ ಮಾಡಿ.10, ಯಾವುದೇ ಶುಭ ಕಾರ್ಯವನ್ನು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾಡಬೇಡಿ.

Continue Reading
Click to comment

Leave a Reply

Your email address will not be published. Required fields are marked *

Uncategorized

ಹನಿಟ್ರ್ಯಾಪ್ ರಹಸ್ಯ ಬಯಲು ಮಾಡಿದ ಸಚಿವ ಕೆ.ಎನ್‌ ರಾಜಣ್ಣ

Published

on

ತುಮಕೂರು: ಸಚಿವರು, ಶಾಸಕರನ್ನು ಮಧುಬಲೆಗೆ ಬೀಳಿಸುವ ಯತ್ನ ವಿಚಾರ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಆದರೆ ಎರಡು ಬಾರಿಯೂ ಒಬ್ಬನೇ ಹುಡುಗ ಬಂದಿದ್ದನ್ನು ಎಂದು ಹನಿಟ್ರ್ಯಾಪ್ ಕಥೆಯನ್ನು ಬಿಚ್ಚಿಟ್ಟರು.

ಹನಿಟ್ರ್ಯಾಪ್ ಮಾಡಲು ನನ್ನ ಮನೆಗೆ ಎರಡು ಸಲ ಒಬ್ಬನೇ ಹುಡುಗ ಹುಡುಗಿಯರನ್ನು ಕರೆದುಕೊಂಡು ಬಂದಿದ್ದನು. ಆದರೆ ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು. ಎರಡನೇ ಬಾರಿ ಬಂದಾಗ ಹೈಕೋರ್ಟ್ ಲಾಯರ್ ಅಂತಾ ಹೇಳಿದ್ದಳು. ಮೊದಲ ಬಾರಿ ಬಂದಾಗ ಲಾಯರ್ ಅಂತಾ ಹೇಳಿರಲಿಲ್ಲ. ಪರ್ಸನಲ್ ಆಗಿ ಮಾತನಾಡಬೇಕು ಅಂತಾ ಹೇಳಿದ್ದಳು. ನನಗೆ ಫೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ ಎಂದರು.

ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ನಮ್ಮ ಬಳಿ ಇಲ್ಲ. ಯಾರು ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡ್ಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಗೃಹ ಸಚಿವರಿಗೆ ಇಂದು ದೂರು ಸಲ್ಲಿಕೆ: ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದ ಕಾರಣ ದೂರು ನೀಡಿರಲಿಲ್ಲ. ಇಲ್ಲಿಯವರೆಗೂ ಯಾಕೆ ದೂರು ನೀಡಿಲ್ಲ ಅಂತಾ ಸಿಎಂ ಕೇಳಿದ್ರು, ಇಂದು ದೂರು ನೀಡುತ್ತೇನೆ ಅಂತಾ ಅವರಿಗೆ ಹೇಳಿದ್ದೇನೆ. ಬೆಳಗ್ಗೆಯಿಂದ ಕುಳಿತು ಮೂರು ಪುಟಗಳ ದೂರು ಬರೆದಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ. ದೂರು ನೀಡಿದ ಬಳಿಕ ಎಫ್ ಐಆರ್ ಆಗುತ್ತದೆ. ಆಗ ದಾಖಲೆಗಳು ಬಹಿರಂಗವಾಗುತ್ತವೆ ಎಂದರು.

ಇಷ್ಟು ದಿನ ದೂರು ಬರೆಯಲು ಸಾಧ್ಯವಾಗಿರಲಿಲ್ಲ. ವಿಧಾನಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪವಾಯಿತು. ಅದಕ್ಕೂ ಮೊದಲು ಮಾಧ್ಯಮಗಳಲ್ಲಿ ಹನಿಟ್ರ್ಯಾಪ್ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಯಾಗಿದ್ದವು. ಆದರೆ ಎಲ್ಲೂ ನನ್ನ ಹೆಸರು ಪ್ರಸ್ತಾಪವಾಗಿರಲಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಹೆಸರು ಪ್ರಸ್ತಾಪ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೆ ಮೌನಂ ಸಮತಿ ಲಕ್ಷಣಂ ಎಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಬೇಕಾಯಿತು ಎಂದರು.

ಇಂತಹ ವಿಚಾರಗಳನ್ನು ಸಚಿವ ಸಂಪುಟ ಸಭೆಗಳಲ್ಲಿ ಚರ್ಚೆ ಮಾಡಬೇಕಿತ್ತು. ಬಹಿರಂಗ ಹೇಳಿಕೆ ಅಗತ್ಯವಿರಲಿಲ್ಲ ಎಂಬುದು ನನಗೂ ಅರ್ಥವಾಗುತ್ತದೆ. ಆದರೆ ನನ್ನ ಹೆಸರು ಬಂದಾಗ ಸುಮನೇ ಇರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅಲ್ಲದೇ ಇದ್ದರೆ ಎಫ್‍ಬಿಐ ತನಿಖೆ ಮಾಡಲಿ. ನನ್ನ ಅಭ್ಯಂತರವಿಲ್ಲ ಎಂದರು.

ರಾಜಕಾರಣದಲ್ಲಿ ಪ್ರಭಾವಿಯಾಗಿರುವವರ, ವೋಕಲ್ ಆಗಿ ಮಾತನಾಡುವವರನ್ನು ಮಣಿಸಲು ವಿರೋಧಿಗಳು ಹನಿಟ್ರ್ಯಾಪ್ ನಡೆಸುವುದು ಮೊದಲಿನಿಂದಲೂ ಇದೆ. ಇದೇನೂ ಹೊಸದಲ್ಲ. ಈ ಹಿಂದೆ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವಾರು ಮಂದಿಗೆ ಈ ರೀತಿ ಸಮಸ್ಯೆಯಾಗಿದೆ. ಕೆಲವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇರುವ ಕಾನೂನಿನಲ್ಲೇ ಇದನ್ನು ಹದ್ದುಬಸ್ತಿಗೆ ತರಲು ಸಾಕಷ್ಟು ಅವಕಾಶಗಳಿವೆ. ಯಾರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ತಮ ಒತ್ತಾಯ ಎಂದು ತಿಳಿಸಿದರು.

ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಮಾ.30 ರ ಬಳಿಕ ದೆಹಲಿಗೆ ಭೇಟಿ ನೀಡಲಿದ್ದು, ಸಮಯ ಸಿಕ್ಕರೆ ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡುತ್ತೇನೆ. ಈಗಾಗಲೇ ಹೈಕಮಾಂಡ್‍ಗೆ ಮಾಹಿತಿ ಹೋಗಿದೆ. ಮುಖ್ಯಮಂತ್ರಿಯವರ ಬಳಿ ಚರ್ಚೆ ಮಾಡಿದ್ದಾರೆ. ನನ್ನ ಬಳಿ ಯಾವುದೇ ಚರ್ಚೆಗಳಾಗಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರೆ ಮಾಡಿದ್ದರು. ಈವರೆಗೂ ಏಕೆ ದೂರು ಕೊಟ್ಟಿಲ್ಲ ಎಂದು ಕೇಳಿದರು. ನಾಳೆ ದೂರು ಕೊಡುತ್ತೇನೆಂದು ಅವರಿಗೆ ಹೇಳಿದ್ದೆ. ಹನಿಟ್ರ್ಯಾಪ್ ಬಗ್ಗೆ ಸುದೀರ್ಘ ವಿವರಣೆ ನೀಡಿದ ಸಚಿವ ಕೆ.ಎನ್.ರಾಜಣ್ಣ ಎರಡು ಬಾರಿ ನನ್ನ ಬಳಿ ಬಂದಿದ್ದರು ಎಂದು ತಿಳಿಸಿದರು.

ಮೊದಲ ಬಾರಿ ತುಂಬಾ ಖಾಸಗಿಯಾಗಿ ರಹಸ್ಯವಾಗಿ ಮಾತನಾಡಬೇಕೆಂದು ಬಂದಿದ್ದರು. ಎರಡನೇ ಬಾರಿ ಹೈಕೋರ್ಟ್ ವಕೀಲರು ಎಂದು ಹೇಳಿಕೊಂಡು ಬಂದಿದ್ದರು. ಈ ಎರಡೂ ಬಾರಿಯೂ ಒಬ್ಬ ಹುಡುಗ ಸಾಮಾನ್ಯವಾಗಿ ಬರುತ್ತಿದ್ದ ಎಂದರು. ಅವರ ಜೊತೆ ಹೆಣ್ಣು ಮಕ್ಕಳಿದ್ದರು. ನೀಲಿ ಬಣ್ಣದ ಟಾಪ್ ಮತ್ತು ಜೀನ್ಸ್‌ ಧರಿಸಿದ್ದರು. ಅವರಿಗೆ ನಾನು ಯಾವ ರೀತಿ ಪ್ರತಿಕ್ರಿಯೆ ನೀಡಿದೆ. ಏನು ಚರ್ಚೆ ನಡೆಯಿತು ಎಂಬುದನ್ನೆಲ್ಲಾ ದೂರಿನಲ್ಲಿ ನಮೂದಿಸಿದ್ದೇನೆ. ಫೋಟೋ ತೋರಿಸಿದರೆ ಗುರುತಿಸುತ್ತೇನೆ ಎಂದು ಹೇಳಿದರು.

ಪ್ರಕರಣ ದಾಖಲಾಗಿ ಎಫ್‍ಐಆರ್ ಆಗಲಿ. ಅದಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಲಾಗುವುದು. ಅಧಿವೇಶನದಲ್ಲಿ ಇದು ಚರ್ಚೆಯಾಗಿರುವುದು, ದೂರು ಕೊಡಲು ವಿಳಂಬವಾಗಿರುವ ಬಗ್ಗೆ ಯಾವೆಲ್ಲಾ ಸಂಗತಿಗಳು ನಡೆದಿವೆ ಎಂಬುದನ್ನು ವಿವರವಾಗಿ ಮೂರು ಪುಟಗಳ ದೂರಿನಲ್ಲಿ ನಾನೇ ಖುದ್ದಾಗಿ ಬರೆದಿದ್ದೇನೆ ಎಂದು ತಿಳಿಸಿದರು.

ಹನಿಟ್ರ್ಯಾಪ್‍ನಂತಹ ವಿಚಾರಗಳು ನಡೆಯುತ್ತಿರುತ್ತವೆ ಎಂದು ಆರಂಭದಲ್ಲಿ ಉದಾಸೀನ ಮಾಡಿದ್ದೆ. ವಿಧಾನಸಭೆಯಲ್ಲಿ ಚರ್ಚೆಯಾದ ಬಳಿಕ ಇದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಮೆಟೀರಿಯಲ್ ಎವಿಡೆನ್?ಸಗಳ ಬಗ್ಗೆ ಯೋಚಿಸಬೇಕಿದೆ. ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿರಲಿಲ್ಲ. ಅಲ್ಲಿ ಸಿಸಿಟಿವಿ ಇದ್ದಿದ್ದರೆ ಯಾರು ಬಂದರು, ಯಾರು ಹೋದರು ಎಂಬ ಮಾಹಿತಿ ಸಿಗುತ್ತಿತ್ತು. ಯಾರು ಬಂದು ಹೋಗಿದ್ದಾರೆ. ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ. ಅವರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.

ವಿಧಾನಸಭೆಯಲ್ಲಿ ಅಥವಾ ಬೇರೆ ಕಡೆ ಎಲ್ಲಿಯೂ ತಾವು ನ್ಯಾಯಾಧೀಶರ ವಿಚಾರವನ್ನು ಈ ಪ್ರಕರಣದಲ್ಲಿ ಪ್ರಸ್ತಾಪ ಮಾಡಿಲ್ಲ. ಆದರೂ ಕೆಲ ವ್ಯಕ್ತಿಗಳು ಹನಿಟ್ರ್ಯಾಪ್ ಪ್ರಕರಣದಲ್ಲಿ ನ್ಯಾಯಾಧೀಶರ ಹೆಸರು ಪ್ರಸ್ತಾಪವಾಗಿದೆ ಎಂದು ಪಿಐಎನ್ ದಾಖಲಿಸಿದ್ದಾರೆ. ಮಾಧ್ಯಮಗಳು ಸೃಷ್ಟಿಸಿರುವುದಕ್ಕೆ ನನ್ನನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಹೈಕಮಾಂಡ್ ಗೂ ದೂರು: ನಾನು ಎಲ್ಲಿಯೂ ಜಡ್ಜ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜಕೀಯ ನಾಯಕರ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಮಾರ್ಚ್ 30ರನಂತರ ದೆಹಲಿಗೆ ಹೋಗಿ ಪಕ್ಷದ ಹೈಕಮಾಂಡ್ ಗೂ ಹನಿಟ್ರ್ಯಾಪ್ ವಿಚಾರ ಕುರಿತು ದೂರು ನೀಡುತ್ತೇನೆ .ಇದು ಹೊಸ ಚಾಳಿ ಅಲ್ಲ. ಇದು ಈಗಾಗಲೇ ಹಲವು ಜನರಿಗೆ ಆಗಿದೆ. ರಾಜಕೀಯ ದ್ವೇಷಕ್ಕಾಗಿ ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಇದರ ಬಗ್ಗೆ ಸರಿಯಾದ ತನಿಖೆ ನಡೆದು ಈ ಸಂಚಿನ ಹಿಂದಿರುವವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Continue Reading

Uncategorized

ಯುವ ಜನಾಂಗಕೆ ಪುನೀತ್ ರಾಜಕುಮಾರ್ ಪ್ರೇರಣೆ: ನಜರಬಾದ್‌ ನಟರಾಜ್

Published

on

ಮೈಸೂರು: ಪುನೀತ್ ರಾಜಕುಮಾರ್ 50ನೇ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಜ್ಜಿಗೆ ವಿತರಣೆ ಮಾಡಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಯುವ ಜನಾಂಗಕ್ಕೆ ಪುನೀತ್ ರಾಜಕುಮಾರ್ ಪ್ರೇರಣೇ ಎಂದರೆ ತಪ್ಪಾಗಲಾರದು ಏಕೆಂದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಂತಹದ್ದು ಎಂದು ಪುನೀತ್‌ ಗುಣಗಾನ ಮಾಡಿದರು.

Continue Reading

Uncategorized

ಕೊಡಗು ವಿದ್ಯಾಲಯದಲ್ಲಿ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ

Published

on

ಮಡಿಕೇರಿ : ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶಿಸ್ತು, ಜೀವನಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕು. ಸ್ವಚ್ಛಂದ ಜೀವನದ ಬಗೆಗಿನ ಎಚ್ಚರಿಕೆಯನ್ನೂ ಇಂದಿನ ಮಕ್ಕಳಿಗೆ ತಿಳಿಹೇಳುವುದು ಅಗತ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಿವಿಮಾತು ಹೇಳಿದರು.

ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿಂದನಿಂದಲೇ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಪೋಷಕರು ಸಲಹುತ್ತಾ ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂದು ಭಾವಿಸುತ್ತಾರೆ. ಇದರಿಂದಾಗಿ ಸ್ವಚ್ಛಂದತೆಯನ್ನು ಹೆಚ್ಚಾಗಿಯೇ ಮಕ್ಕಳು ಬೆಳೆಸಿಕೊಂಡು ಸಮಾಜದಲ್ಲಿ ದಾರಿ ತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ. ಇಂಥ ಸಂದಭ೯ ಜೀವನಮೌಲ್ಯ, ಶಿಸ್ತನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ವಯಸ್ಸಿನಲ್ಲಿಯೇ ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಅನಂತಶಯನ ಹೇಳಿದರು.

ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆ, ಶಿಕ್ಷಕ ವಗ೯ದ ಬಗ್ಗೆ ಪೋಷಕರು ನಂಬಿಕೆ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಕೇಂದ್ರಗಳೆಂದು ಮರೆಯಬಾರದು ಎಂದು ಕಿವಿಮಾತು ಹೇಳಿದ ಅನಂತಶಯನ, ಕೊಡಗು ವಿದ್ಯಾಲಯವು ಆದ್ಯಾತ್ಮಿಕ ಸಾಧಕ ಸದ್ಗುರು ಜಾಕ್ ಸುಬ್ಬಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕಾರಣದಿಂದ ಇಂದಿಗೂ ಈ ಸಂಸ್ಥೆಯು ಸದಾ ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರಾಗಿದೆ ಎಂದು ಶ್ಲಾಘಿಸಿದರು.

ಸಾಧಿಸುವ ಛಲವಿದ್ದಲ್ಲಿ ಯಾವುದೇ ವ್ಯಕ್ತಿಯೂ ಎಷ್ಟೇ ಎತ್ತರದ ಬೆಟ್ಟ, ಗುಡ್ಡಗಳನ್ನು ಸಲೀಸಾಗಿ ಏರಬಲ್ಲ. ಎಷ್ಟೇ ದೂರದವರೆಗೂ ಸಮುದ್ರದಲ್ಲಿ ಈಜಬಲ್ಲ,ಗಗನದಲ್ಲಿ ಹಾರಬಲ್ಲ ಸಾಮಥ್ಯ೯ ಹೊಂದಬಲ್ಲ ಎಂದು ಹೇಳಿದ ಅನಂತಶಯನ, ಛಲ ಹಾಗೂ ಕಠಿಣ ಪರಿಶ್ರಮ ಇಂಥ ಸಾಧನೆಗೆ ಅತ್ಯಗತ್ಯ ಎಂದು ಹೇಳಿದರು. ದೊಡ್ಡ ಮಟ್ಟದ ಸಾಧನೆಯ ಕನಸುಗಳನ್ನು ಕಾಣಿ ಎಂದು ಕರೆ ನೀಡಿದ ಅವರು, ಬೆಟ್ಟಗುಡ್ಡಗಳು ಅವುಗಳ ಎಚ್ಚರದಿಂದ ಮಾತ್ರವೇ ದೊಡ್ಡವು ಎನಿಸಿಕೊಂಡಿಲ್ಲ. ಬದಲಿಗೆ ಅವುಗಳು ಮಾನವನಿಗೆ ಒಡ್ಡುವ ಸವಾಲಿನಿಂದಾಗಿ ನಿಜವಾಗಿಯೂ ಅವುಗಳು ಹಿರಿಯದ್ದಾಗಿವೆ ಎಂದು ಹೇಳಿದರು.

ಎಂದಿಗೂ ಪುಟ್ಟ ಮಕ್ಕಳು ಇತರರೊಂದಿಗೆ ಜಗಳವಾಡದೇ ಗೆಳೆತನ ಕಾಪಾಡಿಕೊಳ್ಳಿ, ಗೆಳೆತನವೇ ಜೀವನದ ಬಹುದೊಡ್ಡ ಸಂಪತ್ತಾಗಿದೆ ಎಂಬುದನ್ನು ಮರೆಯದಿರಿ ಎಂದೂ ಅನಂತಶಯನ ಪುಟಾಣಿಗಳಿಗೆ ಕಿವಿಮಾತು ಹೇಳಿದರು.

ಕಾಯ೯ಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ವ್ಯವಸ್ಥಾಪಕರಾದ ರವಿ ಪಿ, ವೇದಿಕೆಯಲ್ಲಿದ್ದರು.

ವಿದ್ಯಾಥಿ೯ನಿ ಶಾವಿ೯ ಭರತ್ ಸ್ವಾಗತಿಸಿ, ಸ್ಟಿಫಾನಿಯಾ ಸ್ಟ್ಯಾನಿ, ಆಂಚಲ್ ಅಯ್ಯಪ್ಪ ಮತ್ತು ಶಾವಿ೯ಕ್ ಅನುಭವ ಹಂಚಿಕೊಂಡ ಕಾಯ೯ಕ್ರಮದಲ್ಲಿ ಶಿಕ್ಷಕಿ ವೀಣಾ ಎಂ.ಎಂ.ನಿರೂಪಿಸಿ, ಶಿಕ್ಷಕಿಯರಾದ ಟಿ.ಪಿ.ರಮ್ಯ ಹಾಗೂ ಬಿ.ಬಿ.ಭಾರತಿ ನಿವ೯ಹಿಸಿದರು. ಐಶಾನಿ ವಂದಿಸಿದರು. ಯುಕೆಜಿ ವಿದ್ಯಾಥಿ೯ಗಳಿಂದ ಅತ್ಯಾಕಷ೯ಕ ಸಾಂಸ್ಕೖತಿಕ ಕಾಯ೯ಕ್ರಮಗಳು ಮನಸೆಳೆದವು

Continue Reading

Trending

error: Content is protected !!