Connect with us

Chikmagalur

ಪತ್ರಕರ್ತರ ಆಹ್ವಾನ ಪತ್ರಿಕೆ ಬಿಡುಗಡೆ

Published

on

ತರೀಕೆರೆ : ತಾಲೂಕು ಪತ್ರಕರ್ತರ ಸಂಘದಿಂದ ಜು. 24ರಂದು ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ಪತ್ರಿಕಾ ದಿನಾಚರಣೆಯ ಆಹ್ವಾನ ಪತ್ರಿಕೆಯನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿ ಡಾ. ದೇವರಾಜ್ ಅವರಿಗೆ ಸಂಘದ ಅಧ್ಯಕ್ಷ ಬಿ ಕೃಷ್ಣ ನಾಯಕ್ ನೀಡುವ ಮೂಲಕ ವಿದ್ಯುಕ್ತವಾಗಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಆಹ್ವಾನಿಸಿದರು.
ಕಾರ್ಯಕ್ರಮವನ್ನು ಶಾಸಕ ಜಿ.ಹೆಚ್ ಶ್ರೀನಿವಾಸ್ ಹಾಗೂ ಚಲನಚಿತ್ರ ನಟ ಧರ್ಮ ಕೀರ್ತಿರಾಜ್ ಉದ್ಘಾಟನೆ ಮಾಡಲಿದ್ದು. ಮಾಜಿ ಶಾಸಕ ಡಿ.ಎಸ್ ಸುರೇಶ್ ಡಿವಿಜಿಯವರ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಜಿಲ್ಲಾ ಅಧ್ಯಕ್ಷ ಜಿ.ಎಂ ರಾಜಶೇಖರ್,
ಹಿರಿಯ ಪತ್ರಕರ್ತ ಅನಂತ ನಾಡಿಗ್, ಕಾಂಗ್ರೆಸ್ ಮುಖಂಡ ಲೋಕೇಶಪ್ಪ ತಾಳಿಕಟ್ಟೆ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ಆರ್ ಆನಂದಪ್ಪ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಹೆಚ್ ಮಹೇಂದ್ರ, ಪುರಸಭಾ
ಅಧ್ಯಕ್ಷೆ ಕಮಲಾ ರಾಜೇಂದ್ರ, ಮುಖಂಡ ರವಿಕಿಶೋರ್, ಪುರಸಭಾ ಮುಖ್ಯಾಧಿಕಾರಿ ಪ್ರಶಾಂತ್ ಉಪಸ್ಥಿತರಿದ್ದು. ಟಿ.ಆರ್ ನಾಗರಾಜ್, ಆರ್ ದೇವಾನಂದ, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಡಾ. ಟಿ.ಎಂ ದೇವರಾಜ್, ಬಂಜಾರ
ಸಂಘದ ಅಧ್ಯಕ್ಷ ಸತ್ಯಪ್ಪ, ಎಂ.ಎ ರಿಯಾಜ್, ಮಾಜಿ ಸೈನಿಕ ಮಿಲಿಟರಿ ಶ್ರೀನಿವಾಸ್ ಅವರುಗಳನ್ನು

ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಕೃಷ್ಣ ನಾಯಕ್ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ರಸ್ತೆಯಲ್ಲಿ ಕಾಡು ಕೋಣ ಪ್ರತ್ಯಕ್ಷ, ಆತಂಕದಲ್ಲೇ ಜನರ ಓಡ

Published

on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ‌ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಮುಂದುವರಿದಿದ್ದು. ಕಳಸ ತಾಲೂಕಿನ ಹಳುವಳ್ಳಿಯಿಂದ ತುಂಬಿಕುಡಿಗೆ ಸಂಪರ್ಕ‌ ಕಲ್ಪಿಸುವ‌ರಸ್ಯೆಯಲ್ಲಿ ಮುಜೆಖಾನ್ ಗ್ರಾಮದ ಸಮೀಪ ರಸ್ತೆಯಲ್ಲಿ ಒಂಟಿ‌ ಕಾಡು ಕೋಣವೊಂದು ಕಾಣಿಸಿಕೊಂಡಿದ್ದು. ವಾಹನ‌ಸವಾರರ ಮೊಬೈಲ್‌ನಲ್ಲಿ‌ ದೃಶ್ಯ ಸೆರೆಯಾಗಿದ್ದು.‌ ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ, ಕಾಡುಕೋಣ ಓಡಿಸುವ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Continue Reading

Chikmagalur

ಬಾಬಾ ಬುಡನ್ ಗಿರಿ ರಸ್ತೆಯಲ್ಲಿ ಗುಡ್ಡ ಕುಸಿತ

Published

on

ಚಿಕ್ಕಮಗಳೂರು ‌: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಇಂದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 6 ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷನೆ ಮಾಡಲಾಗಿದೆ.
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿತವಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತಿದ್ದು, ಮಳೆ ಹೆಚ್ಚಾದ್ರೆ ಒಂದು ಭಾಗದ ಗುಡ್ಡವೇ, ಕುಸಿದು ಬೀಳುವ ಆತಂಕ ಶುರುವಾಗಿದೆ.

Continue Reading

Chikmagalur

ಕೆ‌ಎಸ್‌ಆರ್‌ಟಿಸಿ ‌ಬಸ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾ*ವು

Published

on

ಚಿಕ್ಕಮಗಳೂರು : ಕೆ‌ಎಸ್‌ಆರ್‌ಟಿಸಿ ಬಸ್ – ಬೈ ನಡುವೆ‌ ಮುಖಾಮುಖಿ ಡಿಕ್ಕಿ‌ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಬೈಕ್‌‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ‌ ನಡೆದಿದೆ.

ಕಡೂರು ಪಟ್ಟಣದ ಸುಭಾಷ್ ನಗರದ ನಿವಾಸಿ 21 ವರ್ಷದ ಹುಸೇನ್ ಮೃತ ದುರ್ದೈವಿಯಾಗಿದ್ದು.‌ ಬಸ್ ನಿಲ್ದಾಣದಿಂದ ಬಸ್ ಹೊರಬರುವಾಗ‌ ಈ ಅವಘಡ ಸಂಭವಿಸಿದೆ. ಘಟನೆ ಕುರಿತಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!