Connect with us

Chikmagalur

ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ

Published

on

ಚಿಕ್ಕಮಗಳೂರು : ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ

ನಾಯಿ ಮಾಲೀಕರ ಮೇಲೆ ಆಸಿಡ್ ದಾಳಿ ಮಾಡಿದ ಪಕ್ಕದ ಮನೆಯವರು

ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರನಿಂದ ನಾಯಿಗೆ ಬೈಗುಳ

ನಮಗೆ ಬೈಯುತ್ತಿದ್ದಾನೆ ಎಂದು ತಿಳಿದು ಆಸಿಡ್ ದಾಳಿ

ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಘಟನೆ

ಸುಂದರ್ ರಾಜ್ ಎಂಬುವರ ಮೇಲೆ ಆಸಿಡ್ ದಾಳಿ

ಆಸಿಡ್ ದಾಳಿಗೊಳಗಾದ ಬಳಿಕ ಸುಂದರರಾಜ್ ಪರಿಸ್ಥಿತಿ ಗಂಭೀರ

ಎಡಗಣ್ಣಿಗೆ ಗಂಭೀರ ಗಾಯ, ಕಣ್ಣಿನ ಪದರ ಬದಲಿಸುವಂತೆ ವೈದ್ಯರ ಸೂಚನೆ

ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲು

ಜೇಮ್ಸ್, ಸುಂದರ್ ರಾಜ್ ಮೇಲೆ ಆಸಿಡ್ ದಾಳಿದ ವ್ಯಕ್ತಿ

ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಬೈಯುತ್ತಿರುವ ಆರೋಪ

ಸುಂದರಾಜ್ ಮೇಲಿನ ಸಿಟ್ಟಿನಿಂದ ಆಸಿಡ್ ನಿಂದ ದಾಳಿ ಮಾಡಿದ ಜೇಮ್ಸ್

ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು

Continue Reading
Click to comment

Leave a Reply

Your email address will not be published. Required fields are marked *

Chikmagalur

ಮಳೆಯಿಂದ ಜಿಲ್ಲೆಯಲ್ಲಿ 1849 ವಿದ್ಯುತ್ ಕಂಬಗಳಿಗೆ ಹಾನಿ

Published

on

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಳೆದೊಂದು ವಾರ ಮಳೆ ಅಬ್ಬರಿಸಿತ್ತು. ಆದರೆ ಕಳೆದ ಎರಡ್ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ ಬೀಸ್ತಿರೋ ರಣ ಗಾಳಿಗೆ ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದೆ.

ವಸ್ತಾರೆ ಸಮೀಪದ ಆಮೆಕಟ್ಟೆ ಬಳಿ ರಣ ಗಾಳಿಗೆ 66 ಕೆ.ವಿ ವಿದ್ಯುತ್ ಟವರ್ ಅರ್ಧಕ್ಕೆ ಮುರಿದು ಬಿದ್ದಿದೆ. ಇದರಿಂದಾಗಿ ಆಲ್ದೂರು ಹೋಬಳಿಯ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಬಂದ್ ಆಗಿದ್ದು, ಇನ್ನು ಎರಡು ದಿನ ಕತ್ತಲಲ್ಲಿ ಗ್ರಾಮದ ಜನರು ಕಳೆಯುವಂತೆ ಆಗಿದೆ.

 

ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಜೊತೆಗೆ ಗಂಟೆಗೆ 45 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿಯು ಬೀಸುತ್ತಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದೆ. ಭಾರಿ ಗಾಳಿಯಿಂದಾಗಿ ಮನೆಗಳ ಮೇಲೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು ಹೆಚ್ಚಿನ‌ ಹಾನಿ ಸಂಭವಿಸಿದೆ

 

ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 1849 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಈಗಾಗಲೇ 1693 ವಿದ್ಯುತ್ ಕಂಬಗಳನ್ನು ಬದಲಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಹೆಚ್ಚು ಮಳೆ ಬೀಳುತ್ತಿರುವ ಪ್ರದೇಶ ಹಾಗೂ ವಾಹನಗಳು ಹೋಗಲು ಸಾಧ್ಯವಾಗದಿರುವ ತಳಗಳಲ್ಲಿ ಮಾತ್ರ ಇದುವರೆಗೆ ವಿದ್ಯುತ್ ಕಂಬಗಳನ್ನು ಬದಲಿಸಲು ಸಾಧ್ಯವಾಗಿಲ್ಲ. ಕೆಲವು ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡಲು ಎರಡು ಮೂರು ದಿನವಾಗುತ್ತಿದೆ. ಒಮ್ಮೆ ವಿದ್ಯುತ್ ಲೈನ್ ಸರಿಪಡಿಸಿ ಬಂದ ಬಳಿಕ ಮತ್ತೆ ಅದೇ ಲೈನ್ ಮೇಲೆಯೇ ಮರಗಳು ಬೀಳುತ್ತಿರುವುದರಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂದರು.

Continue Reading

Chikmagalur

ಕಾಫಿನಾಡಿನಲ್ಲಿ ಮುಂದುವರೆದ ಮಳೆ ಅಬ್ಬರ

Published

on

ಚಿಕ್ಕಮಗಳೂರು :

 

ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ ಅಬ್ಬರ

 

ಮಲೆನಾಡಲ್ಲಿ ಬೀಸ್ತಿರೋ ರಣ ಗಾಳಿಯಿಂದ ಮುರಿದು ಬಿದ್ದ ವಿದ್ಯುತ್ ಕಂಬ

 

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನ ತಲೆ ಮೇಲೆ ವಿದ್ಯುತ್ ಕಂಬ

ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರು

 

ಮೂಡಿಗೆರೆ ತಾಲೂಕಿನ ತುಂಬರಗಡಿ ಗ್ರಾಮದಲ್ಲಿ ಘಟನೆ

 

ಬಸ್ ಇಳಿದು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಬಿದ್ದ ಕಂಬ

 

ದಿವೀತ್ ಎಂಬ ಯುವಕನ ತಲೆಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Continue Reading

Chikmagalur

ಮುಳ್ಳಯನಗಿರಿ ಪ್ರವಾಸಿಗರಿಗೆ ಜುಲೈ 29 ರವರೆಗೆ ನಿರ್ಬಂಧ

Published

on

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಮತ್ತೆ ಒಂದು ವಾರ ಪ್ರವಾಸಿ ವಾಹನಗಳನ್ನ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್‌ ತಿಳಿಸಿದ್ದಾರೆ.

 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ರಸ್ತೆಯಲ್ಲಿ ಹಲವು ಕಡೆ ಭೂ ಕುಸಿತ ಉಂಟಾಗಿದ್ದು ಲೋಕೋಪಯೋಗಿ ಇಲಾಖೆ ಇನ್ನೂ ಒಂದು ವಾರ ರಸ್ತೆ ದುರಸ್ಥಿಗೆ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಮುಂದಿನ ವಾರದ ವರೆಗೂ ಅಂದರೆ ಜುಲೈ 29 ರವರೆಗೆ ಗಿರಿ ಪ್ರದೇಶಕ್ಕೆ ಪ್ರವಾಸಿಗರ ವಾಹನಗಳನ್ನು ನಿಷೇಧಿಸುವುದಾಗಿ ಹೇಳಿದರು.

 

ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ವಾಡಿಕೆಗಿಂತ 166 ಪ್ರತಿಶತ ಮಳೆ ಬಿದ್ದಿದ್ದು 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದರು. ಇದುವರೆಗೂ 192 ಮನೆಗಳು ಬಿದ್ದಿದ್ದು 77 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದರು. ಬಹುತೇಕ ರಸ್ತೆಗಳು ಹಾಳಾಗಿದ್ದು 41 ಸೇತುವೆಗಳಿಗೆ ಹಾನಿಯಾಗಿದೆ ಎಂದು ಡಿ.ಸಿ ಮಾಹಿತಿ ನೀಡಿದರು.

 

1849 ವಿದ್ಯುತ್ ಕಂಬಗಳು ಮುರಿದಿದ್ದು ದುರಸ್ಥಿ ಬರದಿಂದ ಸಾಗಿದೆ ಎನ್.ಡಿ ಆ‌ರ್.ಎಫ್, ಎಸ್.ಡಿ.ಆರ್.ಎಫ್ ತಂಡಗಳು ಸಹಾ ಸನ್ನದ್ದವಾಗಿವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿ ಯಲ್ಲಿ ಎಸ್ಪಿ ವಿಕ್ರಮ್ ಅಮಟೆ ಜಿಲ್ಲಾ ಪಂಚಾಯ್ತಿ ಸಿಇಓ ಕೀರ್ತನಾ ಹಾಜರಿದ್ದರು.

Continue Reading

Trending

error: Content is protected !!