Connect with us

Hassan

ನೂತನ ಶ್ರೀ ಕಾಳಿಕಾಂಬ-ಕರ್ಮಠೇಶ್ವರ ದೇವಾಲಯದ ಲೋಕಾರ್ಪಣೆಗೆ ಸಿದ್ಧತೆ

Published

on

ಮಾ.೨೬ ರಿಂದ ೩೦ರ ವರೆಗೂ ಕಾರ್ಯಕ್ರಮ: ಹೆಚ್.ಕೆ. ಆನಂದ್

ಹಾಸನ: ನಗರದ ೨೪ನೇ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡಿರುವ ಶ್ರೀ ಕಾಳಿಕಾಂಬ ಮತ್ತು ಕರ್ಮಠೇಶ್ವರ ದೇವಾಲಯದ ಲೋಕಾರ್ಪಣೆಗೆ ಸಿದ್ಧತೆ ಸಂಪೂರ್ಣಗೊಂಡಿದ್ದು, ಮಾರ್ಚ್ ೨೬ ರಿಂದ ೩೦ರ ವರೆಗೂ ಐದು ದಿನಗಳ ಕಾಲ ಬೃಹತ್ ಶಿಲಾಮಯ ದೇವಸ್ಥಾನದ ದೇವರ ಪ್ರಾಣ ಪ್ರತಿಷ್ಟಾಪನೆ, ಲೋಕಾರ್ಪಣೆ ಮತ್ತು ಉತ್ಸವಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ನವೀಕರಣ ಸಮಿತಿ ಅಧ್ಯಕ್ಷ ಹೆಚ್.ಕೆ. ಆನಂದ್ ಮತ್ತು ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್ ಬಿ. ಕುಮಾರಚಾರ್ ತಿಳಿಸಿದರು.

ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹು ಪ್ರಾಚೀನವಾದ ಈ ದೇವಾಲಯ ಮತ್ತು ಸಭಾಂಗಣವು ಪ್ರತ್ಯೇಕವಾಗಿರಬೇಕೆಂದು ಅಷ್ಟಮಂಗಲ ಪ್ರಶ್ನ ಚಿಂತನೆಯಲ್ಲಿ ಬಂದ ಹಿನ್ನಲೆಯಲ್ಲಿ ದೇವಾಲಯ ನವೀಕರಣ ಮಾಡಲಾಗುತ್ತಿದೆ. ಸಂಪೂರ್ಣ ಶಿಲಾಮಯವಾದ ಈ ದೇವಾಲಯವನ್ನು ಸರಿ ಸುಮಾರು ೫ ಕೋಟಿ ರೂಪಾಯಿ ವೆಚ್ಚದಲ್ಲಿ ದಾನಿಗಳು ಮತ್ತು ಸಮಾಜ ಬಾಂಧವರ ಪೂರ್ಣ ಸಹಕಾರದಿಂದ ನಿರ್ಮಾಣ ಮಾಡಲಾಗಿದೆ ಎಂದರು. ಕಳೆದ ಎರೆಡು ವರ್ಷಗಳಿಂದ ಕಾರ್ಕಳದ ಪ್ರಖ್ಯಾತ ಶಿಲ್ಪಿ ಕೃಷ್ಣಚಾರ್ಯ ಅವರು ದೇವಾಲಯಗಳ ವಾಸ್ತುಶಾಸ್ತ್ರ ಅನ್ವಯ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಶ್ರೀ ಕಾಳಿಕಾಂಬ ಮತ್ತು ಕರ್ಮಠೇಶ್ವರ ದೇವರುಗಳಿಗೆ ವಿಶೇಷ ಗರ್ಭಗುಡಿ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸಮಾಜದ ವಿವಿಧ ಸಂಘಟನೆಗಳ ಗುರು ಹಿರಿಯರ ಸಲಹೆ ಸಹಕಾರ ಪಡೆಯಲಾಗಿದೆ ಎಂದು ವಿವರಿಸಿದರು.

ದೇವಾಲಯದ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಹರೀಶ್ ಮಾತನಾಡಿ, ಈ ಬೃಹತ್ ಶಿಲಾಮಯ ದೇವಸ್ಥಾನದ ದೇವರ ಪ್ರಾಣ ಪ್ರತಿಷ್ಟಾಪನೆ, ಲೋಕಾರ್ಪಣೆ ಮತ್ತು ಉತ್ಸವಾದಿ ಕಾರ್ಯಕ್ರಮಗಳನ್ನು ಮಾರ್ಚ್ ೨೬ ರಿಂದ ೩೦ರವರೆಗೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮಗಳಲ್ಲಿ ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಶ್ರೀ ವೀರೇಂದ್ರ ಹೆಗಡೆ, ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಿಲ್ಪಿ ಅರುಣ್ ಯೋಗಿರಾಜ್, ಸಮಾಜದ ಎಲ್ಲ ಸ್ವಾಮೀಜಿಗಳು ಮತ್ತು ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಎ. ಬ್ಯಾಟರಂಗಚಾರ್, ಹೆಚ್.ವಿ. ಹರೀಶ್, ಕೇಶವಪ್ರಸಾದ್, ಅನಿಲ ಪದ್ಮನಾಭ, ಹೆಚ್.ಕೆ. ಸತೀಶ್, ಶ್ರೀನಿವಾಸ್, ಗೋಪಾಲಾಚಾರ್, ಶ್ರೀಕಂಠಮೂರ್ತಿ, ಲೋಕೇಶ್, ಸುರೇಶ್, ಆನಂದ್, ನಾಗೇಶ್ ಮತ್ತು ಮೋಹನ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಆರು ಜನ ನಿವೃತ್ತ ಸರಕಾರಿ ವಾಹನ ಚಾಲಕರಿಗೆ ಸನ್ಮಾನ

Published

on

ಹಾಸನ: ಅನೇಕ ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸ್ಲಲ್ಲಿಸಿ ನಿವೃತ್ತಗೊಂಡ ಆರು ಜನ ಸರಕಾರಿ ವಾಹನ ಚಾಲಕರನ್ನು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಶಿವಾನಂದ್ ನೇತೃತ್ವದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ ಅವರು ಸನ್ಮಾನಿಸಿ ಗೌರವಿಸಲಾಯಿತು.

ಇದೆ ವೇಳೆ ಮಾಧ್ಯಮದೊಂದಿಗೆ ಈ. ಕೃಷ್ಣೇಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಒಟ್ಟು ೨೪ ಸಾವಿರ ಜನ ಸರಕಾರಿ ನೌಕರರು ಇದ್ದು, ಇವರಲ್ಲಿ ವಾಹನ ಚಾಲಕರಾಗಿ ೬ ಜನರು ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರಿಗೆ ವಾಹನ ಚಾಲಕರ ಸಂಘದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ತಮ್ಮ ಸೇವಾವಧಿಯಲ್ಲಿ ಸರಕಾರಿ ಅಧಿಕಾರಿಗಳೊಂದಿಗೆ ಕಾರ್ಯ ಧಕ್ಷತೆಯೊಂದಿಗೆ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಗೊಂಡ ವಾಹನ ಚಾಲಕರ ಕುಟುಂಬಕ್ಕೆ ದೇವರು ಒಳ್ಳೆಯದನ್ನು

ಮಾಡಲಿ ಎಂದು ಹಾರೈಸಿದರು. ವಾಹನ ಚಾಲಕರ ಕಷ್ಟಗಳಿವೆ ಅದಕ್ಕೆ ಸರಕಾರ ಮತ್ತು ಸರಕಾರಿ ನೌಕರರ ಸಂಘ ಸದಾ ಅವರ ಜೊತೆ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ವಾಹನ ಚಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಧರಿಯಾಗಿ ಸಂಘಟನೆ ಮಾಡಿಕೊಂಡು ಬರುತ್ತಿದೆ. ಯಾವಾಗಲು ನಿಮ್ಮ ಜೊತೆ ಸಂಘ ಇರುವುದಾಗಿ ಹೇಳಿದರು.

ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್, ಕಂದಾಯ ಇಲಾಖೆಯ ಎಂ.ಎನ್. ಬಸಪ್ಪ, ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೊಳೆನರಸೀಪುರದ ರಂಗನಾಥ್, ಡಿ.ಹೆಚ್.ಓ. ಆರೋಗ್ಯ ನಿರ್ದೇಶಕರ ಚಾಲಕರಾಗಿದ್ದ ದಿಗಂಬರಗೌಡ, ಅರಸೀಕೆರೆ

ಆರೋಗ್ಯ ಇಲಾಖೆಯಲ್ಲಿ ವಾಹ ಚಾಲಕರಾಗಿ ಕರ್ತವ್ಯ ಇಲಾಖೆಯ ಹೆಚ್.ಎಸ್. ಪಂಚಾಕ್ಷರಿ ಈ ಆರು ಜನರು ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರನ್ನು ವಾಹನ ಚಾಲಕರ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು.

Continue Reading

Hassan

ಹೊಳೆನರಸೀಪುರದಲ್ಲಿ ವಿಧಾನ ಪರಿಷತ್ ಸದಸ್ಯ ಯತಿಂದ್ರ ಸಿದ್ದರಾಮಯ್ಯ

Published

on

ಹೊಳೆನರಸೀಪುದಲ್ಲಿ ಆಯೋಜಿಸಿದ್ದ ನೂತನ ಲೋಕಸಭಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿಕೆ

*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷಗಳು ಸತತ ಕುತಂತ್ರ ನಡೆಸುತ್ತಿವೆ*

*ಜಾತಿ ವ್ಯವಸ್ಥೆ ಎಷ್ಟಿದೆ ಎಂದರೆ ಒಬ್ಬ ಹಿಂದುಳಿದ ವರ್ಗದವರು ಎರಡನೇ ಬಾರಿ ಮುಖ್ಯಮಂತ್ರಿ ಆಗುವುದಕ್ಕೆ ಆಗಿಲ್ಲ*

ದೇವರಾಜ ಅರಸು ಅವರನ್ನು ಬಿಟ್ಟರೆ ಎರಡನೇ ಬಾರಿ ಹಿಂದುಳಿದ ವರ್ಗದಿಂದ ಮುಖ್ಯಮಂತ್ರಿ ಆಗಿರುವುದು ಸಿದ್ದರಾಮಯ್ಯ

ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ನೀವು ಕಾರಣ

*ನೀವು ಒಗ್ಗಟ್ಟಾಗಿ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದರಿಂದ ಅವರು ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿದ್ದಾರೆ*

*ಇಷ್ಟೆಲ್ಲಾ ರಾಜಕೀಯ ವಿರೋಧಗಳಿದ್ದರೂ ಕೂಡ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ*

*ನೀವು ಎಲ್ಲಿಯವರೆಗೆ ರಾಜಕೀಯವಾಗಿ ಅವರ ಹಿಂದೆ ನಿಂತಿರುತ್ತೀರೋ ಅಲ್ಲಿಯವರೆಗೆ ಅವರನ್ನು ರಾಜಕೀಯವಾಗಿ ಅಳಿಯಲು, ಸೋಲಿಸಲು ಆಗುವುದಿಲ್ಲ*

*ಅಧಿಕಾರದಲ್ಲಿದ್ದಾಗ ಅವರಿಗೆ ಪ್ರತಿ ಹೆಜ್ಜೆಯಲ್ಲೂ ಅಗ್ನಿಪರೀಕ್ಷೆ ಇರುತ್ತದೆ*

*ಸಣ್ಣ ತಪ್ಪು ಮಾಡಿದರೂ ಸಹ ಕಾಯುತ್ತಾ ಇರುತ್ತಾರೆ*

*ಸಣ್ಣ ತಪ್ಪು ಮಾಡಿದರೂ ಸಹ ಅದನ್ನು ದೊಡ್ಡದಾಗಿ ಬಿಂಬಿಸಿ ಅವರನ್ನು ಕಾಲೆಳೆಯಲು, ಅಧಿಕಾರದಿಂದ ಕೆಳಗಿಳಿಸಲು ಎಂದು ಕಾಯ್ತಾ ಇರ್ತಾರೆ*

*ಆದರೂ ಸಹ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯ್ಕೆ ಆಗಿರುವುದಕ್ಕೆ ನಿಮ್ಮಗಳ ಬೆಂಬಲವೇ ಕಾರಣ*

*ಯಾರೇ ಎಷ್ಟು ಅಪಪ್ರಚಾರ ಮಾಡಿದರು ಸಹ ಅದಕ್ಕೆ ಕಿವಿ ಕೊಡಬೇಡಿ ಅದನ್ನು ನಂಬಬೇಡಿ*

ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ನಿಮಗೆ ಗೊತ್ತಿದೆ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು

ಸಿದ್ದರಾಮಯ್ಯ ಅವರು ಸಮಾಜದ ಕಟ್ಟ ಕಡೆಯ, ತುಳಿತಕ್ಕೆ, ಶೋಷಣೆಗೆ ಒಳಗಾದ ವ್ಯಕ್ತಿಗೆ ಬೆಂಬಲ ನೀಡಿಕೊಂಡು ಸುಮಾರು 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ

ಬೇರೆ ಯಾರಾದರೂ ಮುಖ್ಯಮಂತ್ರಿ ಆಗಿದ್ದರೆ

ಇಷ್ಟೊಂದು ಗ್ಯಾರೆಂಟಿ ಯೋಜನೆಗಳಿಗೆ 50 ರಿಂದ 60 ಸಾವಿರ ಕೋಟಿ ವೆಚ್ಚವಾಗುವ ಹಣವನ್ನು ನೇರವಾಗಿ ಜನರ ಕೈಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದರಾ

ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತವಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಆರ್ಥಿಕ ಪರಿಸ್ಥಿತಿ ಕುಸಿಯದಂತೆ ನೋಡಿಕೊಳ್ಳುತ್ತಿರುವುದು ಮುಖ್ಯಮಂತ್ರಿಗಳ ಸಾಧನೆಯಾಗಿದೆ

ಚುನಾವಣಾ ಸಮಯದಲ್ಲಿ ಮಾತ್ರ ನಾವು ರಾಜಕೀಯ ಮಾಡಬೇಕು ಪಕ್ಷದ ಪರವಾಗಿ ನಿಲ್ಲಬೇಕು

ಎಲ್ಲರಿಗೂ ಸರಿಯಾದ ನ್ಯಾಯ ಸಿಗುತ್ತಿದೆ ಎಂದರೆ ಅದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ

Continue Reading

Hassan

ಪಿಯು ಎಂದರೇ ಪ್ರಧಾನವಾದ ಕಾಲಘಟ್ಟ, ಸಾಧನೆ ಮಾಡಿ – ಹೆಚ್.ಎಲ್. ಮಲ್ಲೇಶ್ ಗೌಡ

Published

on

ಹಾಸನ: ಪಿಯುಸಿ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಇದೊಂದು ಪ್ರಧಾನವಾದ ಕಾಲಘಟ್ಟವಾಗಿದ್ದು, ಈ ಹಂತದಲ್ಲಿ ಸಾಧನೆ ಮಾಡಿದರೇ ನಿಮ್ಮ ಪೋಷಕರಿಗೆ ಹಾಗೂ ಶಿಕ್ಷರಿಗೂ ಸೇರಿದಂತೆ ಎಲ್ಲಾರಿಗೂ ಸಂತೋಷ ತರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸುಜಲಾ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಸುಜಲ ಕಾಲೇಜಿನ ಅಧ್ಯಕ್ಷರಾದ ಲೋಕೇಶ್ ಅವರು ವಿಶೇಷ ಆಸಕ್ತಿಯನ್ನು ಇಟ್ಟುಕೊಂಡು ಸಂಸ್ಥೆಯಲ್ಲಿ ಬೆಳೆಸುವ

ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಜನರು ನನ್ನ ಶಿಷ್ಯರು ಹಾಗೂ ಗಂಗೇಗೌಡರ ಶಿಷ್ಯರು ಕೂಡ ಇರುವುದು ನಮಗೆ ಸಂತೋಷ ತಂದಿದೆ. ಇದೊಂದು ಬಹಳ ಪ್ರೀತಿಯ ಶಿಕ್ಷಣ ಸಂಸ್ಥೆ ಎಂದು ಬಣ್ಣಿಸಿದರು. ಪಿಯುಸಿ ಎಂದರೇ ತಮ್ಮೆಲ್ಲಾ ಪ್ರತಿಭೆಯನ್ನು ಹೊರಗೆ ಹಚ್ಚಿ ತಮ್ಮೆಲ್ಲ ಶ್ರಮವನ್ನು ಪರೀಕ್ಷೆಗೆ ಒಳಪಡಿಸಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕೆ

ಇದೊಂದು ಪ್ರಧಾನವಾದ ಕಾಲಘಟ್ಟ ಎಂದು ಭಾವಿಸಿದ್ದೇನೆ ಎಂದರು. ಪಿಯುಸಿ ಓದುವಾಗ ಮಕ್ಕಳು ಮಾತ್ರ ಓದುವುದಿಲ್ಲ. ಅವರ ಶಿಕ್ಷಕರು ಕೂಡ ಓದುತ್ತಿರುತ್ತಾರೆ. ಜೊತೆಗೆ ಅವರ ಅಪ್ಪ ಅಮ್ಮಂದಿರು ಕೂಡ ಓದುತ್ತಿರುತ್ತಾರೆ. ನಿಮ್ಮ ಸಾಧನೆ ಒಬ್ಬರಿಗೆ ಮಾತ್ರ ಖುಷಿ ಕೊಡುವಂತದಲ್ಲ. ನಿಮಗೆ ಪಾಠ ಮಾಡಿದ ಶಿಕ್ಷಕರಿಗೆ ಅಪಾರವಾದ ಸಂತೋಷ ತಂದರೇ ಇನ್ನು ನಿಮ್ಮ ತಂದೆ ತಾಯಿಗೆ ಇನ್ನು ಹೆಚ್ಚಿನ ರೀತಿ ಖುಷಿ ಕೊಡಲಿದೆ ಎಂದು ಕಿವಿಮಾತು ಹೇಳಿದರು. ಮಕ್ಕಳು ಏನಾದರೂ ಹೆಚ್ಚಿನ ಅಂಕವನ್ನು ಗಳಿಸಿಬಿಟ್ಟರೇ ಎಲ್ಲಾರಿಗೂ ಈ ವಿಚಾರ ಹೇಳಿಕೊಳ್ಳುವ ಹಂಬಲ ಹೊಂದಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಇದೆ ವೇಳೆ ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಗಂಗೇಗೌಡ, ಸುಜಲ ಕಾಲೇಜು ಅಧ್ಯಕ್ಷರಾದ ಲೋಕೇಶ್, ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲರಾದ ನಾಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Continue Reading

Trending

error: Content is protected !!