Connect with us

Hassan

ನೂತನ ಮನೆ ಕ್ಯೂರಿಂಗ್‌ಗೆ ನೀರನ್ನು ಹಾಕದಿರುವ ವಿಚಾರಕ್ಕೆ ಮಗನಿಂದ ತಂದೆಯ ಹತ್ಯೆ, ಮಗನ ಬಂಧನ: ಎಸ್ಪಿ ಸುಜೀತಾ ಮಾಹಿತಿ

Published

on

ಹಾಸನ: ನೂತನ ಮನೆ ನಿರ್ಮಾಣದ ವೇಳೆ ಕ್ಯೂರಿಂಗ್ ಗೆ ನೀರನ್ನು ಹಾಕಿಲ್ಲ ಎನ್ನುವ ಕಾರಣಕ್ಕೆ ಮಗನಾದ ಸುದೀಪ್ ೨೭ ವರ್ಷ ಎಂಬುವನು ತನ್ನ ತಂದೆ ರವಿ ೫೦ ವರ್ಷ ಹತ್ಯೆ ಆಗಿರುವ ಪ್ರಕರಣದಲ್ಲಿ ತನಿಖೆ ವೇಳೆ ಮಗನನ್ನು ಬಂಧಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾಹಿತಿ ನೀಡಿದರು.

ಎಸ್ಪಿ ಕಛೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಫೆಬ್ರವರಿ ೧ ರಂದು ಬೆಳಗಿನ ಸಮಯದಲ್ಲಿ ಹಾಸನ ತಾಲ್ಲೂಕು ದುದ್ದ ಹೋಬಳಿ, ಪೂಮಗಾಮೆ ಗ್ರಾಮ ರೇಣುಕಾ ರವರು ದುದ್ದ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ತಮ್ಮನಾದ ರವಿಗೌಡ ೫೦ ವರ್ಷ, ಈತನ ಪತ್ನಿ ಮೀನಾಕ್ಷಿ ರವರಿಗೆ ಸುದೀಪ ಮತ್ತು ಸಂದೀಪ ಎಂಬ ಇಬ್ಬರು ಮಕ್ಕಳಿದ್ದು, ಇವರು ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದ ದಾರೂರು ಎಂಬಲ್ಲಿ ಬೇಕರಿ ಇಟ್ಟುಕೊಂಡಿದ್ದು, ರವಿ ಮತ್ತು ಮೀನಾಕ್ಷಿಗೆ ಸಂಬಂಧದಲ್ಲಿ ಹೊಂದಾಣಿಕೆಯಾಗದೇ ಸುಮಾರು ೪-೫ ವರ್ಷಗಳಿಂದಲೂ ರವಿ ರವರನ್ನು ಬಿಟ್ಟು ಮಕ್ಕಳೊಂದಿಗೆ ದಾರೂರಿನಲ್ಲಿ ವಾಸವಾಗಿದ್ದರು. ರವಿಯು ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು, ತನ್ನ ತಾಯಿ ಬೋರಮ್ಮ ರವರೊಂದಿಗೆ ವಾಸವಾಗಿದ್ದು, ಈಗ್ಗೆ ಸುಮಾರು ೮ ತಿಂಗಳುಗಳಿಂದ ರವಿಯ ಮೊದಲನೆಯ ಮಗ ಸುದೀಪ ಬಿನ್ ರವಿಗೌಡ ರವಿ, ವಯಸ್ಸು ೨೪ ವರ್ಷ ಈತನು ಊರಿಗೆ ಬಂದು ಅವರ ಸೈಟಿನಲ್ಲಿ ಮನೆಯನ್ನು ಕಟ್ಟಿಸುತ್ತಿದ್ದು, ರವಿಯೂ ಮನೆ ನಿರ್ಮಾಣದ ಕೆಲಸಕ್ಕೆ ಸಹಾಯ ಮಾಡುತ್ತಾ, ಅದೇ ಮನೆಯ ಆರ್.ಸಿ.ಸಿ. ಯ ಮೇಲೆ ಮಲಗಿಕೊಳ್ಳುತ್ತಿದ್ದು, ಸುದೀಪನೂ ಯಾವಾಗಲೂ ರಾತ್ರಿ ವೇಳೆಯಲ್ಲಿ ತನ್ನ ತಂದೆ ರವಿಯೊಂದಿಗೆ ಅವರ ಹೊಸ ಮನೆಯ ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಹೀಗಿರುವಾಗ ರವಿಯು ಹೊಸಮನೆಯ ಗೃಹ ಪ್ರವೇಶವನ್ನು ಫೆಬ್ರವರಿ ೧೮ ರಂದು ಇಟ್ಟುಕೊಂಡು ರವಿಯ ಪತ್ನಿ ಮೀನಾಕ್ಷಿಯು ಸಹ ಬಂದು ಗೃಹಪ್ರವೇಶದ ಪತ್ರಿಕೆಗಳನ್ನು ಸಂಬಂಧಿಕರಿಗೆ ಹಂಚಲೆಂದು ಬಂದರು. ಅವರ ತವರು ಮನೆಯಾದ ದ್ಯಾಪಲಾಪುರ ಗ್ರಾಮದಲ್ಲಿದ್ದು, ಜನವರಿ ೩೧ ರಂದು ರಾತ್ರಿ ಸುಮಾರು ೧೦:೩೦ ಗಂಟೆ ಸಮಯದಲ್ಲಿ ಸುದೀಪ ಮತ್ತು ತಮ್ಮ ರವಿಯು ಮನೆಯ ಆರ್.ಸಿ.ಸಿ ಮೇಲೆ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಳ್ಳುತ್ತಾ, ರವಿಗೆ ಮನೆಗೆ ಸರಿಯಾಗಿ ಕ್ಯೂರಿಂಗ್ ಆಗಲು ನೀರು ಹಾಕುತ್ತಿಲ್ಲ. ಸರಿಯಾಗಿ ಮನೆ ಕೆಲಸ ಮಾಡುತ್ತಿಲ್ಲ.

ಯಾವಾಗಲು ಕುಡಿದಿರುತ್ತೀಯಾ ಈ ದಿನ ಕೊಲೆ ಮಾಡದೇ ಬಿಡುವುದಿಲ್ಲವೆಂದು ಸುದೀಪನು ರವಿಗೆ ಥಳಿಸಲಾಯಿತು. ಯಾವಾಗಲೂ ಇದೇ ರೀತಿ ಗಲಾಟೆ ಮಾಡಿಕೊಳ್ಳುತ್ತಾರಲ್ಲವೆಂದು ಸುಮ್ಮನಿದ್ದು, ರಾತ್ರಿ ಸುಮಾರು ೧೧:೪೫ ಗಂಟೆ ಸಮಯದಲ್ಲಿ ರವಿಯು ಕೂಗಿ ನೀರು ಕೊಡಿ ಎಂದು ಕೇಳಿದಾಗ ನಾನು ಮತ್ತು ಲಕ್ಷ್ಮಿ ದೇವಿ ಇಬ್ಬರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ತೆಗೆದುಕೊಂಡು ಆರ್.ಸಿ.ಸಿ ಮೇಲೆ ಹೋಗಿ ಕುಡಿಯಲು ರವಿಗೆ ನೀರನ್ನು ಕೊಟ್ಟು ಬಂದಿದ್ದು, ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ರವಿ ರವರ ಮನೆಯ ಪಕ್ಕದ ವಾಸಿಯಾದ ಲಕ್ಷ್ಮಮ್ಮ ರವರು ಸಹ ಕುಡಿಯಲು ನೀರುಕೊಟ್ಟಿದ್ದು, ಬೆಳಿಗ್ಗೆ ಸುಮಾರು ೬ ಗಂಟೆಯಿಂದ ೭ ಗಂಟೆ ಸಮಯದ ಅವಧಿಯಲ್ಲಿ ರವಿಯು ಮೃತಪಟ್ಟಿದ್ದಾನೆ. ರವಿಯ ಮಗ ಸುದೀಪನು ಹೊಸ ಮನೆಗೆ ಸರಿಯಾಗಿ ಕ್ಯೂರಿಂಗ್ ಆಗಲು ನೀರು ಹಾಕುತ್ತಿಲ್ಲ ಹಾಗು ಮನೆ ಕೆಲಸ ಸರಿಯಾಗಿ ಮಾಡದೇ ಯಾವಾಗಲು ಕುಡಿದಿರುತ್ತಾನೆಂದು ಜಗಳ ತೆಗೆದು. ಯಾವುದೋ ಆಯುಧದಿಂದ ಮನೆಯ ಆರ್.ಸಿ.ಸಿ ಮೇಲೆ ಸುದೀಪನು ರವಿಯ ತಲೆಗೆ ಹಾಗು ದೇಹದ ಭಾಗಗಳಿಗೆ ಹೊಡೆದು. ರಕ್ತಗಾಯವಾಗಿದ್ದವನು ಹೊಸ ಮನೆಯ ಪ್ಯಾಸೇಜ್ ಮೇಲೆಯೇ ಮೃತಪಟ್ಟಿರುತ್ತಾರೆಂದು ಹಾಗೂ ಆರೋಪಿ ಮೃತನ ಪತ್ನಿ ಶ್ರೀಮತಿ ಮೀನಾಕ್ಷಿ ಹಾಗೂ ಮಗ ಸುದೀಪ, ರವರುಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮೃತನ ಅಕ್ಕ ಶ್ರೀಮತಿ ರೇಣುಕಾ, ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣಾ ಪ್ರಕರಣ ದಾಖಲಿಸಿ ಆರೋಪಿ ಸುದೀಪ್ ನನ್ನು ಬಂಧಿಸಿ ತನಿಖೆ ಮುಂದುವರಿಸಿರುವುದಾಗಿ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Published

on

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

ಡಿಡಿಪಿಯು ಮಹಾಲಿಂಗಯ್ಯ ಆದೇಶ

ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಉಳಿದ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾದರೆ ರಜೆ ನೀಡುವ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ

ಡಿಸಿ ಅನುಮತಿ ಪಡೆದು ರಜೆ ಘೋಷಣೆ ಮಾಡಿದ ಡಿಡಿಪಿಯು

Continue Reading

Hassan

ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

Published

on

ಹಾಸನ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

ರಾಜೇಶ್ (9) ಸಾವನ್ನಪ್ಪಿದ ಬಾಲಕ

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮಾಡಾಳು ಗ್ರಾಮದಲ್ಲಿ ಘಟನೆ

ಗ್ರಾಮದ ಗೌರಮ್ಮ-ನಾಗರಾಜ ದಂಪತಿ ಪುತ್ರ ರಾಜೇಶ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ರಾಜೇಶ್

ನಾಲ್ಕು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್

ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್

ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಹಿಮ್ಸ್‌ಗೆ ದಾಖಲಾಗಿದ್ದ ರಾಜೇಶ್

ಚಿಕಿತ್ಸೆ ಫಲಕಾರಿಯಾಗದೆ ಇಂದು ರಾಜೇಶ್ ಸಾವು

Continue Reading

Hassan

2 ತಿಂಗಳ ಮಗುವಿಗೆ ಅನಾರೋಗ್ಯ ಬೇಸೆತ್ತ ಅಪ್ಪ ಆತ್ಮಹತ್ಯೆಗೆ ಯತ್ನ

Published

on

ಹಾಸನ: ಮಗುವಿನ ಆರೋಗ್ಯವು ಸುಧಾರಿಸದೇ ದಿನೆ ದಿನೆ ಹೆಚ್ಚಾದ ಹಿನ್ನಲೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ಹಿನ್ನಲೆಯಲ್ಲಿ ಏನು ಮಾಡುವುದು ಎಂಬುದು ತೋಚದೇ ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆ ಕಟ್ಟಡದ ಮೇಲೆ ಹೋಗಿ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕೊನೆಗೆ ಆಸ್ಪತ್ರೆ ಸಿಬ್ಬಂದಿಗಳು ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿ ಬದುಕಿಸಿದ ಘಟನೆ ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿ ಎಂಬುವರ ಎರಡು ತಿಂಗಳ ಮಗುವಿನ ಅನಾರೋಗ್ಯವು ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ಬೇಸರದಿಂದ ಆತ್ಮಹತ್ಯೆ ಯತ್ನಿಸಿರುವುದಾಗಿ ಹೇಳಲಾಗಿದೆ. ಮಗುವಿನ ಅನಾರೋಗ್ಯದಿಂದ ತಂದೆ ಮನನೊಂದಿದ್ದು, ಹಾಸನದ ಜಿಲ್ಲಾ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಮೇಲೇರಿ ಸಾಯುವ ಹೈಡ್ರಾಮ ಮಾಡಲಾಗಿದೆ. ಕಟ್ಟಡದ ಐದನೇ ಮಹಡಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ ಹೊಡ್ಡಿದ್ದು,

ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಯತ್ನ ಮಾಡಲಾಗಿದೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಅನಾಹುತ ತಪ್ಪಿದಂತಾಗಿದೆ. ಗಂಗಸ್ವಾಮಿಯನ್ನ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿಸಿ ನಂತರ ಪೊಲಿಸ್ ಠಾಣೆಗೆ ಆಸ್ಪತ್ರೆ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ರಸ್ತೆಯಲ್ಲಿ ಸಾರ್ವಜನಿಕರು ನೋಡಿದ್ದು, ವಿಡಿಯೋ ಸೆರೆ ಹಿಡಿದಿದ್ದಾರೆ.

Continue Reading

Trending

error: Content is protected !!