Connect with us

Kodagu

ನಿಷೇಧಿತ ಮಾದಕ ವಸ್ತು ಮಾರಾಟ – ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ

Published

on

ಮಡಿಕೇರಿ ; ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದ ಮೂರು ಆರೋಪಿಗಳಿಗೆ ಮಡಿಕೇರಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಪ್ರತಿ ಆರೋಪಿಗೆ ರೂ 1 ಲಕ್ಷ ದಂಡ ಮತ್ತು ದಂಡ ತಪ್ಪಿದಲ್ಲಿ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.


ಕಾಸರಗೋಡು ಜಿಲ್ಲೆಯ ಅಹಮ್ಮದ್ ಕಬೀರ್ (37), ಅಬ್ದುಲ್ ಖಾದರ್ (37), ಮಹಮ್ಮದ್ ಮುಜಮಿಲ್ (37) ಶಿಕ್ಷೆಗೆ ಒಳಗಾದ ಅಪರಾಧಿಗಳು.
2022 ರಲ್ಲಿ ಭಾಗಮಂಡಲ ಮಡಿಕೇರಿ ರಸ್ತೆಯಲ್ಲಿರುವ ಐ.ಬಿ ಜಂಕ್ಷನ್ ಸಮೀಪ ವಾಹನದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಹಿನ್ನೆಲೆ ಭಾಗಮಂಡಲ ಪೊಲೀಸ್ ಠಾಣೆ ಸಿಬ್ಬಂದಿಗಳ ತಂಡ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ 1 ಕೆ.ಜಿ 160 ಗ್ರಾಂ ತೂಕದ ಹ್ಯಾಶಿಷ್ ಆಯಿಲ್ ವಶಪಡಿಸಿಕೊಂಡು ಆರೋಪಿಗಳ ಮೇಲೆ ದೂರು ದಾಖಲಿಸಿಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಚೆಯ್ಯಂಡಾಣೆಯಲ್ಲಿ ಸಂಭ್ರಮದಿಂದ ಜರುಗಿದ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ

Published

on

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಚೆಯ್ಯಂಡಾಣೆಯ ಶ್ರೀ ಗಣೇಶ ಸೇವಾ ಸಮಿತಿಯ ವತಿಯಿಂದ ಶ್ರೀಲಕ್ಷ್ಮಿ ಮಹಿಳಾ ಸಮಾಜದಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಶ್ರೀ ಗೌರಿ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಗಣಪತಿ ಹೋಮ,ನಂತರ ಗೌರಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.ಬಳಿಕ ನೆರದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು. ಅರ್ಚಕರಾದ ಭವಿಷ್ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು. ಮಧ್ಯಾಹ್ನದ ಬಳಿಕ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಚೆಯ್ಯಂಡಾಣೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಬಳಿಕ ಕರಡ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

Kodagu

ಕಾಫಿ ಬೆಳೆ; ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Published

on

ಮಡಿಕೇರಿ : ಕಾಫಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಕಾಫಿ ತೋಟ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವಿಧ ಕಾರ್ಯಚಟುವಟಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ-ಕೆರೆ/ ತೆರೆದಬಾವಿ/ ರಿಂಗ್ ಬಾವಿ/ ತುಂತುರು/ ಹನಿ ನೀರಾವರಿ, ಕಾಫಿ ಗೋಡೌನ್/ ಕಾಫಿ ಕಣ/ ಪಲ್ಪರ್ ಯುನಿಟ್/ ಮೆಕಾನಿಕಲ್ ಡ್ರೈಯರ್/ ಸೋಲಾರ್ ಟನೆಲ್ ಡ್ರೈಯರ್, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಮತ್ತಿತರಕ್ಕೆ÷ಸಹಾಯಧನ ಕಲ್ಪಿಸಲಾಗುತ್ತದೆ.


ಈ ಎಲ್ಲಾ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ಧಿ ಪಡಿಸಲು ಇಚ್ಚಿಸುವ ಅರ್ಹ ಕಾಫಿ ಬೆಳೆಗಾರರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. 25 ಹೆಕ್ಟೇರ್ (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು.
ದಾಖಲಾತಿಗಳ ವಿವರ: ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. 2024-25 ನೇ ಸಾಲಿನ ಪಹಣಿಗಳು/ ಆರ್‌ಟಿಸಿ, ತೋಟದ ಅಂದಾಜು ನಕ್ಷೆ, ಕ್ವೇಟೇಷನ್/ ಪ್ಲಾನ್ ಮತ್ತು ಎಸ್ಟಿಮೇಷನ್. ಜಾತಿ ಪ್ರಮಾಣ ಪತ್ರ (ಎಸ್‌ಸಿ/ಎಸ್‌ಟಿ ಕಾಫಿ ಬೆಳೆಗಾರರಿಗೆ). ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿ ಸಂಪರ್ಕಿಸಬಹುದು ಎಂದು ಗೋಣಿಕೊಪ್ಪ ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶ್ರೀದೇವಿ ಅವರು ತಿಳಿಸಿದ್ದಾರೆ.

Continue Reading

Kodagu

ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರ ; ದೂರವಾಣಿ ಸಂಖ್ಯೆ ಬದಲು

Published

on

ಮಡಿಕೇರಿ : ಗೋಣಿಕೊಪ್ಪಲು ಉಪ-ವಿಭಾಗ ವ್ಯಾಪ್ತಿಯ ಶ್ರೀಮಂಗಲ ವಿದ್ಯುತ್ ವಿತರಣ ಕೇಂದ್ರದ ಮೊಬೈಲ್ ಸಂಖ್ಯೆ ಈ ಮೊದಲು 9449598628 ಆಗಿದ್ದು, ಈ ಸಂಖ್ಯೆಯು ಈಗ ಚಾಲನೆಯಲ್ಲಿ ಇರುವುದಿಲ್ಲ.

ಈಗ ನೂತನವಾಗಿ ಉದ್ಘಾಟನೆಗೊಂಡ 66ಕೆವಿ ವಿತರಣ ಕೇಂದ್ರದ ದೂರವಾಣಿ ಸಂಖ್ಯೆ 8296598628 ಆಗಿರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರು/ವಿದ್ಯುತ್ ಗ್ರಾಹಕರು ತುರ್ತು ಸಮಯದಲ್ಲಿ ವಿದ್ಯುತ್

ಸರಬರಾಜನ್ನು ಕಡಿತಗೊಳಿಸಲು ವಿದ್ಯುತ್ ವಿತರಣ ಕೇಂದ್ರವನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ 8296598628 ಅನ್ನು ಉಪಯೋಗಿಸಿಕೊಳ್ಳುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Trending

error: Content is protected !!