Connect with us

Kodagu

ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗುವ ಕಾಮಗಾರಿಗಳಿಗೆ ವಿ.ಪೇಟೆ ಪುರಸಭೆ ವಿರೋಧ

Published

on

ವಿರಾಜಪೇಟೆ : ನಗರದಲ್ಲಿ ನಿರ್ಮಿತಿ ಕೇಂದ್ರಗಳಿಂದ ನಿರ್ಮಾಣವಾಗಿರುವ ಕಟ್ಟಡಗಳು ಅಪೂರ್ಣವಾಗಿರುವುದು ಮತ್ತು ಕಾಮಗಾರಿಗಳಲ್ಲಿ ವಿಳಂಬಧೋರಣೆ ತಾಳುವುದರಿಂದ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಸಂಸ್ಥೆಗೆ
ನೀಡಬಾರದು ಎಂದು ಪುರಸಭೆಯ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪುರಸಭೆ ವಿರಾಜಪೇಟೆ ವತಿಯಿಂದ ಮುಖ್ಯಧಿಕಾರಿಗಳ ಸಮ್ಮುಖದಲ್ಲಿ ಪುರಸಭೆಯ ಸಭಾಂಗಣದಲ್ಲಿ ನಗರದ ಮಾರುಕಟ್ಟೆ ಪುರಸಭೆ ಕಛೇರಿ, ರಂಗಮಂದಿರ ಸೇರಿದಂತೆ ನೂತನ ಕಟ್ಟಡ ನಿರ್ಮಾಣ ಮಾಡುವ ಡಿ.ಪಿ.ಅರ್.
ತಯಾರಿಸುವ ಸಲುವಾಗಿ ವಿರಾಜಪೇಟೆ ಶಾಸಕರ ಸೂಚನೆಯ ಮೇರೆಗೆ ಇಂದು ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಮುಖ್ಯಧಿಕಾರಿ ಚಂದ್ರಕುಮಾರ್ ಕಟ್ಟಡ ನಿರ್ಮಾಣಗಳ ಬಗ್ಗೆ ನಿರ್ಮಿತಿ ಕೇಂದ್ರಗಳ
ಅಧಿಕಾರಿಗಳು ಡಿ.ಪಿ.ಅರ್ ತಯಾರಿಸಿದ್ದು. ಸಭೆಯ ಮುಂದಿರಿಸಿ ಸದಸ್ಯರ ಅಭಿಪ್ರಾಯ ಸಂಗ್ರಹಣೆಗಾಗಿ ಸಭೆಯ ಮುಂದೆ ಪ್ರಸ್ತಾವನೆ ಸಲ್ಲಿಸಿದರು.
ಹಿರಿಯ ಸದಸ್ಯ ಸಿ.ಕೆ.ಪ್ರಥ್ವಿನಾಥ್ ನಗರದಲ್ಲಿ ಇಗಾಗಲೇ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾದ ಮೀನು ಮಾರುಕಟ್ಟೆಯ ನಿರ್ಮಾಣ ಕಾರ್ಯ ಹಲವು ವರ್ಷಗಳು ತೆಗೆದುಕೊಂಡಿತ್ತು. ಅಲ್ಲದೆ ಕಳಪೆ
ಕಾಮಗಾರಿಗಳಾಗಿವೆ. ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿದೆ. ಕಿಷ್ಕಿಂದೆಯಂತೆ ಸಾರ್ವಜನಿಕರು ಮೀನು ಮಾರುಕಟ್ಟೆಗೆ ತೆರಳುತಿದ್ದಾರೆ. ಮಾರುಕಟ್ಟೆಯ ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಯಾವುದೇ
ಸೌಕರ್ಯ ಒದಗಿಸಲಿಲ್ಲಾ. ಇಂದಿಗೂ ಅದಿಕೃತವಾಗಿ ಉದ್ಘಾಟನೆಯಾದೆ ಉಳಿದಿದೆ. ಎಂದು ಆರೋಪ ಮಾಡಿದರು. ಇದಕ್ಕೆ ಧ್ವನಿಗೋಡಿಸಿದ ಸದಸ್ಯ ಮೊಹಮದ್ದ್ ರಾಫಿ ನಗರದ ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ವಿಳಂಬವಾಗಿದೆ. ನಿರ್ಮಿತಿ
ಕೇಂದ್ರದ ಬದಲು ಇತರ ಸಂಸ್ಥೆಗಳಿಂದ ಡಿ.ಪಿ.ಅರ್ ತಯಾರು ಮಾಡಿಸಿ ಎಂದು ಹೇಳಿದರು.

ಸದಸ್ಯರಾದ ಅನಿತ ಕುಮಾರ್ ಮಾತನಾಡಿ ಪುರಸಭೆಯ ಕಛೇರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ದೂರದೃಷ್ಟಿಯೋಂದಿಗೆ ಕಟ್ಟಡ ನಿರ್ಮಾಣ ಮಾಡವುದು ಅಲ್ಲದೆ ಮೂಭೂತ ಸೌಕರ್ಯ
ಒಳಗೊಂಡಂತೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.

ಸದಸ್ಯರಾದ ಹೆಚ್.ಎಸ್ ಮತೀನ್ ಅವರು ಮಾತನಾಡಿ ಇಂದು ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿದೆ ಮುಂದೆ ನಗರ ಸಭೆಯಾಗುತ್ತದೆ. ದೂರದೃಷ್ಟಿಯಿಂದ ಕಟ್ಟಡ ನಿರ್ಮಾಣ ಮಾಡಬೇಕು. ವಾಹನ ನಿಲುಗಡೆ, ಸದಸ್ಯರ
ಕೊಠಡಿ, ಆದ್ಯಕ್ಷರು. ಉಪಧ್ಯಕ್ಷ, ಮುಖ್ಯಧಿಕಾರಿಗಳ ಕೊಠಡಿ, ಸೇರಿದಂತೆ ಪುರಸಭೆಗೆ ಸಂಭಂದಿಸಿದ ಎಲ್ಲಾ ಕಛೇರಿ ವ್ಯವಸ್ಥೆಗಳು ಒಂದೇ ಸೂರಿನಡಿಯಲ್ಲಿ ಬರುವಂತೆ ಕಟ್ಟಡ ನಿರ್ಮಾಣವಾಗಬೇಕು ಅಲ್ಲದೆ ಎಂದು ಹೇಳಿದರು.
ಡಿ.ಪಿ ರಾಜೇಶ್ ಅವರು ಯಾವುದೇ ಕಾರಣಕ್ಕೂ ವಾಣಿಜ್ಯ ಮಳಿಗೆಗಳಿಗೆ ಅವಕಾಶ ಕಲ್ಪಿಸದಿರಿ. ಸರ್ವ ಸೌಕರ್ಯ ಒಳಗೊಂಡಂತೆ ಕಲಾ ಭವನ ನಿರ್ಮಿಸುವಂತೆ ಸಲಹೆ ನೀಡಿದರು. ಸದಸ್ಯರಾದ ಅಲ್ದುಲ್ ಜಲೀಲ್ ಅವರು ತರಕಾರಿ
ಮಾರುಕಟ್ಟೆಯು ನಿರ್ಮಾಣವಾಗಿ ಸುಮಾರು 100 ವರ್ಷಗಳು ಸಂದಿದೆ. ಕಟ್ಟಡ ಶೀಥಿಲಗೊಂಡು ವರ್ತಕರು ಭಯದಿಂದ ವ್ಯಾಪಾರ ಮಾಡುತಿದ್ದಾರೆ. ಮಾಡುಕಟ್ಟೆಗೆ ತೆರಳುವ ಗ್ರಾಹಕರಿಗೆ ಮೂಲಭೂತ ಸೌಕರ್ಯದಿಂದ
ವಂಚಿತರಾಗಿದ್ದಾರೆ. ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ತೊದರೆಯಾಗದ ರೀತಿಯಲ್ಲಿ ಸುಸಜ್ಜಿತವಾಗಿ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಬೇಕು ಎಂದು ಹೇಳಿದರು.

ಸರ್ವ ಸದಸ್ಯರು ನಗರದಲ್ಲಿ ನಿರ್ಮಿತಿ ಕೇಂದ್ರದಿಂದ ಕೆಲವು ಕಟ್ಟಡಗಳು ನಿರ್ಮಾಣವಾಗಿದ್ದು ಸಂಸ್ಥೆಗಳು ನೀಡುವ ನಕ್ಷೆ ಒಂದಾದರೆ ನಿರ್ಮಿತಿ ಕೇಂದ್ರ ಸಂಸ್ಥೆ ನಿರ್ಮಾಣ ಕಟ್ಟಡ ಬಿನ್ನವಾಗಿರುತ್ತದೆ. ಕಟ್ಟಡ ನಿರ್ಮಾಣದಲ್ಲಿ ವಿಳಂಬ
ನೀತಿ ಅನುಸರಿಸುವುದರಿಂದ ನಗರದಲ್ಲಿ ನಿರ್ಮಾಣವಾಗುವ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಸಂಸ್ಥೆಗೆ ವಹಿಸದಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಪುರಸಭೆಯ ಸರ್ವ ಸದಸ್ಯರು, ಪುರಸಭೆಯ ಸಿಬ್ಬಂದಿಗಳು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಭಗವತಿ ದೇವಸ್ಥಾನ ಅಭಿವೃದ್ಧಿ ಪಡಿಸಲು ಸಹಕರಿಸಲಾಗುವುದು: ಪೊನ್ನಣ್ಣ

Published

on

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಪೂರ್ಣಗೊಂಡ ರಸ್ತೆಯ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರು ನೆರವೇರಿಸಿದರು.

ನರಿಯಂದಡ ಪಂಚಾಯಿತಿ ವ್ಯಾಪ್ತಿಯ ಕರಡ ಸಮೀಪದ ಮಲೆತೀರಿಕೆ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಸಕರ ಅನುದಾನದ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೆಟ್ ರಸ್ತೆಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಬಳಿಕ ಕಡಂಗ ಅರಪಟ್ಟು ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಅಭಿವೃದ್ಧಿ ಪಡಿಸಲು ಸಹಕರಿಸುವ ಭರವಸೆ ನೀಡಿದರು.

ಎಡಪಾಲ ಗ್ರಾಮದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ 20 ಲಕ್ಷ ರೂ ವೆಚ್ಚದ 3 ಕಾಮಗಾರಿಗಳಲ್ಲಿ 2 ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಕುರಿಕಡೆಗೆ ತೆರಳುವ ನೂತನವಾಗಿ ನಿರ್ಮಿಸಿದ ಕಾಂಗ್ರೆಟ್ ರಸ್ತೆಯನ್ನು ಶಾಸಕರು ಉದ್ಘಾಟಿಸಿ ಮತಾನಾಡಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಇರುವ ನಿರಂತರ ಅಪಘಾತ ಸಂಭವಿಸುವ ಸೇತುವೆಯನ್ನು ವೀಕ್ಷಣೆ ಮಾಡಿದ ಶಾಸಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಚೆಯ್ಯಂಡಾಣೆ,ಬಾವಲಿ,ಪಾರಾಣೆ ಸಂಪರ್ಕ ಕಲ್ಪಿಸುವ ಕಾಕೆತೋಡು ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು 62ಲಕ್ಷ ಅನುದಾನದಲ್ಲಿ ಮೀಸಲು ಉದ್ದೇಶಿಸಿರುವ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

ನಂತರ ಪುನರ್ ನಿರ್ಮಾಣ ಗೊಳ್ಳುತ್ತಿರುವ ಅಯ್ಯಪ್ಪ ದೇವಸ್ಥಾನ ಹಾಗೂ ಮುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.ಬಳಿಕ ತಟ್ಟಮಕ್ಕಿ ಪೈಸಾರಿಗೆ ತೆರಳುವ ರಸ್ತೆಗಳನ್ನು ವೀಕ್ಷಿಸಿದ ಶಾಸಕರು ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ,ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮ್ಮರ್, ಡಿಸಿಸಿ ಸದಸ್ಯರಾದ ಮಣಿ ಅಯ್ಯಮ್ಮ, ಶಾಫಿ, ದೇವಸ್ಥಾನ ಅಧ್ಯಕ್ಷ ಸೊಮ್ಮಯ್ಯ, ಕೆಡಿಪಿ ಸದಸ್ಯ ಲವ ಚಿಣ್ಣಪ್ಪ, ಮಾಳೆಟೀರ ಪ್ರಶಾಂತ್, ಐತಿಚಂಡ ಪ್ರಕಾಶ್, ಬೀಮಯ್ಯ, ಮೇದುರ ಗಣು ಕುಶಾಲಪ್ಪ, ಬಿದ್ದಪ್ಪ, ವಿರಾಜಪೇಟೆ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಸರ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

Continue Reading

Kodagu

ಮಹಿಳೆ ಬಲಿ ಪಡೆದಿದ್ದ ಕಾಡಾನೆ ಸೆರೆ: ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರ

Published

on

ಗೋಣಿಕೊಪ್ಪ: ಚನ್ನಂಗೊಲ್ಲಿಯಲ್ಲಿ ಎರಡು ದಿನಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ ಮಹಿಳೆಯನ್ನು ಬಲಿಪಡಿದಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ. ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಕಂಡ್ರೆ ಅವರೊಂದಿಗೆ ಮಾತನಾಡಿ ಕೂಡಲೇ ಕಾರ್ಯಚರಣೆ ಅನುಮತಿ ನೀಡಿ ಪುಂಡಾಣೆಯನ್ನು ಸೆರೆ ಹಿಡಿಯಲು ಮನವಿ ಮಾಡಿದ ಬೆನ್ನಲ್ಲೇ ಶನಿವಾರ ಕಾರ್ಯಚರಣೆ ಆರಂಭಿಸಲಾಯಿತು.

ಕಾರ್ಯಚರಣೆಯನ್ನು ಡಿ ಸಿ ಎಫ್ ಜಗನ್ನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ನಡೆಸಿ ಸಂಜೆ 3 ಗಂಟೆ ಅಂದಾಜಿಗೆ ಕಾಡಾನೆಗೆ ಅರವಳಿಕೆಯ ಮದ್ದನ್ನು ನೀಡಿ ಪ್ರಜ್ಞೆ ತಪ್ಪಿಸಿ ಆನೆಯನ್ನು ಸೆರೆ ಹಿಡಿಯಲಾಯಿತು. ನಂತರ ದುಬಾರೆ ಆನೆ ಶಿಬಿರಕ್ಕೆ ಈ ಆನೆಯನ್ನು ಸ್ಥಳಾಂತರ ಮಾಡಲಾಯಿತು.

ಮತ್ತಿಗೋಡು, ದುಬಾರೆ, ಹಾರಂಗಿ ಶಿಬಿರದಿಂದ ಆರು ಸಾಕಾನೆಗಳು ಆಗಮಿಸಿ, ಅರವಳಿಕೆ ನೀಡುವ ಮೂಲಕ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಾಡಾನೆಗೆ ಯಾವುದೇ ಸಮಸ್ಯೆಯಾಗದಂತೆ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ತಿಳಿಸಿದ್ದಾರೆ.

Continue Reading

Kodagu

ಕೊಡಗು ವಿವಿ ಮುಚ್ಚುವ ಪ್ರಸ್ತಾಪಕ್ಕೆ ವಿರಾಜಪೇಟೆ ಬಿಜೆಪಿ ತೀವ್ರ ವಿರೋಧ

Published

on

ಮಡಿಕೇರಿ : ಕೊಡಗು ವಿಶ್ವ ವಿದ್ಯಾಲಯವನ್ನು ಮುಚ್ಚುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿರಾಜಪೇಟೆ ಬಿಜೆಪಿ ಮಂಡಲ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು, ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಎಂಬ ಗುರಿಯೊಂದಿಗೆ ಕೊಡಗು ಸೇರಿದಂತೆ ೯ ಜಿಲ್ಲೆಗಳಲ್ಲಿ ನೂತನ ವಿವಿಯನ್ನು ಸ್ಥಾಪಿಸಿತು. ಆದರೆ ಇದೀಗ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಕಡೆಗಣಿಸಿ ವಿವಿಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಖಂಡನೀಯವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಮಹತ್ವಾಕಾಂಕ್ಷೆಯಿಂದ ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ನೂತನ ವಿವಿಯನ್ನು ಸ್ಥಾಪಿಸಿತು. ಈ ಹಂತದಲ್ಲೇ ವಿಧಾನಸಭಾ ಚುನಾವಣೆಯೂ ಘೋಷಣೆಯಾದ ಹಿನ್ನೆಲೆ ವಿವಿಗಳಿಗೆ ನೀಡಬೇಕಾದ ಅನುದಾನ ಮತ್ತು ಸೌಲಭ್ಯಗಳನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಒಂದು ವೇಳೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ವಿವಿಗಳಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿ ಸದೃಢಗೊಳಿಸಲಾಗುತ್ತಿತ್ತು. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಖಜಾನೆ ಖಾಲಿ ಮಾಡಿಕೊಂಡು ಕುಳಿತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ಇದೀಗ ಖರ್ಚು ವೆಚ್ಚವನ್ನು ಕುಗ್ಗಿಸುವ ಸಲುವಾಗಿ ಶಿಕ್ಷಣ ಮಂದಿರಕ್ಕೆ ಕೈಹಾಕಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೇ ಕಳೆದಿದೆ. ಆದರೆ ನೂತನ ವಿವಿಗಳಿಗೆ ಬೇಕಾದ ಅನುದಾನ ಮತ್ತು ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ಇದೇ ಕಾರಣದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪನೆಯಾಗಿರುವ ವಿವಿಗಳಿಗೆ ಅಗತ್ಯ ಅನುದಾನ ನೀಡಲು ಸರ್ಕಾರ ಮುಂದಾಗಬೇಕು. ಯುವ ಸಮೂಹ ಶಿಕ್ಷಣದ ಮೂಲಕ ದೇಶ ಕಟ್ಟಬೇಕಾಗಿದೆ. ಕೊಡಗು ವಿವಿ ಮುಚ್ಚುವುದಕ್ಕೆ ಬಿಜೆಪಿ ಎಂದಿಗೂ ಬಿಡುವುದಿಲ್ಲ, ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂದು ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.

Continue Reading

Trending

error: Content is protected !!