Connect with us

Chamarajanagar

ನಿರ್ಮಾಪಕ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕಿಚ್ಚನ ಅಭಿಮಾನಿಗಳು

Published

on

ಚಾಮರಾಜನಗರ, ಜು, 19-  ಚಿತ್ರ ನಿರ್ಮಾಪಕ ಕುಮಾರ್ ಹಾಗೂ ಸುರೇಶ್ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ದೂರು ಕೊಟ್ಟು ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.

ನಟ ಕಿಚ್ಚ ಸುದೀಪ್ ವಿರುದ್ಧ ಬೆಂಗಳೂರು ಮೂಲದ ನಿರ್ಮಾಪಕ ಎಂ ಎನ್ ಕುಮಾರ್ ಹಾಗೂ ಎಂ ಎನ್​ ಸುರೇಶ್ ಎಂಬುವವರು ಸುಳ್ಳು ಸುದ್ದಿ ಹಾಗೂ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸುದೀಪ್ ಅವರಿಗೆ ಮಾನಹಾನಿ ಮಾಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಹಾಗೂ ಇನ್ನಿತರರು ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: ಜು, 2ರಂದು ಕಿಚ್ಚ ಸುದೀಪ್​ ಅವರ 46ನೇ ಸಿನಿಮಾದ ಟೀಸರ್​ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಮರುದಿನ ನಿರ್ಮಾಪಕ ಎನ್ ಎಂ​ ಕುಮಾರ್​ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ, ಅಭಿನಯ ಚಕ್ರವರ್ತಿ ವಿರುದ್ಧ ಆರೋಪ ಮಾಡಿದ್ದರು. ಸುದೀಪ್​ ಅವರು ನನ್ನ ಜೊತೆ ಸಿನಿಮಾ ಮಾಡುತ್ತೇನೆ ಎಣದು ಹೇಳಿ ಮುಂಗಡ ಹಣ ಪಡೆದಿದ್ದಾರೆ. ಆದರೆ ಮುಂಗಡ ಹಣ ಪಡೆದ ನಂತರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪ ಹೊರಿಸಿದ್ದರು. ಸುದೀಪ್​ ಅವರ ಜೊತೆ ನಾನು ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಅದರಂತೆಯೇ ಮುತ್ತತ್ತಿ ಸತ್ಯರಾಜು ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು. ನಿರ್ದೇಶಕ ನಂದಕಿಶೋರ್​ ಅವರನ್ನೂ ಅವರೇ ಕರೆಸಿದ್ದರು. ಅಷ್ಟೆ ಅಲ್ಲದೆ ನನ್ನಿಂದ ಇನ್ನೊಬ್ಬರಿಗೆ ಅಡ್ವಾನ್ಸ್​ ಕೂಡ ಕೊಡಿಸಿದ್ದರು. ಹೈದರಾಬಾದ್​ನಿಂದ ರೈಟರ್​ನ ಕರೆಸಿ ಅಂದಿದ್ದರು, ಅವರು ಹೇಳಿದರೆಂದು ರೈಟರ್​ನ ಕರಸಿದ್ರೆ ಅವರನ್ನು ಸುದೀಪ್​ ಅವರು ಬೆಟಿ ಕೂಡ ಮಾಡಿಲ್ಲ. ಅವರ ಮನೆಗೆ ಹೋದರೆ ಮಾತಿಗೂ ಸಿಗ್ತಿಲ್ಲ ಎಂದು ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದರು.ಇದಕ್ಕೆ ಟ್ವಿಟರ್​ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕಿಚ್ಚ ಸುದೀಪ್​ ಅವರು, ನಂತರ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ನಿರ್ಮಾಪಕ ಎಂ ಎನ್​ ಕುಮಾರ್​ ಅವರು ಮಾಡಿರುವ ಆರೋಪಗಳಿಗೆ ಬೇಷರತ್​ ಕ್ಷಮೆಯಾಚಿಸಬೇಕು ಮತ್ತು ಅವರು ನೀಡಿರುವ ಹೇಳಿಕೆಗಳಿಗೆ 10 ಕೋಟಿ ರೂ. ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮಧ್ಯೆ ನಿರ್ಮಾಪಕ ಎಂ ಎನ್​ ಕುಮಾರ್​ ಅವರು ಫಿಲ್ಮ್​ ಚೇಂಬರ್​ ಎದುರು ಧರಣಿ ಕುಳಿತಿದ್ದರು. ಧರಣಿ ವೇಳೆ ಸುದೀಪ್​ ಹಾಗೂ ತಮ್ಮ ಮಧ್ಯೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಅವರನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದರು. ಸಂಧಾನಕ್ಕೆ ಕೂಡ ಸಿದ್ಧ ಎನ್ನುವ ಮಾತನ್ನೂ ನಿರ್ಮಾಪಕರು ಹೇಳಿದ್ದರು.
ನಟ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರು ಸುದೀಪ್​ ಬೆನ್ನಿಗೆ ನಿಂತಿದ್ದು, ನಮಗೆ ನಿರ್ಮಾಪಕರು ಕೂಡ ಬೇಕು, ಸುದೀಪ್​ ಕೂಡ ಬೇಕು. ಸುದೀಪ್​ ನನ್ನ ಮಗ ಇದ್ದಂತೆ, ನನ್ನ ಮಗನನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಹೇಳಿದ್ದರು. ಜೊತೆಗೆ ಕನ್ನಡ ಚಿತ್ರರಂಗಕ್ಕೆ ರಾಜ್​ಕುಮಾರ್​ ಅವರು ದೊಡ್ಡವರು. ಈಗ ಆ ಸ್ಥಾನದಲ್ಲಿ ಶಿವಣ್ಣ ಇದ್ದಾರೆ. ಅವರು ಈ ಸಮಸ್ಯೆಯ ಮಧ್ಯಸ್ಥಿಕೆ ವಹಿಸಬೇಕು. ನಿರ್ಮಾಪಕ ಕುಮಾರ್​ ಅವರು ದಾಖಲೆ ಸಮೇತ ಬರಲಿ, ಮೊದಲು ಎಲ್ಲಾ ಪರಿಶೀಲನೆ ಮಾಡಿ ಬಳಿಕ ಸುದೀಪ್​ ಜೊತೆ ಮಾತನಾಡುತ್ತೇನೆ. ಪರಿಶೀಲನೆ ಮಾಡುವುದಕ್ಕೂ ಮುನ್ನ ಮಾತನಾಡುವುದು ಸರಿಯಲ್ಲ ಎಂದು ಮಂಗಳವಾರ ಹೇಳಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಚಾಮರಾಜನಗರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಚಾಮರಾಜನಗರ ಜಿಲ್ಲೆಯಲ್ಲಿರುವ ವಿವಿಧ ವಸತಿ ಶಾಲೆಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಹತ್ತಿರದ ವಸತಿ ಶಾಲೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 25ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಯನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Continue Reading

Chamarajanagar

ಮೂರು ಚಕ್ರದ ಸ್ಕೂಟರ್‌ಗೆ ವಿಕಲಚೇತನರಿಂದ ಅರ್ಜಿ ಆಹ್ವಾನ

Published

on

ಚಾಮರಾಜನಗರ:- ಕೊಳ್ಳೇಗಾಲ ನಗರಸಭೆಯ ೨೦೨೦-೨೧ ಮತ್ತು೨೦೨೧-೨೨ನೇ ಸಾಲಿನ ಎಸ್.ಎಫ್.ಸಿ ಸಾಲಿನ ಶೇ.೫ರ ಅನುಮೋದಿತ ಕ್ರಿಯಾ ಯೋಜನೆಯಂತೆ ಯಂತ್ರಚಾಲಿತ ಕಂಪನಿಯ ಮೂರು ಚಕ್ರದ ಸ್ಕೂಟರ್‌ಗಳನ್ನು ನೀಡಲು ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುವ ಶೇ.೭೫ರಷ್ಟು ಮೇಲ್ಪಟ್ಟ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ನಗರಸಭಾ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದೃಢೀಕರಿಸಿ ಜನವರಿ ೩೦ ರೊಳಗೆ ಕಚೇರಿಗೆ ಸಲ್ಲಿಸಬೇಕು.

Continue Reading

Chamarajanagar

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ.ನಾಳೆ ನವೋದಯ ಪರೀಕ್ಷೆ

Published

on

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ.ನಾಳೆ ನವೋದಯ ಪರೀಕ್ಷೆ

ಪಟ್ಟಣದ ಪಬ್ಲಿಕ್ ಶಾಲೆಯಲ್ಲಿ ನಡೆದ ನವೋದಯ ಪರೀಕ್ಷೆಯ ಪೂರ್ವ ಸಿದ್ಧತೆಯನ್ನು ಶಿಕ್ಷಕರಿಗೆ ತಿಳಿಸಿದ್ದಾರೆ
ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ರವರು ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದರು

ಮಾತನಾಡಿದ ಶಾಖೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ನಮ್ಮ ಶಾಲೆಯಲ್ಲಿ ನಡೆಯುವ ನವೋದಯ ಪರೀಕ್ಷೆಯು ಯಶಸ್ವೀಯಾಗಿ ನಡೆಸಿ ಕೋಡಿ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಶಶಿಧರ, ಮಹೇಶ್ ಕುಮಾರ್, ಪುಟ್ಟರಾಜು, ಹಾಜರಿದ್ದರು,

Continue Reading

Trending

error: Content is protected !!