Mysore
ನಿರಾಣಿ ಗ್ರೂಪ್ಸ್ ಅವರಿಂದ ಗುತ್ತಿಗೆ ನೊಂದಣಿ ಮಾಡಿಸುವಂತೆ ರಾಜ್ಯ ಸರ್ಕಾರವನ್ನು ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಒತ್ತಾಯಿಸಿದರು.
ಸಾಲಿಗ್ರಾಮ : ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಗ್ರೂಪ್ಸ್ ಅವರಿಂದ ಗುತ್ತಿಗೆ ನೊಂದಣಿ ಮಾಡಿಸುವಂತೆ ರಾಜ್ಯ ಸರ್ಕಾರವನ್ನು ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಒತ್ತಾಯಿಸಿದರು.
ಬೆಳಗಾವಿಯ ಅಧಿವೇಶನದಲ್ಲಿ ಮಾತನಾಡಿದ ಅವರು ಈ ಹಿಂದೆ ಈ ಕಾರ್ಖಾನೆಯನ್ನು ಗುತ್ತಿಗೆ ಪಡೆದಿದ್ದ ಅಂಬಿಕಾ ಶುಗರ್ಸ್ ನವರು ನೊಂದಣಿ ಮಾಡಿಸದೇ ಬಿಟ್ಟು ಹೋಗಿದ್ದನ್ನು ಸದನದ ಗಮನಕ್ಕೆ ತಂದರು.
ನಿರಾಣಿ ಗ್ರೂಪ್ಸ್ ನವರು ಈ ಸಾಲಿನಲ್ಲಿ 23 ಸಾವಿರ ಟನ್ ಕಬ್ಬು ಅರೆದಿದ್ದು ಇವರು ಗುತ್ತಿಗೆ ನೋಂದಣಿ ಮಾಡದೇ ಇರುವುದರಿಂದ ರೈತರ ಮತ್ತು ಕಾರ್ಮಿಕರಿಗೆ ಆತಂಕ ಇದೆ ಎಂದು ಸದನಕ್ಕೆ ತಿಳಿಸಿದರು.
ಸರ್ಕಾರ ಈ ಬಗ್ಗೆ ಗಮನ ಹರಿಸಿ ಇನ್ನು ಮೂರು ತಿಂಗಳ ಒಳಗಾಗಿ ನಿರಾಣಿ ಗ್ರೂಪ್ ನವರಿಗೆ ಗುತ್ತಿಗೆ ನೊಂದಣಿ ಮಾಡಿಸಲು ಸೂಕ್ತ ನಿರ್ದೇಶನ ನೀಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
- ಎಸ್ ಬಿ ಹರೀಶ್ ಸಾಲಿಗ್ರಾಮ
Mysore
ಬಿಜೆಪಿ ನಗರಸಭಾ ಸದಸ್ಯರ ವಿರುದ್ಧ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಸಿ.ಎಂ. ಶಂಕರ್ ವಾಗ್ದಾಳಿ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ನಗರಸಭೆ ಬಿಜೆಪಿ ಆರೋಪಕ್ಕೆ ತಿರುಗೇಟು : ಬ್ಲಾಕ್ ಕಾಂಗ್ರೆಸ್ ನಗರಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಸುದ್ದಿಗೋಷ್ಠಿ : ಶಾಸಕ ದರ್ಶನ್ ಧ್ರುವನಾರಾಯಣ್ ಮೇಲೆ ಆರೋಪ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು.
ಇಂದು ನಂಜನಗೂಡು ತಾಲೂಕು ಪತ್ರಕರ್ತ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ನಗರಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭೆ ಸದಸ್ಯರುಗಳಾದ ಗಾಯಿತ್ರಿ, ಬಸವರಾಜು ,ರವಿ, ಸಿದ್ದೀಕ್, ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ನಗರ ಘಟಕದ ಅಧ್ಯಕ್ಷ ಸಿ.ಎಂ. ಶಂಕರ್ ಮಾತನಾಡಿ, ಮಾಜಿ ಶಾಸಕ ಹರ್ಷವರ್ಧನ್ ರವರು ತಮ್ಮ ಅವಧಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಒಂದು ರೂಗಳ ಅನುದಾನವನ್ನು ತಂದಿಲ್ಲ, ಇದನ್ನು ಅವರು ಸಾಬೀತು ಮಾಡಿದರೆ ಕಾಂಗ್ರೆಸ್ ಮುಖಂಡರುಗಳಾದ ನಾವು ಬಹಿರಂಗ ಕ್ಷಮೆ ಯಾಚಿಸುತ್ತೇವೆ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ನಂಜನಗೂಡಿನ ಶಾಸಕ ಎಂ. ಮಹದೇವು ರವರು 10 ಕೋಟಿ ರೂಗಳ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿ ಪಡಿಸಿದ್ದರು. ಹರ್ಷವರ್ಧನ್ ರವರ ಅಧಿಕಾರ ಅವಧಿಯಲ್ಲಿ ಶ್ರೀಕಂಠ ಸ್ವಾಮಿ ದೇವಾಲಯಕ್ಕೆ ಒಂದು ರೂಗಳ ಅನುದಾನವನ್ನು ತಂದು ದೇವಸ್ಥಾನ ಅಭಿವೃದ್ಧಿ ಪಡಿಸಿಲ್ಲ ಎಂದು ದಾಖಲೆ ಸಮೇತ ಮಾಹಿತಿ ನೀಡಿದರು.
ಮಾಜಿ ಶಾಸಕರು ಬಿಜೆಪಿ ಸದಸ್ಯರು ನಿದ್ದೆ ಮಾಡುತ್ತಿದ್ದಾರೆ ಅಂತ ಪ್ರಶ್ನೆ ಮಾಡಿ ಅಂತ ಹೇಳಿರಬಹುದು ಎಂದು ಚುಡಾಯಿಸಿದರು.ಯುಜಿಡಿಗೆ 140 ಕೋಟಿ ಮಾಜಿ ಶಾಸಕ ಹರ್ಷವರ್ಧನ ಕಾಲದಲ್ಲಿ ಬಿಡುಗಡೆ ಆಗಿದೆ ಅಂತ ಹೇಳಿದ್ದಾರೆ ಅದು ಸತ್ಯಕ್ಕೆ ದೂರವಾದ ವಿಚಾರ, ಇದೇ ಸಂದರ್ಭದಲ್ಲಿ ಶಾಸಕರ ಅನುದಾನದ ಬಗ್ಗೆ ತಿಳಿಸಿದರು.
ನಗರ ಸಭೆಯಲ್ಲಿ ಭ್ರಷ್ಟಾಚಾರ ಅಂತ ಹೇಳುತ್ತಿದ್ದಾರೆ ಆದರೆ ಈ ಹಿಂದೆ ಅವರದೇ ಪಕ್ಷದ ಆಡಳಿತದ ಪೌರಯುಕ್ತಧಿಕಾರಿ ರಾಜಣ್ಣ ರವರ ಅಧಿಕಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಖಾತೆ ವಿಚಾರ ಹಿಂದಿನ ಅಧಿಕಾರ ಅವಧಿಯಲ್ಲಿ 2016 ರಿಂದ 2024 ರವರೆಗೆ ಖಾತೆ ಆಗಿರುವುದು ಕೇವಲ ಒಂದು ಸಾವಿರ ಮಾತ್., ಆದರೆ ನಮ್ಮ ಅಧಿಕಾರ ಅವಧಿ 2024 ರಿಂದ 2025ರ ವರೆಗೆ ಖಾತೆ ಆಗಿರುವುದು 2800 ಆಗಿದೆ ಅಂತ ಸ್ಪಷ್ಟೀಕರಣ ನೀಡಿದರು.
ನಮ್ಮ ಶಾಸಕರ ಬಗ್ಗೆ ಮಾತನಾಡಬೇಕಾದರೆ ನೈತಿಕತೆ ಇರಬೇಕು, ನಮ್ಮ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಾರೆ. ಕಿರಿಯ ವಯಸ್ಸಿನಲ್ಲೇ ನಮ್ಮ ಕ್ಷೇತ್ರಕ್ಕೆ ಆಯ್ಕೆಯಾಗಿರುವುದು ನಮ್ಮ ಪುಣ್ಯ, ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡುತ್ತಾರೆ ಎಂದು ಶಾಸಕ ಬಗೆ ಹಲವಾರು ಅಭಿವೃದ್ಧಿಗಳನ್ನು ವಿವರಿಸಿದರು.
ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾತನಾಡಿ, ಬಿಜೆಪಿಯವರದು ಸುಳ್ಳುಹೇಳುವುದು,ಜನರಲ್ಲಿಗೊಂದಲ ಮುಡಿಸುವುದೇ ಇವರ ಸಾಧನೆ.ಬಿಜೆಪಿಯವರಿಂದ ಅಭಿವೃದ್ಧಿ ಕುಂಠಿತ ಎಂದು ಬಿಜೆಪಿ ಮುಖಂಡರುಗಳಿಗೆ ತಿರುಗೆಟು ನೀಡಿದರು.ನಮ್ಮ ಶಾಸಕರ ಅಭಿವೃದ್ಧಿ ನೋಡಿ ಹೊಟ್ಟೆ ಉರಿದುಕೊಂಡು ಮೇಲಿನ ಒತ್ತಡಕ್ಕೆ ಮಣಿದು ಪ್ರೆಸ್ ಮೀಟ್ ಮಾಡ್ತಿದ್ದಾರೆ. ನಮ್ಮ ಪಕ್ಷದ ಶಾಸಕ ದರ್ಶನ್ ಧ್ರುವನಾರಾಯಣ್ ರವರು 24*7 ಮಾದರಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಗರ ಮತ್ತು ಈ ಕ್ಷೇತ್ರಕ್ಕೆ ಮಾಡುತ್ತಿದ್ದು ಕ್ಷೇತ್ರದ ಯಾವುದೇ ಪಕ್ಷದ ಜನರು ಫೋನ್ ಮಾಡಿದರು ಅವರಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ.ಇದನ್ನು ಸಹಿಸದ ಬಿಜೆಪಿ ಮುಖಂಡರು ಸುಳ್ಳುಗಳನ್ನು ಹಬ್ಬಿಸುತ್ತಾ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿಯವರು ಬಿಜೆಪಿ ಮುಖಂಡರು ವರ್ತನೆ ಬಗ್ಗೆ ಕಟುವಾಗಿ ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮತ್ತು ಕಾಂಗ್ರೆಸ್ ಬ್ಲಾಕ್ ನಗರ ಅಧ್ಯಕ್ಷ ಸಿಎಂ ಶಂಕರ್ ಹಾಗೂ ಮುಖಂಡರುಗಳು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದರು.. ನಾನು ನಗರಸಭಾ ಅಧ್ಯಕ್ಷನಾದ ಮೇಲೆ ಕಾಮಗಾರಿ ಕೆಲಸಗಳು ಸಮಾರೋಪಾದಿಯಲ್ಲಿ ನಗರದಲ್ಲಿ ಒಂದೇ ದಿನದಲ್ಲಿ ರೂ.700 ಕೋಟಿ ರೂಗಳ ಟೆಂಡರ್ ಕರೆದು ಕಾಮಗಾರಿ ಕೆಲಸಗಳು ಸಮಾರೋಪಾದಿಯಲ್ಲಿ ನಗರದಲ್ಲಿ ನಮ್ಮ ಶಾಸಕರು ನಗರದಲ್ಲಿ ಕುಂಟುತ್ತ ಸಾಗುತ್ತಿರುವ ಒಳಚರಂಡಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರದಿಂದ 21 ಕೋಟಿ ರೂಗಳನ್ನು ಬಿಡುಗಡೆ ಮಾಡಿಸಿ ಅದು ಕೂಡ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಜೊತೆಗೆ ಹೊಸ ಬಡಾವಣೆಗಳ ಅಭಿವೃದ್ಧಿಗಾಗಿ 10 ಕೋಟಿ ರೂಗಳ ಅನುದಾನ ತಂದು ಹೊಸ ಬಡಾವಣೆಗಳಲ್ಲಿ ಡ್ರೈನೇಜ್ ರಸ್ತೆ, ಕುಡಿಯುವ ನೀರಿನ ಯೋಜನೆಗಳು ನಡೆಯುತ್ತಿವೆ. ನಗರದ 31 ವಾರ್ಡ್‌ಗಳಲ್ಲಿ 850 ಸ್ಟ್ರೀಟ್ ಲೈಟ್ ಗಳನ್ನು ಅಳವಡಿಸಲಾಗಿದೆ ನಗರದಲ್ಲಿ ಫುಡ್ ಪಾರ್ಕ್ ನಿರ್ಮಿಸಿ ,ಪಟ್ಟಣದ ಜನತೆ ಆನಂದವಾಗಿ ಸಂಜೆ ವಾಯು ವಿಹಾರ ಕೈಗೊಂಡು ತಿಂಡಿ ತಿನಿಸುಗಳನ್ನು ಸವಿದು ಮನೆಗೆ ತೆರಳುತ್ತಿದ್ದಾರೆ. ಈ ತಿಂಗಳ 10ರಂದು ಪಟ್ಟಣದ 31 ವಾರ್ಡ್ ಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿ ಪ್ರತಿ ವಾರ್ಡ್ ನ ಸಮಸ್ಯೆಗಳನ್ನು ಅಲ್ಲೇ ಬಗೆ ಹರಿಯುವಂತೆ ಮಾಡುತ್ತಿದ್ದರೆ, ಇದು ಭಾರತದಲ್ಲಿ ನಂಜನಗೂಡಿನಲ್ಲಿ ಪ್ರಥಮವಾಗಿ ಅಳವಡಿಸಿರುವ ಒಂದು ಬೃಹತ್ ಯೋಜನೆಯಾಗಿದೆ ಎಂದು ಹೇಳಿದರು.
ಇನ್ನೂ ಮೂರು ವರ್ಷಗಳ ಅವಧಿಯಲ್ಲಿ ಶಾಸಕರು ಈ ಕ್ಷೇತ್ರಕ್ಕೆ ಅಭಿವೃದ್ಧಿಯ ಪರ್ವವನ್ನೇ ಹರಿಸಲಿದ್ದಾರೆ, ಇವರ ತಂದೆ ಧ್ರುವನಾರಾಯಣ್ ರವರು ದೇಶದಲ್ಲಿ ನಾಲ್ಕನೇ ಸಂಸದರೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ, ಅದೇ ರೀತಿ ನಮ್ಮ ಕ್ಷೇತ್ರದ ಶಾಸಕರು ನಂಬರ್ ಒನ್ ಶಾಸಕರಾಗಿ ಹೊರಹೊಮ್ಮುತ್ತಿದ್ದಾರೆ,ಇಂತಹ ಶಾಸಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿಗರು ಕ್ಷೇತ್ರದಲ್ಲಿ ಗೊಂದಲ ಮತ್ತು ಸುಳ್ಳು ಹೇಳಿಕೊಂಡು ತಿರುಗುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರುಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ಅಧಿಕಾರ ಅವಧಿ ಮುಗಿಸಿದಂತೆ ಈ ರೀತಿ ಎದ್ದು ಬಂದು ಈಗ ಆರೋಪ ಮಾಡುತ್ತಿರುವುದು ಶೋಭೆಯಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರುಗಳಾದ ಗಾಯತ್ರಿ ಮೋಹನ್, ಬಸವರಾಜು, ರವಿ, ಸಿದ್ದಿಕ್, ಮಾಜಿ ಸದಸ್ಯ ಶ್ರೀಧರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕಮಲೇಶ್, ಮಹದೇವು, ರಮೇಶ್, ಫರ್ಮಿದ್ ಅಹ್ಮದ್, ಉಪ್ಪಿನಳ್ಳಿ ಶಿವಣ್ಣ, ಕಳಲೆ ರಾಜೇಶ್ ಸೇರಿದಂತೆ ಪ್ರಮುಖರುಗಳು ಭಾಗವಹಿಸಿದ್ದರು.
Mysore
ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಸಾಧ್ಯ: ಜಿ.ಟಿ.ದೇವೇಗೌಡ
ಮೈಸೂರು: ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಚಾಮುಂಡಿಬೆಟ್ಟ ಆವರಣದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಇಂದು ಆಯೋಜಿಸಿದ್ದ ಯೋಗ ಚಾರಣ ಹಾಗೂ ಯೋಗ ನಮಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಹುಟ್ಟಿರುವ ಯೋಗವು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಂದ ವಿಶ್ವ ಮನ್ನಣೆ ಪಡೆದುಕೊಂಡಿದೆ. ಯೋಗ ಮಾಡುವುದರಿಂದ ರಕ್ತ ಪರಿಚಲನವಾಗಿ, ಮನಸ್ಸು ಮತ್ತು ದೇಹ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಯೋಗದ ಮೂಲಕ ದ್ಯಾನ ಮತ್ತು ಉಪಾಸನೆ ಮಾಡುವುದರಿಂದ ಮಾನವೀಯ ಮೌಲ್ಯಗಳು, ಧಾರ್ಮಿಕ ಆಚರಣೆ, ಶಿಸ್ತು, ಶಾಂತಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.
Mysore
ದಸರಾ ವಸ್ತು ಪ್ರದರ್ಶನವನ್ನು ಮುಸ್ಲಿಮೀಕರಣ ಮಾಡಲಾಗಿದೆ: ಮಿರ್ಲೆ ಶ್ರೀನಿವಾಸಗೌಡ
ಮೈಸೂರು: ದಸರಾ ವಸ್ತು ಪ್ರದರ್ಶನವನ್ನು ಮುಸ್ಲಿಮೀಕರಣ ಮಾಡಲಾಗಿದ್ದು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದಿನ ಮೈಸೂರು ಅರಸರು1880ರಲ್ಲಿ ವಸ್ತು ಪ್ರದರ್ಶನ ಆರಂಭಿಸಿದರು.
ದಸರಾ ಸಂದರ್ಭದಲ್ಲಿ ಇದು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿದೆ. ಸುಮಾರು 80 ಎಕರೆ ಜಾಗದಲ್ಲಿದೆ. ಧ್ರುವನಾರಾಯಣ್ ಅವರು ಒಳ್ಳೆಯ ಉದ್ದೇಶದೊಂದಿಗೆ ವಸ್ತು ಪ್ರದರ್ಶನದ ಅಭಿವೃದ್ದಿಗೆ ಆದ್ಯತೆ ನೀಡಿದ್ದರು. ಆದರೆ ಇದೀಗ ವಸ್ತು ಪ್ರದರ್ಶನ ಒಂದು ವರ್ಗಕ್ಕೆ, ಒಂದು ಸಮುದಾಯಕ್ಕೆ ಸೀಮಿತವಾಗಿದ್ದು ಇಡೀ ವಸ್ತು ಪ್ರದರ್ಶನ ಮುಸ್ಲಿಮೀಕರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಅಯೂಬ್ ಖಾನ್ ಮೇಯರ್ ಆಗಿದ್ದವರು. ವಸ್ತು ಪ್ರದರ್ಶನದ ಮುಖ್ಯ ದ್ವಾರಕ್ಕೆ ಸಿದ್ದರಾಮಯ್ಯ ದ್ವಾರ, ಕಾರಂಜಿಗೆ ಅಜೀಜ್ ಸೇಠ್ ಫೌಂಟೇನ್, ಕುಸ್ತಿ ಮೈದಾನಕ್ಕೆ ಡಾ.ಎಚ್.ಸಿ.ಮಹದೇವಪ್ಪ ಕುಸ್ತಿ ಅಖಾಡ ಎಂದು ಹೆಸರಿಟ್ಟಿದ್ದಾರೆ. ವಸ್ತು ಪ್ರದರ್ಶನವನ್ನು ಕರ್ನಾಟಕ ಕಾಂಗ್ರೆಸ್ ವಸ್ತು ಪ್ರದರ್ಶನ ಪ್ರಾಧಿಕಾರ ಎಂದು ಮಾಡಿಬಿಡಿ.
ವಸ್ತು ಪ್ರದರ್ಶನದ ಅಭಿವೃದ್ದಿಗಾಗಿ ಸರ್ಕಾರ 35 ಕೋಟಿ ರೂ. ಹಣ ಮೀಸಲಿಟ್ಟಿದೆ. ಈಗಾಗಲೇ 20 ಕೋಟಿ ರೂ. ಮಂಜೂರಾಗಿದೆ. ದುಡ್ಡು ಹೊಡೆಯುವುದೇ ಅಯೂಬ್ ಖಾನ್ ಉದ್ದೇಶವಾಗಿದೆ. 10 ರೂಪಾಯಿ ಕುಡಿಯುವ ನೀರಿನ ಬಾಟಲಿಗೆ 30 ರೂಪಾಯಿ ಪಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದುಡ್ಡು ಹೊಡೆಯಲು ಸಿದ್ದರಾಮಯ್ಯ, ಅಜೀಜ್ ಸೇಠ್, ಡಾ.ಮಹದೇವಪ್ಪ ಹೆಸರಿಟ್ಟಿದ್ದೀರಿ. ನಿಗಮ ಮಂಡಳಿಗಳಲ್ಲೂ ಮುಸ್ಲಿಮರು ಹಾಗೂ ಕುರುಬರಿಗೆ ಸಿಂಹಪಾಲು ನೀಡಿದ್ದಾರೆ.
ಜಾತಿಯನ್ನು ವರ್ಗೀಕರಿಸಿ ವಸ್ತು ಪ್ರದರ್ಶನ ಮಾಡಬೇಡಿ. ಶೌಚಾಲಯ ಬಳಕೆಗೂ ಹಣ ತೆಗೆದುಕೊಳ್ಳುತ್ತಿದ್ದಾರೆ. ಎಲೆಕ್ಟ್ರಾನಿಕ್ ಕಾಮಗಾರಿ ಸೇರಿದಂತೆ ಕೋಟ್ಯಾಂತರ ರೂಪಾಯಿ ಕಾಮಗಾರಿಗಳನ್ನು ಅಯೂಬ್ ಖಾನ್ ಸಂಬಂಧಿಕರಿಗೆ ನೀಡಿದ್ದಾರೆ. ಟೆಂಡರ್ ಕರೆಯದೇ ಕಾಮಗಾರಿಗಳನ್ನು ನೀಡಿದ್ದಾರೆ. ಅಲ್ಲಿರುವ ಆಂಜನೇಯ ದೇಗುಲವನ್ನು ಕಡೆಗಣಿಸಲಾಗಿದೆ.
ಕೇವಲ ಮುಸ್ಲಿಮರಿಗೆ ಸೀಮಿತ ಮಾಡದೇ ಎಲ್ಲಾ ವರ್ಗದ ಜನರಿಗೂ ಅವಕಾಶ ಮಾಡಿಕೊಡಿ. ಜನ ಸಾಮಾನ್ಯರ ಪ್ರಾಧಿಕಾರ ಆಗಬೇಕು. ಆಗಿರುವ ಲೋಪಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೇ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
-
Mysore13 hours agoಬಿಜೆಪಿ ನಗರಸಭಾ ಸದಸ್ಯರ ವಿರುದ್ಧ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಸಿ.ಎಂ. ಶಂಕರ್ ವಾಗ್ದಾಳಿ
-
Mysore22 hours agoದಸರಾ: ನೋ ಪಾಸ್ – ನೋ ಎಂಟ್ರಿ
-
Kodagu18 hours agoಗುಡ್ಡೆ ಮನೆ ಅಪ್ಪಯ್ಯ ಗೌಡ ಸ್ಮಾರಕಕ್ಕೆ ವ್ಯಾನ್ ಡಿಕ್ಕಿ: ಸ್ಮಾರಕ ಹಾನಿ
-
Hassan17 hours agoಪತ್ರಕರ್ತರ ನಿಸ್ವಾರ್ಥ ಸೇವೆ ಶ್ಲಾಘನೀಯ: ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್
-
Hassan3 hours agoಮನೆಯಲ್ಲಿ ಅನುಮಾನಸ್ಪದ ಸ್ಪೋಟ ಪ್ರಕರಣ : ಚಿಕಿತ್ಸೆ ಫಲಿಸದೆ ದಂಪತಿಗಳು ಸಾ*ವು
-
National17 hours agoಕರೂರು ಕಾಲ್ತುಳಿತ ಪ್ರಕರಣ: ಮೌನ ಮುರಿದ ವಿಜಯ್
-
Kodagu16 hours ago12ನೇ ವರ್ಷದ ಮಕ್ಕಳ ದಸರಾ: ಮಕ್ಕಳಿಂದ ಮಂಟಪ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ
-
Kodagu18 hours agoಮಡಿಕೇರಿ: ಮದ್ಯ ಮಾರಾಟ ನಿಷೇಧ
