Kodagu
ನಾಳೆ ಸಿಎನ್‌ಸಿಯಿಂದ ಧರಣಿ ಸತ್ಯಾಗ್ರಹ
ಮಡಿಕೇರಿ : ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಆಯೋಗ ರಚಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜ.5 ರಂದು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊಸ ವರ್ಷದಲ್ಲಿ ಮತ್ತೆ ಕೊಡವ ಲ್ಯಾಂಡ್ ಹೋರಾಟವನ್ನು ತೀವ್ರಗೊಳಿಸಲಿದ್ದು, ಶುಕ್ರವಾರ ಬೆಳಗ್ಗೆ 10.30 ಗಂಟೆಯಿAದ 11.30 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಯೂ÷್ಲ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ಕ್ವೆಸ್ಟ್ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಪರಿಹರಿಸಲು 2 ನೇ ರಾಜ್ಯಗಳ ಮರು-ಸಂಘಟನೆ ಆಯೋಗವನ್ನು ರಚಿಸಬೇಕು. ಈ ಕುರಿತು ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಿಎನ್‌ಸಿ ಪರ ಕಾನೂನು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಗಳು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.
ವಿಶ್ವ ರಾಷ್ಟç ಸಂಸ್ಥೆಯ ನಿರ್ಣಯ 217 ಎ(111) ಪ್ರಕಾರ ಅಂತರರಾಷ್ಟಿçÃಯ ಕಾನೂನಿನಡಿಯಲ್ಲಿ ಸ್ಥಳೀಯ ಕೊಡವ ಸೂಕ್ಷö್ಮ ಜನಾಂಗೀಯ ಗುಂಪಿಗೆ ಯುಎನ್ ಮಾನ್ಯತೆ ಇದೆ. ಸ್ಥಳೀಯ ಜನರ ಸ್ವ-ನಿರ್ಣಯದ ಹಕ್ಕುಗಳನ್ನು ಹೊಂದಿದ್ದು, ಭಾರತ ಸರ್ಕಾರದ ಸಹಿಯೂ ಇದೆ. ಸಿಎನ್‌ಸಿ ಕೋರಿಕೆ ಮೇರೆಗೆ ಹೈಕೋರ್ಟ್ ಆದೇಶ ಮಾಡಿರುವಂತೆ ಕೊಡವರಿಗೆ ಎಸ್‌ಟಿ ಟ್ಯಾಗ್ ದೊರೆಯಲು ಸಹಕಾರಿಯಾಗಲಿರುವ ಕೊಡವರ ಸಮಗ್ರ ಕುಲಶಾಸ್ತç ಅಧ್ಯಯನವನ್ನು ತಕ್ಷಣ ಆರಂಭಿಸಬೇಕು. ಆದಿಮ ಸಂಜಾತ ಕೊಡವರ ಮಾತೃಭೂಮಿ ಮತ್ತು ಸೂಕ್ಷö್ಮ ಬುಡಕಟ್ಟು ಜನಾಂಗದ ಹಕ್ಕುಗಳನ್ನು ಉಳಿಸಿಕೊಳ್ಳಲು ಪೂರಕವಾಗಿರುವ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ನ್ಯಾಯ ಸಮ್ಮತವಾದ 9 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಧರಣಿ ವೇಳೆ ಒತ್ತಾಯಿಸುವುದಾಗಿ ನಾಚಪ್ಪ ಹೇಳಿದ್ದಾರೆ.
Kodagu
ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಟಿಪ್ಪರ್ ಗಳ ಒಡಾಟ!
ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಟಿಪ್ಪರ್ ಗಳ ಒಡಾಟ! ಇಲ್ಲಿ ಕಲ್ಲು ಕೋರೆ ಮಾಲೀಕರದೇ ದರ್ಬಾರ್ ಶಾಸಕರೇ ಇತ್ತ ಗಮನಿಸಿ, ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದ ಜನರು ಇದೀಗ ಬವಣೆ ಪಡುವಂತಾಗಿದೆ.
ರಸ್ತೆ ಬದಿ ಇರುವ ರೈತರ ಜಮೀನಿನ ಬೇಲಿಯನ್ನು ಕಿತ್ತು ಬಲವಂತವಾಗಿ ರಸ್ತೆ ಅಗಲೀಕರಣ ಮಾಡಿಕೊಂಡಿರುವ ಕೋರೆ ಮಾಲೀಕರು ರಾಜ ರೋಷವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ಕಾರಿ ಜಾಗದಿಂದಲೂ ಕೂಡ ಈ ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರ ಜಾಣ ಮೌನದಿಂದ ಇದೀಗ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ರಸ್ತೆಯಲ್ಲಿ ಓಡಾಡುವ ಟಿಪ್ಪರ್ಗಳಿಂದ ಧೂಳು, ಶಬ್ದ ಮಾಲಿನ್ಯ, ಮತ್ತೊಂದೆಡೆ ತಮ್ಮ ಹೊಲದ ಅತಿಕ್ರಮಣದಿಂದ ಹಲವರು ಬೇಸತ್ತಿದ್ದಾರೆ. ಈ ಬಲಿಷ್ಠ ಗುಂಪನ್ನು ಎದುರಿಸುವ ಶಕ್ತಿ ಇಲ್ಲದೆ ಮೌನಕ್ಕೆ ಶರಣಾಗುವ ಪರಿಸ್ಥಿತಿ ಇಲ್ಲಿನವರಿಗೆ ಒದಗಿ ಬಂದಿದೆ. ಶಾಸಕರೇ ಇತ್ತ ಗಮನಿಸಿ ಎನ್ನುತ್ತಾರೆ ಸ್ಥಳೀಯರು.
Kodagu
ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಮೂವರಿಗೆ ಸನ್ಮಾನ
ಮಡಿಕೇರಿ : ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆಯಲ್ಲಿ ಇಂದು ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ’ಕೊಡವ ಪುಸ್ತಕ ಪತ್ತಾಯ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂವರನ್ನು ಸನ್ಮಾನಿಸುವ ಸಂದರ್ಭ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ ನಾಣಯ್ಯ, ಉಪಾಧ್ಯಕ್ಷ ಪೊನ್ನಿರ ಗಗನ್ ಉತಯ್ಯ, ಪೊಟ್ಡಂಡ ಗಣೇಶ್, ಕೊಡವ ಸವಿತಾ ಸಮಾಜದ ಮುಖಂಡರುಗಳಾದ ತಪನೇರ ಸಾಬು, ಮಹೇಶ್, ಪೂಣಚ್ಚಿರ ಮನೋಜ್, ತಪಾನೇರ ಮಹೇಶ್, ವೇದಪಂಡ ಬಿದ್ದಪ್ಪ, ಹಲ್ ಚಿರ ದೇವಯ್ಯ ಹಾಗೂ ನಿರ್ದೇಶಕರುಗಳು ಕಕ್ಕಬೆ ಚೋವಂಡ ಜೀಜ, ತೊರೆರ ಪೊನ್ನಕ್ಕಿ, ಕೊಡವ ಕೆಂಬಟ್ಟಿ ಸಮುದಾಯದ ಅಧ್ಯಕ್ಷರಾದ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚಾವರೆ ಕುಟ್ಟಡ ಜೀವನ್, ಕೋಪರೆಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್. ಬಣ್ಣ ಸಮಾಜ ಬಿಕಚಂಡ ಬೆಳ್ಳಿಪ್ಪ, ಅರಮನೆಪಾಲೆ ಸಮಾಜ ದೇವಯ್ಯ, ದಿನೇಶ್, ಮಲೆಯ ಸಮಾಜ ಕಾರ್ಯದರ್ಶಿ ಮಲೆಯಂಡ ಬಿದ್ದಪ್ಪ, ಹ್ಯಾರಿ ಲೋಕೇಶ್ ತಂಡ ಇತರರು ಇದ್ದರು.
Kodagu
ಕುಟ್ಟ ಪಟ್ಟಣದ ಉದ್ಯಮಿ ಕೇರಳದಲ್ಲಿ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆ: ಪತ್ನಿ, ಮಕ್ಕಳು ಪಾರು
ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿಯೊಬ್ಬರು, ಕೇರಳದ ವಯನಾಡಿನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡಿದ್ದು, ಇವರ ಪೈಕಿ ಉದ್ಯಮಿ ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.
ಈ ದುರಂತದಲ್ಲಿ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?
ಉದ್ಯಮಿ ಸಜೀರ್, ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.
-
Chikmagalur20 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan16 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Chamarajanagar23 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Hassan18 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Kodagu16 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State20 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
State23 hours agoಜಿಬಿಎ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ: ಬಿ.ವೈ.ವಿಜಯೇಂದ್ರ
-
Mandya18 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
