Chamarajanagar
ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಿ
ಯಳಂದೂರು : ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಸಲಹೆ ನೀಡಿದರು.
ಅವರು ಗುಂಬಳ್ಳಿ ಗ್ರಾಮ ಪಂಚಾಯಿತಿ ಅವರಣದಲ್ಲಿ ನಡೆದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸಮಸ್ಯೆಗಳನ್ನು ಕೇಳುವುದಕ್ಕೆ ಮತ್ತು ಅದನ್ನು ಬಗೆಹರಿಸುವುದಕ್ಕೆ ಹಮ್ಮಿಕೊಳ್ಳಲಾಗಿದ್ದು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆ ಮೇರೆಗೆ ಪ್ರತಿ ತಿಂಗಳು ಎರಡನೇ ಬುಧವಾರ ಸಭೆಯನ್ನು ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಗ್ರಾಮಸ್ಥರು ಮಾತನಾಡಿ ಗೃಹಲಕ್ಷ್ಮಿ ಮತ್ತು ಪೆನ್ಷನ್ ಹಣ ಸರಿಯಾಗಿ ಬಂದಿಲ್ಲ ಎಂದು ದೂರಿದರು. ಮನೆ ನಿರ್ಮಾಣದ ಸಹಾಯಧನ ಸಹ ಆರು ತಿಂಗಳಾದರೂ ಬಂದಿಲ್ಲ ದಯವಿಟ್ಟು ಬೇಗ ಸಹಾಯಧನ ಬರುವಂತೆ ಮಾಡಿಕೊಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದರು . ಹೌಸಿಂಗ್ ಇಲಾಖೆಯ ಮಂಜುನಾಥ್ ಮಾತನಾಡಿ ಕೆಲ ತಾಂತ್ರಿಕ ತೊಂದರೆಯಿಂದ ಅಡಚಣೆಯಾಗಿದೆ. ಕೆಲವು ದಿನಗಳಲ್ಲಿ ಮನೆ ನಿರ್ಮಾಣ ಸಹಾಯಧನ ಎಲ್ಲರ ಖಾತೆಗೆ ತಲುಪುತ್ತದೆ ಎಂದು ತಿಳಿಸಿದರು. ನರೇಗಾ ಯೋಜನೆ ಅಡಿಯಲ್ಲಿ ಕೈತೋಟ ನಿರ್ಮಾಣ ಮಾಡಿ ಐದಾರು ತಿಂಗಳು ಕಳೆದಿದೆ ಅದರ ಕೂಲಿ ಮೊತ್ತ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಇದನ್ನು ಸಹ ಬಿಡುಗಡೆಗೊಳಿಸಿ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮ ಪಂಚಾಯತಿ ಪಿಡಿಒ ಮಂಜುನಾಥ್ ಮಾತನಾಡಿ ಕೂಲಿ ಮೊತ್ತ ಹಾಗೂ ಸಾಮಗ್ರಿ ಮೊತ್ತ ಎರಡು ತಾಂತ್ರಿಕ ಕಾರಣದಿಂದ ಬಿಡುಗಡೆಯಾಗಿಲ್ಲ ಮುಂಬರುವ ದಿನಗಳಲ್ಲಿ ಸಾಮಗ್ರಿಮುತ್ತ ಹಾಗೂ ಕೂಲಿ ಮೊತ್ತವನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಮೀನಾ ಗೋವಿಂದರಾಜು, ಉಪಾಧ್ಯಕ್ಷ ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯರು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಮೃತೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜು, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕುಮಾರ್,
ರೇಷ್ಮೆ ಇಲಾಖೆ ಅಧಿಕಾರಿಗಳಾದ ಸತ್ಯಪಾಲ್, ಅಶ್ವಿನ್, ಬಿಲ್ ಕಲೆಕ್ಟರ್ ಕಿಟ್ಟಿ, ಸಿಬ್ಬಂದಿಗಳಾದ ಗೋವಿಂದರಾಜು ,ಚಂದ್ರು, ಮುಖಂಡರಾದ ಗೋವಿಂದರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.
Chamarajanagar
ಆರ್ಥಿಕ ಸದೃಢತೆಗೆ ರೈತರು ಭವಿಷ್ಯದ ಹಣ್ಣುಗಳನ್ನು ಬೆಳೆಯಲು ಡಾ. ಹಿತ್ತಲಮನಿ ಸಲಹೆ
ಚಾಮರಾಜನಗರ: ಜಿಲ್ಲೆಯ ಹವಾಗುಣಕ್ಕೆ ಪೂರಕವಾಗುವಂತಹ ಭವಿಷ್ಯದ ಹಣ್ಣಿನ ಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಸದೃಢತೆ ಹೊಂದಬಹುದಾಗಿದೆ ಎಂದು ಕೃಷಿ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಎಸ್.ವಿ.ಹಿತ್ತಲಮನಿ ಸಲಹೆ ಮಾಡಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಭವಿಷ್ಯದ ಹಣ್ಣಿನ ಬೆಳೆಗಳಾದ ಬಟರ್‍ಪ್ರೂಟ್ (ಬೆಣ್ಣೆಹಣ್ಣು), ಡ್ರ್ಯಾಗನ್‍ಪ್ರೂಟ್, ಹಲಸು, ಮಾವು, ಸೀತಾಫಲ, ನೇರಳೆ, ರಾಂಬುಟನ್, ಇನ್ನಿತರೆ ಬೆಳೆಗಳ ಪರಿವರ್ತನೆ, ಹೊಸತಳಿ ಪರಿಚಯ, ಬೇಸಾಯ ಕ್ರಮ ಹಾಗೂ ಅವಕಾಶಗಳ ಕುರಿತು ಜಿಲ್ಲೆಯ ರೈತರಿಗೆ ಆಯೋಜಿಸಲಾಗಿದ್ದ ‘ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಪಿಪಿಟಿ ಮೂಲಕ ವಿವರಿಸಿ ಮಾತನಾಡಿದರು.

ತೋಟಗಾರಿಕೆಯನ್ನು ಸಾಮಾನ್ಯ ರೈತರ ಕಸುಬನ್ನಾಗಿ ಮಾಡಿ ಜನರ ಅರ್ಥಿಕ ಸ್ಥಿತಿಗತಿ ಸುಧಾರಿಸಿದವರು ತೋಟಗಾರಿಕೆಯ ಪಿತಾಮಹ ಡಾ.ಎಂ.ಎಚ್. ಮರಿಗೌಡ ಅವರು. ಕೃಷಿಗೆ ಹೆಚ್ಚಿನ ಮಹತ್ವವಿದ್ದ ಆಗಿನ ಕಾಲದಲ್ಲಿ ಮರಿಗೌಡ ಅವರು ತೋಟಗಾರಿಕೆಯ ಮೂಲಕ ತರಕಾರಿ ಹಾಗೂ ಹಣ್ಣಿನ ಬೆಳೆಗಳ ಪ್ರಾಮುಖ್ಯತೆಯನ್ನು ಇಡೀ ಸಮುದಾಯ, ದೇಶಕ್ಕೆ ಪರಿಚಯಿಸಿದರು. ಕರ್ನಾಟಕದಲ್ಲೆಡೆ ಒಂದೊಂದು ಪ್ರಮುಖ ಹಣ್ಣಿನ ಬೆಳೆ ಬೆಳೆಯುತ್ತಾರೆ. ಆದರೆ ಎಲ್ಲಾ ಪ್ರಮುಖ ಬೆಳೆಗಳು ಇಂದು ಸಮಸ್ಯೆ ಎದುರಿಸುತ್ತಿವೆ. ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ, ಹಣ್ಣಿನ ದರ ಕುಸಿದರೂ ರೈತರ ಜೀವನ ಕಷ್ಟಸಾಧ್ಯವಾಗಲಿದೆ ಎಂದರು.
ರೈತರು ಈಗಿರುವ ಹಣ್ಣಿನ ಬೆಳೆಗಳ ಜೊತೆಗೆ ಪರ್ಯಾಯ ಹಣ್ಣುಗಳನ್ನು ಬೆಳೆಯಲು ಮುಂದಾಗಬೇಕಿದೆ. ಪರ್ಯಾಯ ಬೆಳೆಗಳ ಮಾಹಿತಿಗಾಗಿ ಬೇರೆಬೇರೆ ಭಾಗದ ರೈತರೊಂದಿಗೆ ಚರ್ಚಿಸಿ ಭವಿಷ್ಯದ ಹೊಸತಳಿಗಳ ವಿವರ ಅರಿಯಬೇಕು. ಕರ್ನಾಟಕದಲ್ಲಿ ಕರಾವಳಿ, ಪಶ್ಚಿಮ ಘಟ್ಟಗಳು, ಮಲೆನಾಡು, ಬಯಲುಸೀಮೆ ಪ್ರದೇಶಗಳಿದ್ದು, ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಭೂಮಿಯ ಸ್ಥಿತಿಗತಿ, ಹವಾಗುಣ, ಪರಿಸರಕ್ಕೆ ಅನುಗುಣವಾಗಿ ಹಣ್ಣಿನ ಬೆಳೆ ಬೆಳೆಯಬೇಕು. ಆಗಮಾತ್ರ ಉತ್ತಮ ಫಸಲು ಬರಲಿದೆ. ರೈತರ ಆದಾಯ ದ್ವಿಗುಣಗೊಳ್ಳಲಿದೆ. ಚಾಮರಾಜನಗರ ಜಿಲ್ಲೆಯ ಹವಾಗುಣವು ಸಹ ಹಲವು ಹಣ್ಣಿನ ಬೆಳೆಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಪ್ಲೋರಜಾ ಕಂಪನಿ ಪ್ರತಿನಿಧಿ ಶಾಂತರಾಜು ಥೈ-ಹಲಸು ಹಣ್ಣಿನ ಬಗ್ಗೆ ಮಾಹಿತಿ ನೀಡಿ, ಕಂಪನಿಯು ರೈತರ ಜೊತೆ ಒಡಂಬಡಿಕೆ ಮಾಡಿಕೊಂಡು ಹಲಸಿನ ಸಸಿಗಳನ್ನ ನೀಡುತ್ತದೆ. ಹಲಸಿನ ಹಣ್ಣುಗಳನ್ನು ಕಂಪನಿಯಿಂದಲೇ ಖರೀದಿಸಿ ಪ್ರತಿ ಕೆ.ಜಿ. ಗೆ 30 ರೂ. ನಂತೆ ಕಂಪನಿಯು ರೈತರಿಗೆ ನೀಡಲಿದೆ. ಒಮ್ಮೆ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡರೆ 28ರಿಂದ 30 ವರ್ಷ ರೈತರು ನಿರಂತರ ಆದಾಯ ಪಡೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.
ವಿಚಾರಸಂಕಿರಣದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಶಿವಪ್ರಸಾದ್, ರೈತ ಮುಖಂಡರು, ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.
Chamarajanagar
ಬಿಳಿಗಿರಿ ರಂಗನಬೆಟ್ಟದ ದೇವಾಲಯ ಸುತ್ತಮುತ್ತ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ
ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಿದರು.
ವಿದ್ಯಾರ್ಥಿಗಳು ದೇವಾಲಯದ ಹೊರ ಆವರಣ, ಮೆಟ್ಟಿಲುಗಳು, ಪ್ರವೇಶ ದಾರಿಗಳು ಹಾಗೂ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಕಸ ಸಂಗ್ರಹಿಸಿ ಸ್ವಚ್ಚತೆ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್.ಎಸ್. ಅಶ್ವಿನಿ ಮಾತನಾಡಿ, ಸ್ಕೌಟ್ಸ್ ಆಂಡ್ ಗೈಡ್ಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತವೆ. ಇಂತಹ ಶ್ರಮದಾನ ಕಾರ್ಯಗಳಿಂದ ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಸಮಾಜದ ಸಮಸ್ಯೆಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪರಿಸರ ಸ್ವಚ್ಚತೆ ನಮ್ಮೆಲ್ಲರ ಕರ್ತವ್ಯ. ಯುವಜನರು ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಇತರರಿಗೂ ಪ್ರೇರಣೆಯಾಗುತ್ತದೆ. ಇಂತಹ ಕಾರ್ಯಗಳು ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಆಂಡ್ ಗೈಡ್ಸ್ ಸಂಚಾಲಕ ಡಾ. ಪಿ.ಎಂ. ನಾಗೇಂದ್ರ ಕುಮಾರ್, ಜಿ.ಕೆ. ದೀಪಿತ ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
Chamarajanagar
ಫೆ. 8ರಂದು ಎಸ್.ಸಿ. ಎಸ್.ಟಿ ಮುಖಂಡರ ಕುಂದು ಕೊರತೆ ಸಭೆ
ಚಾಮರಾಜನಗರ: ಪೊಲೀಸ್ ಇಲಾಖೆ ವತಿಯಿಂದ ಎಸ್.ಸಿ, ಎಸ್.ಟಿ. ಮುಖಂಡರ ಕುಂದು ಕೊರತೆ ಸಭೆಯನ್ನು ಫೆ. 8ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ (ಎಸ್.ಸಿ. ಎಸ್.ಟಿ) ಜನಾಂಗದವರು ಈ ಸಭೆಯನ್ನು ಸದುಪಯೋಪಡಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Chamarajanagar18 hours agoಬಿಳಿಗಿರಿ ರಂಗನಬೆಟ್ಟದ ದೇವಾಲಯ ಸುತ್ತಮುತ್ತ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ
-
National10 hours agoU-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
National - International11 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
State12 hours agoಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್ಗೆ ದೂರು
-
Mysore13 hours agoವಿಶ್ವಕರ್ಮ ಯೋಜನೆಯಡಿ ವಸ್ತು ಪ್ರದರ್ಶನ
-
State14 hours agoನಮ್ಮ ಪಕ್ಷದ ಹೈಕಮಾಂಡ್ ಡಾ.ಯತೀಂದ್ರ ಅವರೇ: ಡಿಸಿಎಂ ಡಿಕೆಶಿ ಟಾಂಗ್
-
National15 hours agoಮಹಿಳೆಯ ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ನ್ಯಾಯಾಂಗ ಆಗ್ರಹಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
-
Mysore15 hours agoವಕೀಲರ ಸಂಘದ ಅಧ್ಯಕ್ಷರ ಮೇಲೆ ಪ್ರಕರಣ: ವಕೀಲ ಸಂಘದಿಂದ ಪ್ರತಿಭಟನೆ
