Mysore
ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮಕ್ಕೆ ಕ್ಷೇತ್ರದ ಶಾಸಕ ದರ್ಶನ್ ಭೇಟಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಿದ್ದಾರೆ.
ನಂಜನಗೂಡು ತಾಲೂಕಿನ ಹೆಲ್ಲರೆ ಗ್ರಾಮದ ರಸ್ತೆಯೊಂದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನ ನಾಮಫಲಕ ಅಳವಡಿಸಲು ಸಂದರ್ಭದಲ್ಲಿ ಸೋಮವಾರ ರಾತ್ರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಇಂದು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಗ್ರಾಮಕ್ಕೆ ಭೇಟಿ ನೀಡಿ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಎರಡು ಸಮುದಾಯದವರಿಗೂ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.
ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಈ ಘರ್ಷಣೆ ಸಂಭವಿಸಿದೆ ಇಂತಹ ಘಟನೆ ನಡೆಯಬಾರದಿತ್ತು ಇಂತಹ ಘಟನೆಗಳು ಮರುಕಳಿಸದಂತೆ ಮುನ್ನಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಪ್ರತಿ ಮನೆಗಳಿಗೂ ಭೇಟಿ ಎಲ್ಲರ ಯೋಗಕ್ಷೇಮ ವಿಚಾರಿಸಿ ಧೈರ್ಯ ಹೇಳಿದರು.
ಯಾರು ಕೂಡ ಇಂತಹ ಘಟನೆಗೆ ಅವಕಾಶ ನೀಡಬೇಡಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಉತ್ತಮ ಒಂದೇ ಗ್ರಾಮದಲ್ಲಿ ವಾಸವಿರುವ ಎಲ್ಲ ಸಮುದಾಯದವರು ಅಣ್ಣ ತಮ್ಮಂದಿರಂತೆ ಬಾಳ್ವಿಕೆ ಮಾಡಿಕೊಂಡು ಹೋಗಬೇಕು ಮುಂದಿನ ದಿನ ಗ್ರಾಮದಲ್ಲಿ ಶಾಂತಿ ಸಭೆ ಕರೆದು ಸಮಸ್ಯೆಯನ್ನು ಬಗ್ಗೆ ಹರಿಸಲಾಗುವುದು ಎಲ್ಲರು ಸಹ ಬಾಳ್ವಿಕೆಯಿಂದ ಇರಬೇಕೆಂದು ಮನವಿ ಮಾಡಿದರು.
ಬಳಿಕ ಪೊಲೀಸ್ ಇಲಾಖೆಗೆ ಇನ್ಮುಂದೆ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶನವನ್ನು ಕ್ಷೇತ್ರದ ಶಾಸಕರು ಮಾಹಿತಿ ನೀಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಅಡಿಷನಲ್ ಎ.ಎಸ್.ಪಿ.ನಂದಿನಿ, ಡಿವೈಎಸ್ಪಿ ಗೋವಿಂದ್ ರಾಜು, ಗೋಪಾಲಕೃಷ್ಣ, ಸೇರಿದಂತೆ ಪೋಲಿಸ್ ಸಿಬ್ಬಂದಿ ಹಾಜರಿದ್ದರು.
Mysore
ಮರದ ಮೇಲಿನಿಂದ ಕಾಲು ಜಾರಿ ಬಿದ್ದು ರೈತನೊಬ್ಬ ಮೃತಪಟ್ಟ ಘಟನೆ
ಮಹದೇವ್ ಸಿಸಿ ಭೇರ್ಯ
ಕೆ ಆರ್ ನಗರ – ಮರದ ಮೇಲಿನಿಂದ ರೈತನೊಬ್ಬ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕಭೇರ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲೇಟ್ ಸಣ್ಣಜವರನಾಯಕ ಅವರ ಮಗ ಶಿವನಂಜನಾಯಕ 60 ವರ್ಷ ಮೃತಪಟ್ಟ ವ್ಯಕ್ತಿ.
ಮೊದಲು ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಇವರು ಹಲವು ವರ್ಷಗಳಿಂದ ಕೃಷಿಯಲ್ಲಿ ತೊಡಗಿದರು. ಜೊತೆಗೆ ಆಡು ಸಾಕಾಣಿಕೆ ಮಾಡುತ್ತಿದ್ದರು. ಆಡುಗಳಿಗೆ ಸೊಪ್ಪು ಕಡೆಯಲು ತಮ್ಮ ಜಮೀನಲ್ಲೇ ಇದ್ದ ಮರಕ್ಕೆ ಹತ್ತಿದ್ದಾರೆ ರೆಂಬೆ ಮುರಿದು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಇವರಿಗೆ ಹೆಂಡತಿ ಜಯಲಕ್ಷ್ಮಿ ಮತ್ತು ಓರ್ವ ಮಗ ಒಬ್ಬಳು ಮಗಳಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರ್ಕಾರ ಈ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Mysore
ಆಗಸದಲ್ಲಿ ಸಹಸ್ರಾರು ಡ್ರೋನ್‌ಗಳ ಕಲರವ
*ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಎರಡನೇ ದಿನವಾದ ಸೋಮವಾರವೂ ನೋಡುಗರನ್ನು ವಿಸ್ಮಯಗೊಳಿತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ರಾಜ್ಯದಲ್ಲೇ ಹಾಗೂ ಮೈಸೂರು ದಸರೆಯಲ್ಲಿ ಮೊದಲ ಬಾರಿಗೆ ನಡೆದ ಅತಿದೊಡ್ಡ ಡ್ರೋನ್ ಪ್ರದರ್ಶನ ಸಾಂಸ್ಕೃತಿಕ ನಗರಿಯ ಜನರಿಗೆ ಮರೆಯಲಾಗದ ಅನುಭವ ನೀಡುವಲ್ಲಿ ಯಶಸ್ವಿಯಾಯಿತು.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋನಲ್ಲಿ 1500 ಡ್ರೋನ್‌ಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.
ರಾತ್ರಿ 7:45ಕ್ಕೆ ಆರಂಭಗೊಂಡ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸಲಾಯಿತು.
ಮೊದಲ ದಿನವಾದ ಅ.6ರ ಭಾನುವಾರ ನಡೆದ ಆಕರ್ಷಕ ಡ್ರೋನ್ ಪ್ರದರ್ಶನ ವೀಕ್ಷಿಸಲು ಸಾವಿರಾರು ಸಂಖ್ಯೆಯ ಜನರು ಸೋಮವಾರ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ಲಗ್ಗೆಯಿಟ್ಟಿದ್ದರು.
ವಿಜಯ್ ಪ್ರಕಾಶ್ ಗಾಯಕ:
ಎರಡನೇ ದಿನದ ಡ್ರೋನ್ ಪ್ರದರ್ಶನದ ಅಂಗವಾಗಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನತಣಿಸಿತು. ಖ್ಯಾತ ಹಿನ್ನೆಲೆ ಗಾಯನ ವಿಜಯ ಪ್ರಕಾಶ್ ಅವರು ತಮ್ಮ ಕಂಚಿನ ಕಂಠದಿಂದ ಪ್ರೇಕ್ಷಕರಿಗೆ ಸಂಗೀತದ ಸುಧೆ ಹರಿಸಿದರು. ತಮ್ಮ ಗಾಯನದ ಹಿಟ್ ಗೀತೆಗಳಾದ ಖಾಲಿ ಕ್ವಾಟ್ರು ಬಾಟ್ಲಿ ಅಂಗೆ ಲೈಫು, ಕುಲದಲ್ಲಿ ಕೀಳಾವುದೋ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ಹಲವು ಗೀತೆಗಳನ್ನು ಹಾಡಿ ರಂಜಿಸಿದರು. ವಿಜಯ್ ಪ್ರಕಾಶ್ ಅವರು ದಿ. ಪುನೀತ್ ರಾಜಕುಮಾರ್ ಅವರ ಗೊಂಬೆ ಹೇಳುತೈತೆ ಹಾಡಿಗೆ ಇಡೀ ಮೈದಾನವೇ ತಲೆದೂಗಿತು.
ಕಾರ್ಯಕ್ರಮದಲ್ಲಿ ಶಾಸಕ ಡಿ. ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
Crime
ಹುಟ್ಟುಹಬ್ಬ ಆಚರಿಸಿದ ರಾತ್ರಿಯೇ ಹೃದಯ ಘಾತದಿಂದ ಪಶುವೈದ್ಯ ಸಾವು
ಸಾಲಿಗ್ರಾಮ : ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ರಾತ್ರಿಯಲ್ಲಿಯೇ, ಜೀವನ ಸಾಗಿಸುವ ಮುನ್ನವೇ ಜೀವದ ಕೊನೆಯುಸಿರೆಳೆದ ಪಶು ವೈದ್ಯ ಯುವಕ,ಹೃದಯಘಾತ ದಿಂದ ಸಾವುನಪ್ಪಿರುತ್ತಾರೆ.
ಸಾಲಿಗ್ರಾಮ ಪಟ್ಟಣದ ಅಖಿಲೇಶ್ ಎಂ ಗೌಡ( 28 ವರ್ಷ ) ಇವರು ಬೆಂಗಳೂರು ಕೆ ಎಂ ಎಫ್ ನಲ್ಲಿ ಪಶು ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು, ಇಂದು ಹುಟ್ಟುರಾದ ಸಾಲಿಗ್ರಾಮದಲ್ಲಿ ತೋಟದ ಹಬ್ಬ ಮಾಡಲು ಎಲ್ಲಾ ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಮೃತರ ತಾಯಿ ಊರದ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಗೆ ಶನಿವಾರ ದಿವಸ ಹಬ್ಬಕ್ಕೆ ಎಂದು ಹೋಗಿ ಅಲ್ಲಿಯೇ ರಾತ್ರಿ ತಾಯಿ ಮನೆಯಲ್ಲಿ ತನ್ನ ಹುಟ್ಟುಹಬ್ಬ ವನ್ನು ಆಚರಿಸಿಕೊಂಡು ಊಟ ಮಾಡಿ ಮಲಗಿಕೊಂಡು ಇಂದು ಭಾನುವಾರ ಸಾಲಿಗ್ರಾಮದ ಹಬ್ಬಕ್ಕೆ ಎಂದು ಮನೆಯವರು ಹೊರಡುವ ವೇಳೆಯಲ್ಲಿ, ಮಲಗಿರುವ ಅಖಿಲೇಶ್ ಎಂ ಗೌಡ ಇವರನ್ನು ಎಚ್ಚರ ಮಾಡಲು ಹೋದಾಗ, ಅಷ್ಟರ ಒಳಗೆ ಸಾವನಪ್ಪಿರುತ್ತಾರೆ.
ಮೃತ ಪಟ್ಟ ವ್ಯಕ್ತಿಯ ಮದುವೆಯು ಮುಂದಿನ ತಿಂಗಳು ನವಂಬರ್ ನಲ್ಲಿ ಇರುತ್ತದೆ, ದಿನಾಂಕ ವನ್ನು ನಿಗದಿ ಪಡಿಸಿ, ಮದುವೆಗೆ ಬೇಕಾಗುವ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದ್ದರು. ಆದರೆ ನಡೆದ ಸಾವಿನ ಘಟನೆಯಿಂದ ಅಪಾರ ಬಂದು ಬಳಗ, ಸ್ನೇಹಿತರು ಹಾಗು ಜನತೆಯ ಆಕ್ರಂದನ ಮುಗಿಲು ಮುಟ್ಟಿತು.
ಮೃತರು ಮಾಜಿ ಸಚಿವ ಸಾರಾ ಮಹೇಶ್ ರವರ ಸಹೋದರರಾದ ಗ್ರಾಮದ ನಿವಾಸಿ ಎಂ ಡಿ ಮಂಜ ಇವರ ಪತ್ನಿ ರೇಣುಕ ಇವರ ಏಕೈಕ ಪುತ್ರ ರಾಗಿದ್ದು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯ ಕ್ರಿಯೆಯು ಇಂದು ಸಂಜೆ ಸ್ವಗ್ರಾಮ ದಲ್ಲಿ ನೆರವೇರಿತು.
ಮಾಜಿ ಸಚಿವ ಸಾರಾ ಮಹೇಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಾರಾ ನಂದೀಶ್, ಮೈಸೂರು ಜಿಲ್ಲಾ ನಿರ್ದೇಶಕ ಅಮಿತ್ ದೇವರಹಟ್ಟಿ,ತಂಬಾಕು ಮಂಡಳಿ ಸೂಪರ್ ವೈಸರ್ ದಿನೇಶ್ ನಂಜಪ್ಪ, ವಿ ಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಪಟೇಲ್ ಆನಂದ್, ಜಿ ಪಂ ಮಾಜಿ ಸದಸ್ಯ ಎಂ ಟಿ ಕುಮಾರ್ ಸೇರಿದಂತೆ ಇತರರು ಮೃತರ ಅಂತಿಮ ದರ್ಶನ ಪಡೆದರು.
-
Mysore5 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State8 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State8 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health8 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan6 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized4 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized10 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State8 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.