Connect with us

National - International

ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಲು ಇಲ್ಲಿದೆ ಕ್ಷಣಾರ್ಧದ ಉಪಾಯ

Published

on

ಸಾಮಾನ್ಯವಾಗಿ ನಾವು ಪ್ರವಾಸವನ್ನು ಮಾಡುತ್ತೇವೆ. ದೂರದ ಸ್ಥಳಗಳಿಗೆ ಪ್ರಯಾಣಿಸಲು ಟ್ರೈನ್ ಟಿಕೇಟ್ ಗಳನ್ನು, ಅಥವಾ ಬಸ್ ಟಿಕೇಟ್ ಗಳನ್ನು ಬುಕ್ ಮಾಡುತ್ತೇವೆ. ಆದರೆ ಈಗ ನೀವು ತತ್ಕಾಲ್ ನಲ್ಲಿ ವೇಗವಾಗಿ ಹಾಗೂ ಸುಲಭವಾಗಿ ರೈಲು ಟಿಕೇಟ್ ಗಳನ್ನು ಬುಕ್ ಮಾಡಬಹುದು. ಕೆಳಗಿನಂತೆ ಟಿಕೇಟ್ ಬುಕ್ ಮಾಡಬಹುದಾಗಿದೆ.

ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಶನ್ ಮೂಲಕವೇ ಆನ್‌ಲೈನ್‌ನಲ್ಲಿ ರೈಲು ಟಿಕೇಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದಾಗಿದೆ.

ಕೆಲವೆ ಕೆಲವು ನಿಮಿಷಗಳಲ್ಲಿ ತತ್ಕಾಲ್ ನಲ್ಲಿ ಟಿಕೆಟ್ ಅನ್ನು ಬುಕಿಂಗ್ ಮಾಡಬಹುದು.

ಪ್ರಯಾಣಕ್ಕೆ ಒಂದು ದಿನ ಮೊದಲೇ ತತ್ಕಾಲ್ ವೆಬ್ ಸೈಟ್ ಓಪನ್ ಇರುತ್ತದೆ.

ಕಡಿಮೆ ಖರ್ಚಿನ ಪ್ರಯಾಣಕ್ಕೆ ರೈಲು ಹೆಸರುವಾಸಿಯಾಗಿದೆ. ನೀವು ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ನ ಮೂಲಕ. ಯಾವಾಗ ಬೇಕಾದರೂ ಯಾವ ರೈಲನ್ನು ಬೇಕಾದರೂ ಬುಕ್ ಮಾಡಬಹುದು. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಬೇಕಾದ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಮಗೆ ಬಹಳಷ್ಟು ಉಪಯೋಗವಾಗಲಿದೆ.

ಬುಕಿಂಗ್ ವ್ಯವಸ್ಥೆ

ನಾವು ಪ್ರಯಾಣಿಸುವ ಒಂದು ದಿನದ ಮೊದಲೇ ಟಿಕೇಟ್ ಬುಕ್ ಮಾಡಿಕೊಂಡು ನಮ್ಮ ಸೀಟ್ ಅನ್ನು ದೃಢೀಕರಿಸಿ ಕೊಳ್ಳಬಹುದು. ಆದರೆ ಕೆಲವರು ಐಆರ್‌ಸಿಟಿಸಿಯ ತತ್ಕಾಲ್ ನಲ್ಲಿಯೂ ಸಹ ಟಿಕೇಟ್ ಬುಕ್ ಆಗುತ್ತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ನಾವು ಟಿಕೇಟ್ ಬುಕ್ ಮಾಡುವಾಗ ಮಾಡುವ ತಪ್ಪುಗಳು ಇರಬಹುದು ಎನ್ನುತ್ತಾರೆ.

ನೀವು ತತ್ಕಾಲ್ ನಲ್ಲಿ ಟಿಕೇಟ್ ಬುಕ್ ಮಾಡುವಾಗ ಈ ಅಂಶಗಳನ್ನು ಗಮನಿಸಬೇಕು.

ನೀವು ಪ್ರಯಾಣಿಸುವ ಮಾಡಬೇಕಿರುವ ಸ್ಥಳಕ್ಕೆ ಒಂದು ದಿನದ ಮುಂಚೆಯೇ ಟಿಕೇಟ್ ಬುಕ್ ಮಾಡಿಕೊಳ್ಳಬೇಕು.

ಮುಖ್ಯವಾಗಿ ಬೆಳಗ್ಗೆ 10 ಗಂಟೆಗೆ ತತ್ಕಾಲ್‌ನ ಎಸಿ ಕೋಚ್ಗಳ ಬುಕಿಂಗ್ ಆರಂಭವಾಗುತ್ತದೆ.

ಸಾಮಾನ್ಯ ಕೋಚ್ ಗಳ ಟಿಕೇಟ್ ಗಳು ಬೆಳಗ್ಗೆ 11 ಗಂಟೆಗೆ ಓಪನ್ ಆಗುತ್ತೇವೆ.

ಆನ್ಲೈನ್ ಅಲ್ಲಿ ಟಿಕೇಟ್ ಬುಕ್ ಮಾಡುವ ವಿಧಾನ ಇಲ್ಲಿದೆ.

ನಿಮ್ಮ ಮೊಬೈಲ್ ನಲ್ಲಿ ಐ‌ಆರ್‌ಸಿ‌ಟಿ‌ಸಿ ಯನ್ನು ಓಪನ್ ಮಾಡಿಕೊಳ್ಳಿ, ನಂತರ ನಿಮ್ಮ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿ. ನಿಮ್ಮ ಐ‌ಆರ್‌ಸಿ‌ಟಿ‌ಸಿ ಖಾತೆ ಇಲ್ಲದಿದ್ದರೆ, ಸೈನ್ ಅಪ್ ಮಾಡಿ ಲಾಗಿನ್ ಆಗಿ. ನಿಮಗೆ ಬುಕಿಂಗ್ ಶೋ ಆಗುತ್ತದೆ. ಪ್ರಯಾಣದ ದಿನಾಂಕ, ನೀವು ತಲುಪಬೇಕಾದ ನಿಲ್ದಾಣ, ರೈಲು ಮತ್ತು ವರ್ಗವನ್ನು ಸರಿಯಾಗಿ ಭರ್ತಿ ಮಾಡಿ. ನಂತರ ಪೇಮೆಂಟ್ ಮಾಡಿ. ಹಣ ಪಾವತಿಯ ಕೂಡಲೇ ಟಿಕೇಟ್ ಬುಕ್ ಆಗುತ್ತದೆ. ನಂತರ ನೀವು ಟಿಕೇಟ್ ಡೌನ್ಲೋಡ್ ಮಾಡಿಕೊಳ್ಳಬಹುದು.

Continue Reading
Click to comment

Leave a Reply

Your email address will not be published. Required fields are marked *

National - International

ಭಾರತ-ರಷ್ಯಾ ಆರ್ಥಿಕ ಬಲ ಹೆಚ್ಚಿಸಲು ವಿಷನ್- 2030: ಪಿಎಂ ಮೋದಿ-ಪುಟಿನ್‌ ಮಧ್ಯೆ ದ್ವಿಪಕ್ಷೀಯ ಒಪ್ಪಂದ

Published

on

ನವದೆಹಲಿ: ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ಹೆಚ್ಚಿಸಲು ವಿಷನ್ 2030  ದಾಖಲೆಗೆ ಸಹಿ ಹಾಕಿವೆ. ಈ ಮೂಲಕ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ  ಹಲವಾರು ವ್ಯಾಪಾರ ಮಾರ್ಗಗಳನ್ನ ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ  ತಿಳಿಸಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಅವರು, ಆರ್ಥಿಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು, ನಾವು ʻವಿಷನ್ 2030ʼ ದಾಖಲೆಗೆ ಸಹಿ ಹಾಕಿದ್ದೇವೆ. ಇಂದು, ನಾವಿಬ್ಬರೂ ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿದ್ದೇವೆ. ಈ ಒಪ್ಪಂದವು ಆದ್ಯತೆಯ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಅಲ್ಲದೇ ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಆರ್ಥಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ ಸಹ-ಉತ್ಪಾದನೆ ಮತ್ತು ಸಹ-ನಾವೀನ್ಯತೆಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತವೆ ಎಂಬ ವಿಶ್ವಾಸ ನನಗಿದೆ ಎಂದು  ಹೇಳಿದರು.

ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ FTA ಅನ್ನು ಸಾಕಾರಗೊಳಿಸಲು ಎರಡೂ ದೇಶಗಳು ಹೊಸ ಕ್ರಮಗಳನ್ನ ತೆಗೆದುಕೊಳ್ಳುತ್ತಿವೆ ಎಂದರು. ಇದೇ ಸಮಯದಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಜಾಗತಿಕ ಏಕತೆಯನ್ನು ಕೋರಿದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ – ರಷ್ಯಾ ಒಟ್ಟಾಗಿ ಸಾಗಲಿವೆ ಎಂದು ತಿಳಿಸಿದರು.

ಇನ್ನೂ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪುಟಿನ್, ಭಾರತದಲ್ಲಿ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ರಷ್ಯಾ ನಡುವಿನ ಅಭಿವೃದ್ಧಿ ಹೆಚ್ಚಿಸಲು ನಾನು, ಪ್ರಧಾನಿ ಮೋದಿ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Continue Reading

National - International

ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್‌ ವೀಸಾ : ಪಿಎಂ ಮೋದಿ

Published

on

ನವದೆಹಲಿ:  ಶೀಘ್ರದಲ್ಲೇ ಭಾರತವೂ,  ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್‌ ವೀಸಾ  ಹಾಗೂ 30 ದಿನಗಳ ಗುಂಪು ಪ್ರವಾಸಿ (ಗ್ರೂಪ್‌ ಟೂರಿಸ್ಟ್‌ ವೀಸಾ – Group Tourist Visa) ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ) ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಡಿಸಿದರು. ರಷ್ಯಾದ ನಾಗರಿಕರಿಗೆ ಇ-ಟೂರಿಸ್ಟ್‌ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನ ಶೀಘ್ರದಲ್ಲೇ ಆರಂಭಿಸಲಿದ್ದೇವೆ. ಈ ತೀರ್ಮಾನ ಪ್ರಕಟಿಸಲು ನನಗೆ ತುಂಬಾ ಹರ್ಷವಾಗಿದ್ದು, ಮುಂದಿನ 30 ದಿನಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಹೇಳಿದರು.

ಉಭಯ ದೇಶದ ನಾಗರಿಕರಿಗೆ ಇದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಈ ನಿರ್ಧಾರವು ಭಾರತ-ರಷ್ಯಾದ ಸಂಬಂಧವನ್ನು ಅದರಲ್ಲೂ ವಿಶೇಷವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು  ತಿಳಿಸಿದರು.

ಇ-ಟೂರಿಸ್ಟ್‌ ವೀಸಾ ಎಂದರೇನು?
ಇ-ಪ್ರವಾಸಿ ವೀಸಾ ಅಂದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವ ಎಲೆಕ್ಟ್ರಾನಿಕ್ ವೀಸಾ. ಇದು ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯೆ ಆಗಿರುತ್ತದೆ. ಇದನ್ನು ಪಡೆಯಲು ನೀವು ವೀಸಾ ಕಚೇರಿಗೆ ಭೇಟಿ ನೀಡುವ ಅಗತ್ಯ ಇರೋದಿಲ್ಲ. ಪ್ರವಾಸಿಗರು ಮನರಂಜನೆ, ಪ್ರಯಾಣ ಅಥವಾ ಸಂಬಂಧಿಕರನ್ನ ಭೇಟಿ ಮಾಡುವಂತಹ ಉದ್ದೇಶಗಳಿಗಾಗಿ ಇ-ಟೂರಿಸ್ಟ್‌ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಬಳಿಕ ಮುಂದೇನು?
ಇ-ಪ್ರವಾಸಿ ವೀಸಾಗಾಗಿ ಅರ್ಜಿ ಸಲ್ಲಿಸಿದ ಬಳಿಕ, ನೀವು ಇಮೇಲ್ ಮೂಲಕ ಎಲೆಕ್ಟ್ರಾನಿಕ್ ಪ್ರಯಾಣ ಅಧಿಕಾರವನ್ನು (ETA) ಅನ್ನು ಸ್ವೀಕರಿಸುತ್ತೀರಿ. ಈ ಅಧಿಕಾರವು ನಿಮ್ಮ ಪಾಸ್‌ಪೋರ್ಟ್‌ಗೆ ಎಲೆಕ್ಟ್ರಾನಿಕ್ ಆಗಿ ಲಿಂಕ್ ಮಾಡಲಾಗಿರುತ್ತದೆ. ಜೊತೆಗೆ ಭಾರತದ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಸಾಂಪ್ರದಾಯಿಕ ವೀಸಾಗಳಿಗಿಂತ ಅಧಿಕ ಸರಳ ಮತ್ತು ವೇಗವಾಗಿ ನಡೆಯುತ್ತದೆ.
Continue Reading

National - International

ರಾಜಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

Published

on

ನವದೆಹಲಿ:  ಭಾರತದ ಪ್ರವಾಸದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮನ್ ಪುಟಿನ್ ಅವರು ಇಂದು ರಾಜಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ  ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ನವದೆಹಲಿಯಲ್ಲಿರುವ ರಾಜಘಾಟ್ ಗೆ ವ್ಲಾಡಿಮನ್ ಪುಟಿನ್ ಪುಷ್ಪ ನಮನ ಸಲ್ಲಿಸಿದ ಬಳಿಕ ದೆಹಲಿಯ ಹೈದರಾಬಾದ್ ಭವನಕ್ಕೆ ತೆರಳಿದ್ದಾರೆ.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವ್ಲಾಡಿಮನ್ ಪುಟಿನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ  ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ನಂತರ ಪುಟಿನ್ ಭಾರತೀಯ ಸೇನೆಯಿಂದ ಗೌರವ ವಂದನೆ ಸ್ವೀಕಾರ ಮಾಡಿದ್ದಾರೆ.

Continue Reading

Trending

error: Content is protected !!