Hassan
ತಂಬಾಕು ಸೇವನೆ ನಿಯಂತ್ರಣಕ್ಕಾಗಿ ಗುಲಾಭಿ ಆಂದೋಲನಕ್ಕೆ ನ್ಯಾ. ಬಿ.ಕೆ. ರವಿಕಾಂತ್ ಚಾಲನೆ
ಹಾಸನ: ತಂಬಾಕು ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ಅವಶ್ಯಕತೆ ಇದ್ದು, ಈ ಮೂಲಕ ತಂಬಾಕು ರಹಿತ ಆರೋಗ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಕರೆ ನೀಡಿದರು.
ನಗರದ ಕೇಂದ್ರ ಗ್ರಂಥಾಲಯ ಬಳಿ ಇರುವ ವಾಣಿವಿಲಾಸ ಶಾಲೆಯ ಬಾಲಕಿಯರ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಇಲಾಖೆ, ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗುಲಾಬಿ ಆಂದೋಲನ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜನ್ಮತಾಳಿರುವ ನಾವು ಪ್ರೀತಿಯಿಂದ ಇರುವ ಮೂಲಕ ಜೀವನ ಸಾಗಿಸಬೇಕಾಗಿದೆ ಹೊರತು ತಂಬಾಕು ಹಂಚುವುದಾಗಲಿ, ತಂಬಾಕು ಉತ್ಪನ್ನ ಪದಾರ್ಥ ಹಂಚುವುದಾಗಲಿ ಇದರಿಂದ ಯಾವ ಪ್ರೀತಿಯನ್ನು ಹಂಚುವುದಕ್ಕೆ ಆಗುವುದಿಲ್ಲ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ತಂಬಾಕು ಉತ್ಪನ್ನವು ಮನುಷ್ಯನ ಶರೀರ ಸೇರಿದರೇ ದೇಹದ ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ, ಮಾನಸಿಕ ಖಾಯಿಲೆಗಳು ಸಹ ಉದ್ಭವಿಸುತ್ತದೆ. ಇಂತಹ ತಂಬಾಕು ಸೇವನೆಗೆ ಸಂಪೂರ್ಣ ತಡೆ ಹಾಕುವ ಮೂಲಕ ಉತ್ತಮ ಸಮಾಜ ಕಟ್ಟಬೇಕಾಗಿದೆ. ಮಕ್ಕಳು ಎಂದರೇ ಸಮಾಜದ ಆಸ್ತಿ. ಆರೋಗ್ಯಕರ ಜೀವನ ನಡೆಸಬೇಕಾದರೇ ಮೊದಲು ಅಂತಹ ವಾತವರಣ ನಿರ್ಮಿಸುವ ಅವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಅನೀಲ್ ಅವರು ಮಾತನಾಡಿ, ತಂಬಾಕು ಸಾಂಕ್ರಾಮಿಕವಾದ ವಿಶ್ವವು ಎದುರಿಸಿದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ತಂಬಾಕು ಭಾರತದ ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಅಪಾಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಸಾಮಾನ್ಯ ಅಪಾಯಕಾರಿ ಅಂಶವಾಗಿದೆ. ತಂಬಾಕಿನಿಂದ ಆರೋಗ್ಯದ ಮೇಲೆ ಹೊರೆ ಆಗಲಿದೆ ಎಂದರು. ಬಾಯಿಯ ಕ್ಯಾನ್ಸರ್ ನಾಲಿಗೆ, ಧ್ವನಿಪೆಟ್ಟಿಗೆ ಮತ್ತು ಗಂಟಲಕುಳಿ, ಅನ್ನನಾಳ, ಹೊಟ್ಟೆ, ಪಿತ್ತಕೋಶ, ಮೂತ್ರಕೋಶ, ಗರ್ಭಾಶಯದ ಗರ್ಭಕಂಠ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ-ನಾಳೀಯ ಕಾಯಿಲೆಗಳು ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು ಕ್ಷಯರೋಗದೊಂದಿಗೆ ಸಂಬಂಧ ಹೊಂದಿವೆ. ಕಡಿಮೆ ಜನನ ತೂಕದ ಮಕ್ಕಳು, ಪುರುಷರಲ್ಲಿ ಫಲವತ್ತತೆ ಮತ್ತು ಲೈಂಗಿಕ ದುರ್ಬಲತೆ ಕಡಿಮೆ ಆಗುವುದು,
ಆರಂಭಿಕ ವಯಸ್ಸಾದ ಮತ್ತು ಚರ್ಮದ ಸುಕ್ಕು, ಪ್ರಬುದ್ಧ ಪೂರ್ವ ಸಾವುಗಳು ಕಾಣಿಸಿಕೊಳ್ಳುತ್ತದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಗರೇಟ್, ಬೀಡಿ ಮತ್ತು ಹುಕ್ಕಾದಂತಹ ತಂಬಾಕು ಉತ್ಪನ್ನಗಳನ್ನು ಬಳಸಿದಾಗ ಅದರಿಂದ ಉಂಟಾಗುವ ಹೊಗೆಯು ಆ ಸ್ಥಳವನ್ನು ಆವರಿಸಿ ಅಲ್ಲಿರುವ ಜನರು ಅದನ್ನು ಉಸಿರಾಟದ ಮೂಲಕ ಸೇವಿಸುವಂತಾದರೆ ಅದನ್ನು ಪರೋಕ್ಷ ಧೂಮಪಾನ ಎನ್ನುತ್ತೇವೆ ಎಂದು ಹೇಳಿದರು.
ಶಾಲಾ ಮಕ್ಕಳು ಕೈಲಿ ಗುಲಾಬಿ ಹಿಡಿದು ಜಾಗೃತಿ ಜಾಥದ ಮೂಲಕ ಸಾರ್ವಜನಿಕರಿಗೆ ಗುಲಾಬಿ ನೀಡಿದಲ್ಲದೇ ತಂಬಾಕು ಪದಾರ್ಥಗಳ ಸೇವನೆ ಮಾಡದಂತೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಹ ಶಿಕ್ಷಕರಾದ ಸವಿತಾ, ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಪ್ರಾಂಶುಪಾಲರಾದ ಪ್ರೇಮಾಲತಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ವೇದಣ್ಣ, ಆರೋಗ್ಯಾ ಇಲಾಖೆಯ ನಾಗೇಶ್ ಆರಾಧ್ಯ, ನಾಗಪ್ಪ, ಗೀತಾ, ಅರುಂಧತಿ ಇತರರು ಉಪಸ್ಥಿತರಿದ್ದರು.
Hassan
ಸಂಸದರ ಕಚೇರಿ ಉದ್ಘಾಟಿಸಿದ ಸಚಿವ ಕೆ. ಎನ್ ರಾಜಣ್ಣ
ಹಾಸನ: ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಸಂಸದರ ಕಚೇರಿಯನ್ನು ಸಹಕರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಟೇಪ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.
ನೂತನ ಕಚೇರಿಯಲ್ಲಿ ಸಂವಿಧಾನದ ಪೀಠಿಕೆಗೆಗೆ ಪುಷ್ಪಾರ್ಚನೆ ಮಾಡಲಾಯಿತು ಬಳಿಕ ಕಚೇರಿ ಉದ್ಘಾಟನೆ ಅಂಗವಾಗಿ ವಿಶೇಷ ಪೂಜೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್ ದಂಪತಿ, ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕಳೆದ ೨೫ ವರ್ಷಗಳ ಬಳಿಕ ಕಾಂಗ್ರೆಸ್ ನ ಅಭ್ಯರ್ಥಿಗೆ ಜಿಲ್ಲೆಯ ಜನ ಆಶೀರ್ವಾದ ಮಾಡಿ ಶ್ರೇಯಸ್ ಪಟೇಲ್ ಅವರನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಜನರಿಗೆ ಸುಲಭವಾಗಿ ಸಿಗುವ ನಿಟ್ಟಿನಲ್ಲಿ ಕಚೇರಿಯನ್ನು ಬಳಸಿಕೊಂಡು ಆಗಾಗ ಕಚೇರಿಗೆ ಆಗಮಿಸುವ ಮೂಲಕ ಜನರ ಅಹವಾಲು ಸ್ವೀಕರಿಸಿ ಬಗೆ ಹರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದರು. ಪ್ರತಿಯೊಬ್ಬ ಜನಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸಗಳ ಮೇಲೆ ಅವರ ಹೆಸರು ಚಿರಸ್ಥಾಯಿ ಯಾಗಿ ಉಳಿಯಲಿದೆ. ಅದೇ ರೀತಿ ಶ್ರೇಯಸ್ ಪಟೇಲ್ ಕೂಡ ತನ್ನ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹಾರೈಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗುವುದು ಸವಾಲಿನ ಕೆಲಸ ಇಂತಹ ಪರಿಸ್ಥಿತಿಯಲ್ಲಿ ಶ್ರೇಯಸ್ ಪಟೇಲ್ ಸಂಸದನಾಗಿ ಆಯ್ಕೆಯಾಗಿದ್ದಾರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಜನರ ಆಶೀರ್ವಾದ ಪಡೆದು ಇನ್ನು ಮುಂದಿನ ೨೫ ವರ್ಷಗಳು ಶ್ರೇಯಸ್ ಪಟೇಲ್ ಅವರೇ ಎಂಪಿ ಯಾಗಿ ಮುಂದುವರೆಯುವಂತೆ ಆಗಲಿ ಎಂದು ಆಶಿಸಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಸಚಿವರಾದ ಕೆ.ಎನ್ ರಾಜಣ್ಣ ಅವರ ಅಮೃತಸ್ಥದಿಂದ ನಮ್ಮ ಕಚೇರಿ ಉದ್ಘಾಟನೆ ಮಾಡಲಾಗಿದೆ, ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತನ್ನ ಅಧಿಕಾರದ ಅವಧಿಯುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುವೆ, ವಾರದಲ್ಲಿ ನಿಗದಿತ ಎರಡು ದಿನ ಕಚೇರಿಯಲ್ಲಿ ಇದ್ದು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಾಗುವುದು ಎಂದರು. ಜಿಲ್ಲೆಯ ಜನರು ನನಗೆ ಒಂದು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ, ಜಿಲ್ಲೆಯ ಜನರ ಹಾಗೂ ಮುಖಂಡರ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ, ಜೊತೆಗೆ ನನ್ನ ಕಚೇರಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿ ಜನರ ಅಹವಾಲುಗಳನ್ನು ಪಡೆದು ಅವರ ಸಮಸ್ಯೆ ಬಗೆಹರಿಸುವವ ನಿಟ್ಟಿನಲ್ಲಿ ಕೆಲಸ ಮಾಡುವೆ. ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ ಎಂದು ವಿಶ್ವಾಸವ್ಯಕ್ತಪಡಿಸಿದರು.
ಇದೆ ವೇಳೆ ವಿಧಾನ ಪರಿಷತ್ತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ಜಾವಗಲ್ ಮಂಜುನಾಥ್, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.
Hassan
ರಾಜ್ಯದಲ್ಲಿ 9 ಕೋಟಿ ಬಿಜೆಪಿ ಸದಸ್ಯರನ್ನು ಮಾಡುವ ಗುರಿ
ಹಾಸನ : ಜಿಲ್ಲೆಯೊಂದರಲ್ಲೆ ಎಂಟು ಲಕ್ಷ ಬಿಜೆಪಿ ಸದಸ್ಯತ್ವ ನೋಂದಾವಣಿ ಮಾಡುವ ಅಪೇಕ್ಷೆ ಇದ್ದು, ರಾಜ್ಯದಲ್ಲಿ ೨ ಕೋಟಿ ಸದಸ್ಯತ್ವ ಮಾಡುವ ಗುರಿ ಹೊಂದಿರುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಆರ್.ಸಿ. ರಸ್ತೆ, ಗಂಧದ ಕೋಠಿ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಸೆಪ್ಟೆಂಬರ್ ೨ ರಂದು ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಅವರನ್ನು ಸದಸ್ಯರನ್ನಾಗಿ ಮಾಡುವ ಮೂಲಕ ಚಾಲನೆ ನೀಡಲಾಗಿದ್ದು, ಈಗ ಹಾಸನದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಏಳರಿಂದ ಎಂಟು ಲಕ್ಷ ಬಿಜೆಪಿ ಸದಸ್ಯತ್ವ ನೊಂದಣಿಗೆ ಕಾರ್ಯಕರ್ತರ ಅಪೇಕ್ಷೆ ಇದೆ. ರಾಜ್ಯದಲ್ಲಿ ಕೂಡ ಎರಡು ಕೋಟಿ ಸದಸ್ಯರನ್ನು ನೊಂದಣಿ ಮಾಡೊ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಘರ್ಷಣೆ ಪ್ರಕರಣವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ನಾನು ನೆನ್ನೆ ರಾತ್ರಿವರೆಗು ಕೂಡ ಮಂಡ್ಯದಲ್ಲಿ ಇದ್ದೆನು. ಏನಾಗಿದೆ ಎನ್ನೊ ಬಗ್ಗೆ ವಾಸ್ತವದ ಬಗ್ಗೆ ಅರಿವಿಲ್ಲ. ಇಂದೇ ನಮ್ಮ ರಾಜ್ಯ ಅದ್ಯಕ್ಷರು ಅಲ್ಲಿಗೆ ಬೇಟಿ ನೀಡಲಿದ್ದಾರೆ. ಅಲ್ಲಿಗೆ ನಾನು ಕೂಡ ಬೇಟಿ ನೀಡುತ್ತೇನೆ. ನಾನು ಎಲ್ಲೋ ಕೂತು ಗಾಳಿಯಲ್ಲಿ ಗುಂಡು ಹೊಡೆಯೊ ಕೆಲಸ ಮಾಡಲ್ಲ. ಮೆರವಣಿಗೆ ವೇಳೆ ಗಲಾಟೆ ಆಗಿದೆ. ಯಾರೇ ತಪ್ಪು ಮಾಡಿದ್ದರೂ ಕೂಡ ಕ್ರಮ ಆಗಬೇಕು ಎಂಬುದು ನನ್ನ ಆಗ್ರಹವಾಗಿದೆ. ಬೆಂಗಳೂರಿನಲ್ಲಿರುವ ಬಿಜೆಪಿ ಕಛೇರಿಯನ್ನು ಸ್ಪೋಟಿಸುವ ಕುರಿತು ಎನ್.ಐ.ಎ. ಈಗಾಗಲೇ ತನಿಖೆ ನಡೆಸುತ್ತಿದ್ದು, ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದರು.
ಈ ಹಿಂದಿನ ಸಮಯದಲ್ಲಿ ಬಿಜೆಪಿಯು ರಾಜ್ಯದಲ್ಲಿ ಸರಕಾರ ಇರುವಾಗ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ ಅನುಧಾನ ತಂದು ಅಭಿವೃದ್ಧಿಗೊಳಿಸಲಾಗಿತ್ತು. ಈಘ ಕಾಂಗ್ರೆಸ್ ಸರಕಾರವು ಹಾಸನ ಜಿಲ್ಲೆಗೆ ಹೆಚ್ಚಿನ ರೀತಿ ಅನುಧಾನ ತರುವ ಮೂಲಕ ಅಭಿವೃದ್ಧಿಗೊಳಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಶಾಸಕ ಸಿಮೆಂಟ್ ಮಂಜು, ಬಿಜೆಪಿ ಮಹಿಳಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿ.ಹೆಚ್. ನಾರಾಯಣಗೌಡ, ಎಸ್.ಡಿ. ಚಂದ್ರು, ಅಮಿತ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
Hassan
ಸಿಎಂ ಸೀಟು ಖಾಲಿ ಇದ್ರೆ ಟವಲ್ ಹಾಕಬಹುದು, ಆದ್ರೆ ಜಾಗ ಖಾಲಿಯೇ ಇಲ್ಲ ಸದ್ಯಕ್ಕೆ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ : ಕೆ.ಎನ್. ರಾಜಣ್ಣ ಹೇಳಿಕೆ
ಹಾಸನ: ಸಿಎಂ ಸೀಟು ಖಾಲಿ ಇದ್ದರೇ ಟವಲ್ ಹಾಕಬಹುದು. ಜಾಗವೇ ಖಾಲಿ ಇಲ್ಲ ಎಂದ ಮೇಲೆ ಟವಲ್ ಹಾಕುವ ಪ್ರಶ್ನೆಯೇ ಇಲ್ಲ. ಆಸೆ ಪಡುವುದು ತಪ್ಪಲ್ಲ. ದುರಾಸೆ ಪಡುವುದು ತಪ್ಪು. ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಖಾಲಿ ಜಾಗ ಇದ್ದರೆ ಟವಲ್ ಹಾಕಬಹುದು. ಆದರೆ ಜಾಗವೇ ಖಾಲಿ ಇಲ್ಲ ಎಂದ ಮೇಲೆ ಟವಲ್ ಹೇಗೆ ಹಾಕ್ತಾರೆ. ಆದರೆ ಭವಿಷ್ಯ ಏನೆಂದು ಯಾರಿಗೆ ಗೊತ್ತಿದೆ. ಸಿಎಂ ತೀರ್ಮಾನ ಮಾಡೋದು ಶಾಸಕಾಂಗ ಪಕ್ಷ ಹಾಗು ಹೈ ಕಮಾಂಡ್. ಅಸೆ ಪಡೋದು ತಪ್ಪಲ್ಲ ಆಧರೆ ದುರಾಸೆ ತಪ್ಪು! ಸದ್ಯಕ್ಕೆ ಸಿದ್ದರಾಮಯ್ಯ ಸಿಎಂ ಇದ್ದಾರೆ. ಶಾಸಕರ ಬೆಂಬಲ ಇರೊವರೆಗೆ ಸಿಎಂ ಆಗಿರ್ತಾರೆ. ಇಂದು ಗಣಪತಿ ವಿಸರ್ಜನೆ ಇದ್ದು, ನಿನ್ನೆ ನಾಗಮಂಗಲದಲ್ಲಿ ಅಹಿತಕತ ಘಟನೆ ನಡೆದಿದೆ. ಹಾಗಾಗಿ ಅದಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹಾಸನ ಎಂದರೆ ಶಾಂತಿಗೆ ಹೆಸರಾದ ಜಿಲ್ಲೆ. ಸುಸಂಸ್ಕೃತರು ವಿದ್ಯಾವಂತರು ಇರೊ ಜಿಲ್ಲೆ ಹಾಸನ. ಹಾಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡುತ್ತೇನೆ. ನಾಗಮಂಗಲ ಘಟನೆ
ಬಗ್ಗೆ ಸಚಿವರು ವಿವರಣೆ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಯಾರು ಈ ಕೃತ್ಯ ಮಾಡಿದಾರೆ ಎನ್ನೋದನ್ನ ಈಗ ಪತ್ತೆ ಹಚ್ಚೋದು ಸುಲಭ. ಎಲ್ಲಾದರು ಒಂದು ಕಡೆ ಸಿಸಿ ಕ್ಯಾಮೆರಾದಲ್ಲಿ ದಾಖಲೆ ಸಿಕ್ಕೇ ಸಿಗುತ್ತೆ. ಹಾಗಾಗಿ ಪೊಲೀಸರು ಈ ಬಗ್ಗೆ ದಾಖಲೆ ಸಮೇತ ಕಂಡು ಹಿಡಿಯುತ್ತಾರೆ. ಯಾರೇ ತಪ್ಪಿತಸ್ತರಿದ್ದರೂ ಇದ್ದರೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಸಹಾಯಕರು ಹಾಗು ದೌರ್ಜನ್ಯಕ್ಕೆ ಒಳಗಾದವರಿಗೆ ಸರ್ಕಾರ ರಕ್ಷಣೆ ಕೊಡಲಿದೆ. ವಿರೋದ ಪಕ್ಷಗಳು ಟೀಕೆ ಮಾಡೋದೆ ಅವರ ಕೆಲಸ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎನ್ನೋ ವಿಚಾರವಾಗಿ ಮಾತನಾಡಿ, ಈ ಹಿಂದೆ ಕೂಡ ಇಂತಹ ಘಟನೆ ನಡೆದಿದ್ದವು. ಆದರೆ ಅದು ದೊಡ್ಡದಾಗುತ್ತಿರಲಿಲ್ಲ. ಮಂಡ್ಯ ಘಟನೆ ಬಗ್ಗೆ ಗೃಹ ಸಚಿವರ ಹೇಳಿಕೆ ಬಗ್ಗೆ ವಿಪಕ್ಷಗಳ ಆಕ್ಷೇಪ ವಿಚಾರ ಮಾತನಾಡಿ, ಅವರು ಏನೇ ಹೇಳಿದರು ಅದನ್ನು ಎಲ್ಲದಕ್ಕು ಅನ್ವಯಿಸುತ್ತೀರಾ! ಅವರು ಹಾಗೇಲ್ಲಾ ಮಾತಾಡಿರೊದಿಲ್ಲ ಎನ್ನೋದು ನನ್ನ ನಂಬಿಕೆ ಎಂದು ವಿಶ್ವಾಸವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿರೊ ವಿಚಾರ ಮಾತನಾಡಿ, ಹಿಂದೆ ಕೂಡ ಇಂತಹದು ಇತ್ತು ಆದರೆ ಮಾದ್ಯಮ ಈಗ ಫುಲ್ ಅಕ್ಡೀವ್ ಅಗಿದೆ. ಹಾಗಾಗಿ ಸಣ್ಣ ಸಣ್ಣ ವಿಚಾರ ಕೂಡ ಪ್ರಚಾರ ಆಗ್ತಿದೆ ಎಂದರು.
ವಾಲ್ಮಿಕಿ ಹಗರಣ ಸಂಬಂದ ಇಡಿ ಚಾರ್ಚ್ ಶೀಟ್ ವಿಚಾರ ಮಾತನಾಡಿ, ತನಿಖಾ ಅದಿಕಾರಿ ವರದಿ ಮಂಡಿಸುತ್ತಾರೆ. ನ್ಯಾಯಾಲಯದಲ್ಲಿ ವಾದ ಆಲಿಸಿ ತೀರ್ಮಾನ ಕೊಡ್ತಾರೆ. ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಚಾರವಾಇ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮೊದಲು ಆಂದ್ರದಲ್ಲಿ ಒಳ ಮೀಸಲಾತಿ ಮಾಡಿದಾಗ ಸುಪ್ರಿಂ ಕೋರ್ಟ್ ರದ್ದು ಮಾಡಿತ್ತು. ಈಗ ಸುಪ್ರಿಂ ಕೋರ್ಟ್ ಜಾರಿ ಬಗ್ಗೆ ಹೇಳಿದೆ. ಆದರೆ ಏಕಾ ಏಕಿ ಮಾಡಲು ಆಗಲ್ಲ. ಜನ ಸಂಖ್ಯೆ ಆದಾರದಲ್ಲಿ ಮೀಸಲಾತಿ ಕೊಡಬೇಕು ಎಂದು ಬಂದರೆ ತೀರ್ಮಾನ ಮಾಡಬೇಕಾಗುತ್ತದೆ. ಸದಾಶಿವ ಆಯೋಗದ ವರದಿಯಲ್ಲಿ ಸಮುದಾಯದ ಸಂಖ್ಯೆ ಅದರಿಸಿ ಮೀಸಲಾತಿ ಕೊಡಬೇಕು ಎಂದಿದೆ. ಇದು ಸೂಕ್ಷ್ಮ ವಿಚಾರ ಇದೆ. ನಾವು ಒಳ ಮೀಸಲಾತಿಗೆ ಬದ್ದವಾಗಿ ಇದ್ದೇವೆ. ಯಾರಿಗು ಅನ್ಯಾಯ ಆಗದ ಹಾಗೆ ತೀರ್ಮಾನ ಮಾಡ್ತೇವೆ. ಇಂದು ಮುಡಾ ಕೇಸ್ ವಿಚಾರಣೆ ಇದೆ. ವಾದ ಮುಗಿಯಬಹುದು. ಆದರೆ ಇವತ್ತೆ ಮುಗಿಯುತ್ತೆ ಎಂದು ಹೇಳೋಕೆ ಆಗಲ್ಲ. ಮುಡ ಕೇಸಲ್ಲಿ ಎಲ್ಲಿ ಯಾದರು, ಸಿದ್ದರಾಮಯ್ಯ ಅವರ ಪಾತ್ರ ಇದೆಯಾ! ಪಾರ್ವತಿ ನನ್ನ ಪತ್ನಿ ಅವರಿಗೆ ಸೈಟ್ ಕೊಡಿ ಎಂದು ಬರೆದಿದ್ದರಾ. ದೇವೇಗೌಡರು ೧೯೮೨.ರಲ್ಲಿ ತಮ್ಮ ಪತ್ನಿಗೆ ಸೈಟ್ ಕೊಡಿ ಎಂದು ಪತ್ರ ಬರೆದಿದ್ದಾರೆ. ಅವರಿಗೆ ನಾಲ್ಕು ಎಕರೆ ಭೂಮಿ ಕೊಟ್ಟಿದ್ದಾರೆ. ಈ ರೀತಿ ಏನಾದ್ರು ಸಿದ್ದರಾಮಯ್ಯ ಮಾಡಿದಾರಾ ಎಂದು ಪ್ರಶ್ನೆ ಮಾಡಿದರು.
ಸಮಾನತೆ ಸೃಷ್ಠಿಯಾದ ಮೇಲೆ ಮೀಸಲಾತಿ ತೆಗೆಯುತ್ತೇವೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ ಹೊರತು ನಾಳೆಯೇ ರದ್ದು ಮಾಡುವುದಾಗಿ ಹೇಳಿಲ್ಲ. ಅವರ ಹೇಳಿಕೆಗೆ ನನ್ನ ಸಹಮತ ಇದೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಇದೆ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಎಸ್ಪಿ ಮಹಮ್ಮದ್ ಸುಜೀತಾ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಡಿಸಿ ಶಾಂತಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Mysore5 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State7 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State7 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health7 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan5 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized3 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized9 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State7 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.