Mysore
ತಂದ್ರೆ ಅಂಕನಹಳ್ಳಿ ಗ್ರಾಮದ ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಸಾಲಿಗ್ರಾಮ ತಾಲೂಕಿನ ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಧಕರ ಸಹಕಾರ ಸಂಘದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯೋಗೀಶ್ ಮತ್ತು ನಾಗೇಂದ್ರ ಸ್ಪರ್ದಿಸಿದ್ದರು. ಯೋಗೀಶ್ ರವರು 8 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿದರೆ, ಪ್ರತಿ ಸ್ಪರ್ಧಿ ನಾಗೇಂದ್ರ ರವರು ಕೇವಲ 1 ಮತ ಪಡೆಯುವುದರ ಮೂಲಕ ಪರಾಭವಗೊಂಡರು . ಒಟ್ಟು 10 ನಿರ್ದೇಶಕರುಗಳಲ್ಲಿ 9 ಮಂದಿ ಭಾಗವಹಿಸಿ, ಒಬ್ಬರು ಗೈರು ಹಾಜರಾಗಿರುತ್ತಾರೆ. ಉಪಾಧ್ಯಕ್ಷರ ಸ್ಥಾನಕ್ಕೆ ಶಿವಣ್ಣ ರವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ಶಿಕ್ಷಕ ಶಂಕರೇಗೌಡ ಕಾರ್ಯ ನಿರ್ವಹಿಸಿದ್ದರು.

ನಿರ್ದೇಶಕರಾದ ಯೋಗೇಶ್, ರಾಜಶೇಖರ್, ನಾಗೇಂದ್ರ, ಶಿವಣ್ಣ, ಪಾಲಾಕ್ಷ, ರುದ್ರೇಶ್, ನೀಲಮ್ಮ, ಗೌರಮ್ಮ, ಸಿದ್ದನಾಯಕ, ಕಾರ್ಯದರ್ಶಿ ಕಾರ್ತಿಕ್, ಇದ್ದರು. ಮುಖಂಡರುಗಳಾದ ತಾಲೂಕು ಪಂಚಾಯತಿ ಮಾಜಿ ಸದಸ್ಯ ರಘು, ಬಸವರಾಜ್ , ನಟೇಶ್, ಶಿವಣ್ಣ ಸೇರಿದಂತೆ ಇನ್ನಿತರರು ಶುಭ ಹಾರೈಸಿದರು. ನೂತನ ಅಧ್ಯಕ್ಷರು ಮಾತನಾಡಿ ನಿರ್ದೇಶಕರು, ಸದಸ್ಯರು, ಹಾಗು ಗ್ರಾಮಸ್ಥರು ಎಲ್ಲರ ಸಹಕಾರ ಪಡೆದು ಸಂಘವನ್ನು ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ತಿಳಿಸಿದರು.
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Mysore
ಕೆವಿಸಿ ಕೋಚಿಂಗ್ ಸೆಂಟರ್ ಆರಂಭ
ಮೈಸೂರು: ಕೆವಿಸಿ ಆಸ್ಪತ್ರೆಯು ಮಾತೃ ಸಂಸ್ಥೆ ಆಶ್ರಯದಲ್ಲಿ ನಗರದ ದಟ್ಟಗಳ್ಳಿ ಸೋಮನಾಥ ನಗರ ರಸ್ತೆಯಲ್ಲಿ ಕೆವಿಸಿ ಕೋಚಿಂಗ್ ಕೇಂದ್ರ ತೆರೆದಿದೆ.
ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವು ನೀಡುವ ಮಹತ್ವಾಕಾಂಕ್ಷೆಯೊAದಿಗೆ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ವಾಣಿಜ್ಯ ಸಲಹೆಗಾರ ಚೇತನ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತರಬೇತಿ ಕೇಂದ್ರವನ್ನು 12ನೇ ತರಗತಿ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡಿದೆ. ನೀಟ್, ಜೆಇಇ, ಸಿಇಟಿ ಮತ್ತು ಬೋರ್ಡ್ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರತಿಯೊಂದೂ ವಿಷಯಕ್ಕೆ ಕೇವಲ 5 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಅನುಭವಿ ಹಾಗೂ ನುರಿತ ಬೋಧಕರು ಇದ್ದಾರೆ. ಪರಿಕಲ್ಪನೆ ಆಧಾರಿತ ಕಲಿಕೆ, ನಿರಂತರ ಮೌಲ್ಯ ಮಾಪನ ಅಣಕು ಪರೀಕ್ಷೆ, ವಿದ್ಯಾರ್ಥಿಗೆ ಅಗತ್ಯವಾದ ಮಾರ್ಗದರ್ಶನ ಕೇಂದ್ರದ ವಿಶೇಷವಾಗಿದೆ. ನಗರದ ವಿದ್ಯಾರ್ಥಿಗಳಿಗೆ ಉಚಿತ ವಾಹನ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂ.96115 50355ನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ನಂದೀಶ್‌ಕುಮಾರ್, ಕಮಲಾಕ್ಷಿ, ಡಾ.ಜೀಜೀ ಗೋಷ್ಠಿಯಲ್ಲಿದ್ದರು.
Mysore
ಹುಲಿ ದಾಳಿಗೆ ಮತ್ತೊಂದು ಹಸು ಬಲಿ
ಶಂಕರ್ ಕಟ್ಟೆಮಳಲವಾಡಿ
ಹುಣಸೂರು, ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕರುಣ ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮಿಗೆ ಗ್ರಾಮದ ಮಹೇಶ ಬಿನ್ ಚೆಲುವೇಗೌಡ ರವರ ಹಸು ತಮ್ಮ ಜಮೀನಿನಲ್ಲಿ ಮೇಯುವ ಸಮಯದಲ್ಲಿ ಹುಲಿ ದಾಳಿ ಮಾಡಿ ಹಸುವನ್ನು ಅರ್ಧಂಬರ್ಧ ತಿಂದು ಕೊಂದುಹಾಕಿ ಉಳಿದ ಆಹಾರವನ್ನು ಬಿಟ್ಟು ಹೋಗಿದೆ.
Mysore
ದಮನಿತ ಸಮಾಜಗಳ ವೇದಿಕೆ ಅಸ್ತಿತ್ವಕ್ಕೆ: ದೇವರಾಜ್ ಕಾಟೂರು ರಾಜ್ಯಾಧ್ಯಕ್ಷರಾಗಿ ಆಯ್ಕೆ
ಮೈಸೂರು: ಕರ್ನಾಟಕ ದಮನಿತ ಸಮಾಜಗಳ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾಧ್ಯಕ್ಷರಾಗಿ ದೇವರಾಜ್ ಟಿ.ಕಾಟೂರು ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಸತ್ಯನಾರಾಯಣ(ಮಡಿವಾಳ), ಉಪೇಂದ್ರಕುಮಾರ್(ಗಾಣಿಗ), ಟಿಂಬರ್ ನಾಗರಾಜು(ವಿಶ್ವಕರ್ಮ), ಪರಮೇಶ್(ಸವಿತ ಸಮಾಜ), ನಾಸಿರ್(ಅಲ್ಪ ಸಂಖ್ಯಾತ), ಮಹೇಶ್(ಕುಂಬಾರ), ಲಕ್ಷ್ಮಣ್(ಕಣಿಯರ್), ಪಿ.ಶಂಕರ್(ಸೋಲಿಗ), ಮಂಜುನಾಥ್(ಸಿಳ್ಳೆಕ್ಯಾತ- ಹಕ್ಕಿಪಿಕ್ಕಿ), ರಾಬರ್ಟ್(ಕ್ರಿಶ್ಚಿಯನ್), ಆರ್.ಆರ್.ಪ್ರಕಾಶ್(ದರ್ಜಿ- ಮರಾಠ), ರಾಮಕೃಷ್ಣ(ಹೆಳವ-ಅಲೆಮಾರಿ), ಸುನೀಲ್ ಕುಮಾರ್(ದಲಿತ), ನೃಪತುಂಗ(ನಾಯಕ), ಕೆಂಪಯ್ಯ ಜಯಪುರ(ದಲಿತ), ಶ್ರೀಕಂಠ (ದಲಿತ), ಬಸವಣ್ಣ ಬದನವಾಳು(ದಲಿತ), ಸಿದ್ದಪ್ಪ(ಉಪ್ಪಾರ), ಬಸವರಾಜು (ಉಪ್ಪಾರ), ಮಲ್ಲೇಶ(ಉಪ್ಪಾರ) ಅವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಆಯ್ಕೆಯನ್ನು ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ಅನೇಕ ಸಮುದಾಯಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ ಮುಖ್ಯ ವಾಹಿನಿಗೆ ಬರದೆ ತೆರಮರೆಗೆ ಸರಿದಿವೆ. ಇದು ಸ್ವಾತಂತ್ರ‍್ಯ ಭಾರತದಲ್ಲಿ ದೊಡ್ಡ ದುರಂತ. ಇಂತಹ ಸಮಾಜಗಳ ಪರವಾಗಿ ಹೋರಾಟ ಮಾಡಲಿಕ್ಕೆ ನಾಯಕತ್ವದ ಕೊರತೆ ಇರುವ ಕಾರಣ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳ ದ್ವನಿಯಾಗಿ ನಿಂತು ಹೋರಾಟ ಮಾಡಲು ವೇದಿಕೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ವಿವರಿಸಿದರು.
ಹಿಂದುಳಿದ ವರ್ಗಗಳ ಮುಖಂಡ ಜಿ.ಎಂ.ಗಾಡ್ಕರ್ ಮಾತನಾಡಿ, ಮೈಸೂರಿನಲ್ಲಿ ಹುಟ್ಟುವ ಸಂಘಟನೆಗಳು ರಾಜ್ಯ ಮತ್ತು ದೇಶ ವ್ಯಾಪ್ತಿ ವಿಸ್ತರಿಸಿಕೊಂಡು ಜೀವಂತವಾಗಿ ಉಳಿದಿವೆ. ಅದೇ ರೀತಿ ಈ ಸಂಘಟನೆ ಕೂಡ ಡಿಎಸ್‌ಎಸ್ ಮತ್ತು ರೈತ ಚಳವಳಿಗಳಂತೆ ಹೋರಾಟ ಮಾಡಿ ಸಂವಿಧಾನ ಬದ್ದ ಹಕ್ಕುಗಳನ್ನು ದಮನಿತ ಸಮಾಜಗಳಿಗೆ ದೊರಕಿಸಿ ಕೊಡಬೇಕು. ಜವಾಬ್ದಾರಿ ಹೊತ್ತ ಅಧ್ಯಕ್ಷರು ರಾಜಕೀಯವಾಗಿ ಬಳಕೆ ಆಗದೆ ಪಕ್ಷಾತೀತವಾಗಿ ನೊಂದವರ ಪರ ಹೋರಾಟ ಮಾಡಿ ಜನ ಸೇವೆ ಮಾಡುವ ಸಂಘಟನೆಯಾಗಿ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಹೋರಾಟಗಾರರಾದ ಬನ್ನೂರ್ ಕುಮಾರ್(ನಾಯಕ), ಮಹಾನಗರ ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್(ಗೊಲ್ಲ), ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ(ದಲಿತ), ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಜೋಗಿ ಮಹೇಶ್(ದಲಿತ) ಮುಂತಾದವರು ಬೆಂಬಲ ಸೂಚಿಸಿದರು.
ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ದಮನಿತ ಸಮಾಜಗಳ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಪಕ್ಷಾತೀತವಾಗಿ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡಲು ಬದ್ಧನಾಗಿದ್ದೇನೆ.
ದೇವರಾಜ್ ಕಾಟೂರು, ರಾಜ್ಯಾಧ್ಯಕ್ಷ
-
State4 hours agoಟಾಟಾ ಸ್ಕಾಲರ್ಶಿಪ್ 2025–26: ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ: ₹1,00,000 ವರೆಗೆ ಆರ್ಥಿಕ ನೆರವು
-
Hassan17 hours agoಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
-
Hassan2 hours agoಉತ್ತಮ ಸಮಾಜ ನಿರ್ಮಾಣಕ್ಕೆ ನವೋದಯ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ
-
Manglore17 hours agoಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ
-
Mandya21 hours agoವಿಶ್ವ ಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಬಿ.ಸಿ ಶಿವಾನಂದ ಮೂರ್ತಿ
-
Mysore21 hours agoಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ವಿರುದ್ಧ ಸೂಕ್ತ ಕ್ರಮ: ಲಕ್ಷ್ಮಿಕಾಂತ ರೆಡ್ಡಿ
-
Chamarajanagar21 hours agoಸಿರಿಧಾನ್ಯದಿಂದ ತಯಾರಿಸಿದ ಆಹಾರ ಬಳಸಿ : ಜಿ.ಪಂ. ಸಿ.ಇ.ಒ ಮೋನಾ ರೋತ್ ಸಲಹೆ
-
Mysore21 hours agoಡಿ.29ರಂದು ವಿಶ್ವಮಾನವ ಧರ್ಮದ ಅಧಿವೇಶನ
