Connect with us

Kodagu

ಡಿ.18 ರಂದು ಸಿಎನ್‌ಸಿಯಿಂದ “ಗನ್ ಕಾರ್ನಿವಲ್ ತೋಕ್ ನಮ್ಮೆ”ಯ ಸಂಭ್ರಮ

Published

on

ಮಡಿಕೇರಿ : ವಿಶ್ವ ರಾಷ್ಟç ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 14ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ”ಯನ್ನು ಡಿ.18 ರಂದು ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್‌ನಲ್ಲಿ ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಪದೀಯ ಹಬ್ಬವಾಗಿ ತೋಕ್ ನಮ್ಮೆಯನ್ನು ಅತಿ ಉತ್ಸಾಹದಿಂದ ಆಚರಿಸುವ ಮೂಲಕ ಕೋವಿ ಹೊಂದುವ ಕೊಡವರ ಹಕ್ಕನ್ನು ಪ್ರತಿಪಾದಿಸಲಾಗುವುದು ಎಂದಿದ್ದಾರೆ.
ಕೊಳಕೇರಿಯ ನೂರಂಬದ ನಾಡ್ ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್ ನ ಕಾವೇರಿ ನದಿ ದಂಡೆಯಲ್ಲಿ ನಮ್ಮೆ ನಡೆಯಲಿದೆ. ಕೋವಿಗಳನ್ನು ಸಾಂಪ್ರದಾಯಿಕ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಗುಂಡು ಹಾರಿಸುವ ಸ್ಪರ್ಧೆ ನಡೆಯಲಿದೆ. ನಮ್ಮೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದೂಕುಗಳನ್ನು ಪ್ರದರ್ಶಿಸುವುದರಿಂದ ಪ್ರತಿಯೊಬ್ಬರು ಬಂದೂಕು ಸಹಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾಚಪ್ಪ ಮನವಿ ಮಾಡಿದ್ದಾರೆ.


ಕಾರ್ಯಕ್ರಮದಲ್ಲಿ ಕಲೆ, ಶಿಲ್ಪ ಕಲೆ, ಕೊಡವ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಿಕ, ಶಿಕ್ಷಣ, ಕೃಷಿ, ಉದ್ಯಮಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ “ಕೊಡವ ವಿಭೂಷಣ” ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗನ್ ಕೊಡವ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ, ಗತಕಾಲದ ಶ್ರೀಮಂತ ಭಂಡಾರವಾಗಿದೆ. ಇದೇ ಕಾರಣಕ್ಕೆ ಪ್ರಸ್ತುತದಲ್ಲಿ ಮತ್ತು ಭವಿಷ್ಯದಲ್ಲಿಯೂ ಈ ನಮ್ಮ ಹಕ್ಕು ಮುಂದುವರಿಯುತ್ತದೆ.


ಕೊಡವರು ಶಸ್ತಾçಸ್ತç/ಬಂದೂಕನ್ನು ಹೊಂದಲು ವಿನಾಯಿತಿ ನೀಡಲಾಗಿದೆ. ಭಾರತವು ಸ್ವಾತಂತ್ರ‍್ಯ ಪಡೆದ ನಂತರ, ಭಾರತೀಯ ಶಸ್ತಾçಸ್ತç ಕಾಯಿದೆ ಸೆಕ್ಷನ್ 3 ಮತ್ತು 4 ರಡಿಯಲ್ಲಿ ಗನ್ ವಿನಾಯಿತಿ ಹಕ್ಕು ಅಸ್ತಿತ್ವದಲ್ಲಿದೆ. ಆದರೆ 1956 ರಲ್ಲಿ ರಾಜ್ಯ ಪುನರ್-ಸಂಘಟನೆಯ ಕಾಯ್ದೆಯಡಿಯಲ್ಲಿ ಕೂರ್ಗ್ ಪ್ರದೇಶವನ್ನು ವಿಲೀನಗೊಳಿಸಿದ ನಂತರ ಆಳುವ ವರ್ಗಗಳು ನಮ್ಮ ಧಾರ್ಮಿಕತೆ ಮತ್ತು ವಿಶೇಷ ಹಕ್ಕುಗಳಿಗೆ ಧಕ್ಕೆ ತರಲು ಪ್ರಾರಂಭಿಸಿದವು. ಸರ್ಕಾರ ನಮ್ಮ ಎಲ್ಲಾ ಹಕ್ಕುಗಳನ್ನು ಕಸಿದುಕೊಂಡಿದೆ, ಸ್ವಯಂ ನಿರ್ಣಯದ ಹಕ್ಕು ಇಲ್ಲದಂತೆ ಮಾಡಿದೆ. ಇದು ಸಾಂವಿಧಾನಿಕ ಉಲ್ಲಂಘನೆಯ ಕ್ರಮವಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.


ಗನ್ ಕೊಡವ ಜನಾಂಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನವಾಗಿದೆ ಹಾಗೂ ಜಾನಪದ ಸಂಕೇತವಾಗಿದೆ. ಆದ್ದರಿಂದ ಈ ಪ್ರಾಚೀನ ಹೆಮ್ಮೆಯನ್ನು ರಕ್ಷಿಸಬೇಕು ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಉದ್ದೇಶದಿಂದ ಸಿಎನ್‌ಸಿ ಸಂಘಟನೆ ತೋಕ್ ನಮ್ಮೆಯನ್ನು ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಕಾಫಿ ಬೆಳೆ; ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Published

on

ಮಡಿಕೇರಿ : ಕಾಫಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಕಾಫಿ ತೋಟ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವಿಧ ಕಾರ್ಯಚಟುವಟಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ-ಕೆರೆ/ ತೆರೆದಬಾವಿ/ ರಿಂಗ್ ಬಾವಿ/ ತುಂತುರು/ ಹನಿ ನೀರಾವರಿ, ಕಾಫಿ ಗೋಡೌನ್/ ಕಾಫಿ ಕಣ/ ಪಲ್ಪರ್ ಯುನಿಟ್/ ಮೆಕಾನಿಕಲ್ ಡ್ರೈಯರ್/ ಸೋಲಾರ್ ಟನೆಲ್ ಡ್ರೈಯರ್, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಮತ್ತಿತರಕ್ಕೆ÷ಸಹಾಯಧನ ಕಲ್ಪಿಸಲಾಗುತ್ತದೆ.


ಈ ಎಲ್ಲಾ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ಧಿ ಪಡಿಸಲು ಇಚ್ಚಿಸುವ ಅರ್ಹ ಕಾಫಿ ಬೆಳೆಗಾರರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. 25 ಹೆಕ್ಟೇರ್ (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು.
ದಾಖಲಾತಿಗಳ ವಿವರ: ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. 2024-25 ನೇ ಸಾಲಿನ ಪಹಣಿಗಳು/ ಆರ್‌ಟಿಸಿ, ತೋಟದ ಅಂದಾಜು ನಕ್ಷೆ, ಕ್ವೇಟೇಷನ್/ ಪ್ಲಾನ್ ಮತ್ತು ಎಸ್ಟಿಮೇಷನ್. ಜಾತಿ ಪ್ರಮಾಣ ಪತ್ರ (ಎಸ್‌ಸಿ/ಎಸ್‌ಟಿ ಕಾಫಿ ಬೆಳೆಗಾರರಿಗೆ). ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿ ಸಂಪರ್ಕಿಸಬಹುದು ಎಂದು ಗೋಣಿಕೊಪ್ಪ ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶ್ರೀದೇವಿ ಅವರು ತಿಳಿಸಿದ್ದಾರೆ.

Continue Reading

Kodagu

ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರ ; ದೂರವಾಣಿ ಸಂಖ್ಯೆ ಬದಲು

Published

on

ಮಡಿಕೇರಿ : ಗೋಣಿಕೊಪ್ಪಲು ಉಪ-ವಿಭಾಗ ವ್ಯಾಪ್ತಿಯ ಶ್ರೀಮಂಗಲ ವಿದ್ಯುತ್ ವಿತರಣ ಕೇಂದ್ರದ ಮೊಬೈಲ್ ಸಂಖ್ಯೆ ಈ ಮೊದಲು 9449598628 ಆಗಿದ್ದು, ಈ ಸಂಖ್ಯೆಯು ಈಗ ಚಾಲನೆಯಲ್ಲಿ ಇರುವುದಿಲ್ಲ.

ಈಗ ನೂತನವಾಗಿ ಉದ್ಘಾಟನೆಗೊಂಡ 66ಕೆವಿ ವಿತರಣ ಕೇಂದ್ರದ ದೂರವಾಣಿ ಸಂಖ್ಯೆ 8296598628 ಆಗಿರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರು/ವಿದ್ಯುತ್ ಗ್ರಾಹಕರು ತುರ್ತು ಸಮಯದಲ್ಲಿ ವಿದ್ಯುತ್

ಸರಬರಾಜನ್ನು ಕಡಿತಗೊಳಿಸಲು ವಿದ್ಯುತ್ ವಿತರಣ ಕೇಂದ್ರವನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ 8296598628 ಅನ್ನು ಉಪಯೋಗಿಸಿಕೊಳ್ಳುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Kodagu

ಸಿ ಆ್ಯಂಡ್‌ ಡಿ ಭೂಮಿಯಿಂದ ರೈತರಿಗೆ ಅನ್ಯಾಯವಾಗಬಾರದು- ರಂಜು ಪೂಣಚ್ಚ

Published

on

ಪೊನ್ನಂಪೇಟೆ: ಜಿಲ್ಲೆಯ ಕೆಲ ಭಾಗಗಳಲ್ಲಿ ಕೃಷಿ ಭೂಮಿ ಡೀಮ್ಡ್ ವ್ಯಾಪ್ತಿಗೆ ಸಿಲುಕಿದ್ದು, ರೈತರಿಗೆ ಭೂಮಿ ಕಳೆದುಕೊಳ್ಳುವ ದುಸ್ಥಿತಿ ಏರ್ಪಟ್ಟಿದೆ. ಜತೆಗೆ, ರೈತರಿಗೆ ಆಯಾ ಭೂಮಿಯ ದಾಖಲೆ ಒದಗಿಸಲು ಸಹಕಾರಿಯಾಗಬೇಕಿದ್ದ ಸಮೀಕ್ಷೆ ರೈತರ ಬೇಡಿಕೆಗಳಿಗೆ ಪೂರಕವಾಗಿ ನಡೆದಿಲ್ಲ. ಆದ್ದರಿಂದ ಸರಕಾರ ಮತ್ತೊಮ್ಮೆ ಭೂ ಸಮೀಕ್ಷೆ ಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿ ಆ್ಯಂಡ್‌ ಡಿ ಅಥವಾ ಡೀಮ್ಡ್ ಲ್ಯಾಂಡ್‌ ಎನ್ನಲಾಗುವ ಕೃಷಿ ಚಟುವಟಿಕೆಗೆ ಪೂರಕವಲ್ಲದ ಬೆಟ್ಟ, ಬಾಣೆ, ಜಮ್ಮಾ, ಪೈಸಾರಿ, ಕಾನ, ಕುಮ್ಕಿ ಸೇರಿದಂತೆ ನೀರಾವರಿ ಪ್ರದೇಶವಲ್ಲದ ಭೂಮಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿವೆ. ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ (ಸಿ ಆ್ಯಂಡ್‌ ಡಿ) ಸಂಕೋಲೆಯಲ್ಲಿ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ ಸಿಲುಕಿದ್ದು, ರೈತರ ನೆಮ್ಮದಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ಅನೇಕ ದಶಕಗಳಿಂದ ಉಳುಮೆ ಮಾಡುತ್ತಿರುವ ಈ ಭೂಮಿಗೆ ದಾಖಲೆಗಳನ್ನು ಪಡೆಯಲು ರೈತರು ಹೆಣಗಾಡುತ್ತಿದ್ದಾರೆ. ಎಲ್ಲಾ ಅನಾನುಕೂಲಗಳಿಗೆ ಸರಕಾರವೇ ನೇರ ಕಾರಣ ಎಂದು ಅವರು ದೂರಿದ್ದಾರೆ.

1991, 1994ರಲ್ಲಿ ಸರಕಾರದ ಆದೇಶಾನುಸಾರ ಅರಣ್ಯ ಇಲಾಖೆ ವ್ಯಾಪ್ತಿಯ ಸಿ ಆ್ಯಂಡ್‌ ಡಿ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದ್ದು, ಈ ಭೂಮಿಗಳನ್ನು ‘ಲ್ಯಾಂಡ್‌ ಬ್ಯಾಂಕ್‌’ನಲ್ಲಿ ಸೇರಿಸಲಾಗಿದೆ. ಲ್ಯಾಂಡ್‌ ಬ್ಯಾಂಕ್‌ನಲ್ಲಿ ರಾಜ್ಯಾದ್ಯಂತ 1,31,866 ಹೆಕ್ಟೇರ್‌ ಭೂಮಿಯಿದ್ದು, ಇದನ್ನು ಕೇವಲ ಸಾರ್ವಜನಿಕ ಹಿತಾಸಕ್ತಿಗೆ ಮಾತ್ರ ಬಳಸಬೇಕೆನ್ನುವ ಷರತ್ತಿದೆ. ಇದೇ ವ್ಯಾಪ್ತಿಯಲ್ಲಿನ 11,722.29 ಹೆಕ್ಟೇರ್‌ ಭೂಮಿಯನ್ನು ಇತ್ತೀಚಿಗೆ ಪೂರ್ಣ ಪ್ರಮಾಣದಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎನ್ನುವ ಅಂಶ ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ವಿವರಿಸಿರುವ ರಂಜು ಪೂಣಚ್ಚ, ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಲಕ್ಷಾಂತರ ಸಾಗುವಳಿದಾರರು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಮಂಜೂರಾತಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಸಿ ಮತ್ತು ಡಿ ಅಥವಾ ಡೀಮ್ಡ್ ಅರಣ್ಯ ಭೂಮಿ ಕುರಿತ ಅಸ್ಪಷ್ಟತೆಯನ್ನೇ ಮುಂದಿಟ್ಟುಕೊಂಡು ಭೂಮಿ ಮಂಜೂರು ಮಾಡಲಾಗುತ್ತಿಲ್ಲ. ಜೊತೆಗೆ ನಾನಾ ಕಡೆ ಅರಣ್ಯ ವ್ಯಾಪ್ತಿಯಲ್ಲಿರುವ ವಸತಿ, ಜಮೀನುಗಳಿಗೆ ಗ್ರಾ.ಪಂಗಳಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದರೂ ಅಗತ್ಯ ದಾಖಲೆಗಳು ಮಾತ್ರ ದೊರೆಯದಂತಾಗಿದೆ ಎಂದು ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ರಾಜ್ಯ ಸರಕಾರವು 1991, 1994ರ ಆದೇಶಗಳನ್ನು ಹೈಕೋರ್ಟ್‌ ಗಮನಕ್ಕೆ ತಾರದ ಪರಿಣಾಮವಾಗಿ, ಈಗಾಗಲೇ ಒಟ್ಟು 11,722.29 ಹೆಕ್ಟೇರ್‌ ಸಿ ಆ್ಯಂಡ್‌ ಡಿ ಭೂಮಿ ಅರಣ್ಯ ಇಲಾಖೆಗೆ ವರ್ಗಾಯಿಸಬೇಕೆನ್ನುವ ಆದೇಶ ಹೊರಬಿದ್ದಿದೆ. ಈ ಆದೇಶದಿಂದಾಗಿ ಇನ್ನುಳಿದ ರೈತರಲ್ಲಿ ಆತಂಕ ತೀವ್ರವಾಗಿದೆ. ಸರಕಾರ ಇನ್ನಾದರೂ ಎಚ್ಚೆತ್ತು ಪಾರದರ್ಶಕ ರೀತಿಯಲ್ಲಿ ಭೂ ಸಮೀಕ್ಷೆ ನಡೆಸಿ ರೈತರ ಕೃಷಿ ಜಮೀನುಗಳು ಸಿ ಆ್ಯಂಡ್‌ ಡಿ ಸಂಕೋಲೆಯಲ್ಲಿ ಸಿಲುಕಿ ಅರಣ್ಯ ಇಲಾಖೆ ತೆಕ್ಕೆಗೆ ಜಾರದಂತೆ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಕೊಡಗಿನ ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರಂಜು ಪೂಣಚ್ಚ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Continue Reading

Trending

error: Content is protected !!