Connect with us

Hassan

ಟೀಕೆ ಮಾಡುವವರಿಗೆ ಈ ಕಾರ್ಯಕ್ರಮ ಉತ್ತರ – ಸಿಎಂ ಸಿದ್ದರಾಮಯ್ಯ

Published

on

ಇದು ನಮ್ಮಪ್ಪನ-ಮೋದಿ ಮನೆ ಹಣ ಅಲ್ಲ, ಜನರ ತೆರಿಗೆ ಹಣದ ಅಭಿವೃದ್ಧಿ ಸಿಎಂ ಸಿದ್ದರಾಮಯ್ಯ

ಹಾಸನ: ವಸ್ತು ಸ್ಥಿತಿ ಅರಿತು ಟೀಕೆ ಮಾಡಬೇಕು.ದೊಡ್ಡ ಗಾತ್ರದ ಬಜೆಟ್ ನೀಡುವ ಮೂಲಕ ಟೀಕೆ ಟಿಪ್ಪಣಿ ಮಾಡುವವರಿಗೆ ಈ ಉದ್ಘಾಟನೆ ಕಾರ್ಯಕ್ರಮವೆ ಉತ್ತರ. ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿರುವುದು ನಮ್ಮಪ್ಪನ ಇಲ್ಲವೇ ನರೇಂದ್ರ ಮೋದಿ ಅವರ ಮನೆ ಹಣವಲ್ಲ. ಜನರ ತೆರಿಗೆ ಹಣವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದರು.

ನಗರದ ಡೈರಿವೃತ್ತ, ರಿಂಗ್ ರಸ್ತೆ ಬಳಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ವೈದ್ಯಕೀಯ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಹಿಮ್ಸ್, ಶುಶ್ರೂಷಾಧಿಕಾರಿಗಳ ವಸತಿ ಸಮುಚ್ಚಯ, ಹಿಮ್ಸ್ ಮೇಲ್ದರ್ಜಿಕೃತ ವಿಕಿರಣ ಚಿಕಿತ್ಸಾ ಘಟಕ ಸಾರ್ವಜನಿಕ ಸೇವೆಗೆ ಸಮರ್ಪಣಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಶಂಕುಸ್ಥಾಪನೆ ನೆರವೇರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ತಿಂಗಳು ೨೦೨೪.-೨೦೨೫ರ ೩.೭೧ ಸಾವಿರದ ಮುನ್ನೂರು ೭೦ ಕೋಟಿ ದೊಡ್ಡ ಗಾತ್ರದ ಅಯವ್ಯಯ ಮಂಡಿಸಿದ್ದೆನೆ. ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ ೩ ಲಕ್ಷದ ೨೯ ಸಾವಿರ ಕೋಟಿ ಸುಮಾರು ೬೨ ಸಾವಿರ ಕೋಟಿ ಹೆಚ್ಚಾಗಿರುವ ಅಯ್ಯವ್ಯಯ ಮಂಡಿಸಿದ್ದೇನೆ. ೧ ಲಕ್ಷದ ೨೦ ಸಾವಿರ ಕೋಟಿ ಹಣ ಅಭಿವೃದ್ಧಿಗೆ ಮೀಸಲಿಟ್ಟಿದ್ದೆನೆ. ೫೩ ಸಾವಿರದ ೯ ಕೋಟಿ ಗ್ಯಾರಂಟಿ ಯೋಜನಗೆ ಮೀಸಲಿಟ್ಟದ್ದೆವೆ. ೬೮ ಸಾವಿರ ಕೋಟಿ ರೂಪಾಯಿ ವಿವಿಧ ಅಭಿವೃದ್ಧಿಗೆ ಇಟ್ಟಿರುವ ಹಣ ಇಲ್ಲವಾದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಿದ್ದೇವೆ, ನಾವುಗಳು ಸಂತೋಷದಿಂದ ನೆರವೇರಿಸಿದ್ದೇವೆ. ಇದು ಟೀಕೆ ಮಾಡುವರಿಗೆ ಈ ಕಾರ್ಯಕ್ರಮ ಉತ್ತರ ಎಂದು ಭಾವಿಸುತ್ತೇನೆ. ಸತ್ಯಾಂಶ ಇಟ್ಟುಕೊಂಡು ಟೀಕೆ ಮಾಡುವುದು ಆರೋಗ್ಯಕರ. ವಸ್ತುಸ್ಥಿತಿಯ ಅರಿತು ಟೀಕೆ ಮಾಡಬೇಕು. ಜಿ.ಎಸ್.ಡಿ. ತೆರಿಗೆ ಕರ್ನಾಟಕದಿಂದ ಕೊಡುತ್ತೇವೆ. ಇಡೀ ರಾಷ್ಟ್ರದಲ್ಲಿ ತೆರಿಗೆ ಕೊಡುವುದರಲ್ಲಿ ಕರ್ನಾಟಕ ನಂಬರ್ ಒನ್. ನಾವು ೧೮ ಪರ್ಸೆಂಟ್ ಕೊಡುತ್ತಿದ್ದೇವೆ. ಶಕ್ತಿ ಯೋಜನೆ ಮಾಡಿದ ನಂತರ ಧರ್ಮಸ್ಥಳ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಆದಾಯ ಹೆಚ್ವಾಗಿದೆ. ಈ ಬಗ್ಗೆ ಧರ್ಮಆಧಿಕಾರಿಗಳೆ ತಿಳಿಸಿದ್ದಾರೆ. ಇವತ್ತು ಐದು ಕಾರ್ಯಕ್ರಮವು ಆರ್ಥಿಕ ಚಟುವಟಿಕೆ ಹೆಚ್ವು ಮಾಡಿದೆ. ಐವತ್ತು ಪರ್ಸೆಂಟ್ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಧರ್ಮ, ಪಕ್ಷ ಬೇಧ ಮಾಡಿಲ್ಲ. ಎಲ್ಲಾ ಬಡವರಿಗೆ ಸಹಾಯ ಮಾಡುವ ಕೆಲಸ ಮಾಡಲಾಗಿದೆ. ರಾಜಕೀಯ ಪ್ರಜಾಪ್ರಭುತ್ವ ಆರ್ಥಿಕ ತಳಹದಿ ಮೇಲೆ ನಿಂತಾಗ ಸಂವಿಧಾನ ಸಾರ್ಥಕವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಅಭಿವೃದ್ಧಿ ಮಾಡದೇ ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ. ಹಾಸನ ಜಿಲ್ಲೆಯ ೧೩೪೪ ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೆವೆ. ಹಾಸನ ವಿಮಾನ ನಿಲ್ದಾಣಕ್ಕೆ ೫೫ ಕೋಟಿ ಹಣ ನೀಡಿ ಉಳಿದ ೩೦ ಕೋಟಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು. ಹಾಸನ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ಮಾಡುವುದಾಗಿ ಇದೆ ವೇಳೆ ಘೋಷಿಸಿದರು. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಇಲ್ಲ. ಜೆಡಿಎಸ್ ಶಾಸಕರು ಇದ್ದಾರೆ. ಬಿಜೆಪಿಯ ಇಬ್ಬರು ಶಾಸಕರು ಇದ್ದಾರೆ. ರೇವಣ್ಣ ಬರಬೇಕಿತು ಬಂದಿಲ್ಲ. ನಾವು ಅಭಿವೃದ್ಧಿಗೆ ಚಾಲನೆ ಕೊಟ್ಟಿರುವ ಕೆಲಸ ಬಿಜೆಪಿಯವರು ಉದ್ಘಾಟನೆ ಮಾಡಿದ್ದಾರೆ ಇದು ಕಂಟುನಿಯಷ್ ಪ್ರೋಗ್ರಾಂ. ಜನಗಳ ತೆರಿಗೆ ಹಣ ನಾವು ಕೊಡುವುದು. ಇದು ನಮ್ಮ ಅಪ್ಪನ ಮನೆ ನರೇಂದ್ರ ಮೋದಿ ಮನೆ ಹಣ ಅಲ್ಲ ಜನರು ನೀಡುವ ತೆರಿಗೆ ಹಣ. ಕೆರೆಯ ನೀರಿಗೆ ಕೆರೆಗೆ ಚಲ್ಲುತ್ತೆವೆ.

ಯಾವುದೇ ಸರ್ಕಾರ ಇರಲಿ ಸಂವಿಧಾನ ಪರವಾಗಿ ಕೆಲಸ ಮಾಡಬೇಕು ಎಂದರು. ಬಡವರು ಹಿಂದುಳಿದ ದಲಿತ ಅಲ್ಪಸಂಖ್ಯಾತರ ಕೆಲಸ ಮಾಡಬೇಕು ಯಾವುದೇ ಧರ್ಮಕ್ಕೆ ಸೇರಿರಲಿ ಅವರನ್ನು ದ್ವೇಷ ಮಾಡದೆ ಪ್ರೀತಿಸುಬೇಕು. ಬಡತನ ರೇಖೆಗಿಂತ ಕೆಳಗಿರುವ ಜನರು ಮೆಲೆರಬೇಕು ಅದಕೊಸ್ಕರ ಗ್ಯಾರಂಟಿ ಜಾರಿಗೆ ತಂದಿರುವುದಾಗಿ ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಈ ಸಭೆ ಪರಿಸ್ಥಿತಿ ನೋಡಿದರೇ ಎಲ್ಲಾ ಉಳಿಗಿಂತ ನಿಂಬೆ ಉಳಿ ಶ್ರೇಷ್ಠ. ಪ್ರಜಾಧ್ವನಿ ಪ್ರಾರಂಭಿಸಿದಾಗ ಅನೇಕ ಗ್ಯಾರಂಟಿ ಘೋಷಣೆ ಮಾಡಿದ್ದೇವು. ಸರಕಾರ ನಮ್ನದೆ ಬಂದಾಗ ವಿದ್ಯುತ್ ಬಿಲ್ ಏರಿಕೆ ಆದಾಗ ಇಲ್ಲಸಲ್ಲದ ಟೀಕೆಗಳು ಬಂದವು. ಈಗ ಹೇಳಿದಂತೆ ನುಡಿದು ಕರೆಂಟ್ ಬಿಲ್ ಕಟ್ಟದಾಗೆ ಉಚಿತವಾಗಿ ಕೊಡುತ್ತಿದ್ದೇವೆ. ಇದಕ್ಕೆ ಕುಮಾರಸ್ವಾಮಿ ಎಲ್ಲಾರು ಏನು ಹೇಳುತ್ತಾರೆ. ದೇವರು ವರ, ಶಾಪ ಯಾವುದು ಕೊಡಲ್ಲ ಆದರೇ ಅವಕಾಶ ಮಾತ್ರ ಕೊಡುತ್ತದೆ. ನಮಗೆ ಅವಕಾಶ ಕೊಟ್ಟಂತೆ ಹಾಸನಾಂಬೆ ತಾಯಿಯನ್ನು ನೆನಪಿಸಿಕೊಳ್ಳುತ್ತೆವೆ. ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು. ಒಂದು ಕಾನೂನು ಅರ್ಚಕರಿಗೆ ಬಂತು. ಸಣ್ಣ ಸಣ್ಣ ದೇವಸ್ಥಾನಕ್ಕೆ ಸಹಾಯ ಮಾಡಲು ಕಾನೂನು ಮಾಡಲು ಹೋದರೇ ಅಡ್ಡಿ ಬರುತ್ತೀರಾ ಎಂದು ಪ್ರಶ್ನೆ ಮಾಡಿದರು. ಅವರಿಗಾಗಿ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ಈ ವರ್ಷ ಮಳೆ ಬರಲಿ, ನೀರು ತುಂಬಲಿ. ಮುಂದಿನ ವರ್ಷ ಎತ್ತಿನ ಹೊಳೆಗೆ ನೀರು ತುಂಬಿಸುವ ಕೆಲಸ ನಾವು ಮಾಡುತ್ತೇವೆ ಎಂದರು. ರೈತರು ಬೇಳೆ ಬೆಳೆಯ ಬೇಕು ಅದಕ್ಕೆ ನಾವು ಬದ್ದರಾಗಿದ್ದೇವೆ. ನಮ್ಮ ಗ್ಯಾರಂಟಿಯಲ್ಲಿ ಅತ್ತೆ ಸೊಸೆಗೆ ನಾವು ಏನಾದರೂ ಜಗಳ ತಂದಿದ್ದೇವೆಯೇ ಹೇಳಿ ಎಂದು ಪ್ರಶ್ನೆ ಮಾಡಿದರು. ಇದಕ್ಕಿಂತ ಭಾಗ್ಯ ಬೇಕಾ,, ಹಾಸನ ಜಿಲ್ಲೆಯ ಎಲ್ಲಾ ಶಾಸಕರು ಅಭಿವೃದ್ಧಿಗಾಗಿ ಪಟ್ಟಿಯನ್ನು ನಮಗೆ ತಂದು ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಕುಟುಂಬಕ್ಕೆ ಸರಕಾರ ಆದಾರವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣವಿಲ್ಲ. ಜನರ ಬದುಕು ನಮಗೆ ಮುಖ್ಯ. ನಮ್ಮದು ನುಡಿದಂತೆ ನಡೆಯು ಸರಕಾರ. ಐದು ಬೆರಳು ಸೇರಿ ಮುಷ್ಠಿ ಸೇರುವಾಗೆ ಐದು ಗ್ಯಾರಂಟಿ ಕೊಟ್ಟಾಗ ಕುಮಾರಣ್ಣ ಹೋಗಿ ಕೈ ಕಮಲ ಹಿಡಿದರು. ನಮ್ಮ ಹೋರಾಟ ಬಡತನ ವಿರುದ್ದ ಯುದ್ಧ ಮಾಡುತ್ತಿದ್ದೇವೆ. ನಾವು ಕೊಟ್ಟ ಒಂದು ಹೊಟ್ಟೆ ತುಂಬುವ ಕಾರ್ಯಕ್ರಮ ನೀವು ಮಾಡಿದ್ದಾರಾ ಎಂದು ಇತರೆ ಪಕ್ಷಗಳಿಗೆ ಸವಾಲು ಹಾಕಿದರು.

ಕೃಷಿ ಸಚಿವರಾದ ಎನ್. ಚಲುವರಾಸ್ವಾಮಿ ಮಾತನಾಡಿ, ನಮ್ಮ ಸರ್ಕಾರ ಚುನಾವಣೆ ಪೂರ್ವ ಘೋಷಣೆ ಮಾಡಿದ ೫ ಗ್ಯಾರಂಟಿ ಜಾರಿ ಮಾಡಿದ್ದವೆ. ಕರ್ನಾಟಕದ ೨೨೪ ತಾಲ್ಲೂಕು ಬರಗಾಲ ಎದುರಿಸಿ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೆವೆ. ಇವತ್ತಿನ ಕೆಟ್ಟ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಪ್ರತಿ ಕುಟುಂಬಕ್ಕೆ ೫ ಸಾವಿರ ರೂಪಾಯಿ ಹಣ ತಲುಪುವ ಯೋಜನೆ ಕೊಟ್ಟಿದ್ದಾರೆ. ಅದು ಗೃಹಲಕ್ಮಿ. ಅನ್ನಭಾಗ್ಯ. ಯುವನಿಧಿ ಕಾರ್ಯಕ್ರಮ ನೀಡಿದ್ದಾರೆ. ಹೊಸ ಕಾಮಗಾರಿ ಹಳೆ ಕಾಮಗಾರಿ ಈ ಬರಗಾಲದಲ್ಲಿ ಮುಂದುವರೆಸಿದ್ದೆವೆ. ಮುಖ್ಯಮಂತ್ರಿ. ಕಂದಾಯ ಸಚಿವರು. ಕೃಷಿ ಸಚಿವರು. ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಬರ ಪಿಡಿತ ಹಣ ಬಿಡುಗಡೆ ಮಾಡುವಂತೆ ಕೊರಿದ್ದರು ಒಂದು ರುಪಾಯಿ ಬರಗಾಲದ ಹಣ ಎನ್.ಡಿ.ಆರ್.ಎಫ್. ಹಣ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರು.

ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಮಾತನಾಡಿ, ಒಳಚರಂಡಿ ಮಂಡಳಿ ವತಿಯಿಂದ ಹಾಸನ ಜಿಲ್ಲೆಗೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿರುವುದಾಗಿ ತಿಳಿಸಿದರು. ಅಮೃತ ೨ ಯೋಜನೆಯಡಿ ಆಲೂರು ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಅರಕಲಗೂಡು ಪಟ್ಟಣಕ್ಕೆ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಈ ದೇಶದಲ್ಲಿ ಕೊಟ್ಟ ಮಾತಿಗೆ ತಪ್ಪದೆ ಇರುವ ಸರ್ಕಾರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸರ್ಕಾರ. ನಿಮ್ಮ ಆರ್ಶಿವಾದಿಂದ ೫ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದಾಗಿ ಕಾಂಗ್ರೆಸ್ ಸರ್ಕಾರ ದಿನದಲಿತರ ಸರ್ಕಾರ ಎಂದು ಎಂದರು. ಹಾಸನ ನಗರದಲ್ಲಿ ಹೆಚ್ಚು ಸೈಟ್ ವಿತರಣೆ ಸ್ಥಳೀಯ ಶಾಸಕ ಸ್ವರೂಪ್ ನೇತೃತ್ವದಲ್ಲಿ ವಿತರಣೆ ಮಾಡುವುದಾಗಿ ತಿಳಿಸಿದರು. ಸ್ವರೂಪ್ ಕೊರಿಕೆ ಮೆರೆಗೆ ಇನ್ನೊಂದು ಬಡಾವಣೆ ಮಾಡಿ ೧೦ ಸಾವಿರ ಸೈಟ್ ವಿತರಣೆ ಮಾಡುವುದಾಗಿ ಹೇಳಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ರಾಜ್ಯದಲ್ಲಿ ಹಸಿವು ಮುಕ್ತ ಮಾಡಿರುವುದು ಇಡೀ ಜನರಿಗೆ ತಲುಪಿದೆ. ಹಿಂದೆ ಇಂದಿರಾಗಾಂಧಿ ಬಂದರೇ ಜನ ಸಮೂಹವೇ ಬರುವಂತೆ ಇಂದು ಸಿದ್ದರಾಮಯ್ಯ ಬಂದರೇ ಇಷ್ಟೊಂದು ಜನ ಸೇರಿದೆ. ಇವತ್ತು ಸಾವಿರಾರು ಕೋಟಿ ಗ್ಯಾರಂಟಿಗೆ ಕೊಟ್ಟರೂ ಯಾವುದೇ ಕಾರ್ಯಕ್ರಮಕ್ಕೆ ಅಡ್ಡಿಯಾಗಿಲ್ಲ. ಸುಮ್ಮನೆ ಅಪಪ್ರಚಾರ ಮಾಡುವುದು ಬೇಡ. ಜೋಡಿ ಎತ್ತು ಆಗಿ ದುಡಿಯುತ್ತಿದ್ದಾರೆ. ಟೀಕೆಗಳನ್ನು ಯಾರು ಮಾಡಬೇಡಿ. ಎತ್ತಿನಹೊಳೆ ಮೂಲಕ ನೀರು ಹರಿಸುವ ಕೆಲಸ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅಭಿವೃದ್ಧಿ ಮಾಡುವಂತೆ ಇದೆ ವೇಳೆ ಮನವಿ ಮಾಡಿದರು.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಹಾಸನ ನಗರದಲ್ಲಿ ೪೫೦ ಹಾಸಿಗೆ ಸೌಲಭ್ಯ ಆಸ್ಪತ್ರೆ, ಹಾಸನ ವಿಮಾನ ನಿಲ್ದಾಣದ ಅಭಿವೃದ್ಧಿಗೆ ೩೦ ಕೋಟಿ ರೂಪಾಯಿ ನೀಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಹಸಿವು ಮುಕ್ತ ಕರ್ನಾಟಕಕ್ಕೆ ಹೊತ್ತು ಕೊಟ್ಟಿದ್ದಾರೆ. ಡಿಸಿಗೆ ಬಂದ ಐವತ್ತು ಲಕ್ಷ ರೂ ಹಣ ಕೊಟ್ಟಿದ್ದಾರೆ. ನೀರಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಇದೆ ವೇಳೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾದಿಕಾರಿ ಶಾಂತಲಾ, ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮ, ತಹಸೀಲ್ದಾರ್ ಶ್ವೇತಾ, ಎಸ್ಪಿ ಮಹಾಮದ್ ಸುಜೀತಾ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಹೆಚ್.ಕೆ. ಸುರೇಶ್, ಸಿಮೆಂಟ್ ಮಂಜು, ಹಿಮ್ಸ್ ನಿರ್ದೇಶಕರಾದ ಎಸ್.ವಿ. ಸಂತೋಷ್, ಪ್ರಾಂಶುಪಾಲ ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ. ಹೆಚ್.ಸಿ. ಲೋಕೇಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಮುಂದಿನ ದಿನಗಳಲ್ಲಿ ಚೊಂಬು-ಜಾಗಟೆ ಗ್ಯಾರಂಟಿ

Published

on

ಕಾಂಗ್ರೆಸ್ ವಿರುದ್ಧ ಹೆಚ್.ಡಿ. ರೇವಣ್ಣ ವಾಗ್ದಾಳಿ

ಹಾಸನ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರಿಗೆ ಬಿಕ್ಷೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಚೊಂಬು ಮತ್ತು ಜಾಗಟೆ ಕೊಡುವುದು ಗ್ಯಾರಂಟಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭವಿಷ್ಯ ನುಡಿದರು.

ನಗರದಲ್ಲಿ ಆಪ್ತರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಲೂಟಿ ಕೋರರ ಕೈಯಲ್ಲಿ ಸಿಲುಕಿಕೊಂಡಿದೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರಿಗೆ ಬಿಕ್ಷೆ ಹಾಕುತ್ತಿದೆ ಮುಂದಿನ ದಿನಗಳಲ್ಲಿ ಕೈಯಲ್ಲಿ ಚೊಂಬು ಹಾಗೂ ಜಾಗಟೆ ಕೊಡುವುದು ಗ್ಯಾರಂಟಿ ಎಂದರು.

ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರರ ಬದಲಾವಣೆ ಆಗಿದೆ. ಶಾಲಾ ಕಾಲೇಜು ಕಟ್ಟಡಗಳು, ಗುಣಮಟ್ಟದ ಶಿಕ್ಷಣದ ಮೂಲಕ ಹಾಸನ ಜಿಲ್ಲೆ ಎಸ್.ಎಸ್.ಎಲ್.ಸಿ. ಯಲ್ಲಿ ಕೂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಕೊಡುಗೆ ಶೂನ್ಯ ಎಂದು ದೂರಿದರು. ನಂಬಿದವರಿಗೆ ಟೋಪಿ ಹಾಕಿ ನಿಷ್ಕಲ್ಮಶ ರಾಜಕಾರಿಣಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಕಿಡಿಕಾರಿದರು.

ಹಿಂದಿನಿಂದಲೂ ನಮ್ಮ ಕುಟುಂಬದ ಬಗ್ಗೆ ಅನೇಕರು ಒಂದಲ್ಲ, ಒಂದು ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರ ಕಾಲದಿಂದಲೂ ಇದು ನಡೆಯುತ್ತಿದೆ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದು ಮಾಮೂಲಿ. ಇದನ್ನೆಲ್ಲ ಜಿಲ್ಲೆಯ ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಎಲ್ಲಾ ೨೮ಕ್ಕೆ ೨೮ ಸ್ಥಾನವನ್ನೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಆಯ್ತು ಈಗ ಪೊಳ್ಳು ಗ್ಯಾರಂಟಿ ಶುರುವಾಗಿದೆ. ಬಾಂಡ್ ಪೇಪರ್‌ನಲ್ಲಿ ಸಿಎಂ ಹಾಗೂ ಡಿಸಿಎಂ ಒಂದು ಲಕ್ಷ ಕೊಡುವುದಾಗಿ ಕರಪತ್ರ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಗಮನಿಸಬೇಕು ಎಂದು ಆಗ್ರಹಿಸಿದರು. ಒಂದು ಕಡೆ ಪ್ರಜ್ವಲ್, ದೇವೇಗೌಡರು ಏನು ಮಾಡಿದ್ದಾರೆ ಅಂತಾರೆ. ಆದರೆ ಅವರು ಈ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತು. ೧೧ ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಖಾಲಿ ಚೊಂಬು ಕೊಟ್ಟಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಗಂಬೀರವಾಗಿ ಆರೋಪಿಸಿದರು.

ಹಾಸನ ಫ್ಲೈ ಓವರ್ ಮಾಡಲು ನಾನು ಬರಬೇಕಾಯ್ತಾ, ಹಾಸನದ ಬಸ್ ನಿಲ್ದಾಣಕ್ಕೆ ನಿತ್ಯ ನಾಲ್ಕು ಸಾವಿರ ಬಸ್ ಬರ್ತವೆ. ಆದರೆ ಇವರು ಕೇವಲ ಎರಡು ಪಥದ ರಸ್ತೆಯ ಫ್ಲೈ ಓವರ್ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ಉಳಿಸಲು ಇವರ ಕೊಡುಗೆ ಏನು? ನಮ್ಮ ಕೊಡುಗೆ ಏನು ಅಂತಾರೆ, ಇವರ ಕೊಡುಗೆ ಏನು ಹೇಳಲಿ? ಎಂದು ಸವಾಲು ಹಾಕಿದರು. ಅರವತ್ತು ವರ್ಷ ಆದರೂ ಈ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ಕೊಡಲಿಲ್ಲ. ಶೇಕಡಾ ೪೦ ರಷ್ಡು ಶಿಕ್ಷಕರ ಹುದ್ದೆ ಖಾಲಿ ಇದೆ. ಬಡ ಜನರಿಗೆ ಮೋದಿಯವರು ಐದು ಕೆಜಿ ಅಕ್ಕಿ ಕೊಡ್ತಾರೆ ಇವರು ಅದನ್ನ ಹೇಳ್ತಾರಾ! ಇವರು ಗ್ಯಾರಂಟಿ ಗಾಗಿ ಲಕ್ಷಾಂತರ ಕೋಟಿ ಸಾಲ ಮಾಡಿದ್ದಾರೆ.

ಇವರು ಬಿಜೆಪಿಯನ್ನ ಪರ್ಸೆಂಟೇಜ್ ಎನ್ನೋರು ಇವರು ರೈತರಿಂದಲು ಪರ್ಸೆಂಡೇಜ್ ತಗೊತಾರಲ್ಲ ಸ್ವಾಮಿ ಎಂದು ಆರೋಪ ಮಾಡಿದರು.

Continue Reading

Hassan

ಪೆನ್ ಡ್ರೈವ್ ಪ್ರಕರಣ ಸಮಗ್ರ ತನಿಖೆ ಆಗಲಿ ಅನುಪಮ ಆಗ್ರಹ

Published

on

ಹಾಸನ: ಈಗಾಗಲೇ ಎಲ್ಲಾ ಕಡೆ ಮಾತಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಗ್ರ ತನಿಖೆ ಆಗಬೇಕಾಗಿದೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮ ಅಸಮಧಾನವ್ಯಕ್ತಪಡಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೆ ಜಿ. ದೇವರಾಜೇಗೌಡರು ಆಗಿರುವುದರಿಂದ ಪೆನ್ ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಜಿ. ದೇವರಾಜೇಗೌಡರು ಏಕೆ ಮಾಡಿರಬಾರದು ಎಂದು ಗಂಭೀರವಾಗಿ ಆರೋಪಿಸಿ ಟಾಂಗ್ ನೀಡಿದರು.

ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ ಎಂದರು. ನಮ್ಮ ಮಾವ ೧೯೯೯ ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೆ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿ ಕಸಲೆ ಮಾಡಿದ್ದು ಶ್ರೀರಕ್ಷೆ ಆಗಲಿದೆ. ಜಿಲ್ಲೆಯ ಜನತೆ ನಮ್ಮ ಮಗನಿಗೆ ಮತ ಹಾಕುವಂತೆ ಇದೆ ವೇಳೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ. ಕಾಂಗ್ರೆಸ್ ಕಾರ್ಯಕ್ರಮದ ಕಾರ್ಯಕ್ರಮಗಳು ಶ್ರೀರಕ್ಷೆ ಆಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನದಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು, ಮಂಡ್ಯದಲ್ಲಿ ಸುಮಲತಾ ನಮಗೆ ಸಹಕರಿಸುತ್ತಿಲ್ಲ

Published

on

ಕಾವೇರಿ ನೀರನ್ನು ಉಳಿಸಲು ಶತಸಿದ್ಧ : ಹೆಚ್.ಡಿ. ದೇವೇಗೌಡ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು ಹಾಸನದಲ್ಲಿ ಮತ್ತು ಮಂಡ್ಯದಲ್ಲಿ ಸುಮಲತಾ ಅವರು ನಮಗೆ ಸಹಕರಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಮೂರು ಕ್ಷೇತ್ರದಲ್ಲೂ ಜಯಗಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿ, ಕಾವೇರಿ ನೀರನ್ನು ಉಳಿಸಲು ಶತಸಿದ್ಧ ಎಂದು ಶಪತ ಮಾಡಿದರು.

ನಗರದ ಹೊರವಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್‌ನವರು ಜಗಳವಾಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿನೇ ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಭೂಮಿ, ಸಂಪತ್ತನ್ನು ಹಂಚುತ್ತೇವೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಕಾವೇರಿ ಬೇಸಿನ್‌ಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಧಾನ ಮಂತ್ರಿಗಳ ಜೊತೆ ಎರಡು ಸಭೆ ಮಾಡಿದ್ದೇನೆ. ಎರಡನೇ ಹಂತದ ಚುನಾವಣೆ ಹೈದರಾಬಾದ್, ಕರ್ನಾಟಕ, ಮುಂಬೈ ಕರ್ನಾಟಕ ಮೇ.೭ ರಂದು ನಡೆಯಲಿದೆ. ಶಿವಮೊಗ್ಗ ಸೇರಿ ಎರಡನೇ ಹಂತದ ಚುನಾವಣೆ ನಡೆಯುತ್ತದೆ ಎಂದರು.

ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಕೇಳಬಹುದು, ನಾನೇ ಹೇಳ್ತಿನಿ! ಇವತ್ತು ಕಾವೇರಿ ಬೇಸಿನ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋ-ಆಪರೇಟ್ ಮಾಡ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಕುಮಾರಸ್ವಾಮಿಗೆ ಕೋಆಪರೇಟ್ ಮಾಡ್ತಿಲ್ಲ.

ಅದರಿಂದ ಕುಮಾರಸ್ವಾಮಿ ಏನೋ ಅಪಾಯ ಆಗುತ್ತೆ ಅಂತ, ಏನು ಆಗಲ್ಲ. ಪ್ರಮುಖವಾಗಿ ಕಾವೇರಿ ಸಮಸ್ಯೆ ಇದೆ, ಅದು ಜೀವನ್ಮರಣದ ಪ್ರಶ್ನೆ.

ಮಂಡ್ಯದಲ್ಲಿ ಕೈ ಅಭ್ಯರ್ಥಿ ಗೆಲ್ಲಲು ೧೨೫ ಕೋಟಿ ಎನ್‌ಓಸಿ ರಿಲೀಸ್ ಮಾಡಿದ್ದಾರೆ. ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುಬೇಕು. ಯಾರೇ ಪ್ರಚಾರ, ಅಪಪ್ರಚಾರ ಏನೇ ಮಾಡಲಿ ಈ ದೇವೇಗೌಡ ೯೧ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದಾನೆ ಅದು ಎಲ್ಲರ ಮನಸ್ಸಿಗೆ ನಾಟಿದೆ. ಮೋದಿಯವರು ಡಿಎಂಕೆಯ ಹಂಗಿನಿಂದ ಈ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಹಾಕಿದೆ. ಒಬ್ಬ ಪೊಲೀಸ್ ಅಧಿಕಾರಿ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋರಾಡುತ್ತಿದ್ದಾರೆ. ಅಣ್ಣಾ ಡಿಎಂಕೆಯಲ್ಲಿ ಪಕ್ಷದಲ್ಲಿ ಕೆಲವರು ಪರಸ್ಪರ ಭಿನ್ನಾಭಿಪ್ರಾಯಗೊಂಡು ಅವರು ಕೂಡ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ ಯಾವುದೇ ಸಂಶಯವಿಲ್ಲ. ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಅರ್ಥ ಆಗಿದೆ.

ನಾನು ಗಮನ ಹರಿಸುತ್ತೇನೆ ಎಂದು ಪ್ರಧಾನಮಂತ್ರಿಗೂ ಹೇಳಿದ್ದೇನೆ. ಮೇಕೆದಾಟು, ಕಾವೇರಿ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾಡುತ್ತಿದ್ದೇನೆ.

ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೋದಲೆಲ್ಲ ಜನಕ್ಕೆ ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಮೂವರು ಇದ್ದರೂ ಆದರೇ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಆದರೂ ಡಾ.ಮಂಜುನಾಥ್ ಗೆಲ್ತಾರೆ. ಅವರು ಅಧಿಕಾರ ಎಷ್ಟು ದುರುಪಯೋಗ ಮಾಡಬೇಕು ಮಾಡಿದ್ದಾರೆ.ಏನೇ ಸಮಸ್ಯೆ ಇಲ್ಲ, ಡಾ.ಮಂಜುನಾಥ್ ಗೆಲ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಯಾವ ಕಾವೇರಿ ನೀರನ್ನು ಉಳಿಸುತ್ತೇನೆ ಎಂದು ಹೇಳಿದ್ದೇನೋ ಅದನ್ನು ಮಾಡುತ್ತೇನೆ, ಅದು ಶತಸಿದ್ದ. ಆದರೆ ಭತ್ತದ ಬೆಳೆಯಿರಿ ಎಂದು ಹೇಳಲು ಹೋಗಲ್ಲ ಎಂದು ಹೇಳಿದರು.

ಇದೆ ವೇಳೆ ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಒಕ್ಕಲಿಗರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!