Connect with us

Mysore

 ಜ.16 ರಂದು ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಶ್ರೀ ರಾಮ ಬ್ರಹ್ಮ ರಥೋತ್ಸವ 

Published

on

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಯ ಇತಿಹಾಸ ಪ್ರಸಿದ್ಧ ಶ್ರೀ ರಾಮ ದೇವರ ಬ್ರಹ್ಮ ರಥೋತ್ಸವ ಜ.16 ರಂದು ಮಂಗಳವಾರ ನಡೆಯಲಿದ್ದು, ಮುಜರಾಯಿ ಇಲಾಖೆಯ ವತಿಯಿಂದ ಸಕಲ ಸಿದ್ಧತೆಗಳನ್ನು ಕೈ ಗೊಳ್ಳಲಾಗಿದೆ.

ಮಕರ ಸಂಕ್ರಾಂತಿ ಹಬ್ಬದ ಮಾರನೆ ದಿನ ನಡೆಯುವ ಸೀತಾ ಸಮೇತ ಶ್ರೀ ರಾಮ ದೇವರ ರಥೋತ್ಸವಕ್ಕೆ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿ ದ್ದು, ಈಗಾಗಲೇ ದೇವಾಲಯದಲ್ಲಿ ಮೂಲ ದೇವರು ಮತ್ತು ಉತ್ಸವ ಮೂರ್ತಿ ಗಳಿಗೆ ಪೂಜಾ ವಿಧಿವಿಧಾನ ಗಳು  ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ.

ಜ.1 ರಿಂದ 10 ರವರೆಗೆ ಜಾನುವಾರುಗಳ ಜಾತ್ರೆ ನಡೆಸಿದ್ದು,  ರಾಜ್ಯದ  ನಾನಾ ಭಾಗಗಳಿಂದ ಸಾವಿರಾರು ಮಂದಿ ರೈತರು ಮತ್ತು ವ್ಯಾಪಾರಿಗಳು ಆಗಮಿಸಿ ಸುಗ್ಗಿಯ ಸಂಭ್ರಮದಲ್ಲಿದ್ದರು.

ಈಗ ಹೊಸ ವರ್ಷದ ಮೊದಲ ಜಾತ್ರೆ ಮತ್ತು ಧನುರ್ಮಾಸ ಮುಗಿದ ನಂತರ ಕಂಕಣ ಭಾಗ್ಯ ಆರಂಭ ವಾಗುವ ಜಾತ್ರೆ ಎಂದು ಹೆಸರು ವಾಸಿಯಾಗಿರುವ ಚುಂಚನಕಟ್ಟೆ ಶ್ರೀ ರಾಮ ಬ್ರಹ್ಮ ರಥೋತ್ಸವ ವೈಭವ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.

ಚುಂಚನಕಟ್ಟೆ ಬಸವ ವೃತ ಸೇರಿದಂತೆ ದೇವಾಲಯದ ಕಮಾನು ಮತ್ತು ರಸ್ತೆ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಎಲ್ಲಿ ನೋಡಿದರೂ ಜಾತ್ರೆಯು  ಕಳೆಗಟ್ಟಿದೆ, ಹಾಗೂ ಸಿಹಿ ತಿನಿಸು ಮತ್ತು ಆಟಿಕೆಯ ಅಂಗಡಿಗಳು ಮೆರಗು ನೀಡುತ್ತಿವೆ.

ಮುಖ್ಯವಾಗಿ ಈ ಜಾತ್ರೆಗೆ ಹೊಸ ಜೋಡಿಯ ವಧು, ವರರು ಆಗಮಿಸಿ ಶ್ರೀ ರಾಮ ರಥೋತ್ಸವಕ್ಕೆ ಹಣ್ಣು ಮತ್ತು ಜವನ ಅರ್ಪಿಸಿ ಹರಕೆ ತೀರಿಸುವುದು ವಾಡಿಕೆ ಯಾಗಿದ್ದು, ಇದರ ಜೊತೆಗೆ ಬ್ರಹ್ಮ ರಥೋತ್ಸವದ ಕ್ಷಣ ಗಳನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥ ಗಳು ನೆರವೇರಲಿ ಎಂದು ಬೇಡಿ ಕೊಳ್ಳುತ್ತಾರೆ.

 

ಬ್ರಹ್ಮ ರಥೋತ್ಸವಕ್ಕೆ ಗಣ್ಯರಿಂದ ಚಾಲನೆ

ಚುಂಚನಕಟ್ಟೆ ಯಲ್ಲಿ ಜ.16 ರಂದು ಬೆಳ್ಳಿಗೆ 11.10 ರಿಂದ 12.10 ರ ವರೆಗೆ ನಡೆಯಲಿರುವ ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ, ಕ್ಷೇತ್ರದ  ಶಾಸಕ ಡಿ. ರವಿಶಂಕರ್ ಚಾಲನೆ ನೀಡುವರು.

ಆದಿ ಚುಂಚನಗಿರಿ ಮಠದ ಪೀಠಧಿಪತಿ ನಿರ್ಮಲಾನಂದ ಸ್ವಾಮೀಜಿ, ಗಾವಡಗೆರೆ ನಟರಾಜ ಶ್ರೀಗಳು, ಯಡತೋರೆ ಮಠದ ಶಂಕರ ಭಾರತಿ ಶ್ರೀ ಗಳು, ಕಾಗಿನೆಲೆ ಕನಕ ಗುರು ಪೀಠದ ಶಿವಾನಂದ ಶ್ರೀ ಗಳು, ಕರ್ಪೂರವಳ್ಳಿ ಜಂಗಮ ಮಠದ ಚಂದ್ರ ಶೇಖರ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸುವರು.

ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಡಾ. ಡಿ. ತಿಮ್ಮಯ್ಯ, ಮಾದೇಗೌಡ, ಮಂಜೇಗೌಡ ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.

  ವರದಿ :   ಎಸ್ ಬಿ ಹರೀಶ್  ಸಾಲಿಗ್ರಾಮ 

Continue Reading
Click to comment

Leave a Reply

Your email address will not be published. Required fields are marked *

Manglore

ಮುಡಾ ಹಗರಣದಲ್ಲಿ ನನ್ನ ಸಂಬಂಧಿ ಭಾಗಿಯಾಗಿದ್ದರು ಶಿಕ್ಷೆ ಅನುಭವಿಸಲೇ ಬೇಕು: ಜಿಟಿಡಿ

Published

on

ಮಂಗಳೂರು: ರೈತರಿಂದ ನೇರವಾಗಿ ಮುಡಾ ನಗರಾಭಿವೃದ್ಧಿ ಪ್ರಾಧಿಕಾರದ ಜಮೀನು ಪಡೆದಿದ್ದೇ ಆದಲ್ಲಿ ಅವರಿಗೆ 50-50ನಲ್ಲಿ ಸೈಟ್ ಕೊಡಲೇಬೇಕು. ಈ 50-50ಯಲ್ಲಿ ದುರುಪಯೋಗ ಆಗಿದ್ದಲ್ಲಿ ಅವರಿಗೆ ಶಿಕ್ಷೆಯಾಗಬೇಕು. ತಪ್ಪಾಗಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಯಾರೇ ಆಗಲಿ, ನನ್ನ ಸಂಬಂಧಿಗಳೇ ಆಗಲಿ ಯಾರೇ ಆಗಲಿ ಕಾನೂನು ವಿರುದ್ಧ ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮದವರು ‘ಮುಡಾ ಹಗರಣದಲ್ಲಿ ಮಹೇಂದ್ರ ಎಂಬವರು ಜಿ.ಟಿ.ದೇವೇಗೌಡರ ಬೇನಾಮಿ‌ ಆಗಿರಬಹುದು. ಅವರಿಗೆ ಮುಡಾದ 19ಸೈಟ್ ಮಂಜೂರಾಗಿದೆ. ಇದನ್ನು ತನಿಖೆ ಮಾಡಬೇಕು ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಆರೋಪದ ಬಗ್ಗೆ’ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ.ಟಿ.ದೇವೇಗೌಡ, ಒಂದು ಎಕರೆ ಜಾಗವನ್ನು ಪೂರ್ತಿ ಸ್ವಾಧೀನ ಪಡಿಸಿಕೊಂಡಿದ್ದು, ದುಡ್ಡಿನ ಪರಿಹಾರವನ್ನು ಕೊಟ್ಟಿದ್ದರೆ ಮಾತ್ರ ಒಂದು ಸೈಟು. ಆ ಜಮೀನಿಗೆ ಪರಿಹಾರವೇ ಕೊಡದಿದ್ದಲ್ಲಿ, 50-50ಯಲ್ಲಿ ಸೈಟು ಪಡೆದಿದ್ದಲ್ಲಿ ರೈತನ ಜಮೀನಿಗೆ ಕಾನೂನು ಬದ್ಧವಾಗಿ ಕೊಡಬೇಕಿದ್ದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ಹೇಳಿದರು.

Continue Reading

Mysore

ಸ್ನೇಹಮಹಿ ಕೃಷ್ಣ ವಿರುದ್ಧ ೪೪ ಕೇಸ್ ದಾಖಲಾಗಿದೆ: ದಾಖಲೆ ಬಿಡುಗಡೆ ಮಾಡಿದ ಎಂ. ಲಕ್ಷ್ಮಣ್

Published

on

ಸ್ನೇಹಮಹಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ದೂರು
ನಗರದ ಲಕ್ಷ್ಮೀಪುರಂ ಠಾಣೆಗೆ ದೂರು ಸಲ್ಲಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್‌.

ಸ್ನೇಹಮಹಿ ಕೃಷ್ಣ ರೌಡಿಶೀಟರ್, ಆತನ ಮೇಲೆ 44 ಕೇಸ್ ಗಳಿವೆ. ಆತನ ಮೇಲೆ‌ ಮೂರುವರೆ ವರ್ಷಗಳಿಂದ ಯಾವುದೇ ಸೆಕ್ಯೂರಿಟಿ ಕೇಸ್ ಹಾಕಿಲ್ಲ.

ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡ್ತಿದ್ದಾನೆ. ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ.

ಈತನನ್ನ ಕೂಡಲೇ ಅರೆಸ್ಟ್ ಮಾಡಬೇಕು.
ರೌಡಿಶೀಟರ್ ಆಗಿರೋ ಈತ ಸಿಎಂ ಪತ್ನಿ ಪಾರ್ವತಿ ಅವರ ಹೆಸರಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ.
ಆತ ಬಿಡುಗಡೆ ಮಾಡಿರೋ ಚಲನ್ ಹಣ ಕಟ್ಟಿರೋ ದಾಖಲೆ ಎಲ್ಲಾ ಸುಳ್ಳು. ಆತ ಬಿಡುಗಡೆ ಮಾಡಿರೋ ದಾಖಲೆ ಸುಳ್ಳು ಅಂತಾ ಮುಡಾ ಅಧಿಕಾರಿಗಳೇ ಹೆಳ್ತಾ ಇದ್ದಾರೆ.
ಇತನ ಕೂಡಲೇ ಅರೆಸ್ಟ್ ಮಾಡ್ಬೇಕು.


ಅರೆಸ್ಟ್ ಮಾಡದಿದ್ದರೆ ನಾಳೆಯಿಂದ ಪೋಲಿಸ್ ಠಾಣೆ ಮುಂದೆ ಧರಣಿ ಸತ್ಯಾಗ್ರಹ ಮಾಡ್ತೀವಿ.
ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆ.

ತಾಕತ್ ಇದ್ರೆ ನನ್ನ ವಿರುದ್ಧ ಎಫ್ಐಆರ್ ಬಿಡುಗಡೆ ಮಾಡಲಿ ಎಂದಿದ್ದ ಸ್ನೇಹಮಯಿ ಕೃಷ್ಣ‌. ಸ್ನೇಹಮಹಿ ಕೃಷ್ಣ ವಿರುದ್ಧ 22 ಎಫ್ಐಆರ್ ಕಾಫಿ ದಾಖಲೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್.

44 ಕೇಸ್ ಸ್ನೇಹಮಯಿ ಕೃಷ್ಣನ ಮೇಲಿದೆ. ಆತ ರೌಡಿ ಒಬ್ಬ ಶೀಟರ್,ಕೊಲೆ,ವಂಚನೆ,ಬ್ಲಾಕ್ ಮೇಲೆ ಸೇರಿದಂತೆ ಹಲವು ಕೇಸ್ ಗಳು ಅವನ ಮೇಲೆ ಇವೆ ಆದರೂ ಪೋಲಿಸರು ಆತನನ್ನು ಅರೆಸ್ಟ್ ಮಾಡಲು ಮೀನಾ ಮೇಷ ಎಣಿಸುತ್ತಿವೆ. ನಾವು ನಮ್ಮ ಸರ್ಕಾರದ ಪ್ರಭಾವ ಬಳಿಸಿ ಆತನಿಗೆ ಏನು ಬೇಕಾದರೂ ಮಾಡಬಹುದಿತ್ತು.

ಆದರೆ,ನಾವು ಆ ಕೆಲಸ ಮಾಡಲ್ಲ ನಾವು ಕಾನೂನಿನ ಮೇಲೆ ಗೌರವ ಇಟ್ಟು ಬಿಟ್ಟಿದ್ದೇವೆ. ಕಾನೂನಾತ್ಮಕವಾಗಿ ಪೋಲಿಸರು ಏನು ಮಾಡಬೇಕು ಮಾಡುತ್ತಾರೆ. ಮೈಸೂರಿನ‌ಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ.

Continue Reading

Cultural

ಶ್ರೀರಾಮನ ಚರಿತ್ರೆ ವಿಶ್ವಕ್ಕೆ ಸಾರಿದ ಶ್ರೀಮಹರ್ಷಿ ವಾಲ್ಮೀಕಿ — ಶಾಸಕ ದರ್ಶನ್ ಧ್ರುವನಾರಾಯಣ್

Published

on

ನಂಜನಗೂಡು ನ.15

ಶ್ರೀ ರಾಮನ ಚರಿತ್ರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ನಾಯಕ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳು ಪ್ರಜಾಪ್ರಭುತ್ವಕ್ಕೆ ಬಹು ಮುಖ್ಯವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳನ್ನು ಪ್ರತಿಯೊಬ್ಬರು ಸದ್ಬಳಕೆ ಪಡೆದುಕೊಳ್ಳುವ ಮೂಲಕ ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುತ್ತೆನೆ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಜಾತಿಭೇದ ಮಾಡಬೇಡಿ ಸಮಾಜಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ವಾಲ್ಮೀಕಿ ಸಮುದಾಯ ಸಾರಬೇಕು.ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಗ್ರಾಮದ ಎಲ್ಲ ನಾಯಕ ಸಮಾಜದವರನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ಇರಬೇಕು.ಶ್ರೀ ಮಹರ್ಷಿ ವಾಲ್ಮೀಕಿ ಅವರ ರಾಮಾಯಣದಲ್ಲಿ ಹೆಚ್ಚು ರೂಪಕ ಅಲಂಕಾರ ಬಳಕೆಯಾಗಿರುವುದ್ದರಿಂದ ಕಾಳಿದಾಸ ಕವಿ ಮಹರ್ಷಿ ವಾಲ್ಮೀಕಿ ಅವರನ್ನು ಕವಿಕುಲ ಚಕ್ರವರ್ತಿ ಎಂಬುದಾಗಿಯೋ ವರ್ಣಿಸಿದ್ದಾರೆ ಅಲ್ಲದೇ ಜಗತ್ತಿನ ಶ್ರೇಷ್ಠ ವಿಮಾರ್ಶಕ ಥಾಮಸ್ ಪ್ರಕಾರ ವಾಲ್ಮೀಕಿ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯ ಸಂಪತ್ತು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುಂಬ್ರಳ್ಳಿ ಸುಬ್ಬಣ್ಣ, ಶ್ರೀ ಕಂಠನಾಯಕ,ತಾ ಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್,ನಾಯಕ ಸಂಘದ ತಾಲ್ಲೂಕು ಅದ್ಯಕ್ಷ ಬಂಗಾರನಾಯಕ, ಕಾಂಗ್ರೆಸ್ ಯುವ ಘಟಕದ ಅದ್ಯಕ್ಷ ದೇಬೂರು ಆಶೋಕ್,ಗ್ರಾ ಪಂ ಅದ್ಯಕ್ಷೆ ತಾಯಮ್ಮ,
ದೊರೆಸ್ವಾಮಿನಾಯಕ,ಅಭಿನಂದನ್ ಪಾಟೀಲ್,ಗ್ರಾ ಪಂ ಸದಸ್ಯದೇವನಾಯಕ,ನಾಗನಾಯ್ಕ,ಶ್ರೀಕಂಠಸ್ವಾಮಿ,ಶಿವರಾಜು,ಪ್ರಕಾಶ್,ನಂಜುಂಡಸ್ವಾಮಿ, ಸಿದ್ದು,ಮಹೇಶ್, ಮಹೇಂದ್ರ, ಹಾಗೂ ಕಿಚ್ಚಿನ ಅಭಿಮಾನಿ ಬಳಗದವರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!