Hassan
ಜ.೫ ರಿಂದ ಮೂರು ದಿನಗಳ ಕಾಲ ಬಿಲ್ಡ್ ಟೆಕ್-೨೦೨೪ ಪ್ರದರ್ಶನ

ಹಾಸನ: ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ನಗರದಲ್ಲಿ ಅತೀ ದೊಡ್ಡ ಬಿಲ್ಡ್ ಟೆಕ್-೨೦೨೪ “ಪ್ರದರ್ಶನವನ್ನು ಇದೆ ಜನವರಿ ೫ ರಿಂದ ೭ರ ವರೆಗೂ ನಗರದ ಬಿ.ಎಂ. ರಸ್ತೆ, ಜ್ಞಾನಾಕ್ಷಿ ಕನ್ವೆನ್ನನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಹಾಸನ್ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜೀನಿಯರ‍್ಸ್ ಅಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಹೆಚ್. ಮುರುಳಿಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ್ ಜಿಲ್ಲಾ ಕನ್ನರ್ಟಿ?ಗ್ ಸಿವಿಲ್ ಇಂಜಿನಿಯರ್ಸ್, ಆರ್ಕಿಟೆಕ್ಟ್ ಅಸೋಸಿಯೇಷನ್ ಮತ್ತು ಯು ಎಸ್ ಕಮ್ಯೂನಿಕೇಶನ್ ವತಿಯಿಂದ ಬಿಲ್ ಟೆಕ್-೨೦೨೪, ಎಂಬ ಹೆಸರಿನ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನವನ್ನು ದಿನಾಂಕ ೫, ೬, ಮತ್ತು ೭ ಜನವರಿ ೨೦೨೪ ಮೂರು ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳು ಇಂಟೀರಿಯರ್ಸ್ ಎಕ್ಟಿರಿಯರ್ಸ್ ಉತ್ಪಾದನೆಗಳು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಒಂದೇ ಸೂರಿನಡಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಂಪನಿಗಳ ಡೋರ್ಸ್, ವಿಂಡೋಸ್ ಬಾತೂಮ್ ಫಿಟ್ಟಿಂಗ್ಸ್, ಗ್ಲಾಸ್ ಆಂಡ್ ಗ್ಲಾಸ್ ಫಿಟ್ಟಿಂಗ್ ಟೈಲ್ಸ್ ಸೆನೆಟರಿ ಅಂಡ್ ಪ್ಲಂಬಿಂಗ್, ಸ್ವಿಚ್ಚಿಸ್ ಅಂಡ್ ಎಲೆಕ್ನಿಕಲ್ ಫಿಟ್ಟಿಂಗ್ಸ್, ಕನ್ನಕ್ಷನ್ ಟೆಕ್ನಾಲಜೀಸ್, ಸೋಲಾರ್ ಪ್ರಾಡಕ್ಟ್, ಫ್ಲೋರಿಂಗ್ ಮತ್ತು ರೂಫಿಂಗ್‌ಗೆ ಸಂಬಂಧಿಸಿದ ಉತ್ಪನ್ನಗಳು, ಪೇಂಟ್ಸ್ ಮತ್ತು ವಾಟರ್ ಪೂಫ್ ಕೆಮಿಕಲ್ಸ್, ಸ್ಟೀಲ್ ಸಿಮೆಂಟ್ ಪೈವುಡ್, ಸೇಫ್ಟಿ ಮತ್ತು ಮಶಿನರಿ ಎಕ್ಸಿಪೈಂಟ್, ಎಲಿವೇಟರ್ಸ್ ಮುಂತಾದ ಕಂಪನಿಗಳು ಅಪಾರವಾದ ಮಾಹಿತಿ ಕಣಜವನ್ನು ಹೊತ್ತುಕೊಂಡು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಹೋಂ ಲೋನಗಳ ಬಗ್ಗೆ ನಿಖರವಾದ ಮಾಹಿತಿ ನೀಡಲು ಪ್ರತಿಷ್ಠಿತ ಬ್ಯಾಂಕ್‌ಗಳು ಕೂಡ ಇಲ್ಲಿ ಪಾಲ್ಗೊಳ್ಳುತ್ತಿವೆ ಎಂದರು.
ನಗರದ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಸ್ ಗಳು ಮನೆ ಕಟ್ಟಿಸಬೇಕೆನ್ನುವರು, ಈಗಾಗಲೇ ಕಟ್ಟಿಸಲಿಕ್ಕೆ ಪ್ರಾರಂಭಿಸಿದವರು ಮುಕ್ತಾಯದ ಹಂತದಲ್ಲಿರುವವರು ಇವತ್ತು ಪ್ರದರ್ಶಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಇರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆ ಸದೃಢ ಸುಂದರ ಮನೆ ಕಟ್ಟುವ ಕನಸನ್ನು ನನಸಾಗಿಸಿ ಕೊಳ್ಳಬಹುದು. ಜನವರಿ ೫ ರಂದು ಮಧ್ಯಾಹ್ನ ೧೨ ಗಂಟೆಗೆ ಶಾಸಕ ಹೆಚ್.ಪಿ. ಸ್ವರೂಪ ಪ್ರಕಾಶ್ ಇವರು ಉದ್ಘಾಟನೆ ಮಾಡಲಿದ್ದಾರೆ.
ಈ ಪ್ರದರ್ಶನವು ಸಾರ್ವಜನಿಕರಿಗೆ ಉಚಿತ ಪ್ರವೇಶ ಒಳಗೊಂಡಿದ್ದು, ಕೇವಲ ೩ ದಿನ ಮಾತ್ರ ಆಗಿರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ದೀಪಕ್, ಜಂಟಿ ಕಾರ್ಯದರ್ಶಿ ಆರ್. ಬಾಬು, ಖಜಾಂಚಿ ಹೆಚ್.ಎಸ್. ಯೋಗನಾಥ್, ಬಿ.ಆರ್. ಲೋಕೇಶ್ ಇತರರು ಉಪಸ್ಥಿತರಿದ್ದರು.
Hassan
ಮೇಲ್ಸೇತುವೆ ಮುಂದಿನ ಮಾರ್ಚ್‌ಗೆ ಪೂರ್ಣ: ಸಂಸದ ಶ್ರೇಯಸ್ ಪಟೇಲ್

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಎದುರಿನ ರೈಲ್ವೆ ಮೇಲ್ಸೇತುವೆ 2ನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 2026ರ ಫೆಬ್ರವರಿ ಇಲ್ಲವೇ ಮಾರ್ಚ್ ವೇಳೆಗೆ ಮುಗಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಶನಿವಾರದಂದು ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ನಿಮಾಣ ಹಂತದಲ್ಲಿರುವ ಮೇಲ್ಸೇತುವೆ ಮೇಲೆ ತೆರಳಿ ಎಲ್ಲೆಲ್ಲಿ ಕಾಮಗಾರಿ ಆಗಬೇಕು ಎಂಬುವರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹಲವು ಕಾರಣಗಳಿಂದಾಗಿ ಕೆಲ ವರ್ಷಗಳಿಂದ ಕಾಮಗಾರಿ ನಿಂತಿತ್ತು. ಇದೀಗ ತಮ್ಮ ತಮ್ಮ ಪಾಲಿನ ಅನುದಾನ ನೀಡಲು ಸಮ್ಮತಿಸಿವೆ. ಹೀಗಾಗಿ ಈಗಾಗಲೇ ಶುರುವಾಗಿರುವ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿದ್ದು, ಹೆಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲೀವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು. ಉಸುಮಾರು ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೇಂದ್ರ ಸಹ ತನ್ನ ಪಾಲಿನ ಅನುದಾನ ನೀಡಲು ಒಪ್ಪಿದೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿ ಇನ್ನು ಮಂದೆ ಯಾವುದೇ ಅಡೆ-ತಡೆ ಇಲ್ಲದೆ ಮುನ್ನಡೆಯಲಿದೆ ಎಂದರು. ಎರಡೂ ಬದಿಯ ನಾಲ್ಕು ಪಥದ ಮೇಲ್ಸೇತುವೆ ನಿರ್ಮಾಣ ಆದರೆ ವಾಹನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Hassan
ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ: ಸಂಸದ ಶ್ರೇಯಸ್ ಪಟೇಲ್

ಹಾಸನ : ನಮ್ಮದು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಪಕ್ಷ ಹಾಗಾಗಿ ಇದರ ಬಗ್ಗೆ ಜವಾಬ್ದಾರಿಯುತ ತೀರ್ಮಾನವನ್ನು ಸರ್ಕಾರದ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ. ಎಲ್ಲಾ ಸಮಾಜವನ್ನು ಸಮವಾಗಿ ನೋಡಿ ಜಾತಿಗಣತಿಯಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಾತಿಗಣತಿ ವರದಿ ಗೊಂದಲ ವಿಚಾರ ಹಾಸನದಲ್ಲಿ ಸಂಸದ ಶ್ರೇಯಸ್‌ಪಟೇಲ್ ಹೇಳಿಕೆ ನೀಡಿದರು.
ಮೊನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುಬೇಕೆಂದು ಒತ್ತಾಯಿಸಿದ್ದಾರೆ. ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗುವ ಕೆಲಸವನ್ನು ನಮ್ಮ ಪಕ್ಷ ಮಾಡಲ್ಲ. ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸಮಾಜ ಮಾಡಿಲ್ಲ, ಮಾಡುವುದಿಲ್ಲ. ಜನಸ್ನೇಹಿಯಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. 2015 ರಲ್ಲಿ ಜಾತಿಗಣತಿ ನಡೆದಿತ್ತು, ಎಲ್ಲರ ಬೇಡಿಕೆ ಇತ್ತು ಜಾತಿಗಣತಿಗಾಗಿ ಕೋಟ್ಯಾಂತರ ರೂ ವೆಚ್ಚ ಮಾಡಿದ್ದಾರೆ. ಈಗೀನ ವರದಿಯ ನೈಜತೆಯನ್ನು, ಸತ್ಯಾಸತ್ಯತೆಯನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರದಿಯನ್ನು ಇನ್ನೂ ಮಂಡಿಸಿಲ್ಲ, ವರದಿ ಹೊರಗೆ ಬಂದ ಮೇಲೆ ಗೊತ್ತಾಗುತ್ತೆ. ಇನ್ನೂ ಯಾರಿಗೂ ವರದಿಯಲ್ಲಿದೆ ಎಂದು ಗೊತ್ತಿಲ್ಲ.
ಬಿಜೆಪಿ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಯಾವಾಗಲೂ ಆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದೇ ವಿರೋಧ ಪಕ್ಷಗಳ ಗುರಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತೆ ನಮಗೂ ಆಸೆ ಇದೆ, ಆದರೆ ಸಿದ್ಧಾಂತ ಇದೆ, ಜನಸೇವೆ ಮಾಡಲು ನಾವು ಬಂದಿದ್ದೇವೆ. ಅಧಿಕಾರದ ದುರಾಸೆಗೋಸ್ಕರ ಈ ಕೆಲಸ ಮಾಡಬಹುದು.ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮಲ್ಲಿ ಒಗ್ಗಟ್ಟಿದೆ, ಒಗ್ಗಟ್ಟು ಎಂದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಸಿಇಟಿ ಪರೀಕ್ಷೆಗೆ ಹೋಗುವ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಅದನ್ನು ನಾನು ಖಂಡಿತವಾಗಿ ವಿರೋಧಿಸುತ್ತೇನೆ, ಆ ತರ ಮಾಡಬಾರದು. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಒಬ್ಬ ಸಾರ್ವಜನಿಕನಾಗಿ ಹೇಳುತ್ತಿದ್ದೇನೆ. ಅವರವರ ಆಚರಣೆಗಳು, ಅವರವರ ವೈಯುಕ್ತಿಕ. ಜನಿವಾರ ತೆಗೆದು ಹೋಗಿ ಎನ್ನುವುದು ಅಪರಾಧ. ನಾನಂತು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.
Hassan
ಆಟೋ ಹತ್ತಿಸುವ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿ

ಹಾಸನ: ಆಟೋ ಹತ್ತಿಸುವ ನೆಪದಲ್ಲಿ ವೃದ್ಧೆಯ ಗಮನ ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರ ಸುಲಿಗೆ ಮಾಡಿಕೊಂಡು ಅಪರಿಚಿತ ಪರಾರಿಯಾಗಿರುವ ಘಟನೆ
ಸಾಲಗಾಮೆ ಹೋಬಳಿ ಸುಂಕದಕೊಪ್ಪಲು ಗ್ರಾಮದ ಲಕ್ಷ್ಮಮ್ಮ ಎಂಬುವರು ಸಾಲಗಾಮೆ ಗೇಟ್‌ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಏ.೧೮ ರಂದು ಊರಿನಿಂದ ಬಸ್ಸಿನಲ್ಲಿ ಹಾಸನಕ್ಕೆ ಹೋಗಿದ್ದರು.
ಅಲ್ಲಿಂದ ಹೂವಿನಹಳ್ಳಿ ಕಾವಲು ಹೊಸೂರಿಗೆ ಬಸ್ಸಿನಲ್ಲಿ ಬಂದು ಇಳಿದು ಸರ್ಕಾರಿ ಆಸ್ಪತ್ರೆಗೆ ಹೋದರು. ಆದರೆ ಗುಡ್‌ಫ್ರೈಡೆ ನಿಮಿತ್ತ ರಜೆ ಇದ್ದುದರಿಂದ ವಾಪಸ್ ಊರಿಗೆ ಹೋಗಲೆಂದು ಮಧ್ಯಾಹ್ನ ೧ ಗಂಟೆ ಸಮಯದಲ್ಲಿ ಆಸ್ಪತ್ರೆ ಮುಂದೆ ರಸ್ತೆಯ ಬದಿಯಲ್ಲಿ ನಿಂತಿದ್ದರು.
ಅಲ್ಲಿಗೆ ಬಂದ ಸುಮಾರು ೩೦-೩೫ ವರ್ಷ ವಯಸ್ಸಿನ ವ್ಯಕ್ತಿ, ಅಜ್ಜಿ ನಿಂತಿದ್ದಲ್ಲಿಗೆ ಬಂದು ಯಾವೂರವ್ವ ಎಂದು ಕೇಳಿ, ನನ್ನ ಬೈಕಿಗೆ ಬನ್ನಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾನೆ.
ಮಗಳ ಊರಾದ ಅರೇಕಲ್ ಹೊಸಳ್ಳಿ ಗ್ರಾಮದ ಮನೆಗೆ ಹೋಗುತ್ತೇನೆಂದು ಹೇಳಿದಾಗ ಆಟೋದಲ್ಲಿ ಹೋಗಿ ಎಂದು ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿದ ಆಸಾಮಿ, ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಅಡ್ಡಹಾಕಿ ನಿಲ್ಲಿಸಿ, ಅಜ್ಜಿ ಆಟೋದ ಒಳಕ್ಕೆ ಕಾಲಿಟ್ಟು ಹತ್ತುವಾಗ ಅವರ ಕೊರಳಿನಲ್ಲಿದ್ದ ಸುಮಾರು ೪೦ ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮಾಂಗಲ್ಯ ಸರದ ಅಂದಾಜು ಬೆಲೆ ೩ ಲಕ್ಷ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Chamarajanagar22 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore19 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan23 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu19 hours ago
ಹುಲಿ ದಾಳಿಗೆ ಕರು ಬಲಿ
-
Kodagu22 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Chikmagalur24 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.
-
Hassan24 hours ago
ಜನಿವಾರ, ಕಾಶೀ ದಾರ ತೆಗೆಸಿರುವುದು ಖಂಡನೀಯ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ