Connect with us

Hassan

ಜ.೧೯ ರಿಂದ ೨೧ರ ವರೆಗೂ ಉದ್ಯಮಿ ಒಕ್ಕಲಿಗ ಸಮಾವೇಶ ಮಂಜೇಗೌಡ

Published

on

ಹಾಸನ: ಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿ ನಡೆಸುವ ಈ ಬಾರಿಯ ಉದ್ಯಮಿ ಒಕ್ಕಲಿಗ ಎಕ್ಸ್-೨೦೨೪ ಅರಮನೆ ಮೈದಾನದ ಗಾಯತ್ರಿ ಗ್ರಾಂಕ್‌ಯಂಡ್ ಪೆವಿಲಿಯನ್ನಲ್ಲಿ ಜನವರಿ ೧೯ ರಿಂದ ಜನವರಿ ೨೧ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕರ್ನಾಟಕ ಅಮೇಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಅಧ್ಯಕ್ಷ ಮಂಜೇಗೌಡ ಹಾಸನ ಜಿಲ್ಲಾ ಕೈಗಾರಿಕ ಸಂಘದ ಅಧ್ಯಕ್ಷ ಹೆಚ್.ಎ. ಕಿರಣ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸುಮಾರು ನೂರಕ್ಕೂ ಹೆಚ್ಚು ಒಕ್ಕಲಿಗ ಉದ್ಯಮದಾರರು ತಮ್ಮ ಸೇವೆ ಮತ್ತು ಸರಕುಗಳನ್ನು ಪ್ರದರ್ಶನಕ್ಕೆ ಇಡಲಿರುವ ಈ ಸಮಾವೇಶದಲ್ಲಿ ೧೨ ಉದ್ಯಮ ಕ್ಷೇತ್ರಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಕೃಷಿ, ಆರೋಗ್ಯ, ಶಿಕ್ಷಣ, ಎಮ್‌ಎಸ್‌ಎಂಇ, ಮನರಂಜನೆ, ಸ್ಮಾರ್ಟ್ ಅಪ್, ಆಹಾರ-ಆತಿಥ್ಯ, ಮತ್ತಿತರ ಎಲ್ಲಾ ಕ್ಷೇತ್ರಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲಿದೆ. ಜನವರಿ ೧೯ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಉದ್ಘಾಟನೆ ಆಗಲಿದೆ ಎಂದರು. ಈ ಸಮಾವೇಶದ ಸಮಾರೋಪ ಜನವರಿ ೨೧ರ ಸಂಜೆ ನಡೆಯಲಿದ್ದು, ಮಾಜಿ ಉಪಮುಖ್ಯಮಂತ್ರಿ ಸಿಎನ್. ಅಶ್ವಥ್‌ನಾರಾಯಣ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಬಾರಿಯ ಉದ್ಯಮಿ ಒಕ್ಕಲಿಗ ಸಮಾವೇಶದಲ್ಲಿ ಒಕ್ಕಲಿಗ ಕೌಸಿನ್, ಒಕ್ಕಲಿಗ ಆಹಾರ ಪದ್ಧತಿ ವಿಶೇಷ ಆಕರ್ಷಣೆ ಆಗಲಿದ್ದು, ೧೨ಕ್ಕೂ

ಹೆಚ್ಚು ಒಕ್ಕಲಿಗ ಖಾದ್ಯ ತಯಾರಕರು ತಮ್ಮ ತಿನಿಸುಗಳನ್ನು ಬಡಿಸಲಿದ್ದಾರೆ. ಜನವರಿ ೧೯ರ ಸಂಜೆ ಒಕ್ಕಲಿಗ ಸಂಸ್ಕೃತಿಯ ಪರಿಚಯದ ಅಂಗವಾಗಿ ದೇವಿ ಮಹಾತ್ಮ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.

ಮತ್ತೊಂದು ವಿಶೇಷವೆಂದರೆ ತಮಿಳುನಾಡಿನಲ್ಲಿ ೨೫ ಲಕ್ಷಕ್ಕೂ ಹೆಚ್ಚಿರುವ ಒಕ್ಕಲಿಗ ಸಮುದಾಯದ ೫೦೦ಕ್ಕೂ ಹೆಚ್ಚು ಉದ್ಯಮಿ ಪ್ರತಿನಿಧಿಗಳು ಭಾಗವಹಿಸಲಿದ್ದು, ಚೆನೈ, ಕೊಯಮತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ ಮತ್ತು ಕಂಬಂ ಜಿಲ್ಲೆಗಳಿಂದ ಉದ್ಯಮಿಗಳು ಆಗಮಿಸಲಿದ್ದಾರೆ. ಕರ್ನಾಟಕ-ತಮಿಳುನಾಡು ಒಕ್ಕಲಿಗ ಉದ್ಯಮಿಗಳ ಸಮನ್ವಯಕ್ಕಾಗಿ ಪ್ರತ್ಯೇಕ ಚರ್ಚೆ ಹಾಗೂ ಸಮನ್ವಯ ಸಮಿತಿ ಆಯೋಜಿಸಲಾಗುತ್ತಿದೆ ಎಂದರು. ಮೂರು ದಿನಗಳ ಸಮಾವೇಶದಲ್ಲಿ ಒಟ್ಟು ಸುಮಾರು ೨೦ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ಗಂಗವಾಡಿ-೯೬೦೦೦ ರಾಜವಂಶದ ಲಾಂಛನವನ್ನು ಸಮಾವೇಶದ ಕೇಂದ್ರ ಆಕರ್ಶಣೆಯಾಗಿ ಬಳಸಲಾಗುತ್ತಿದೆ. ಸಮಾವೇಶದಲ್ಲಿ ಒಕ್ಕಲಿಗ ಮಾರುಕಟ್ಟೆ ಹಾಗೂ ವ್ಯಾಪಾರಿಗಳ ಒಕ್ಕಲಿಗ ಜಾಲತಾಣ ಜನಾರ್ಪಣೆಗೊಳ್ಳಲಿದೆ. ಉದ್ಯಮಿಗಳ ಜಾಲತಾಣ ಜನಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕೈಗಾರಿಕ ಸಂಘದ ಅಧ್ಯಕ್ಷ ಮತ್ತು ಎಫ್.ಕೆ.ಸಿ.ಸಿ. ನಿರ್ದೇಶಕರಾದ ಹೆಚ್.ಎ. ಕಿರಣ್, ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ನಗರದಲ್ಲಿ ಪುನೀತ್ ರಾಜಕುಮಾರ್ 3ನೇ ವರ್ಷದ ಪುಣ್ಯಸ್ಮರಣೆ

Published

on

ಹಾಸನ: ನಗರದ ಎನ್.ಆರ್. ವೃತ್ತದ ಬಳಿ ಇರುವ ಪುನೀತ್ ರಾಜಕುಮಾರ್ ಪ್ರತಿಮೆ ಬಳಿ ಪುನೀತ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಇದೆ ವೇಳೆ ಒಕ್ಕೂಟದ ಸುಬ್ರಮಣ್ಯ ಮತ್ತು ರವಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಗುತ್ತಿದ್ದು, ಅವರು ನಮ್ಮ

ಕಣ್ಣ ಮುಂದೆ ಇಲ್ಲದೆ ಇರಬಹುದು, ನಮ್ಮ ಸುತ್ತ ಮುತ್ತ ಇನ್ನು ಕೂಡ ಇದ್ದಾರೆ ಎಂದು ತಿಳಿದುಕೊಂಡಿದ್ದೇವೆ. ಅವರ ಆದರ್ಶ, ದಾನ, ಧರ್ಮ ಎಲ್ಲಾವನ್ನು ಪ್ರಸ್ತೂತದ ಯುವಕರು ಅಳವಡಿಸಿಕೊಳ್ಳಬೇಕು. ಇವತ್ತು ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗಿದ್ದು, ಮದ್ಯಾಹ್ನ ಅವರಿಗೆ ಇಷ್ಟವಾದ ಆಹಾರವನ್ನು ಇಟ್ಟು ಸ್ಮರಿಸುವುದಾಗಿ ಹೇಳಿದರು.

ಈಸಂದರ್ಭದಲ್ಲಿ ವಿವೇಕರಾಜು, ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Continue Reading

Hassan

ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ

Published

on

ಹಾಸನ : ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ

ನಿನ್ನೆ ಹಾಸನಾಂಬೆ ದೇವಿ ದರ್ಶನ ಪಡೆಯುವಾಗ ಅಷ್ಟೋತ್ತರದಿಂದ ಪೂಜೆ ಮಾಡುವುದು ವಾಡಿಕೆ

ಈ ಬಾರಿ ಖಡ್ಗಮಾಲಾ ಸ್ತೋತ್ರದ ಮೂಲಕ ದೇವಿಯನ್ನು ಅರ್ಚಿಸಿದ್ದು ವಿಶೇಷ

ಖಡ್ಗಮಾಲಾ ಸ್ತೋತ್ರ ಶಕ್ತಿ ದೇವಿಯ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರ

ಖಡ್ಗಮಾಲಾ ಸ್ತೋತ್ರವನ್ನು ಪಠಿಸುವುದರಿಂದ ಅತೀಂದ್ರಿಯ ಆಯುಧಗಳ ರಕ್ಷಣಾತ್ಮಕ ಮಾಲೆ ಸಿಗುತ್ತದೆ

ಜೊತೆಗೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಇದು ಮುಕ್ತಿ ನೀಡುತ್ತದೆ ಎನ್ನುವ ನಂಬಿಕೆ ಇದೆ

ಮುಡಾ ಹಗರಣ ಸೇರಿದಂತೆ ಅನೇಕ ವಿಚಾರಗಳಲ್ಲಿ ತೊಂದರೆ ಎದುರಿಸುತ್ತಿರುವ ಮುಖ್ಯಮಂತ್ರಿಗಳು

ಸಮಸ್ಯೆಯಿಂದ ಪಾರಾಗಲು ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ

Continue Reading

Hassan

ಹಾಸನಾಂಬೆ ದೇವಿ ದರ್ಶನ ಪಡೆದ ಶಾಸಕ ಹಾಗೂ ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ

Published

on

ಹಾಸನ : ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದರ್ಶನ ಪಡೆದ ಶಾಸಕ ಜಿ.ಟಿ.ದೇವೇಗೌಡ

ದೇವಿ ದರ್ಶನ ಪಡೆದು ಜಿ.ಟಿ.ದೇವೇಗೌಡ ಹೇಳಿಕೆ

ನನ್ನ ಜೀವನದಲ್ಲಿ ಎರಡನೇ ಬಾರಿ ಹಾಸನಾಂಬೆ ತಾಯಿ ದರ್ಶನವನ್ನು ಮಾಡುತ್ತಿದ್ದೇನೆ

ಹಾಸನಾಂಬೆ ದೇವಿ ಬಾಗಿಲು ತೆರೆಯುವಾಗ ಜ್ಯೋತಿ ಉರಿಯುತ್ತೆ, ಹೂವು ಬಾಡಿರುವುದಿಲ್ಲ

ಎಲ್ಲಾ ಜನರಿಗೂ ಪ್ರೀತಿ, ಶಾಂತಿ, ಆರೋಗ್ಯ, ಮಳೆ, ಬೆಳೆ, ಸೌಖ್ಯ, ಸಮೃದ್ಧಿಯನ್ನ ಆ ತಾಯಿ ನೀಡಬೇಕು

ಎಲ್ಲರೂ ಕೂಡ ಪ್ರೀತಿ, ವಿಶ್ವಾಸದಿಂದ ಬದುಕುವಂತಾಗಲಿ

ಎಲ್ಲರಿಗೂ ಆರೋಗ್ಯವನ್ನು ಕೊಡು ಎಂದು ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ

ಎಲ್ಲಾ ಜನರಿಗೂ ಒಳ್ಳೆಯ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಮಾಡುವಂತಾಗಬೇಕು

ದೇವರು ಇರವುದಕ್ಕೆ ಇದೆಲ್ಲಾ ಜೀವಂತ ಉಳಿದಿದೆ

ಮಳೆ, ಬೆಳೆ ಆಗುತ್ತಿದೆ, ಜನರ ಕಷ್ಟಗಳನ್ನು ಪರಿಹಾರ ಮಾಡಲಿ

ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು ಎಂಬುದೇ ಆ ತಾಯಿಯಲ್ಲಿ ಮನವಿ

ಉಪಚುನಾವಣೆ ವಿಚಾರ

ನಾನೇನು ಚುನಾವಣೆಗೆ ಹೋಗಿಲ್ಲ

ಮೈಸೂರಿನಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ, ಹಾಗಾಗಿ ನಾನು ಯಾವುದೇ ಚುನಾವಣೆಗೆ ಹೋಗಿಲ್ಲ

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗುವ ವಿಚಾರ

ಇನ್ನೂ ತೀರ್ಮಾನ ಮಾಡಿಲ್ಲ

ನನಗೆ ಯಾವುದೇ ಆಹ್ವಾನ ಬಂದಿಲ್ಲ

ನಾನು ಯಾವುದೇ ತೀರ್ಮಾನಗಳನ್ನು ಮಾಡಿಲ್ಲ

ಕ್ಷೇತ್ರದಲ್ಲಿ ಕೆಲಸಗಳ ಒತ್ತಡದಲ್ಲಿ ಇದ್ದೀನಿ ಮುಂದೆ ನೋಡೋಣ

ಚನ್ನಪಟ್ಟಣ ಚುನಾವಣೆ ಬಗ್ಗೆ ಮಾಹಿತಿ ಗೊತ್ತಿಲ್ಲ, ಪಡೆದಿಲ್ಲ

ಮಾಹಿತಿ ಪಡೆದಿಲ್ಲ, ಅದರ ಬಗ್ಗೆ ನಾನು ಮಾತನಾಡಲ್ಲ

ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ

ನಗುತ್ತಲೇ ತೆರಳಿದ ಜಿ.ಟಿ.ದೇವೇಗೌಡ

Continue Reading

Trending

error: Content is protected !!