Chamarajanagar
ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಭಸ್ಮವಾಗಿ ಬಾರಿ ನಷ್ಟವಾಗಿರುವ ಘಟನೆ

ಯಳಂದೂರು: ಪಟ್ಟಣದ ಜಮೀನೊಂದರ ಮೇಲೆ ಹಾದು ಹೋಗಿದ್ದ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಭಸ್ಮವಾಗಿ ಬಾರಿ ನಷ್ಟವಾಗಿರುವ ಘಟನೆ ನಡೆದಿದೆ .
ಪಟ್ಟಣದ ನಿವಾಸಿ ಕೋಮಲ ಅವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ.
ಎರಡುವರೆ ಎಕರೆ ಪ್ರದೇಶದ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಮಂಗಳವಾರ ಜಮೀನಿನ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗಳ ತಿಕ್ಕಾಟದಿಂದ ಬಂದ ಬೆಂಕಿಯ ಕಿಡಿ ಕಬ್ಬಿನ ಬೆಳೆ ಮೇಲೆ ಬಿದ್ದು, ಎರಡುವರೆ ಎಕರೆಯಷ್ಟು ಕಬ್ಬು ಸುಟ್ಟು ಕರಕಲಾಗಿದೆ.ಬೆಂಕಿ ಕಂಡ ಗ್ರಾಮಸ್ಥರು ನಂದಿಸಲು ಪ್ರಯತ್ನಿಸಿದರೂ ಹೆಚ್ಚಿನ ಹಾನಿಯನ್ನು ತಡೆಯಲು ಸಾಧ್ಯವಾಗಿಲ್ಲ ಬೆಂಕಿ ಕೆನ್ನಾಲಗೆಗೆ ಸುಟ್ಟು ಹೋಗಿದ್ದು ಅಪಾರ ಪ್ರಮಾಣ ಕಬ್ಬು ನಾಶವಾಗಿದೆ. ವಿದ್ಯುತ್ ಕಂಬಗಳು ಶಿಥಿಲಗೊಂಡು ತಂತಿಗಳು ಜೋತು ಬಿದ್ದು ರೈತರು ಬೆಳೆದ ಬೆಳೆಗಳು ನಾಶವಾದರೂ ಯಾವುದೇ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ
Chamarajanagar
ಸಾಮಾಜಿಕ ಭದ್ರತಾ ಯೋಜನೆಗಳ ಮೆಗಾ ಲಾಗಿನ್ ಕಾರ್ಯಕ್ರಮ

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಂಸ್ಥೆಯು ಹಾಗೂ ಭೀಮನಬೀಡು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಭೀಮನಬೀಡು ಗ್ರಾಮದ
ವಿವಿಧ ಬ್ಯಾಂಕ್ ಖಾತೆದಾರೆರೆಲ್ಲರಿಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮದ ಒಟ್ಟು ಪಿ ಎಮ್ ಎಸ್ ಬಿ ವೈ ಯೋಜನೆಗೆ 271 ಖಾತೆದಾರರು ಹಾಗೂ ಪಿ ಎಂ ಜೆ ಜೆ ಬಿ ವೈ ಯೋಜನೆಗೆ 200 ಬ್ಯಾಂಕ್ ಖಾತೆದಾರರನ್ನು ಸೇರ್ಪಡೆ ಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಿಡಿಒ ಭೋಜೇಶ್ ರವರು ತಮ್ಮ ಗ್ರಾಮದ ಜನರಿಗೆ ಅರ್ಜಿಗಳನ್ನು ಬರೆವುದರ ಮೂಲಕ ನೋಂದಣಿ ಮಾಡಿಸಿದರು.
ಈ ಸಂದರ್ಭದಲ್ಲಿ
ಮಹದೇವೇಗೌಡ
ಧಾನ್ ಫೌಂಡೇಶನ್ ಸಿ ಎಫ್ ಎಲ್ ಗೋವಿಂದರಾಜು
ಆರ್ಥಿಕ ಸಹಾಯಕರು ವಸಂತ ಜ್ಯೋತಿ ಮತ್ತು ಮಮತಾ
ಪಂಚಾಯಿತಿ ಸದಸ್ಯರು ಸ್ವಾಮಿ. ಮತ್ತು ಸಿಬ್ಬಂದಿಗಳು ಗ್ರಾಮಸ್ಥರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು
Chamarajanagar
ಸಾಮಾಜಿಕ ಭದ್ರತಾ ಯೋಜನೆಗಳ ಮೆಗಾ ಲಾಗಿನ್ ಕಾರ್ಯಕ್ರಮ

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಂಸ್ಥೆಯು ಹಾಗೂ ಭೀಮನಬೀಡು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಭೀಮನಬೀಡು ಗ್ರಾಮದ
ವಿವಿಧ ಬ್ಯಾಂಕ್ ಖಾತೆದಾರೆರೆಲ್ಲರಿಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮದ ಒಟ್ಟು ಪಿ ಎಮ್ ಎಸ್ ಬಿ ವೈ ಯೋಜನೆಗೆ 271 ಖಾತೆದಾರರು ಹಾಗೂ ಪಿ ಎಂ ಜೆ ಜೆ ಬಿ ವೈ ಯೋಜನೆಗೆ 200 ಬ್ಯಾಂಕ್ ಖಾತೆದಾರರನ್ನು ಸೇರ್ಪಡೆ ಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಿಡಿಒ ಭೋಜೇಶ್ ರವರು ತಮ್ಮ ಗ್ರಾಮದ ಜನರಿಗೆ ಅರ್ಜಿಗಳನ್ನು ಬರೆವುದರ ಮೂಲಕ ನೋಂದಣಿ ಮಾಡಿಸಿದರು.
ಈ ಸಂದರ್ಭದಲ್ಲಿ
ಮಹದೇವೇಗೌಡ
ಧಾನ್ ಫೌಂಡೇಶನ್ ಸಿ ಎಫ್ ಎಲ್ ಗೋವಿಂದರಾಜು
ಆರ್ಥಿಕ ಸಹಾಯಕರು ವಸಂತ ಜ್ಯೋತಿ ಮತ್ತು ಮಮತಾ
ಪಂಚಾಯಿತಿ ಸದಸ್ಯರು ಸ್ವಾಮಿ. ಮತ್ತು ಸಿಬ್ಬಂದಿಗಳು ಗ್ರಾಮಸ್ಥರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು
Chamarajanagar
ಕಾಂಗ್ರೆಸ್ ಗೆ ಭರ್ಜರಿ ಗೆಲುವು

ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ರಲ್ಲಿ ಕಾಂಗ್ರೆಸ್ 11 ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ 1 ರಲ್ಲಿ ಗೆಲುವು ಸಾಧಿಸಿದೆ
ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯೋರ್ವ ಗೆಲುವು ಸಾಧಿಸಿದ್ದಾರೆ. ಸಹಕಾರ ಸಂಘದ ಅಧಿಕಾರ ನಡೆಸಿದ್ದ ಬಿಜೆಪಿಗೆ ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಕೊಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾದ ಶೇಖರ ಪುಟ್ಟಸ್ವಾಮಿ ಬಸಪ್ಪ ದೇವರು ಸದಾಶಿವಪ್ಪ ಹಿಂದುಳಿದ ವರ್ಗ (ಎ) ಕ್ಷೇತ್ರದಿಂದ ರಾಮೇಗೌಡ, ಹಿಂದುಳಿದ ವರ್ಗ (ಬಿ) ಕ್ಷೇತ್ರದಿಂದ ಜಿ. ಮಹೇಶ್ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಮಕೃಷ್ಣಯ್ಯ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹೊಣಕಾರನಾಯಕ, ಮಹಿಳಾ ಮೀಸಲು ಕ್ಷೇತ್ರದಿಂದ ಎಸ್. ರತ್ನಮ್ಮ, ಶಿವಮ್ಮ ಗೆಲುವು ಸಾಧಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಂ. ಮಹದೇವಸ್ವಾಮಿ 90 ಮತ ಪಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಗುರುಮೂರ್ತಿಯನ್ನು 63 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಕೆಎ ಮಹಾದೇವಸ್ವಾಮಿ ಗೆಲುವು ಸಾಧಿಸಿದ್ದಾರೆ.
*ಬಿಜೆಪಿಯ ಅಭ್ಯರ್ಥಿ ಗೆಲುವು*
ಕೋಟೆಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭೋಗಯ್ಯನ ಹುಂಡಿಯ ಬಿಎನ್ ಗಣೇಶ್ ರವರು ಜಯಶೀಲರಾಗಿದ್ದಾರೆ
*.*ತಮ್ಮ ಮತ ಹಾಕದೆ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ***
ಚುನಾವಣೆಯಲ್ಲಿ ಒಂದು ಮತಕ್ಕೆ ಅದರದೇ ಆದ ಮಹತ್ವವಿದೆ. ವಿಧಾನಸಭೆ ಚುನಾವಣೆಯಲ್ಲಿ 1 ಮತದಿಂದ ಸೋತ ಸಾಕಷ್ಟು ಉದಾಹರಣೆಗಳಿವೆ ಆದರೆ, ಶುಕ್ರವಾರ ನಡೆದ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸದಾಶಿವಪ್ಪ ಶಬರಿ ಮಲೆಗೆ ಯಾತ್ರೆಗೆ ಹೋಗಿದ್ದರು. ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆದಿದೆ. ತನ್ನ ಮತ ಹಾಕಿಕೊಳ್ಳದ ಸದಾಶಿವಪ್ಪ 165 ಮತ ಪಡೆದು ಗೆಲುವು ಸಾಧಿಸಿದ್ದರೆ
ಈ ಸಂದರ್ಭದಲ್ಲಿ
ಬೆಟ್ಟದಮಾದಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಆರ್.ಎಸ್.ನಾಗರಾಜು, ಸಾಹುಕಾರ್ ಬಿ.ಪಿ. ನಂದೀಶ್, ಮಲ್ಲೇಶ್, ಗೌಡಿಕೆ ಬಸವರಾಜಪ್ಪ, ಗೌಡಿಕೆ ಕೆಪಿ ಕುಮಾರ್ ಕುರುಬರಹುಂಡಿ ಕೋಟೆ ಕೆರೆಯ ರಂಗನಾಥ, ಶಂಕರನಾಯಕ ಸಿದ್ದು ಶಿವಲಿಂಗನಾಯಕ, ಬೆಟ್ಟದಮಾದಹಳ್ಳಿ ಮಲ್ಲು ಕುರುಬರಹುಂಡಿ ಚೇರ್ಮನ್ ಮಹೇಶ್, ಶಿವಲಿಂಗಪ್ಪ ಕೆಂಚಪ್ಪ,
ಚಿಕ್ಕಮಾದಪ್ಪ ಮಾದಪ್ಪ ಬೇಗೂರು ಜಗದೀಶ್ ನೂತನ ನಿರ್ದೇಶಕರು ಹಾಗೂ ಕೋಟೆಕೆರೆ, ಭೋಗಯ್ಯನಹುಂಡಿ, ಕುರುಬರಹುಂಡಿ, ಬೆಟ್ಟದಮಾದಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು…
ಗೆದ್ದ ಅಭ್ಯರ್ಥಿಗಳಿಗೆ ಶಾಸಕರಿಂದ ಶುಭ ಹಾರೈಕೆ**
ಕೋಟೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಗುಂಡ್ಲುಪೇಟೆ ತಾಲೂಕಿನ ಶಾಸಕರಾದ ಎಚ್ ಎಂ ಗಣೇಶ್ ಪ್ರಸಾದ್ ಅವರು ಹಾಗೂ ಜಿಲ್ಲಾ ಸಹಕಾರ ಸಂಘದ ಒಕ್ಕೂಟದ ಅಧ್ಯಕ್ಷರಾದ ಎಚ್ ಎಸ್ ನಂಜುಂಡ ಪ್ರಸಾದ್ ರವರು ಶುಭಾಶಯ ಕೋರಿದರು..
*ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ **
ಕೋಟೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮವನ್ನು ಆಚರಣೆ ಮಾಡಿದರು…
*ಕುರುಬರಹುಂಡಿ ಬಿಜೆಪಿಗರಿಗೆ ತೀವ್ರ ಮುಖಭಂಗ ***
ಕುರಬರಹುಂಡಿ ಗ್ರಾಮದ ಕೆಪಿ ಶಿವರಾಜ್ ಹಾಗೂ ಸಂಗಡಿಗರಿಗೆ ಕೊಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಸೋಲು ತೀವ್ರ ಮುಜುಗರ ಕೀಡಾಗಿದೆಮಾಡಿದೆ
-
State21 hours ago
ಬೆಂಗಳೂರು ನಮ್ಮ ಮೆಟ್ರೋ ನೇಮಕಾತಿ : ಟ್ರೈನ್ ಆಪರೇಟರ್ ಹುದ್ದೆಗಳ ಭರ್ತಿ
-
Kodagu19 hours ago
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ
-
National - International21 hours ago
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ
-
Kodagu22 hours ago
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ
-
State22 hours ago
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ: ಬಸವರಾಜ ಬೊಮ್ಮಾಯಿ
-
Chikmagalur7 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
Hassan23 hours ago
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
-
Chamarajanagar5 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ