Connect with us

Politics

ಜೆ.ಡಿ.ಎಸ್ ಗೆ ಆತ್ಮಸಾಕ್ಷಿ ಇದೆಯೇ: ಮುಖ್ಯಮಂತ್ರಿ ಸಿದ್ದರಾಮಯ್ಯ

Published

on

ಬೆಂಗಳೂರು, ಫೆಬ್ರವರಿ 27; ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ ಅಷ್ಟು ಮತಗಳು ಅವರಿಗಿದೆಯೇ ? ಅವರಿಗೆ ಆತ್ಮಸಾಕ್ಷಿ ಇದೆಯೇ ಎಂದು ಪ್ರಶ್ನಿಸಿ ಅವರ ಮತಗಳೇ ನಮಗೆ ಬರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯ ಸಭಾ ಚುನಾವಣೆಯ ಬಗ್ಗೆ ಮಾತನಾಡಿ ಎಲ್ಲರೂ ಗೆಲ್ಲಬೇಕೆಂದೆ ಸ್ಪರ್ಧಿಸುತ್ತಾರೆ ಎಂದರು.

ಶಾಸಕರಿಗೆ ಆಮಿಷ
ಅಡ್ಡಮತ ವಿಚಾರವಾಗಿ ಕಾನೂನು ತಿದ್ದಿ ಎಫ್.ಐ.ಆರ್. ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಅವರಿಗೆ ಮತವಿಲ್ಲ ದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ , ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬೆದರಿಕೆ ಹಾಕಿರುವುದಕ್ಕೆ ಎಫ್.ಐ.ಆರ್ ಹಾಕಲಾಗಿದೆ ಎಂದರು. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಶಾಸಕರಿಂದ ಹಲ್ಲೇಗೆರೆಯಲ್ಲಿ 20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ

Published

on

ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗೌಡ ಚಾಲನೆ ನೀಡಿದರು.

ಬಳಿಕ ಶಾಸಕ ಪಿ.ರವಿಕುಮಾರ್‌ಗೌಡ ಮಾತನಾಡಿ, ಹಲ್ಲೇಗೆರೆ ಸುಪುತ್ರ ಡಾ‌.ಮೂರ್ತಿ ತಮ್ಮ ಹುಟ್ಟಿದ ಊರಿನಲ್ಲಿ ನೂರು ಕೋಟಿ ವೆಚ್ಚದಲ್ಲಿ ಆಧ್ಯಾತ್ಮಿಕ ಕೇಂದ್ರ ತೆರೆಯುತ್ತಿರುವುದು ಈ ಭಾಗದ ಜನರ ಸಹಕಾರದಿಂದ ಗ್ರಾಮ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಇದಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಡಾ.ಮೂರ್ತಿರವರು ಹಲ್ಲೇಗೆರೆ ಗ್ರಾಮದಲ್ಲಿ ಅಂತರಾಷ್ಟ್ರೀಯ ಭೂದೇವಿ ಟ್ರಸ್ಟ್ ವತಿಯಿಂದ ಆಧ್ಯಾತ್ಮಿಕ ಕೇಂದ್ರ ನಿರ್ಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಯೋಗದಿಂದ ಈ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೂ 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿದ್ದಾರೆ. ರಸ್ತೆ ಅಗಲೀಕರಣಕ್ಕೆ ರೈತರು ಸಹಕಾರ ಅತ್ಯಗತ್ಯವಾಗಿದ್ದು, ಇದರಿಂದ ಅಂತರಾಷ್ಟ್ರೀಯ ಧ್ಯಾನ ಕೇಂದ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ಆಧ್ಯಾತ್ಮಿಕ ಕೇಂದ್ರ ಟ್ರಸ್ಟ್‌ನ ಡಾ.ಮೂರ್ತಿ ಮಾತನಾಡಿ, ಆಧ್ಯಾತ್ಮಿಕ ಕೇಂದ್ರ ಮಾಡಲು ನಮ್ಮ ಟ್ರಸ್ಟ್ ಮುಂದಾಗಿದ್ದು ಪ್ರಪಂಚದಲ್ಲಿ ಯಾವುದು ಇಂತಹ ಕೇಂದ್ರ ಇರುವುದಿಲ್ಲ ಮೊದಲ ಬಾರಿಗೆ ಹಲ್ಲೇಗೆರೆಯಲ್ಲಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣ ಮಾಡುತ್ತಿದ್ದು ಇದನ್ನು ನೋಡಲು ಪ್ರಪಂಚದ ಎಲ್ಲಾ ಕಡೆಯಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿನ ನಿಸರ್ಗ ಎಲ್ಲರನ್ನು ಕೈಬೀಸಿ ಕರೆಯುವ ಹಾಗೆ ಮೂಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ತ್ಯಾಗರಾಜ್, ಕಂಬದಳ್ಳಿ ಪುಟ್ಟಸ್ವಾಮಿ, ಚಿಕ್ಕಬಳ್ಳಿ ಕೃಷ್ಣ ,ದ್ಯಾಪಸಂದ್ರ ಉಮೇಶ್ ಸೇರಿದಂತೆ ಇತರರು ಇದ್ದರು.

Continue Reading

Mandya

ಅ.14 ರಂದು ನೇರಲಕೆರೆ ಗ್ರಾಮದಲ್ಲಿ ಉಚಿತ ಸಾಮೂಹಿಕ ಸರಳ ವಿವಾಹ

Published

on

ಮಂಡ್ಯ : ಬುದ್ಧ ಭಾರತ ಫೌಂಡೇಶನ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಸಕ್ಷಮ ಪ್ರಾಧಿಕಾರಗಳ ಸಹಯೋಗದಲ್ಲಿ ಅ.14ರಂದು ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಉಚಿತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಗಂಗಾರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 14ರಂದು ಅಂಬೇಡ್ಕರ್ ಅವರು ಬೌದ್ಧ ಧಮ್ಮ ದೀಕ್ಷೆ ಪಡೆದ ದಿನವಾಗಿದೆ. ಹಾಗಾಗಿ ಈ ದಿನದ ನೆನಪಿಗಾಗಿ ಬುದ್ಧ ಧರ್ಮವನ್ನು ಪ್ರತಿ ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಜೊತೆಗೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ವಧು-ವರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಧು ವರರು ವಯಸ್ಕರಾಗಿದ್ದು ಮತ್ತು ಯಾವುದೇ ಜಾತಿ ಸಮುದಾಯದ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದರು. ವಿವಾಹವಾಗಲು ಇಚ್ಚಿಸುವವರು ಆಧಾರ್ ಕಾರ್ಡ್, ವಯಸ್ಸಿನ ದೃಢೀಕರಣ ಪತ್ರ , ಇತ್ತೀಚಿನ ಮೂರು ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಅಕ್ಟೋಬರ್ ಹತ್ತರ ಒಳಗೆ ಬುದ್ಧ ಭಾರತ ಫೌಂಡೇಶನ್ ಸುಂದರಪ್ಪ ಬಿಲ್ಡಿಂಗ್ ಸುಭಾಷ್ ನಗರ, 8ನೇ ಕ್ರಾಸ್, ಮಂಡ್ಯ 571 401 ಇಲ್ಲಿಗೆ ತಲುಪಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಫೌಂಡೇಶನ್ ಅಧ್ಯಕ್ಷ ಜೆ ರಾಮಯ್ಯ, ಅಹಿಂದ ಸಂಘಟನೆಯ ಲೋಕೇಶ್, ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ , ಜವರಪ್ಪ, ಶುಭಾಷ್, ಗುರುವಣ್ಣ , ರಾಜಣ್ಣ ಉಪಸ್ಥಿತರಿದ್ದರು.

Continue Reading

Mandya

ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್ ವಿಲೀನಗೊಳಿಸುವ ಹುನ್ನಾರ

Published

on

ಮಂಡ್ಯ : ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್ ಅನ್ನು ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬ್ಯಾಂಕಿನ ನಿರ್ದೇಶಕಿ ಸಿಜೆ ಸುಜಾತ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಪಾವನಿ ಮಹಿಳಾ ಬ್ಯಾಂಕ್ ಸ್ಥಾಪಿಸಿ 28 ವರ್ಷಗಳು ಕಳೆದಿದೆ. ಈಗಿನ ಆಡಳಿತ ಮಂಡಳಿ ಬ್ಯಾಂಕ್ ನಷ್ಟದಲ್ಲಿದೆ ಅನ್ನುತ್ತಿದೆ. 16 ಮಂದಿ ಸುಸ್ಥಿದಾರರು ಇದ್ದಾರೆ ಎನ್ನುತ್ತಿದೆ. ಈ ಎಲ್ಲರಿಗೂ ತಲಾ 10 ಲಕ್ಷ ರೂಪಾಯಿ ಸಾಲ ನೀಡಿದ್ದು ಆದರೆ ಈ ಸಾಲವನ್ನು ವಸೂಲಿ ಮಾಡದೆ ಬ್ಯಾಂಕ್ ನಷ್ಟದ ಹಿನ್ನೆಲೆಯಲ್ಲಿ ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆಪಾದಿಸಿದರು.

ಸುಸ್ತಿದಾರರಿಂದ ಸಾಲ ವಸೂಲಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈಗಿನ ಆಡಳಿತ ಮಂಡಳಿ ಸಾಲ ವಸೂಲಾತಿಗೆ ಮುಂದಾಗಿಲ್ಲ ಎಂದು ತಿಳಿಸಿದರು.

ಇತ್ತೀಚಿಗೆ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನಲ್ಲಿ ಮೋಸ ನಡೆಯುತ್ತಿರುವ ಬಗ್ಗೆ ಸದಸ್ಯರ ಗಮನಕ್ಕೆ ತಂದಿದ್ದೇವೆ. ಬ್ಯಾಂಕ್ ವಿಲೀನಗೊಳಿಸುವ ವಿಚಾರವನ್ನು ತಿಳಿಸಿದ್ದೇವೆ. ಇದಕ್ಕೆ ಸದಸ್ಯರು ಒಪ್ಪಿಗೆ ನೀಡಿಲ್ಲ. ನಮ್ಮಲ್ಲಿಯೇ ಬ್ಯಾಂಕ್ ಉಳಿಯಲಿ ಎನ್ನುವ ಆಶಯ ಅವರಲ್ಲಿದೆ ಎಂದರು.

ಬ್ಯಾಂಕಿನ ನಿರ್ದೇಶಕರಾದ ವಿಜಯಲಕ್ಷ್ಮಿ ರಘುನಂದನ್, ಪ್ರಮೀಳಾ ಧರಣೇಂದ್ರಯ್ಯ, ಗೀತಾ ರಾಜಶೇಖರ್, ಸಿ ಸೌಭಾಗ್ಯ, ಸುನಂದ ,ಯಶೋಧ ರಮೇಶ್, ವಿ.ಆರ್.ಲೀಲಾ, ವೇದವಲ್ಲಿ, ಶಾರದಾ ರಮೇಶ ರಾಜು, ಬಿ.ಎಸ್.ಸೌಮ್ಯ, ಸುನಿಲ್ ಕುಮಾರ್ ಸೇರಿದಂತೆ ಹಲವರು ಸಾಲ ಪಡೆದಿದ್ದು ಆದರೆ ಇವರಿಂದ ಸಾಲ ವಸೂಲಾತಿ ಮಾಡಿಲ್ಲ ಎಂದು ದೂರಿದರು.

ಮತ್ತೊಬ್ಬ ನಿರ್ದೇಶಕಿ ಜಯಶೀಲಮ್ಮ ಅವರು ಮಾತನಾಡಿ, ಬ್ಯಾಂಕಿನಿಂದ 247 ಮಂದಿ ಸಾಲ ಪಡೆದಿದ್ದಾರೆ .ಆದರೆ ಈಗಿನ ಆಡಳಿತ ಮಂಡಳಿ ಪ್ರತಿಯೊಬ್ಬರಿಗೂ ತಲಾ 20 ರಿಂದ 50,000 ರೂಪಾಯಿ ಸಾಲ ನೀಡಿದ್ದು, ಸಾಲ ವಸುಲಾತಿ ಮಾಡದೆ ಸಾಲ ಮನ್ನಾ ಆಗಿದೆ ಎಂದು ಎನ್ ಓ ಸಿ ನೀಡಿದ್ದಾರೆ ಎಂದು ತಿಳಿಸಿದರು.

2008- 2009 ರಿಂದ ಬ್ಯಾಂಕ್ ನಷ್ಟ ಅನುಭವಿಸುತ್ತಾ ಬರುತ್ತಿದೆ. ಈ ನಡುವೆ ಅಂದಿನ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು .ಆ ಸಂದರ್ಭದಲ್ಲಿ ಅವರು ತಲೆ ಮರೆಸಿಕೊಂಡು ಓಡಾಡುತ್ತಿದ್ದರು ಎಂದರು.
ಸಾರ್ವಜನಿಕರ ಮತ್ತು ಷೇರುದಾರರ ಒತ್ತಾಯದ ಮೇರೆಗೆ ಇಲಾಖೆಯಿಂದ ಕಲಂ 64ರ ಅಡಿ ಕೂಲಂಕುಶ ವಿಚಾರಣೆ ನಡೆದು ದುರುಪಯೋಗದ ಹಣವನ್ನು ಅಂದಿನ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕರು ಪಾವತಿಸಬೇಕೆಂದು ಆದೇಶವಾಗಿದೆ. ನಂತರ ಕಲಂ 68ರ ಅಡಿ ವಸೂಲಾತಿಗೂ ಆದೇಶವಾಗಿದೆ .ಆದರೆ ಈ ಪ್ರಕ್ರಿಯೆಗಳು ನಡೆದಿಲ್ಲ .ಆದ್ದರಿಂದ ತಪ್ಪಿತಸ್ಥರ ಕ್ರಮ ತೆಗೆದುಕೊಂಡು ಸಾಲ ವಸೂಲಾತಿ ಮಾಡಬೇಕು. ಯಾವುದೇ ಕಾರಣಕ್ಕೂ ಲೋಕ ಪಾವನಿ ಮಹಿಳಾ ಸಹಕಾರ ಬ್ಯಾಂಕನ್ನು ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ವಿಲೀನ ಮಾಡಬಾರದು ಎಂದು ಒತ್ತಾಯಿಸಿದರು .

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಸುನಂದ ಜಯರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೌಭಾಗ್ಯ ಮಹಾದೇವ, ಸುಜಾತ ಸಿದ್ದಯ್ಯ, ಎ.ಜೆ.ವತ್ಸಲ ಉಪಸ್ಥಿತರಿದ್ದರು.

Continue Reading

Trending

error: Content is protected !!