Chikmagalur
ಜೆಸಿಐ ಗೋಡಿಬೀಡು ಹೊಯ್ಸಳ ಪದಪ್ರಧಾನ ಸಮಾರಂಭ*

ಮೂಡಿಗೆರೆ : ಜೆಸಿಐ ಗೋಣಿಬಿಡು ಹೊಯ್ಸಳ ಪದಪ್ರಧಾನ ಸಮಾರಂಭವು ದಿನಾಂಕ 18.2.2024 ರಂದು ಜನ್ನಾಪುರ ಗವಿಕಲ್ ಕ್ಲಬ್ ನಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾದ ಜೆಸಿ ಆದರ್ಶ ಜಿಜಿ ಪ್ರಮಾಣವಚನ ಸ್ವೀಕರಿಸಿ ಮಾತನಾಡುತ್ತಾ ಈ ಜೆಸಿ ಸಂಸ್ಥೆಯಲ್ಲಿ 12 ವರ್ಷಗಳಿಂದ ನಿರಂತರ ಒಳ್ಳೆ ಕೆಲಸಗಳನ್ನು ಮಾಡುತ್ತಾ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿರುತ್ತಾರೆ ನನಗೂ ಕೂಡ ಈ ಸಂಸ್ಥೆಯ ಅಧ್ಯಕ್ಷನನ್ನಾಗಿ ಮಾಡಿ ಒಂದು ಜವಾಬ್ದಾರಿಯನ್ನು ಕೊಟ್ಟಿರುತ್ತಾರೆ ಈ ಜವಾಬ್ದಾರಿಯನ್ನು ಜೆಸಿ ವಾಣಿಯಲ್ಲಿ ಹೇಳಿದಾಗೆ ಕಾನೂನಾತ್ಮಕವಾಗಿ ಮತ್ತು ಕಾನೂನು ಅಡಿಯಲ್ಲಿ ವಿಧಿ ಬದ್ಧವಾಗಿ ಮುಂದೆ ಬರುವಂತಹ ಎಲ್ಲ ಸಾಮಾಜಿಕ ಎಲ್ಲಾ ಸಾಮಾಜಿಕ ಸೇವಾಕಾರ್ಯಗಳನ್ನು ನನ್ನ ಶಕ್ತಿ ಮೀರಿ ಕೆಲಸ ಮಾಡಿ ಸಂಸ್ಥೆಗೆ ಒಂದು ಒಳ್ಳೆಯ ಹೆಸರು ತರುತ್ತೇನೆ ಈ ಜೆಸಿ ಸಂಸ್ಥೆಯಲ್ಲಿ ಲಾಭದಾಯಕ ಅಂತ ನಾವು ಏನು ನಿರೀಕ್ಷೆ ಮಾಡುವಂತಿಲ್ಲ ನಾವು ಸಮಾಜಕ್ಕೆ ಯಾವ ರೀತಿಯಲ್ಲಿ ಮಾದರಿಯಾಗಿ ಬದುಕಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಜವಾಬ್ದಾರಿಯನ್ನು ಕೊಟ್ಟಂತಹ ಜೆಸಿಐನ ಎಲ್ಲಾ ಸದಸ್ಯರಿಗೂ ನಾನು ಆಭಾರಿಯಾಗಿರುತ್ತೇನೆಂದರು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ರವಿನ್ಯೂ ಡೆಪ್ಯೂಟಿ ಕಮಿಷನರ್ ಎಂ ಎಂ ಗಿರೀಶ್ ನಂದನ್ ರವರು ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ ನಾನು ಕೂಡ ಒಂದು ಸಾಮಾನ್ಯ ಹಳ್ಳಿಯಿಂದ ಬಂದವನು ನಮ್ಮ ಹಳ್ಳಿಗಳಲ್ಲಿ ನಮ್ಮ ಮನೆಯಾಯಿತು ನಮ್ಮ ಕೃಷಿ ಚಟುವಟಿಕೆಗಳಲ್ಲಿ ಮಾತ್ರ ನಮ್ಮನ್ನು ನಾವು ತೊಡಗಿಸಿಕೊಂಡಿರುತ್ತೇವೆ ಅದೆಲ್ಲವನ್ನು ಮೀರಿ ಇಂತ ಜೆಸಿಐ ನಂತ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೊಸ ಹೊಸ ಜನರನ್ನು ಪರಿಚಯಿಸಿಕೊಂಡು ನಮಗೆ ನಾವೇ ವೇದಿಕೆಯನ್ನು ಸೃಷ್ಟಿ ಮಾಡಿಕೊಳ್ಳುವ ಅವಕಾಶ ಈ ಜೆಸಿಐ ಸಂಸ್ಥೆಯಲ್ಲಿ ಇದೆ.
ಈ ಸಾಧನೆ ಅನ್ನೋದನ್ನ ಯಾವಾಗ ಬೇಕಾದರೂ ಮಾಡಬಹುದು ಅದಕ್ಕೆ ವಯಸ್ಸಿನ ಮಿತಿ ಇಲ್ಲ ನಮಗೆ ವಿಲ್ಪವರ್ ಇರಬೇಕಷ್ಟೇ. ಇಲ್ಲಿ ಸಾಕಷ್ಟು ಪೋಷಕರು ಬಂದಿದ್ದೀರಿ ನೀವು ನಿಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹಾಕಬೇಡಿ ಯಾವ ವಿಷಯದಲ್ಲಿ ಅವರಿಗೆ ಆಸಕ್ತಿ ಇರುತ್ತದೊ ಆ ವಿಷಯಕ್ಕೆ ನೀವು ನಿಮ್ಮ ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡಿ ಎಂದರು ಅಷ್ಟೇ ಅಲ್ಲ ಈ ಸಂಸ್ಥೆಯಲ್ಲಿ ತಮ್ಮ ತಮ್ಮ ಫ್ಯಾಮಿಲಿ ಯವರು ಕೂಡ ಬಂದು ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಇದು ತುಂಬಾ ಸಂತೋಷದ ವಿಷಯವೆಂದರು. ಮಾತಿನ ಕೊನೆಯಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಸಂತೋಷವಾಯಿತು ಅದರಲ್ಲೂ ಮುಖ್ಯವಾಗಿ ನನಗೆ ಅಹ್ವಾನ ನೀಡಿದ ಕಾರ್ಯದರ್ಶಿಯರಾದ ಜೆಸಿ ಜಗತ್ ಬಿ ಎಂ ರವರಿಗೂ ಕೂಡ ಅಭಿನಂದಿಸಿದರು.
ವಿದ್ಯಾ ರಾಜ್ ವಲಯ ಉಪಾಧ್ಯಕ್ಷರು ಮಾತನಾಡಿ 2013ರಲ್ಲಿ ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಒಂದು ಹಸಿರಿನ ಮಧ್ಯದಲ್ಲಿ ಸ್ಥಾಪಕವಾಯಿತು ಈ 11 ವರ್ಷ ಕಾಲದಲ್ಲಿ ಹಲವಾರು ಅದ್ಭುತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ, ಇಷ್ಟೊಂದು ಕಾರ್ಯಕ್ರಮವನ್ನು ಮಾಡಲು ಅದು ಒಬ್ಬರಿಂದ ಸಾಧ್ಯವಿಲ್ಲ ಇಡಿ ತಂಡದಿಂದ ಮಾತ್ರ ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಸಿ ಎಸ್, ಜೆಎಂಎಫ್ ಆಶಾ ಜೈನ್ ವಲಯ ಅಧ್ಯಕ್ಷರು, ಹಚ್ ಜಿ ಎಫ್ ಡಾ ಮೋಹನ್ ರಾಜಣ್ಣ, ಕಾರ್ಯದರ್ಶಿ ಜೆ ಸಿ ಜಗತ್ ಬಿಎಂ, ಜೆ ಸಿ ರಂಜಿತ್, ಜೆಸಿರೇಟ್ ರಜನಿ ಆದರ್ಶ, ಜೆಸಿ ಸುಂದರೇಶ್ ಜೆಸಿ ಯೋಗೇಶ್ ಕುಮಾರ್ , ಜೆಸಿ ಬಿ ಕೆ ಚಂದ್ರಶೇಖರ್, ಜೆಸಿ ಪರಮೇಶ್, ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರುಗಳು ಭಾಗವಹಿಸಿದ್ದರು.
ವರದಿ : ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ.
Chikmagalur
ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿ ವಿವಿಧ ಗ್ರಾಮಸ್ಥರಿಂದ ಪ್ರತಿಭಟನೆ

ಮೂಡಿಗೆರೆ: ಕಾಡಾನೆಗಳಿಂದ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಮಾಕೋನಹಳ್ಳಿ ಹಾಗೂ ನಂದೀಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ತಾಲೂಕಿನ ಮಾಕೋನಹಳ್ಳಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಇಲ್ಲಾ ಉಪಾಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಮಾತನಾಡಿ, ಈ ಹಿಂದೆ ಕಾಡಾನೆಗಳು ಬಂದು ಹೋಗುತ್ತಿತ್ತು. ಆದರೆ ಈಗ ಇಲ್ಲಿಯೇ ನೆಲೆಸಿಬಿಟ್ಟಿದೆ. ತೋಟದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶಪಡಿಸುತ್ತಿವೆ. ನಮಗೆ ಬೆಳೆ ಪರಿಹಾರಕ್ಕಿಂತ ಜೀವ ಉಳಿಸಿಕೊಂಡರೆ ಸಾಕೆಂಬ ಸ್ಥಿತಿಗೆ ಬಂದಿದ್ದೇವೆ. ಯಾವ ಸಮಯದಲ್ಲಾದರು ಪ್ರಾಣ ಹಾನಿಯಾಗುವ ಸಂಭವವಿದೆ. ಆದರೂ ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಉಪಸಭಾಪತಿಗಳು ತಲೆಕೆಡಿಸಿಕೊಂಡಿಲ್ಲ. ಇನ್ನು ಅರಣ್ಯ ಸಚಿವರು ಕಳೆದೇ ಹೋಗಿದ್ದಾರೆ. ನಮ್ಮ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಕಾಡು ಪ್ರಾಣಿಗಳಿಂದ ರಕ್ಷಣೆ ಕೊಡದ ಅರಣ್ಯ ಇಲಾಖೆ ನಮಗೆ ಅಗತ್ಯವಿಲ್ಲ. ಇನ್ನು ೨ ದಿನದಲ್ಲಿ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಇಲ್ಲವಾದರೆ ಅರಣ್ಯ ಇಲಾಖೆಗೆ ಗೆರಾವ್ ಹಾಕಲಾಗುವುದು. ನಂತರ ಶಾಸಕರ ಮನೆ ಮುಂದೆ ಅನಿರ್ಧಿಷ್ಟಾವದಿ ದರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಎಸ್.ಪಿ.ರಾಜು ಮಾತನಾಡಿ, ಮಾಕೋನಹಳ್ಳಿ ಹಾಗೂ ನಂದೀಪುರ ಗ್ರಾ.ಪಂ. ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಭುವನೇಶ್ವರಿ ಮತ್ತು ಕೆಪಿ ಕಾಲರ್ ತಂಡದ ಸುಮಾರು ೪೨ಕ್ಕೂ ಅಧಿಕ ಕಾಡಾನೆಗಳು ಕಳೆದ ೧೫ ದಿನದಿಂದ ಇಲ್ಲಿಯೇ ಬೀಡು ಬಿಟ್ಟಿವೆ. ಅವುಗಳು ಕಾಫಿ ತೋಟ ಹಾಳು ಮಾಡುವ ಜತೆಗೆ ಮನೆಗಳ ಸಮೀಪ ಬರುತ್ತಿವೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗದ ಸ್ಥಿತಿ ಉಂಟಾಗಿದೆ. ತೋಟದಲ್ಲಾಗಿರುವ ಹಾನಿ ವೀಕ್ಷಿಸಲು ರೈತರು ತೋಟಕ್ಕೆ ಹೋಗಲು ಭಯಪಡುವಂತಾಗಿದೆ. ಅಲ್ಲದೇ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಕುಟುಂಬ ನಿರ್ವಹಣೆಗೆ ಕಷ್ಟಪಡಬೇಕಾಗಿದೆ. ರಾತ್ರಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿಲ್ಲ. ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉತ್ತರಿಸಬೇಕೆಂದು ಒತ್ತಾಯಿಸಿದರು.
ನಂತರ ಎಸಿಎಫ್ ಮೋಹನ್ ಹಾಗೂ ಆರ್‌ಎಫ್‌ಒ ಕಾವ್ಯ ಸ್ಥಳಕ್ಕೆ ಆಗಮಿಸಿ, ಈಗಾಗಲೇ ೧೫ ಕಾಡಾನೆಗಳು ಕಾಡಿಗೆ ವಾಪಾಸು ತೆರಳಿವೆ. ಭುವನೇಶ್ವರಿ ಹಾಗೂ ಕೆ.ಪಿ.ಕಾಲರ್ ತಂಡದ ಸುಮಾರು ೨೦ ಕಾಡಾನೆಗಳು ಕೆಲ್ಲೂರು ಮತ್ತು ಬಾರದಹಳ್ಳಿ ಗ್ರಾಮದಲ್ಲಿವೆ. ಅವುಗಳನ್ನು ಏಕ ರೀತಿಯಲ್ಲಿ ಓಡಿಸಿದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಅವುಗಳ ಸ್ವಾಭಾವಿಕ ಸಂಚಾರಕ್ಕೆ ಅನುವು ಮಾಡಿ, ಹತ್ತಿರದ ಕಾಡಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಮಾಕೋನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಂಜುಳ, ಸದಸ್ಯ ಪುಟ್ಟರಾಜು, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಬ್ರಿಜೇಶ್, ಗ್ರಾಮಸ್ಥರಾದ ಲಕ್ಷ್ಮಣ್‌ಗೌಡ ಗೌತಳ್ಳಿ, ವೀರೇಶ್ ಮಾಕೋನಹಳ್ಳಿ, ವಿಕ್ರಮ್, ಪ್ರಹ್ಲಾಧ್, ಅನಿಲ್ ಬಾರದಹಳ್ಳಿ, ಬಿ.ಎ.ಇಂದ್ರೇಶ್, ಸತ್ಯ ತುದಿಯಾಲ, ಶಶಿಕಿರಣ್ ಮತ್ತಿತರರಿದ್ದರು.
Chikmagalur
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಸರ್ಕಾರಿ ಬಸ್ ಡ್ರೈವರ್ ಆತ್ಮ*ಹತ್ಯೆಗೆ ಶರಣು

ಚಿಕ್ಕಮಗಳೂರು: ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಬಸ್ ಚಾಲಕನೋರ್ವ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿರುವ ಘಟನೆ ಕಡೂರು ಡಿಪೋದಲ್ಲಿ ನಡೆದಿದೆ.
ಚಂದ್ರು, ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕೆ.ಎಸ್.ಆರ್.ಟಿ.ಸಿ. ಚಾಲಕ. ರಜೆ ವಿಚಾರವಾಗಿ ಮೇಲಾಧಿಕಾರಿ ಪುಟ್ಟಸ್ವಾಮಿ ನೀಡುತ್ತಿರುವ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತು ಕಡೂರು ಡಿಪೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಚಂದ್ರು ನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಲಕ ಬರೆದಿಟ್ಟ ಡೆತ್ ನೋಟಲ್ಲಿ ‘ಹುಷಾರಿಲ್ಲದೆ ಕೆಲಸಕ್ಕೆ ಬಾರದಿದ್ದಕ್ಕೆ ಹಾಜರಾತಿಯಲ್ಲಿ ಗೈರು ಹಾಕಿದ್ದಾರೆ, ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದೆ, ಆದರೂ ಗೈರು ಹಾಕಿದ್ದಾರೆ, ಹಣ ಕೊಟ್ಟರೆ ಎಷ್ಟು ದಿನ ಬೇಕಾದ್ರು ರಜೆ ನೀಡುತ್ತಾರೆ. ಪುಟ್ಟಸ್ವಾಮಿಯಿಂದ ನೌಕರರ ಮೇಲಾಗುತ್ತಿರು ದೌರ್ಜನ್ಯ ಸರಿಪಡಿಸುವಂತೆ ಮನವಿ ಮಾಡಿದ್ದಾನೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ
Chikmagalur
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.

ಚಿಕ್ಕಮಗಳೂರು : ಮೂಡಿಗೆರೆ ಪಟ್ಟಣದ ಬಾಪು ನಗರದಲ್ಲಿ ಅಪ್ರಾಪ್ತ ಬಾಲಕನೋರ್ವ ಸ್ಕೂಟಿ ಚಾಲನೆ ಮಾಡುತ್ತಿದ್ದಾಗ ಮೂಡಿಗೆರೆ ಪೊಲೀಸರು ದ್ವಿಚಕ್ರ KA18 EC2707 ಸಂಖ್ಯೆಯ ಸ್ಕೂಟಿಯನ್ನು ವಶಕ್ಕೆ ಪಡೆದು ದಂಡ ವಿಧಿಸಿದರು.
ಬಾಲಕನ ಪೋಷಕರಾದ ಮೊಹಮ್ಮದ್ ಸಿರಾಜ್ ಮೇಲೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿ ಮೂಡಿಗೆರೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ತೀರ್ಪು ನೀಡಿತು.
-
Chamarajanagar23 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan24 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu23 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ
-
Hassan6 hours ago
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು
-
Kodagu6 hours ago
ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬೆಂಗಳೂರು ಕೊಡವ ಸಮಾಜ ಸಿಎಂಗೆ ಮನವಿ