Connect with us

Mysore

ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಜಿಪಂ ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ರಾಜೀನಾಮೆ

Published

on

ಮೈಸೂರು ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮತ್ತು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಜಿ.ಪಂ.ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತ್ಯಾತೀತ ಜನತಾದಳ ಪಕ್ಷದಲ್ಲಿ ಸುಮಾರು 18 ವರ್ಷಗಳ ಕಾಲ ನನ್ನ ಕೈಲಾದ ಸೇವೆಯನ್ನು ಮಾಡಿಕೊಂಡು ಬಂದಿದ್ದು, ಪಕ್ಷವು ಸಹ ನನ್ನನ್ನು ಗುರುತಿಸಿ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಲು ಟಿಕೇಟ್ ನೀಡಿ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಲು ಅವಕಾಶ ಮಾಡಿಕೊಟ್ಟಿದ್ದು, ಸಂತೋಷ ತಂದಿದೆ. ಆದರೇ, ಈಗ ರಾಜಕೀಯದಿಂದ ದೂರ ಉಳಿಯಲು ಇಚ್ಚಿಸಿದ್ದು, ಯಾರು ದೇಶದ ಅಭಿವೃದ್ಧಿಗೋಸ್ಕರ ಹಾಗೂ ಜನರ ಏಳಿಗೆಗಾಗಿ ಸೇವೆ ಸಲ್ಲಿಸಲು ಪಣತೊಡುವರು, ಅಂತಹವರಿಗೆ ಯಾವುದೇ ಸ್ವಾರ್ತವಿಲ್ಲದೇ ನಿಸ್ವಾರ್ಥದಿಂದ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ವ್ಯಕ್ತಿಗತವಾಗಿ ಸೇವೆ ಸಲ್ಲಿಸಲು ತೀರ್ಮಾನಿಸಿರುವುದರಿಂದ, ನನ್ನ ಕೊನೆಯ ಅಂತ್ಯದವರೆಗೂ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಪ್ರಮಾಣೀಸುತ್ತಾ ಈ ನನ್ನ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.


ಇದು ನನ್ನ ಮಾನಸಿಕ ಒಳ ಒತ್ತಡದಿಂದ ತೆಗೆದುಕೊಂಡಿರುವ ನಿರ್ಧಾರವೇ ಹೊರತು, ಬೇರೆ ಯಾರು ಸಹ ಕಾರಣರಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ 

Continue Reading
Click to comment

Leave a Reply

Your email address will not be published. Required fields are marked *

Mysore

ಜನತೆ ಹಣಕಾಸು ವ್ಯವಹಾರ ವನ್ನು ಸಹಕಾರ ಸಂಸ್ಥೆ ಗಳಲ್ಲಿ ನಡೆಸಿ, ಪ್ರಗತಿಯತ್ತ ಸಾಗುತ್ತದೆ : ಜಿಲ್ಲಾ ಸಂಯೋಜಕ ಸುರೇಶ್

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ಸಾರ್ವಜನಿಕರು  ಹಣಕಾಸು ವ್ಯವಹಾರವನ್ನು ಸಹಕಾರ ಸಂಸ್ಥೆ ಗಳಲ್ಲಿ ನಡೆಸಿದರೆ ಪ್ರಗತಿಯಾಗುತ್ತದೆ ಎಂದು ಜಿಲ್ಲಾ  ಸಂಯೋಜಕ ಸುರೇಶ್ ತಿಳಿಸಿದರು.

ಪಟ್ಟಣದ    ಸೌಹಾರ್ಧ ಕೋ – ಆಪರೇಟಿವ್ ಸೊಸೈಟಿಯ ವಾರ್ಷಿಕ ಸಭೆಯ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಇವರು ಸಾರ್ವಜನಿಕರು ಖಾಸಗಿ ಸಹಭಾಗೀತ್ವದ ಸಂಸ್ಥೆಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಬದಲು ಸಹಕಾರ ಸಂಸ್ಥೆಗಳಲ್ಲಿ ನಡೆಸಿದರೆ ಸಹಕಾರ ಕ್ಷೇತ್ರದ ಪ್ರಗತಿಗೆ ಕೈ ಜೋಡಿಸಬಹುದು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ  ಹೆಚ್ಚು ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ  ಹಿರಿಯ ಪತ್ರಕರ್ತ ಮೋಹನ್ ಕುಮಾರ್ ಹಾಗು  ಸಂಘದ   ಪದಾಧಿಕಾರಿಗಳು, ನಿರ್ದೇಶಕರುಗಳು, ಸದಸ್ಯರುಗಳು ಇದ್ದರು.

Continue Reading

Mysore

ಸಚಿವ ಡಾ ಮಹದೇವಪ್ಪಗೆ ತವರಿನಲ್ಲಿ ತೀವ್ರ ಮುಖಭಂಗ.

Published

on

ಮೈಸೂರು:
ಬನ್ನೂರು ಪುರಸಭೆ ಜೆಡಿಎಸ್ ಪಾಲು.
ತಿ ನರಸೀಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಬನ್ನೂರು ಪುರಸಭೆ.
ಬನ್ನೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ.
ಅಧ್ಯಕ್ಷರಾಗಿ ಜೆಡಿಎಸ್ ನ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ನಾಗರತ್ನ ಅವಿರೋಧ ಆಯ್ಕೆ.


ಬನ್ನೂರು ಪುರಸಭೆ ಅಧಿಕಾರ ಹಿಡಿಯುವಲ್ಲಿ ಮೈತ್ರಿ ನಾಯಕರು ಯಶಸ್ವಿ
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಮೈತ್ರಿ ಪಕ್ಷದ ಕಾರ್ಯಕರ್ತರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭ ಕೋರಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.
ಈ ವೇಳೆ ಮಾಜಿ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಭಾಗಿ.

Continue Reading

Education

ಹುಲ್ಲಹಳ್ಳಿ ನಿವಾಸಿ ಮೈಸೂರಿನ ಜೆಎಸ್ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಗೀತಾ ಎಸ್.ಅವರಿಗೆ ಪಿ .ಎಚ್ .ಡಿ

Published

on

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಿವಾಸಿ ಮೈಸೂರಿನ ಜೆಎಸ್ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಗೀತಾ ಎಸ್.ಅವರಿಗೆ ಪಿ .ಎಚ್ .ಡಿ .ಪದವಿ ಲಭಿಸಿದೆ. ಮೈಸೂರಿನ ಮಹಾರಾಜ ಕಾಲೇಜಿನ ವಾಣಿಜ್ಯ ವಿಭಾಗದ ಸಹಪ್ರಾಧ್ಯಪಕಿ ಡಾ. ಎ ಸಿ ಪ್ರಮೀಳಾ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಫೆಕ್ಟಿವ್ ನೆಸ್ ಆಫ್ ಟ್ರೈನಿಂಗ್ ಅಂಡ್ ಡೆವಲಪ್ಮೆಂಟ್ ಇನ್ ಎಂಪ್ಲಾಯಿ ಪರ್ಫಾರ್ಮೆನ್ಸ್ ಇನ್ ಸೌತ್ ವೆಸ್ಟರ್ನ್ಸ್ ರೈಲ್ವೆ” ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಿಂದ
ಪಿ ಎಚ್ ಡಿ ಪದವಿ ನೀಡಲಾಗಿದೆ.

Continue Reading

Trending

error: Content is protected !!