Connect with us

Hassan

ಜೆಇಇ ಪರೀಕ್ಷೆಯಲ್ಲಿ ಮಾಸ್ಟರ್ ಕಾಲೇಜು ವಿದ್ಯಾರ್ಥಿ ದರ್ಶನ್ ಜಿಲ್ಲೆಗೆ ಪ್ರಥಮ ಕಾಲೇಜಿನಲ್ಲಿ ಅಭಿನಂದನೆ

Published

on

ಹಾಸನ: ಜೆಇಇ ಪರೀಕ್ಷೆಯಲ್ಲಿ ನಗರದಲ್ಲಿರುವ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿ ದರ್ಶನ್ ಎಲ್. ಅರೆಕಲ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಅಭಿನಂದಿಸಿದರು.

ಡಾ. ಲಕ್ಷ್ಮೀಶ್ ಮತ್ತು ಡಾ. ಹೇಮಾ ಇವರ ಪುತ್ರನಾದ ದರ್ಶನ್ ಎಲ್. ಅರೇಕಲ್ ಎಂಬ ವಿದ್ಯಾರ್ಥಿ ಶೇ.೯೯.೬೯೪ ಅಂಕ ಪಡೆಯುವ ಮೂಲಕ ಇಡೀ ಜಿಲ್ಲೆಗೆ ಮೊದಲಿಗನಾಗಿ ಹೊರ ಹೊಮ್ಮಿದ್ದಾನೆ. ರಸಾಯನಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವ ದರ್ಶನ್, ಭೌತಶಾಸ್ತ್ರದಲ್ಲಿ ೯೯.೯೪೨, ಗಣಿತದಲ್ಲಿ ೯೮.೩೯೩ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಜೆಇಇ ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಟಾಪರ್ ಆಗಿ, ಕಾಲೇಜಿಗೆ ಕಳಶಪ್ರಾಯನಾಗಿರುವ ದರ್ಶನ್ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾರ್ದಿಕ ಅಭಿನಂದನೆ ಸಲ್ಲಿಸಿದೆ. ಮಾಸ್ಟರ್ ಕಾಲೇಜಿನ ಮತ್ತೊಂದು ಹಿರಿಮೆ ಎಂದರೆ ಪರೀಕ್ಷೆಗೆ ಹಾಜರಾಗಿದ್ದ ಬಿ.ಎಸ್. ಜೀವನ್ ಶೇಕಡ ೯೭.೪೮೪, ಡಿ.ಪಿ. ಪುನಿತ್ ಕುಮಾರ್ ೯೭.೪೫೬, ಶ್ರೇಯಾಸ್ ೯೭.೩೮೮, ಕೆ.ಜಿ. ಪಂಚಮಿ ೯೭.೧೬೨, ನಿರೀಕ್ಷಾ ಎಸ್. ಗೌಡ ೯೭.೦೮೯, ಹೆಚ್.ಕೆ. ಸೂರ್ಯ ಸಂಕಲ್ಪ್ ೯೬.೯೮೧, ಬಿ. ಮನವತಿ ೯೬.೯೩೦, ಡಿ. ಸಾನವಿ ೯೬.೮೭೨, ಕೆ.ಎನ್. ಪೂರ್ವಿತಾ ೯೬.೦೮೮, ಡಿ. ಮಾನ್ಯ ೯೫.೬೧೭, ಎ.ವೈ. ಕುಸ್ಮಿತಾ ೯೫.೨೦೯, ಜಿ.ಎಸ್. ಹರ್ಷ, ೯೫.೦೯೦ ಈ ೧೨ ವಿದ್ಯಾರ್ಥಿಗಳು ಶೇ.೯೫ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

೨೫ ಮಂದಿ ವಿದ್ಯಾರ್ಥಿಗಳು ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದು ಕಾಲೇಜಿನ ಗುಣಮಟ್ಟದ ಶಿಕ್ಷಣವನ್ನು ಮತ್ತೊಮ್ಮೆ ಸಾಕ್ಷೀಕರಿಸಿದ್ದಾರೆ. ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದ್ದು, ಪೋಷಕರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಗೆ ಹೆಚ್ಚು ಅಂಕ ಪಡೆದ ದರ್ಶನ್ ಎಲ್. ಅರೇಕಲ್ ಮಾಧ್ಯಮದೊಂದಿಗೆ ಮಾತನಾಡಿ, ನನ್ನ ಓದುವಿಗೆ ತಂದೆ ತಾಯಿ ತಾತನ ಪ್ರೋತ್ಸಹವೇ ಹೆಚ್ಚು ಅಂಕ ಪಡೆಯಲು ಕಾರಣವಾಗಿದೆ. ಬೆಳಿಗ್ಗೆ ೪:೩೦ ಗಂಟೆಗೆ ಎದ್ದು ಓದಲು ರೂಢಿಸಿಕೊಂಡಿದ್ದು, ಓದುವಾಗ ಪಠ್ಯಗಳು ಅರ್ಥವಾಗದಿದ್ದಾಗ ನಮ್ಮ ಕಾಲೇಜಿನ ಉಪನ್ಯಾಸಕರಿಗೆ ಕರೆ ಮಾಡಿ ಬಗೆಹರಿಸಿಕೊಳ್ಳುತಿದ್ದೇನು. ಮುಂದೆ ಕಂಪ್ಯೂಟರ್ ಸೈನ್ಸ್, ನಂತರ ಎಂಬಿಎ ಕೋರ್ಸ್ ಶಿಕ್ಷಣ ಪಡೆಯುವ ಗುರಿ ಹೊಂದಿದ್ದೇನೆ ಎಂದರು.

ದರ್ಶನ್ ಎಲ್. ಅರೇಕಲ್ ತಂದೆ ಡಾ. ಲಕ್ಷ್ಮೀಶ್ ಅವರು ಕೂಡ ಮಗನ ಬಗ್ಗೆ ಸಂತಸ ಹಂಚಿಕೊಳ್ಳುತ್ತಾ, ಹಾಸನದಲ್ಲೆ ಉತ್ತಮ ಶಿಕ್ಷಣ ಸಂಸ್ಥೆ ಇರುವಾಗ ಬೇರೆಡೆಗೆ ಕಳುಹಿಸುವುದು ಮೂರ್ಖತನ. ನಮ್ಮ ಮಗನಿಗೆ ಮಾಸ್ಟರ್ ಕಾಲೇಜಿನಲ್ಲಿ ಉತ್ತಮ ಪಾಠ ಪ್ರವಚನ ಸಿಕ್ಕಿದ ಫಲವೇ ಟಾಪರ್ ಆಗಿ ಬಂದಿರುವುದು ಎಂದು ಪುತ್ರನ ಶಿಕ್ಷಣದ ಬಗ್ಗೆ ಸಂತೋಷ ಹಂಚಿಕೊಂಡರು.

ಇದಾದ ಬಳಿಕ ಮಾಸ್ಟರ್ ಕಾಲೇಜಿನ ಮುಖ್ಯಸ್ಥರಾದ ರಾಯ್ಡ್ ಮತ್ತು ಗೌಡೆಗೌಡ ಮಾತನಾಡಿ, ಜೆಇಇ ಪರೀಕ್ಷೆ ನಂತರ ನೀಟ್, ಸಿಇಟಿ ಪರೀಕ್ಷೆಯಲ್ಲಿ ಟಾಪರ್ ಆಗಿ ಬರುವವರು ಬಹುತೇಕ ರೆಗ್ಯೂಲರಾಗಿ ತರಗತಿಗೆ ಬಂದವರಾಗಿದ್ದಾರೆ. ಓದುವ ಕಡೆ ಹೆಚ್ಚಿನ ಆಸಕ್ತಿ ಇರಬೇಕು. ಆಗೇ ಓದುವ ರೀತಿಗಳ ಬಗ್ಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೆ ವೇಳೆ ಮಾಸ್ಟರ್ ಪಿಯು ಕಾಲೇಜಿನ ರಾಯ್ಡ್, ಗೌಡೆಗೌಡ, ಮಂಜುನಾಥ್, ನಂದಿನಿ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 12ಜನ ನೂತನ ನಿರ್ದೇಶಕರುಗಳು ಆಯ್ಕೆಯಾದರು.

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12ಜನ ನಿರ್ದೇಶಕ ಸದಸ್ಯ ಬಲ ಹೊಂದಿದ್ದು ನೂತನ ನಿರ್ದೇಶಕ 23 ಜನ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಚುನಾವಣೆ ಮೂಲಕ ನೂತನ ನಿರ್ದೇಶಕರನ್ನ ಆಯ್ಕೆ ಮಾಡಲಾಯಿತು.

ಸಾಮಾನ್ಯ ಕ್ಷೇತ್ರದಿಂದ ಅವಿನಾಶ್, ವಿ.ಎಸ್ ಆನಂದ್, ಚಂದ್ರು, ಕುಬೇರಪ್ಪ, ಯೋಗೇಶ್, ಮಹಿಳಾ ಕ್ಷೇತ್ರದಿಂದ ಮಂಜುಳಾ, ಗಿರಿಜಾ, ಹಿಂದುಳಿದ ವರ್ಗ ‘ಎ’ ನಿಂದ ರವಿ ಕುಮಾರ್, ಹಿಂದುಳಿದ ವರ್ಗ ‘ಬಿ‌’ ನಿಂದ ಮೋಹನ್ ಕುಮಾರ್, ಪರಿಶಿಷ್ಟ ಜಾತಿಯಿಂದ ಪುಟ್ಟಸ್ವಾಮಿ ಆಯ್ಕೆಯಾದರೆ ಪರಿಶಿಷ್ಟ ಪಂಗಡದಿಂದ ಶಾಂತಪ್ಪ ನಾಯಕ ಅವಿರೋಧವಾಗಿ ಆಯ್ಕೆಯಾದರು, ಇನ್ನೂ ಸಾಲಗಾರರಲ್ಲದ ಕ್ಷೇತ್ರದಿಂದ ಕಿಶೋರ್ ಕುಮಾರ್ ಆಯ್ಕೆಯಾದರು 2030ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾ‌ರ್ ತಿಳಿಸಿದರು.

ಚುನಾವಣೆ ಮೂಲಕ ನೂತನ ನಿರ್ದೇಶಕರುಗಳ ಆಯ್ಕೆ ಘೋಷಣೆ ಹೊರಬಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಎಸ್ ನಟರಾಜ್, ಪಾಳ್ಯ ಸೊಸೈಟಿ ನಿರ್ದೇಶಕ ಕಟ್ಟೆಗದ್ದೆ ನಾಗರಾಜ್, ಬಿಜೆಪಿ ಮುಖಂಡ ಕೆ.ಕೆ ಪ್ರಸಾದ್, ರುದ್ರೇಶ್ ಕಾಡ್ಲೂರು, ನಂದನ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿವೇಕ್ ವೈದ್ಯನಾಥ್ ಸೇರಿದಂತೆ ಮುಂತಾದವರು ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪೋಟೋ ಕ್ಯಾಪ್ಶನ್: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತನಾದ ನೂತನ ನಿರ್ದೇಶಕರನ್ನ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಆರ್.ಎಸ್ ನಟರಾಜ್ ಕೆ.ಕೆ ಪ್ರಸಾದ್ ಸೇರಿದಂತೆ ಇತರರು ಅಭಿನಂದಿಸಿದರು.

Continue Reading

Hassan

ಅಟಲ್ ವಿರಸತ್ ಕಾರ್ಯಕ್ರಮ: ಒಡನಾಟ ಉಳ್ಳ ಹಿರಿಯರಿಗೆ ಬಿಜೆಪಿಯಿಂದ ಸನ್ಮಾನ

Published

on

ಹಾಸನ: ನಗರದ ಆರ್.ಸಿ.ರಸ್ತೆ, ಶ್ರೀಗಂಧದ ಕೋಠಿ ಆವರಣದಲ್ಲಿರುವ ಖಾಸಗೀ ಹೋಟೆಲೊಂದರಲ್ಲಿ ಗುರುವಾರ ನಡೆದ ಅಟಲ್ ವಿರಸತ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಾಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ವರ್ಷದ ಅಂಗವಾಗಿ ಹಿರಿಯರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಇದೆ ವೇಳೆ ಅಟಾಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಸಹ ಸಂಚಾಲಕ ಪಣೀಶ್ ಮಾತನಾಡಿ, ಅಟಾಲ್ ಜೀ ಅವರು ಎಲ್ಲೆಲ್ಲಿ ಬಂದಿದ್ದರೂ, ಅವರ ಒಡಾಟ, ಹೋರಾಟಗಳು, ಸಂಘಟನೆಗಳು, ಅವರ ವ್ಯಕ್ತಿತ್ವ, ಒಡನಾಟ, ಅವರ ಸಂಪರ್ಕಕ್ಕೆ ಬಂದಂತಹ ವ್ಯಕ್ತಿಗಳು, ಅವರ ನೆನಪಿನ ಸ್ಪೂರ್ತಿಯನ್ನು ಸಂಗ್ರಹ ಮಾಡುವಂತಹ ಪೋಟೊ ಸಂಗ್ರಹಿಸುವ ಜೊತೆಗೆ ಯಾರು ಅಟಾಲ್ ಬಿಹಾರಿ ಜೊತೆ ಒಡನಾಟವಿತ್ತು ಅವರನ್ನು ಗುರುತಿಸಿ ಗೌರವಿಸುವ ಕೆಲಸ ನಾವು ಕಳೆದ ಒಂದು ತಿಂಗಳಿನಿಂದ ಮಾಡಿಕೊಂಡು ಈ ಹಿಂದೆಯೇ ಬಂದಿದ್ದೇವೆ ಎಂದರು.

ಅಟಲ್‌ ಜೀ ಪ್ರೇರಣೆಯನ್ನು ಕಾರ್ಯಕರ್ತರು ಪಡೆದಿದ್ದಾರೆ. ನಾವು ಯಾವ ದಿಕ್ಕಿನಲ್ಲಿ ರಾಜಕಾರಣ ಮಾಡಬೇಕು ಎನ್ನುವ ದಿಕ್ಸೂಜಿ ನಮಗೆ ತೊರಿಸುತ್ತದೆ ಎಂದು ಕಿವಿಮಾತು ಹೇಳಿದರು. ರಾಜಕಾರಣದಲ್ಲಿ ಕೆಲಸ ಮಾಡುವ ನಾವು ಯಾವುದು ಆದರ್ಶ ಎಂಬುದನ್ನು ತಿಳಿದಿರಬೇಕು. ಯಾವ ಮಾರ್ಗದರ್ಶನ ತಿಳಿದಿರಬೇಕು ಬಗ್ಗೆ ಜಾಗೃತಿ ಅಗತ್ಯ ಎಂದು ಸಲಹೆ ನೀಡಿದರು.

ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ವಾಜಪೇಯಿ ಕಾಲದಿಂದಲೂ ಹೋರಾಟ ಮಾಡಿದವರು ನಮ್ಮ ಸಕಲೇಶಪುರದಲ್ಲಿ ಮತ್ತು ಈ ಜಿಲ್ಲೆಯಲ್ಲಿ ಹಲವಾರು ಜನರು ಇದ್ದಾರೆ. ಬಿಜೆಪಿಯಲ್ಲಿ ಹಾಸನಕ್ಕೆ ಉತ್ತಮವಾದ ಸ್ಥಾನಮಾನವಿದೆ. ಹಿಂದಿನ ದಿನಗಳಲ್ಲಿ ಎಮರ್ಜನ್ಸಿ ಕಾಲದಲ್ಲಿ ಜೈಲಿಗೆ ಹೋಗಿದಾಗಿನಿಂದ ಹಿಡಿದು ವಾಜಪೇಯಿ ಜೊತೆ ಪಾರ್ಟಿ ಕಟ್ಟಿರುವ ಹಲವಾರು ಜನರು ನಮ್ಮ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆ ಎಂದರು.

ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು

Published

on

ಹಾಸನ: ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವೃದ್ಧೆ ಓರ್ವಳು ಡಿಸಿ ಕಛೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣಿರು ಹಿಟ್ಟಿದ ಪ್ರಸಂಗ ನಡೆಯಿತು.

ನಂತರ ಮಾನವಿಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.

ಅರಸೀಕೆರೆ ತಾಲೂಕಿನ ಕಣಕಟ್ಟೆಹಳ್ಳಿ ಗ್ರಾಮದ ನಂಜುಂಡಮ್ಮ ಎಂಬುವರೇ ನನಗೆ ರಕ್ಷಣೆ ನೀಡಿ ನನ್ನ ಆಸ್ತಿ ನಮಗೆ ಕೊಡಿಸುವಂತೆ ಮನವಿ ಮಾಡಿದ ವೃದ್ಧೆಯಾಗಿದ್ದಾರೆ. ನಡೆಯಲು ಸಾಧ್ಯವಾಗದೇ ತೆವಲುತ್ತಲೆ ಡಿಸಿ ಕಛೇರಿಗೆ ಬಂದಿದ್ದು, ಈ ವೇಳೆ ತಹಸೀಲ್ದಾರ್ ವಿಚಾರಿಸಿದಾಗ ಆಕೆ ಹೇಳಿದ್ದು ಕೇಳಿ ಅಧಿಕಾರಿಗಳು ಬೇಸರಗೊಂಡರು.

ತಹಸೀಲ್ದಾರ್ ಎದುರು ಮಾತನಾಡಿದ ವೃದ್ಧೆ, ನಮ್ಮ ಗ್ರಾಮದ ರಾಜ, ಪಾಲಾಕ್ಷಮ್ಮ, ದಿವ್ಯ, ಯೋಗೇಶ್, ಜ್ಯೋತಿ, ನಂಜುಂಡೇಗೌಡ, ಬಸವರಾಜಪ್ಪ, ಬಸವರಾಜ ಹೆಂಡತಿ ತಾಯಮ್ಮ, ಬಸವರಾಜ, ತಾಯಮ್ಮನ ಮಕ್ಕಳುಗಳು ಇಬ್ಬರು ಗಂಡು ಮಕ್ಕಳು, ಯೋಗೇಶ್‌ನ ಎರಡು ಹೆಣ್ಣು ಮಕ್ಕಳು, ಶಾರದಮ್ಮ, ಸ್ವಾಮಿ, ಭಾಗ್ಯ, ಶೇಖರ, ಹಾಗೂ ಶೇಖರನ ಹೆಂಡತಿ ಜ್ಯೋತಿ, ಹಾಗೂ ಅವರ ಮಗ, ಇವರುಗಳು ಸೇರಿಕೊಂಡು ನನ್ನನ್ನು ಗ್ರಾಮ ಬಿಡಿಸಿ ನನ್ನ ಆಸ್ತಿ ಲಪಟಾಯಿಸಲು ಹಾಗೂ ದೇವರುಗಳಾದ ಟಿ.ಕೋಡಿಹಳ್ಳಿ ದ್ಯಾವಮ್ಮ, ತಳ್ಳುರಮ್ಮ, ಚೌಡೇಶ್ವರಿ, ಪಂಡಿತರು, ಕಲ್ಲು ಮಕಾಡೆ ಹಾಕಿಕೊಂಡು ನಮ್ಮ ಗ್ರಾಮಕ್ಕೆ ಬರದಂತೆ ಹೋಗದಂತೆ ದೊಣ್ಣೆ, ಹಾಗೂ ಮಚ್ಚು. ಎಲ್ಲ ಹಿಡಿದುಕೊಂಡು ನನಗೆ ಬೆದರಿಕೆ ಹಾಕುತ್ತಿರುತ್ತಾರೆ ಎಂದು ದೂರಿದರು.

ನಾನು ಸುಮಾರು ಬಾರಿ ಅರ್ಜಿಯನ್ನು ಎಲ್ಲಾ ಅಧಿಕಾರಿಗಳಿಗೆ ಕೊಟ್ಟರು ಸಹ ಯಾರು ನ್ಯಾಯ ಕೊಡಿಸುತ್ತಿಲ್ಲ. ಎಸ್.ಪಿ. ಸಹ ಬರುವುದಿಲ್ಲವೆಂದು ನನಗೆ ತುಂಬಾ ತೊಂದರೆ ಕೊಡುತ್ತಿರುತ್ತಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ನನ್ನ ಜಮೀನನ್ನು ನನಗೆ ಬಿಡಿಸಿಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಅರಸೀಕೆರೆ ತಹಸೀಲ್ದಾರರಲ್ಲಿ ಕೈಮುಗಿದು ವೃದ್ಧೆ ಬೇಡಿದರು.

Continue Reading

Trending

error: Content is protected !!