Connect with us

Hassan

ಜೀವನ ವಿಕಾಸಕ್ಕೆ ಧರ್ಮಾಚರಣೆ ಮುಖ್ಯ ಶ್ರೀ ರಂಭಾಪುರಿ ಜಗದ್ಗುರು

Published

on

ಆಲೂರು: ಬಹು ಜನ್ಮದ ಪುಣ್ಯಫಲದಿಂದ ಪುರಾತನ ಜೀವನ ಪ್ರಾಪ್ತವಾಗಿದ್ದು ಅರಿವು ಆದರ್ಶಗಳ ಬದುಕು ಕಟ್ಟಿಕೊಳ್ಳಬೇಕಾಗಿದೆ. ಜೀವನ ಉನ್ನತಿಗೆ ಧರ್ಮಾಚರಣೆ ಮುಖ್ಯ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರೀ ವೀರಾ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ಪಟ್ಟರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಹಿರೇಮಠದಲ್ಲಿರುವ ಬಾಳೆಹೊನ್ನೂರು ರಂಭಾಪುರೀ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ವರ್ಧಂತಿ ಹಾಗೂ ಶ್ರೀ ಕ್ಷೇತ್ರಕ್ಕೆ ಗುರುಬಲ ಪ್ರಾಪ್ತಿಗಾಗಿ ಧರ್ಮ ಸಂವರ್ಧನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕತೆ ಮತ್ತು ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ನಾಶವಾಗಬಾರದು ಎಲ್ಲಾ ಕಾಲಕ್ಕೂ ಧರ್ಮ ಇದ್ದೇ ಇರುತ್ತದೆ ಅದನ್ನು ನಾಶ ಮಾಡುವ ಶಕ್ತಿ ಯಾರಿಗೂ ಇಲ್ಲ ಧರ್ಮಕ್ಕೆ ದಕ್ಕೆ ಉಂಟುಮಾಡಿದವರಿಗೆ ಪಶ್ಚಾತಾಪ ತಪ್ಪಿದ್ದಲ್ಲ ಜಗದ್ಗುರು ರೇಣುಕಾಚಾರ್ಯ ಅಹಿಂಸಾಧ್ಯಾನದಿಂದ ದಶವಾರು ಸೂತ್ರಗಳನ್ನು ಸಕಲ ಒಲಿವಿಗಾಗಿ ಬೋದಿಸಿದ್ದಾರೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಆರೋಗ್ಯ ಪೂರ್ಣ ಜೀವನಕ್ಕೆ ಅರಿವು ಆದರ್ಶಗಳು ಗುಡಿಸಿಕೊಂಡು ಬಾಳಿದರೆ ಬದುಕು ಉಜ್ವಲಗೊಳ್ಳುತ್ತದೆ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ಮೂರು ವರ್ಷದ ಅವಧಿಯಲ್ಲಿ ಶ್ರೀಮಠದ ಅಭಿವೃದ್ದಿ ಮತ್ತು ಭಕ್ತರಿಗೆ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಲಿಂಗ, ಜಾತಿ, ಅಂತಸ್ತು, ಶ್ರೀಮಂತಿಕೆ ಗಮನಿಸದೆ ಸಮಾಜದಲ್ಲಿ ಸಮಾನತೆ ಸಾರಿ, ಸಾಮರಸ್ಯ ಮೂಡಿಸಿ ಎಲ್ಲರೂ ಒಂದೇ ಎಂಬ ಭಾವ ಮೂಡಿಸಿದ್ದು ವೀರಶೈವ ಧರ್ಮ. ವೀರಶೈವ ಧರ್ಮದ ಸಂವರ್ಧನೆಗೆ ಮತ್ತು ಸಮಾಜದಲ್ಲಿ ಸಂಸ್ಕಾರ, ಸಂಸ್ಕಂತಿ ಬೆಳೆಸಲು ಪಂಚಪೀಠಗಳು ಸದಾ ಕಾರ್ಯೋನ್ಮುಖವಾಗಿವೆ.
ಪ್ರತಿಯೊಬ್ಬ ವೀರಶೈವ ಲಿಂಗಾಯತರು ತಪ್ಪದೆ ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ಲಿಂಗ, ರುದ್ರಾಕ್ಷಿ ಧರಿಸಬೇಕು. ಮಕ್ಕಳಿಗೂ ಈ ಸಂಸ್ಕಾರ ನೀಡಿ, ಕಲಿಸಬೇಕು ಎಂದು ತಿಳಿಸಿದರು.

ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ.ಷ.ಬ್ರ ಸದಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ. ಲಿಂಗೈಕ್ಯ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮರಣದ ನಂತರ ಈ ಮಠಕ್ಕೆ ಪೀಠಾಧ್ಯಕ್ಷರನ್ನ ನೇಮಕ ಮಾಡುವಂತೆ ಇಲ್ಲಿನ ಸ್ಥಳೀಯರು ರಂಭಾಪುರೀ ಪೀಠದಲ್ಲಿ ಮನವಿಯಿಟ್ಟರು ನಂತರ ಜಗ್ಗದರು ನನ್ನನ್ನು ಗುರುತಿಸಿ ಸ್ವಾಮಿಜಿಯಾಗಿ ಪಟ್ಟಾಧಿಕಾರ ವಹಿಸಿಕೊಳ್ಳಲು ಸೂಚಿಸಿದರು ನನಗೆ ಇನ್ನೂ ಓದಬೇಕು ಎಂಬ ಆಸೆಯಿತ್ತು ಆದರೆ ಗುರುಗಳ ಕಟ್ಟಾಜ್ಞೆ ಯಿಂದ ನಾನು ಈ ಮಠಕ್ಕೆ ಪೀಠಾಧ್ಯಕ್ಷನಾದೆ ಇಂದಿಗೆ ಮೂರು ವರ್ಷಗಳು ಕಳೆದಿವೆ. ಮಠ ಮಂದಿರಗಳಿಗೆ ಭಕ್ತರೇ ಆಧಾರ ಸ್ತಂಭ. ಎಲ್ಲರ ಸಹಕಾರದಿಂದ ಮಠ ಮಾನ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಭಗವಂತನ ದೃಷ್ಟಿಯಲ್ಲಿ ಎಲ್ಲ ಜೀವರಾಶಿ ಒಂದೇ. ಇಲ್ಲಿ ಭೇದ-ಭಾವ ಇಲ್ಲ. ಸಮಾಜದ ಒಳಿತಿಗಾಗಿ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ಶರಣರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಜತೆ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿದ್ದೇಶ್ ನಾಗೇಂದ್ರ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ‍್ಯಕ್ರಮಗಳನ್ನು ನಡೆಸುವ ಮಠ ಮಾನ್ಯಗಳಿಗೆ ಸಾರ್ವಜನಿಕರ ಸೇವೆ ಅಗತ್ಯ ಇತ್ತೀಚೆಗೆ ಜನರಲ್ಲಿ ಸಂಸ್ಕಾರ ಕಡಿಮೆಯಾಗಿ ಅಜ್ಞಾನಿಗಳಾಗುತ್ತಿದ್ದಾರೆ. ಜ್ಞಾನಾರ್ಜನೆಗಾಗಿ ಆಶ್ರಮದಲ್ಲಿ ನಡೆಸುವ ಸಮೃದ್ಧ ಜೀವನ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಕೋರಿದರು.

ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ಮಠಮಾನ್ಯಗಳಿರುವ ಈ ಪುಣ್ಯ ಭೂಮಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದ ಅವರು. ಪಕ್ಷ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿದೆ. ಜಿಲ್ಲಾ ನಾಯಕರೂ ಸಹ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವೆ.

ಇದೇ ಸಂದರ್ಭದಲ್ಲಿ ಧರ್ಮ ಸಂವರ್ಧಕ ಎಂಬ ಪ್ರಶಸ್ತಿಯನ್ನು ಅರಕಲಗೂಡು ದೊಡ್ಡಬೆಮ್ಮತ್ತಿ ಗ್ರಾಮದ ಎಮ್. ಎಮ್ ಸುರೇಶ್ ರವರಿಗೆ, ” ಧರ್ಮ ಹಿತಚಿಂತಕ” ಪ್ರಶಸ್ತಿಯನ್ನು ಆಲೂರು ತಾಲೂಕು ಸಿದ್ದಾಪುರ ಗ್ರಾಮದ
ಎಸ್. ಎಸ್. ಶಿವಮೂರ್ತಿ ರವರಿಗೆ ಮತ್ತು
“ದಾಸೋಹ ಸೇವಾ ಭೂಷಣ” ಪ್ರಶಸ್ತಿಯನ್ನು ಹಾಸನ ಹೆಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜಗದೀಶ ಕಬ್ಬಿನಹಳ್ಳಿ ಪ್ರದಾನ ಮಾಡಲಾಗುವುದು.

ಶ್ರೀ ಮಠದ ಆವರಣದಲ್ಲಿ ಕಳೆದ ಐದು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಸದ್ಭಕ್ತರಿಗೂ ತಾಲೂಕಿನ ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ಅಧ್ಯಕ್ಷರಾಗಿರುವ ಪವಿತ್ರ ಜಗದೀಶ್ ಜಗದೀಶ್ ಕಬ್ಬಿನಹಳ್ಳಿ ಮತ್ತು ಕುಟುಂಬ ವರ್ಗದವರು ದಾಸೋಹ ವ್ಯವಸ್ಥೆ ಮಾಡಿದ್ದರು

ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ತೆಂಕಲಗೂಡು ಬೃಹನ್ಮಠದ ಪೀಠಾಧ್ಯಕ್ಷರಾದ ಶ್ರೀ ಷ.ಬ್ರ ಚನ್ನಸಿದ್ದೇಶ್ವರ ಮಹಾಸ್ವಾಮಿಗಳು.ಸಂಕಲಪುರ ಮಠದ ಪೀಠಾಧ್ಯಕ್ಷರಾದ ಧರ್ಮರಾಜೇಂದ್ರ ಸ್ವಾಮಿಗಳು, ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಎಸ್ ಮಂಜೇಗೌಡ, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ‌.ಷ.ಬ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ, ಕೇಂದ್ರ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್ ಉಪ್ಪಾರ, ವೀರಶೈವ ಸಂಘದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜ ಮುಂತಾದವರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಪೆನ್ ಡ್ರೈವ್ ಪ್ರಕರಣ ಸಮಗ್ರ ತನಿಖೆ ಆಗಲಿ ಅನುಪಮ ಆಗ್ರಹ

Published

on

ಹಾಸನ: ಈಗಾಗಲೇ ಎಲ್ಲಾ ಕಡೆ ಮಾತಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಗ್ರ ತನಿಖೆ ಆಗಬೇಕಾಗಿದೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮ ಅಸಮಧಾನವ್ಯಕ್ತಪಡಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೆ ಜಿ. ದೇವರಾಜೇಗೌಡರು ಆಗಿರುವುದರಿಂದ ಪೆನ್ ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಜಿ. ದೇವರಾಜೇಗೌಡರು ಏಕೆ ಮಾಡಿರಬಾರದು ಎಂದು ಗಂಭೀರವಾಗಿ ಆರೋಪಿಸಿ ಟಾಂಗ್ ನೀಡಿದರು.

ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ ಎಂದರು. ನಮ್ಮ ಮಾವ ೧೯೯೯ ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೆ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿ ಕಸಲೆ ಮಾಡಿದ್ದು ಶ್ರೀರಕ್ಷೆ ಆಗಲಿದೆ. ಜಿಲ್ಲೆಯ ಜನತೆ ನಮ್ಮ ಮಗನಿಗೆ ಮತ ಹಾಕುವಂತೆ ಇದೆ ವೇಳೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ. ಕಾಂಗ್ರೆಸ್ ಕಾರ್ಯಕ್ರಮದ ಕಾರ್ಯಕ್ರಮಗಳು ಶ್ರೀರಕ್ಷೆ ಆಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನದಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು, ಮಂಡ್ಯದಲ್ಲಿ ಸುಮಲತಾ ನಮಗೆ ಸಹಕರಿಸುತ್ತಿಲ್ಲ

Published

on

ಕಾವೇರಿ ನೀರನ್ನು ಉಳಿಸಲು ಶತಸಿದ್ಧ : ಹೆಚ್.ಡಿ. ದೇವೇಗೌಡ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು ಹಾಸನದಲ್ಲಿ ಮತ್ತು ಮಂಡ್ಯದಲ್ಲಿ ಸುಮಲತಾ ಅವರು ನಮಗೆ ಸಹಕರಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಮೂರು ಕ್ಷೇತ್ರದಲ್ಲೂ ಜಯಗಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿ, ಕಾವೇರಿ ನೀರನ್ನು ಉಳಿಸಲು ಶತಸಿದ್ಧ ಎಂದು ಶಪತ ಮಾಡಿದರು.

ನಗರದ ಹೊರವಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್‌ನವರು ಜಗಳವಾಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿನೇ ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಭೂಮಿ, ಸಂಪತ್ತನ್ನು ಹಂಚುತ್ತೇವೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಕಾವೇರಿ ಬೇಸಿನ್‌ಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಧಾನ ಮಂತ್ರಿಗಳ ಜೊತೆ ಎರಡು ಸಭೆ ಮಾಡಿದ್ದೇನೆ. ಎರಡನೇ ಹಂತದ ಚುನಾವಣೆ ಹೈದರಾಬಾದ್, ಕರ್ನಾಟಕ, ಮುಂಬೈ ಕರ್ನಾಟಕ ಮೇ.೭ ರಂದು ನಡೆಯಲಿದೆ. ಶಿವಮೊಗ್ಗ ಸೇರಿ ಎರಡನೇ ಹಂತದ ಚುನಾವಣೆ ನಡೆಯುತ್ತದೆ ಎಂದರು.

ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಕೇಳಬಹುದು, ನಾನೇ ಹೇಳ್ತಿನಿ! ಇವತ್ತು ಕಾವೇರಿ ಬೇಸಿನ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋ-ಆಪರೇಟ್ ಮಾಡ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಕುಮಾರಸ್ವಾಮಿಗೆ ಕೋಆಪರೇಟ್ ಮಾಡ್ತಿಲ್ಲ.

ಅದರಿಂದ ಕುಮಾರಸ್ವಾಮಿ ಏನೋ ಅಪಾಯ ಆಗುತ್ತೆ ಅಂತ, ಏನು ಆಗಲ್ಲ. ಪ್ರಮುಖವಾಗಿ ಕಾವೇರಿ ಸಮಸ್ಯೆ ಇದೆ, ಅದು ಜೀವನ್ಮರಣದ ಪ್ರಶ್ನೆ.

ಮಂಡ್ಯದಲ್ಲಿ ಕೈ ಅಭ್ಯರ್ಥಿ ಗೆಲ್ಲಲು ೧೨೫ ಕೋಟಿ ಎನ್‌ಓಸಿ ರಿಲೀಸ್ ಮಾಡಿದ್ದಾರೆ. ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುಬೇಕು. ಯಾರೇ ಪ್ರಚಾರ, ಅಪಪ್ರಚಾರ ಏನೇ ಮಾಡಲಿ ಈ ದೇವೇಗೌಡ ೯೧ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದಾನೆ ಅದು ಎಲ್ಲರ ಮನಸ್ಸಿಗೆ ನಾಟಿದೆ. ಮೋದಿಯವರು ಡಿಎಂಕೆಯ ಹಂಗಿನಿಂದ ಈ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಹಾಕಿದೆ. ಒಬ್ಬ ಪೊಲೀಸ್ ಅಧಿಕಾರಿ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋರಾಡುತ್ತಿದ್ದಾರೆ. ಅಣ್ಣಾ ಡಿಎಂಕೆಯಲ್ಲಿ ಪಕ್ಷದಲ್ಲಿ ಕೆಲವರು ಪರಸ್ಪರ ಭಿನ್ನಾಭಿಪ್ರಾಯಗೊಂಡು ಅವರು ಕೂಡ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ ಯಾವುದೇ ಸಂಶಯವಿಲ್ಲ. ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಅರ್ಥ ಆಗಿದೆ.

ನಾನು ಗಮನ ಹರಿಸುತ್ತೇನೆ ಎಂದು ಪ್ರಧಾನಮಂತ್ರಿಗೂ ಹೇಳಿದ್ದೇನೆ. ಮೇಕೆದಾಟು, ಕಾವೇರಿ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾಡುತ್ತಿದ್ದೇನೆ.

ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೋದಲೆಲ್ಲ ಜನಕ್ಕೆ ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಮೂವರು ಇದ್ದರೂ ಆದರೇ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಆದರೂ ಡಾ.ಮಂಜುನಾಥ್ ಗೆಲ್ತಾರೆ. ಅವರು ಅಧಿಕಾರ ಎಷ್ಟು ದುರುಪಯೋಗ ಮಾಡಬೇಕು ಮಾಡಿದ್ದಾರೆ.ಏನೇ ಸಮಸ್ಯೆ ಇಲ್ಲ, ಡಾ.ಮಂಜುನಾಥ್ ಗೆಲ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಯಾವ ಕಾವೇರಿ ನೀರನ್ನು ಉಳಿಸುತ್ತೇನೆ ಎಂದು ಹೇಳಿದ್ದೇನೋ ಅದನ್ನು ಮಾಡುತ್ತೇನೆ, ಅದು ಶತಸಿದ್ದ. ಆದರೆ ಭತ್ತದ ಬೆಳೆಯಿರಿ ಎಂದು ಹೇಳಲು ಹೋಗಲ್ಲ ಎಂದು ಹೇಳಿದರು.

ಇದೆ ವೇಳೆ ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಒಕ್ಕಲಿಗರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಇತರರು ಉಪಸ್ಥಿತರಿದ್ದರು.

 

Continue Reading

Hassan

ನೀಡಿದ ಭರವಸೆ ಈಡೇರಿಸುವಲ್ಲಿ ಬಿಜೆಪಿ ಸರಕಾರ ವಿಫಲ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಮತ ನೀಡುವಂತೆ ಮರಿತಿಬ್ಬೇಗೌಡ ಮನವಿ

Published

on

ಹಾಸನ: ಹಾಸನ : ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಕೇಂದ್ರ ಸರಕಾರವು ತಾನು ನೀಡಿದ ಭರವಸೆಯನ್ನು ಇದುವರೆಗೂ ಒಂದನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಈಬಾರಿ ಕಾಂಗ್ರೆಸ್ ಗಎ ಹೆಚ್ಚಿನ ಒಲವು ಇದ್ದು, ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ನೀಡಿ ಸೇವೆಗೆ ಅವಕಾಶ ಕಲ್ಪಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ೨೦೨೪ ಏಪ್ರಿಲ್ ೨೬ ರಂದು ನಡೆಯಲಿರುವ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ರವರ ಪರವಾಗಿ ಮತದಾರ ಬಂಧುಗಳಲ್ಲಿ ಮನವಿ. ಕಳೆದ ೧೦ ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಾನು ಕೊಟ್ಟ ಭರವಸೆಗಳಲ್ಲಿ ಬಂದನ್ನೂ ಪೂರೈಸಿರುವುದಿಲ್ಲ. ಪ್ರಧಾನಮಂತ್ರಿಗಳಿರು ಮೈಸೂರಿನ ಚುನಾವಣಾ ಪ್ರಚಾರಕ್ಕೆ ಬಂದಾಗ ಕನ್ನಡ ನಾಡಿನ ಜನತೆಗೆ ತಮ್ಮ ಅವಧಿಯಲ್ಲಿ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೊಟ್ಟಿರುವುದರ ಬಗ್ಗೆ ಪ್ರಸ್ತಾಪ ಮಾಡದೆ ಇರುವುದು ಇದಕ್ಕೆ ಸಾಕ್ಷಿ ಎಂದರು. ಕೇಂದ್ರ ಸರ್ಕಾರ ಕನ್ನಡ ನಾಡಿನ ಜನತೆಯ ಬರಪರಿಹಾರ ಹಾಗೂ ಬಾಕಿ ತೆರಿಗೆ ನೀಡಿಲ್ಲ. ಯಾವುದೇ ನೀರಾವರಿ ಯೋಜನೆಗೆ ಅನುಮೋದನೆ ನೀಡಿಲ್ಲ. ಬಡವರ-ರೈತರ ಹಾಗೂ ಸಂವಿಧಾನ ವಿರೋಧಿ ಸರ್ವಾಧಿಕಾರಿ ಸರ್ಕಾರವಾಗಿದೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನೇತರರಾದ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರ ಸೂಚನೆಯಂತೆ ಅಧಿಕಾರಕ್ಕೆ ಬಂದ ೧೦ ತಿಂಗಳ ಅವಧಿಯಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಕನ್ನಡ ನಾಡಿನ ಪ್ರತಿ ಕುಟುಂಬಕ್ಕೂ ತಲುಪಿಸಿರುವುದು ಹೆಮ್ಮೆಯ ಸಂಗತಿ. ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ೫ ಗ್ಯಾರಂಟಿ ಯೋಜನೆಗಳಿಗೆ ೫೩,೦೦೦ ಕೋಟಿ ಮತ್ತು ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ೮೯,೦೦೦ ಕೋಟಿ ಹಣವನ್ನು ನಿಗಧಿಗೊಳಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಜಿ, ರಾಹುಲ್‌ಜಿ ಇವರುಗಳ ನೇತೃತ್ವದಲ್ಲಿ ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ರಾಷ್ಟ್ರದ ಮತದಾರ ಬಂಧುಗಳಿಗೆ ನೀಡುವುದಾಗಿ ಭರವಸೆಕೊಟ್ಟಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಸಿದ್ಧಾಂತಗಳ ಆಧಾರದ ಮೇಲೆ ರೂಪಿತವಾದ ಸಂವಿಧಾನದ ಸದಾಶಯದಂತೆ ಎಲ್ಲಾ ಸಮುದಾಯದ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿರುವ ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ರವರ ಹಸ್ತದ ಗುರುತಿಗೆ ಮತ ನೀಡಬೇಕೆಂದು ಮತದಾರ ಬಂಧುಗಳಲ್ಲಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಶಿವಣ್ಣಗೌಡ, ಮಂಜೇಗೌಡ, ರವಿಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!